ಶಾಸಕ ಕರುಣಾಕರ ರೆಡ್ಡಿ ಅವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಚಾಲನೆ
1 min readಶಾಸಕ ಕರುಣಾಕರ ರೆಡ್ಡಿ ಅವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಚಾಲನೆ
ಹರಪನಹಳ್ಳಿ: ತಾಲೂಕಿನ ವಿವಿಧೆಡೆ ವಿವಿಧ ಕಾಮಗಾರಿಗಳಿಗೆ ಶಾಸಕ ಕರುಣಾಕರ ರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿದರು ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹಡಗಲಿ ರಸ್ತೆಯವರೆಗೆ 144.88ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿ ಅವರು ಈ ರಸ್ತೆಯ ಕಾಮಗಾರಿಯನ್ನು ಬದಲಾಯಿಸಿ ರಸ್ತೆ ವಿಭಜಕವನ್ನು ಅಳವಡಿಸಿ ದ್ವಿಮುಖ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಕಾಮಗಾರಿಯನ್ನು ಬದಲಾಯಿಸಿಕೊಳ್ಳಿ ಏಕೆಂದರೆ ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಅಲ್ಲದೇ ಪ್ರವಾಸಿ ಮಂದಿರ ವೃತ್ತದ ಹತ್ತಿರವೆ ಇರುವ ಪೋಲಿಸ್ ಕ್ವಾರ್ಟರ್ಸ್ ಇರುವುದರಿಂದ ರಸ್ತೆ ವಿಭಜಕವನ್ನು ಅಳವಡಿಸದೆ ಇದ್ದರೆ ಹೆಚ್ಚು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಆದ್ದರಿಂದ ಈ ರಸ್ತೆಗೆ ವಿಭಜಕವನ್ನು ಅಳವಡಿಸಿ ರಸ್ತೆಯನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯ ಕೆ.ಹೆಚ್.ಬಿ. ಕಾಲೊನಿಯ ಎಸ್.ಟಿ.ಕಾಲೊನಿಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಭೂಮಿ ಪೂಜೆ ನೆರವೇರಿಸಿದರು,
ಪಟ್ಟಣದ 10ನೇ ವಾರ್ಡಿನ ವ್ಯಾಪ್ತಿಯ ಸುಣಗಾರಗೇರಿಯಲ್ಲಿ 1ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಸೇವಾನಗರ ಗ್ರಾಮದಿಂದ ಬಿಕ್ಕಿಕಟ್ಟೆ ಗ್ರಾಮದವರೆಗೆ 1ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು .
ಪಟ್ಟಣದ ಪೋಲಿಸ್ ಕ್ವಾರ್ಟರ್ಸ್ ಬಳಿ 2.80 ಕೋಟಿ ವೆಚ್ಚದಲ್ಲಿ ಪೋಲಿಸ್ ಠಾಣೆ ಯ ನೂತನ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಶಾಸಕ ಕರುಣಾಕರ ರೆಡ್ಡಿ ಅವರು ಮಾತನಾಡಿದ ಅವರು ತಾಲೂಕಿನ ಅಭಿವೃದ್ಧಿಗೆ ನಾನು ಸದಾ ಶ್ರಮಿಸುವೆ ಎಂದರು .
ಈ ಸಂದರ್ಭದಲ್ಲಿ ದಾವಣಗೆರೆ ಸಂಸದರಾದ ಜಿಎಂ ಸಿದ್ದೇಶ್ವರ , ಪಟ್ಟಣ ಪುರಸಭೆ ಅಧ್ಯಕ್ಷರಾದ ಮಂಜುನಾಥ್ ಈಜಾಂತ್ಕರ್ ,ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ, ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್ ವೃತ್ತ ನಿರೀಕ್ಷಕ ನಾಗರಾಜ್ ಕಮ್ಮಾರ, ಹರಪನಹಳ್ಳಿಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಾಶ್.ಸಿ, ಚಿಗಟೇರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ಚಂದ್ರಪ್ಪ ವಾಸುದೇವ ನಿಂಗಪ್ಪ ಮಲ್ಲೇಶ್ ನಾಯಕ್ ಹಾಗೂ ಸಿಬ್ಬಂದಿ ವರ್ಗ ಮತ್ತು, ಬಿಜೆಪಿ ಮುಖಂಡರುಗಳಾದ ತಾಾಲೂಕುಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ್, ಸುತ್ತೂರು ಹಾಲೇಶ್,ಕಣಿವಿಹಳ್ಳಿ ಮಂಜುನಾಥ, ಆರ್. ಲೋಕೇಶ್ ,ಸಣ್ಣಹಾಲಪ್ಪ ನಿಟ್ಟೂರು, ಮಜ್ಜಿಗೇರಿ ಭೀಮಪ್ಪ ,ಮಲ್ಲೇಶ್ ಮಾಚಿಹಳ್ಳಿ, ಕಿರಣ್ ಶಾನಭೋಗ ಪ್ರಾಣೇಶ್ ವಕೀಲರು, ಪುರಸಭೆ ಸದಸ್ಯ ರೊಕ್ಕಪ್ಪ ,ಬಾಗಳಿ ಕೊಟ್ರೇಶಪ್ಪ,ಗುಂಡಿಮಂಜುನಾಥ ,ಮುಂತಾದವರು ಉಪಸ್ಥಿತರಿದ್ದರು.