Vijayanagara Express

Kannada News Portal

ಕರುಣಾಕರ ರೆಡ್ಡಿಯವರನ್ನ ಹರಪನಹಳ್ಳಿಯ ಜನ ಕಲೆಕ್ಷನ್ ಶಾಸಕ ಎಂದು ಕರೆಯತ್ತಿದ್ದಾರೆ.

1 min read

ಕರುಣಾಕರ ರೆಡ್ಡಿಯವರನ್ನ ಹರಪನಹಳ್ಳಿಯ ಜನ ಕಲೆಕ್ಷನ್ ಶಾಸಕ ಎಂದು ಕರೆಯತ್ತಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ – ಟೀಕೆ.

ಹರಪನಹಳ್ಳಿ: ಕರುಣಾಕರರೆಡ್ಡಿಯವರಿಗೆ ರಾಜ್ಯದ ಜನರ ಮೇಲೆ ದಿಢೀರ್ ಪ್ರೀತಿ ಬಂದಿದೆ, ಕಾಂಗ್ರೆಸ್ ನವರು ಕಲಾಪವನ್ನ ಅನಗತ್ಯವಾಗಿ ವ್ಯರ್ಥಮಾಡಿ ದ್ದಾರೆ ಎಂದು ಆರೋಪಿಸಿರುವ ಶಾಸಕರೇ, ಆಯ್ಕೆಯಾಗಿ ನಾಲ್ಕು ವರ್ಷ ಕಳೆದರೂ ಅಡ್ರಸ್ಸೇ ಇಲ್ಲದ ತಾವು ದಿಢೀರ್ ಆಗಿ ಈಗ ಪ್ರತ್ಯಕ್ಷವಾಗಿ ಕಾಂಗ್ರೆಸ್ ಪಕ್ಷವನ್ನೇ ಟೀಕೆ ಮಾಡುತ್ತಲಿದ್ದೀರಿ..

ಕರೋನಾ ಸಂದರ್ಭದಲ್ಲಿ ತಾಲೂಕಿನ ಜನ ತತ್ತರಿಸುವಾಗ ತಾವು ಎಲ್ಲಿ ಹೋಗಿದ್ದಿರಿ

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ರೀತಿ ತಾವು, ಕರೋನಾ ತಹಬಂದಿಗೆ ಬಂದಾಗ ಕಾಟಾಚಾರಕ್ಕೆ ತಾಲೂಕು ಪ್ರವಾಸ ಕೈಗೊಂಡು ಫುಡ್ ವಿತರಿಸಿದ್ದು ಹಾಸ್ಯಾಸ್ಪದವಾಗಿತ್ತು..

ಕೋವಿಡ್ ನೆಪ ಹೇಳಿ ರಾಷ್ಟ್ರೀಯ ಹಬ್ಬಗಳಾದ ಆಗಸ್ಟ್15 ಜನವರಿ26 ರ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿ ನೀವು ರಾಜ್ಯ ದೇಶದ ಬಗ್ಗೆ ಮಾತನಾಡುತ್ತೀರಿ..

ಹರಪನಹಳ್ಳಿ ಜನಕ್ಕೆ ಬಿಡಿ,ನಿಮ್ಮ ಕಾರ್ಯಕರ್ತರಿಗೇ ಕೈಗೆ ಸಿಗದ ನೀವು, ಬ್ರಿಟಿಷ್ ರ ರೀತಿ ಗವರ್ನರ್ ಜನರಲ್ ಗಳನ್ನ ಇಟ್ಟು ಆಡಳಿತ ನಡೆಸುತ್ತಿದ್ದೀರಿ, ತಿಂಗಳಿಗೊಮ್ಮೆ ಹರಪನಹಳ್ಳಿಗೆ ಬರುವ ನಿಮ್ಮನ್ನ ನಿಮ್ಮ ಪಕ್ಷದವರೇ ಕಲೆಕ್ಷನ್ ಶಾಸಕ ಎಂದು ಕರೆಯುತ್ತಿದ್ದಾರೆ, ನಿಮ್ಮ ಬಾಯಲ್ಲಿ ಕಾಂಗ್ರೆಸ್ ಟೀಕೆ, ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಆದೀತು..

ಹಿಜಬ್ ವಿವಾದ ಬಿಜೆಪಿ ಯೇ ಸೃಷ್ಟಿ ಮಾಡಿದ್ದು ಅಂತ ಕೊಲೆಯಾದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹೇಳಿದ ವೀಡಿಯೋ ಕ್ಲಿಪ್ಪಿಂಗ್ಸ್ ಒಮ್ಮೆ ಕೇಳಿಸಿಕೊಳ್ಳಿ, ಇಲ್ಲದಿದ್ದರೆ ನಾವೇ ನಿಮ್ಮ ವಾಟ್ಸಪ್ ಗೆ ಸೆಂಡ್ ಮಾಡುತ್ತೇವೆ..

ಹರ್ಷನ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿ ನೈತಿಕವಾಗಿ ದಿವಾಳಿಯಾಗಿದ್ದು, ಹರಪನಹಳ್ಳಿಯ ಜನರಿಂದ ಆಯ್ಕೆಯಾದ ನೀವು ಕ್ಷೇತ್ರಕ್ಕೆ ಅನ್ಯಾಯ ಆಗದ ರೀತಿ ಕಾರ್ಯ ನಿರ್ವಹಿಸಿರಿ ಎಂದ ಅವರು ಹರಪನಹಳ್ಳಿ ಕ್ಷೇತ್ರದ ರಸ್ತೆಗಳು ಹಾಳಾಗಿವೆ ರೈತರಿಗೆ ರಾಗಿ ಖರೀದಿ ಕೇಂದ್ರ ಇನ್ನೂ ಪ್ರಾರಂಭ ಆಗಿರುವುದಿಲ್ಲ,ನಿಮ್ಮ ಜವಾಬ್ದಾರಿ ನಿರ್ವಹಿಸಿ ಸುಮ್ಮನೆ ಟೀಕೆ ಮಾಡೋ ಚಾಳಿ ಬಿಡಿ ಎಂದು ಬಸವರಾಜ್ ಕರುಣಾಕರ ರೆಡ್ಡಿ ನಡವಳಿಕೆಯನ್ನು ಟೀಕಿಸಿದ್ದಾರೆ..

Leave a Reply

Your email address will not be published. Required fields are marked *