ಶಾಸಕ ಕರುಣಾಕರ ರೆಡ್ಡಿಯವರ ಸರ್ಕಾರಿ ಆಪ್ತ ಸಹಾಯಕರಾಗಿ ಹೇಮಂತ್ ಕುಮಾರ್ ಹೆಚ್ ಎಸ್ ನೇಮಕ
1 min readಶಾಸಕ ಕರುಣಾಕರ ರೆಡ್ಡಿಯವರ ಸರ್ಕಾರಿ ಆಪ್ತ ಸಹಾಯಕರಾಗಿ ಹೇಮಂತ್ ಕುಮಾರ್ ಹೆಚ್ ಎಸ್ ನೇಮಕ
ಹರಪನಹಳ್ಳಿ: ಹರಪನಹಳ್ಳಿಯ ಶಾಸಕ ಬಳ್ಳಾರಿ ಗಣಿಧಣಿ ಗಾಲಿ ಕರುಣಾಕರ ರೆಡ್ಡಿಯವರು ತಮ್ಮ ಸರ್ಕಾರಿ ಆಪ್ತ ಸಹಾಯಕರಾಗಿ ತಾಲೂಕಿನ ದುಗ್ಗಾವತಿ ಗ್ರಾಮ ಪಂಚಾಯಿತಿ ಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ಕುಮಾರ್ ಹೆಚ್ ಎಸ್ ರವರನ್ನು ತಮ್ಮ ಆಪ್ತ ಸಹಾಯಕರಾಗಿ ನೇಮಕ ಮಾಡಿಕೊಂಡಿರುತ್ತಾರೆ .
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಶಾಸಕ ಜಿ ಕರುಣಾಕರ ರೆಡ್ಡಿ ಅವರ ಕೋರಿಕೆಯ ಮೇರೆಗೆ ತಾಲೂಕಿನ ದುಗ್ಗಾವತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಂತ್ ಕುಮಾರ್ ಹೆಚ್ ಎಸ್ ಅವರನ್ನು ಸಭಾಧ್ಯಕ್ಷರ ಆದೇಶಾನುಸಾರ ಶಾಸಕರ ಆಪ್ತ ಸಹಾಯಕರಾಗಿ ನೇಮಕ ಮಾಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ವಿ ಬೆಟಸೂರ್ ರವರು ಆದೇಶಿಸಿರುತ್ತಾರೆ .
ನಾಲ್ಕು ವರ್ಷ ಇಲ್ಲದ ಸರ್ಕಾರಿ ಆಪ್ತ ಸಹಾಯಕರು ಈಗ ಏಕೆ : ಸಾರ್ವಜನಿಕರು ಪ್ರಶ್ನೆ
ಹೌದು ಗಾಲಿ ಕರುಣಾಕರರೆಡ್ಡಿ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ 2018 ರಿಂದ 2022ರವರೆಗೆ ಅಂದರೆ ಶಾಸಕರಾಗಿ ನಾಲ್ಕು ವರ್ಷ ಕಳೆದು ಹೋಗಿದೆ ,ಐದನೇ ವರ್ಷವನ್ನು ಇದು ಚುನಾವಣೆಯ ವರ್ಷ ಎಂದೇ ಕರೆಯಲಾಗುತ್ತದೆ ಈ ನಾಲ್ಕು ವರ್ಷಗಳಲ್ಲಿ ಇಲ್ಲದ ಸರ್ಕಾರಿ ಆಪ್ತ ಸಹಾಯಕರ ಅವಶ್ಯಕತೆ ಈಗ ಏನಿತ್ತು ಎಂಬುದು ಸಾರ್ವಜನಿಕರ ವಲಯದಲ್ಲಿ ಎದ್ದಿರುವ ಬಿಸಿಬಿಸಿ ಚರ್ಚೆಯಾಗಿದೆ .
ಕಳೆದ ನಾಲ್ಕು ವರ್ಷ ಗಾಲಿ ಕರುಣಾಕರರೆಡ್ಡಿ ಅವರು ಯಾವುದೇ ಸರ್ಕಾರಿ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳದೇ ಜನರ ಕಷ್ಟಸುಖಗಳಿಗೆ ಸ್ಪಂದಿಸದೆ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ ಮತ್ತು ಕೇವಲ ಒಬ್ಬ ಖಾಸಗಿ ಸಹಾಯಕರನ್ನ ಇಟ್ಟುಕೊಂಡು ಸಣ್ಣಪುಟ್ಟ ಕೆಲಸಗಳನ್ನು ಕಾರ್ಯಕರ್ತರಿಗೆ ನೀಡುತ್ತಾ ಸಾಗಿ ತಮ್ಮ ವರ್ಚಸ್ಸು ಕ್ಷೇತ್ರದಲ್ಲಿ ತೀರ ಕಡಿಮೆಯಾಗಿರುವುದು ತಮಗೆ ಮನವರಿಕೆಯಾಗಿದೆ ಈ ಕಾರಣದಿಂದಾಗಿ ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಮುನಿಸು ತಮಗೆ ಶಾಪವಾಗಿ ಪರಿಣಮಿಸಬಹುದು ಎಂಬುದನ್ನರಿತು ಶಾಸಕ ಕರುಣಾಕರೆಡ್ಡಿ ಅವರು ಈಗ ಸರ್ಕಾರಿ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳುವ ತಂತ್ರಮಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿಯ ಕೆಲವು ಕಾರ್ಯಕರ್ತರು ಹೇಳುತ್ತಿದ್ದಾರೆ .
ಬಿಜೆಪಿಯ ಕೆಲವು ಕಾರ್ಯಕರ್ತರ ಮುನಿಸು :
ಕಳೆದ 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಅವರ ಬೆನ್ನಿಗೆ ನಿಂತು ಚುನಾವಣೆ ಮಾಡಿದಂತಹ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು 2023 ರ ಚುನಾವಣೆಯಲ್ಲಿ ಕರುಣಾಕರ ರೆಡ್ಡಿಯವರಿಗೆ ವಿರೋಧ ವಾಗುವ ಮುನ್ಸೂಚನೆ ಕೊಟ್ಟಿದ್ದಾರೆ ಅದು ಪಕ್ಷ ಬಿಟ್ಟು ಹೋಗುವುದು ಇರಬಹುದು, ಅಥವಾ ಪಕ್ಷದಲ್ಲಿದ್ದುಕೊಂಡು ಕರುಣಾಕರ ರೆಡ್ಡಿ ಅವರನ್ನು ವಿರೋಧಿಸುವುದು ಇರಬಹುದು, ಈಗೊಂದು ಕಾರ್ಯಕರ್ತರ ಗುಂಪುಗಳು ಮನಸ್ಥಿತಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ .
ನಾಲ್ಕು ವರ್ಷದ ತೇಪೆಯನ್ನು ಮುಚ್ಚಲು ಹೊಸ ಆಪ್ತ ಸಹಾಯಕರ ನೇಮಕದ ನೆಪ .
ಕಳೆದ ನಾಲ್ಕು ವರ್ಷಗಳಿಂದ ತಮ್ಮನ್ನು ಗೆಲ್ಲಿಸಿ ಮೆರೆಸಿದ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಕೇವಲ ತಾವಾಯಿತು ತಮ್ಮ ಕೆಲಸವಾಯಿತು ಅಂದರೆ ಭೂಮಿ ಪೂಜೆ ,ಕಟ್ಟಡ ಮತ್ತು ರಸ್ತೆಗಳ ಉದ್ಘಾಟನೆ, ಹಾಗೂ ಕಾಮಗಾರಿಗಳ ಭೂಮಿಪೂಜೆ ಇಷ್ಟಕ್ಕೆ ಸೀಮಿತವಾಗಿ ಹರಪನಹಳ್ಳಿ ಗೆ ತಿಂಗಳಿಗೆ ಒಂದು ಬಾರಿ ಇಲ್ಲವೇ ಎರಡು ಬಾರಿ ಬಂದು ಈ ಕಾಮಗಾರಿಗಳಿಗೆ ಮಾತ್ರವೆ ಸೀಮಿತವಾಗಿ ಕಾಮಗಾರಿಯ ಕೆಲಸಗಳನ್ನು ಮುಗಿಸಿಕೊಂಡು ಬಳ್ಳಾರಿಗೆ ಹೋಗುತ್ತಿದ್ದ ಕರುಣಾಕರ ರೆಡ್ಡಿ ಅವರು ಕಾರ್ಯಕರ್ತರ ಕಷ್ಟ-ಸುಖಗಳನ್ನು ಸೌಜನ್ಯಕ್ಕಾದರೂ ಎಂದೂ ಕೇಳಲಿಲ್ಲ ಎಂಬುದು ಚುನಾವಣೆಯಲ್ಲಿ ಕಷ್ಟಪಟ್ಟು ಹೋರಾಡಿದ ಮತ್ತು ಕರ್ತವ್ಯ ನಿರ್ವಹಿಸಿದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಅಳಲಾಗಿದೆ .
ಇನ್ನು ಅಭಿವೃದ್ಧಿಯ ವಿಚಾರ ಬಂದಾಗ ತಾಲೂಕಿನ ಜನರು ಅಧಿಕಾರಿಗಳಿಂದ ಕೆಲಸವಾಗದಿದ್ದಾಗ ಶಾಸಕರ ಗಮನಕ್ಕೆ ತರುವುದು ಸೇರಿದಂತೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿತ್ತು ಇಂಥ ಸಂದರ್ಭದಲ್ಲಿ ಶಾಸಕರಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಮತ್ತು ತಮ್ಮ ಅಳಲನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳೋಣ ಹಾಗೂ ಅದನ್ನು ಸರಿಪಡಿಸಿಕೊಡಿ ಎಂದು ಹೇಳಿಕೊಳ್ಳಲು ಸರ್ಕಾರಿ ಆಪ್ತ ಸಹಾಯಕರು ಇರಲಿಲ್ಲ ಎಂದು ತಾಲೂಕಿನ ಜನರು ಮಾತನಾಡಿಕೊಳ್ಳುತ್ತಿದ್ದುದು ಶಾಸಕ ಕರುಣಾಕರ ರೆಡ್ಡಿ ಅವರಿಗೆ ಗೊತ್ತಾಗಿದೆ ಮತ್ತು ಇಂತಹ ಕಾರಣದಿಂದಾಗಿ ಕೆಲವು ಕಾರ್ಯಕರ್ತರು ಪಕ್ಷವನ್ನು ಬಿಟ್ಟು ಹೋಗುವ ಬಗ್ಗೆ ಚಿಂತನೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ ಆ ಕಾರಣದಿಂದ ತಮ್ಮ ಸಂಪರ್ಕದಿಂದ ದೂರಾದ ಅನೇಕ ಬಿಜೆಪಿ ಕಾರ್ಯಕರ್ತರನ್ನು ಮತ್ತೊಮ್ಮೆ ತಮ್ಮೆಡೆಗೆ ಸೆಳೆದುಕೊಳ್ಳಲು ಪ್ರಯತ್ನ ಮಾಡುತ್ತಿರುವ ಜೊತೆಗೆ ಆಪ್ತ ಸಹಾಯಕರನ್ನು ನೇಮಿಸುವುದರೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗಾಗಿ ನಾನು ಆಪ್ತ ಸಹಾಯಕರನ್ನು ನೇಮಿಸಿಕೊಂಡಿದ್ದೇನೆ ಎಂದು ಸಾರ್ವಜನಿಕ ವಾಗಿಹೇಳಿಕೊಳ್ಳಲು ಈ ರೀತಿಯಾದಂತಹ ತೀರ್ಮಾನವನ್ನು ಮಾಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ ಎಂದೇ ಹೇಳಲಾಗುತ್ತದೆ .
ಅದೆನೇಯಿರಲಿ ಶಾಸಕರು ತಮಗೆ ಆಪ್ತ ಸಹಾಯಕರನ್ನು ನೇಮಿಸಿಕೊಂಡಿರುವುದು ತಾಲೂಕಿನ ಜನತೆಗೆ ಒಳ್ಳೆಯದಾಗಿದೆ ಏಕೆಂದರೆ ನಾಲ್ಕು ವರ್ಷಗಳ ಕಾಲ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಶಾಸಕರ ಸರ್ಕಾರಿ ಆಪ್ತ ಸಹಾಯಕರು ಯಾರೂ ಇರಲಿಲ್ಲ ಹೀಗಾಗಿ ಈಗ ಅದು ಸಾಧ್ಯವಾಗಿದೆ ಅದರ ಪ್ರಯೋಜನ ಸಾರ್ವಜನಿಕರಿಗೆ ಸಿಗುವಂತಾಗಿದೆ ಇದರಿಂದ ಜನತೆಗೆ ಒಳ್ಳೆಯದೇ ಆಯಿತು ಈ ಕೆಲಸವನ್ನು ಶಾಸಕರು ನಾಲ್ಕು ವರ್ಷಗಳ ಹಿಂದೆನೆ ಮಾಡಿದ್ದಿದ್ದರೆ, ಜನರ ಕಷ್ಟಸುಖಗಳಿಗೆ ಸ್ಪಂದಿಸಿದ್ದರೆ , ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಆರಂಭದಿಂದಲೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಿದ್ದರೆ ಈಗ ಜನರನ್ನು ಓಲೈಸುವ ಮತ್ತು ಕಾರ್ಯಕರ್ತರನ್ನು ಪುನಃ ಒಗ್ಗೂಡಿಸಲು ಪ್ರಯತ್ನಪಡುವ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗೆಲ್ಲಲು ಹರಸಾಹಸ ಪಡುವ ಅಗತ್ಯವೇ ಇರುತ್ತಿರಲಿಲ್ಲ ಎನ್ನುವುದಂತೂ ಸತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ .
ಮೂಲಿಮನಿ ಹನುಮಂತಪ್ಪ ಬಿಜೆಪಿ ಕಾರ್ಯಕರ್ತರು
ಶಾಸಕರು ಸರ್ಕಾರಿ ಆಪ್ತ ಸಹಾಯಕರನ್ನು ನೇಮಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ, ಈ ಕೆಲಸವನ್ನು ನಾಲ್ಕು ವರ್ಷಗಳ ಹಿಂದೆಯೇ ಮಾಡಿದ್ದಿದ್ದರೆ ಜನರಿಗೆ ಅನುಕೂಲವಾಗುತ್ತಿತ್ತು ಈಗಲಾದರೂ ನೇಮಕ ಮಾಡಿಕೊಂಡಿರುವುದು ಜನರಿಗೆ ಅನುಕೂಲವಾಗಲಿದೆ . ಈಗ ಉಳಿದ ಅವಧಿಯಲ್ಲಾದರೂ ಶಾಸಕರು ತಾಲೂಕಿನ ಅಭಿವೃದ್ಧಿ ಬಗ್ಗೆ ಗಮನ ಹರಿಸಲಿ .
ಮೂಲಿಮನಿ ಹನುಮಂತಪ್ಪ ನಿಟ್ಟೂರು, ಬಿಜೆಪಿ ಕಾರ್ಯಕರ್ತರು ಹರಪನಹಳ್ಳಿ.