Vijayanagara Express

Kannada News Portal

ನೂತನ ಪೊಲೀಸ್ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಕರುಣಾಕರ ರೆಡ್ಡಿ

1 min read

ಶಾಸಕ ಕರುಣಾಕರ ರೆಡ್ಡಿಯವರಿಂದ ನೂತನ ಪೊಲೀಸ್ ಕಟ್ಟಡ ಕಚೇರಿ ಕಾಮಗಾರಿಯ ಭೂಮಿ ಪೂಜೆ ಮತ್ತು ಚಾಲನೆ

ಹರಪನಹಳ್ಳಿ: 2.8 ಕೋಟಿ ವೆಚ್ಚದಲ್ಲಿ ಪೊಲೀಸ್ ಕಚೇರಿಯ ನೂತನ ಕಟ್ಟಡ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಜಿ ಕರುಣಾಕರ ರೆಡ್ಡಿ ಅವರು ನೆರವೇರಿಸಿ ಚಾಲನೆಯನ್ನು ನೀಡಿದರು .
ಈ ವೇಳೆ ಮಾತನಾಡಿದ ಶಾಸಕ ಜಿ ಕರುಣಾಕರ ರೆಡ್ಡಿ ಅವರು ಪೊಲೀಸ್ ಕೆಲಸವು ಸುಲಭವಾಗಿರುವ ಕೆಲಸ ವಾಗಿರುವುದಿಲ್ಲ ಏಕೆಂದರೆ ನನ್ನ ತಂದೆಯವರು ಸಹ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆಯನ್ನು ಸಲ್ಲಿಸಿದ್ದರು ಪೊಲೀಸ್ ಸಿಬ್ಬಂದಿಗಳಿಗೆ ಉತ್ತಮವಾದಂತಹ ವಸತಿ ಗೃಹಗಳು ಇರಬೇಕು ಉತ್ತಮ ವಾಹನಗಳು ಪೋಲಿಸ್ ಇಲಾಖೆಗೆ ಅವಶ್ಯಕ, ಹಾಗಾಗಿ 2.8 ಕೋಟಿ ವೆಚ್ಚದಲ್ಲಿ ಜಿ ಪ್ಲೀಸ್ 2 ಮಾದರಿ ನೂತನ ಪೊಲೀಸ್ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ .
ಇದರಲ್ಲಿ ಪಿಎಸ್ಐ ಕಛೇರಿ ಮತ್ತು ಮಹಿಳೆಯರ ಪಿಎಸ್ಐ ಕಛೇರಿ
ಪೋಲಿಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ಒಳ್ಳೆಯ ವರಿರುತ್ತಾರೆ ಮತ್ತೆ ಕೆಲವರು ಜನರೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ ಎಂದರು.ಪೋಲಿಸ್ ಅಧಿಕಾರಿಗಳು ದಯವಿಟ್ಟು ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಬೇಡಿ ಕಾಂಗ್ರೆಸ್ ಪರ , ಬಿಜೆಪಿ ಪರ ಎಂದು ಸಾರ್ವಜನಿಕ ರ ಪರಕೆಲಸವನ್ನು ಮಾಡಿರಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ ಮಾತನಾಡಿ ಪೋಲಿಸ್ ಇಲಾಖೆಯು ಇಲ್ಲದೆ ಹೋದರೆ 24 ಘಂಟೆಗಳಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ನಾವು ಯಾವುದೇ ಕಾರ್ಯಕ್ರಮವನ್ನು ತಂದರೂ ಅದಕ್ಕೆ ಪೋಲಿಸ್ ಇಲಾಖೆ ಸಿಬ್ಬಂದಿಯವರ ಸಹಕಾರ ಇಲ್ಲದೆ ಹೋದರೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದರು.
ಪೋಲಿಸ್ ಇಲಾಖೆಯ ಕರ್ತವ್ಯವು ಬಹಳ ಕಠಿಣವಾದುದಾಗಿರುತ್ತದೆ ಹಿಂದೆ ಒಂದು ಬಾರಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಬಳ್ಳಾರಿಯಿಂದ ರಾಂಪುರದ ಮಾರ್ಗವಾಗಿ ಚಳ್ಳಕೆರೆ ಗೆ ಹೊಗಬೇಕಾಗಿತ್ತು ನಾನು ಆಗ ಹೊಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ ರಾಂಪುರದ ಬಳಿ ನನಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರು ದಿನವಿಡಿ ಮೂರು ನಾಲ್ಕು ಬ್ರೆಡ್ ಗಳನ್ನು ತಿಂದು ನಿಂತು ಸ್ಥಳದಲ್ಲೇ ನಿಂತುಕೊಂಡು ಕರ್ತವ್ಯವನ್ನು ನಿರ್ವಹಿಸಿದ್ದೆ ಎಂದು ತಮ್ಮ ಹೊಂ ಗಾರ್ಡ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದರು.
ಹಾಗಾಗಿ ಪೋಲಿಸ್ ಇಲಾಖೆ ಸಿಬ್ಬಂದಿಯವರ ಸೇವೆ ಯು ಬಹಳ ಕಠಿಣ ವಾಗಿರುತ್ತದೆ ಎಂದರು.ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆಯ ಪಾತ್ರ ಮಹತ್ವದ್ದು ಎಂದು ಹೇಳಿದರು.
ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಲು ರಾಜ್ಯಾದ್ಯಂತ ಒಟ್ಟು 3000 ಕೋಟಿ ರೂಪಾಯಿಗಳನ್ನು ಈ ವರ್ಷದ ಬಜೆಟ್ ನಲ್ಲಿ ಗುರಿಇಟ್ಟುಕೊಳ್ಳಲಾಗಿದೆ .ಆದ್ದರಿಂದ ಹೆಚ್ಚಿನ ಅನುದಾನವನ್ನು ತಂದು ಪೋಲಿಸ್ ಇಲಾಖೆಗೆಅನೇಕ ಅಭಿವೃದ್ಧಿ ಕೆಲಸ ಮಾಡುವ ಬಯಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾತನಾಡಿ ಪೋಲಿಸ್ ಠಾಣೆ ಯ ನೂತನ ಕಟ್ಟಡ ಕಾಮಗಾರಿಯ ಉದ್ಘಾಟನೆ ಗೆ ತಿಳಿಸಿದಾಗ ಶಾಸಕರು ಮತ್ತು ಸಂಸದರು ಅವರು ಅಧೀವೇಶ ದಿಲ್ಲಿ ಪಾಲ್ಗೊಳ್ಳಬೇಕಾಗಿದ್ದರೂ ನಮಗೆ ಒಂದು ದಿನಾಂಕವನ್ನು ನಿಗದಿ ಮಾಡಿ ಬಂದಿದ್ದಾರೆ ಅವರಿಗೆ ಧನ್ಯವಾದಗಳು ಈ ಕಟ್ಟಡವು ಪೋಲಿಸ್ ಕ್ವಾರ್ಟರ್ಸ್ ಹತ್ತಿರ ಇರುವುದರಿಂದ ಇದು ನಗರದ ಮದ್ಯೆ ಭಾಗದಲ್ಲಿ ರುವುದರಿಂದ ಜನರಿಗೂ ಸಹ ಅನುಕೂಲ ವಾಗುತ್ತದೆ ಎಂದು ಹೇಳಿದರು .
ಡಿವೈಎಸ್ಪಿ ಹಾಲಮೂರ್ತಿರಾವ್ ರವರು ಕ್ವಾರ್ಟರ್ಸ್ ಆವರಣದಲ್ಲಿ ನಮಗೆ ಪರೆಡ್ ಮಾಡಲು ಸ್ವಲ್ಪ ಜಾಗವನ್ನು ಬಿಟ್ಟು ಸಾರ್ವಜನಿಕ ಉದ್ದೇಶಕ್ಕಾಗಿ ಪಾರ್ಕನ್ನು ಮಾಡಿ ಕೊಡಿ ಎಂದು ಶಾಸಕ ಕರುಣಾಕರ ರೆಡ್ಡಿ ಅವರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಂಜುನಾಥ್ ಈಜಂತ್ಕರ್ , ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್ ವೃತ್ತ ನಿರೀಕ್ಷಕ ನಾಗರಾಜ್ ಕಮ್ಮಾರ, ಹರಪನಹಳ್ಳಿಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಾಶ್.ಸಿ, ಚಿಗಟೇರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್, ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ,ಚಂದ್ರಪ್ಪ ,ವಾಸುದೇವ ,ನಿಂಗಪ್ಪ ,ಮಲ್ಲೇಶ್ ನಾಯ್ಕ್ ಹಾಗೂ ಸಿಬ್ಬಂದಿ ವರ್ಗ ಮತ್ತು, ಬಿಜೆಪಿ ಮುಖಂಡರುಗಳಾದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ್, ಕಣಿವಿಹಳ್ಳಿಮಂಜುನಾಥ, ಸತ್ತೂರು ಹಾಲೇಶ್ ಎಂಪಿ ನಾಯ್ಕ ಆರ್. ಲೋಕೇಶ್ , ನಿಟ್ಟೂರು ಸಣ್ಣಹಾಲಪ್ಪ , ಮಜ್ಜಿಗೇರಿ ಭೀಮಪ್ಪ ,ಮಲ್ಲೇಶ್ ಮಾಚಿಹಳ್ಳಿ, ಕಿರಣ್ ಶಾನಭೋಗ , ಪ್ರಾಣೇಶ್ ವಕೀಲರು, ಪುರಸಭೆ ಸದಸ್ಯ ರೊಕ್ಕಪ್ಪ ,ಬಾಗಳಿಕೊಟ್ರೇಶಪ್ಪ,ಗುಂಡಿಮಂಜುನಾಥ ,ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *