Vijayanagara Express

Kannada News Portal

ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ತಂದೆ-ಮಗ | ನೀಲಗುಂದ ಗ್ರಾ.ಪಂ ಅಧ್ಯಕ್ಷರ ಆಯ್ಕೆ ಆವಾಂತರ

1 min read

ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ತಂದೆ-ಮಗ | ನೀಲಗುಂದ ಗ್ರಾ.ಪಂ ಅಧ್ಯಕ್ಷರ ಆಯ್ಕೆ ಆವಾಂತರ

 

ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯವಾಗಿದ್ದು, ಮಾದಿಗರನ್ನು ಜಾತಿ ನಿಂದನೆ ಮಾಡಲಾಗಿದೆ ಎಂದು ನೀಲಗುಂದ ಬಿಜೆಪಿ ಮುಖಂಡ, ಬಿಜೆಪಿ ತಾಲೂಕು ಎಸ್ಸಿ ಮೋರ್ಚಾ ಸದಸ್ಯ ಕೆ.ಹನುಮಂತಪ್ಪ
ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ಸೇರಿದ ಸದಸ್ಯೆ ಸರೋಜಾ  ಎ.ಕೆ  ಅವರು ಅಧ್ಯಕ್ಷರಾದರೆ ಮೇಲ್ವರ್ಗದ ನಾವು ಅವರ ಅಡಿಯಾಳಾಗಿರಬೇಕು ಎನ್ನುವ ಕಾರಣದಿಂದ ಕುಂತ್ರದಿಂದ ಅಧ್ಯಕ್ಷ ಸ್ಥಾನವನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಹಾಗೂ ಅವರ ಪುತ್ರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿರುವ ಬೇಲೂರು ಸಿದ್ದೇಶ್ ಅವರು ಮಾದಿಗರು ಯಾವುದೇ
ಕಾರಣಕ್ಕೂ ಅಧ್ಯಕ್ಷರು ಆಗಬಾರದು ಎಂದು ಹೇಳುತ್ತಿದ್ದಾರಂತೆ, ಸಾರ್ವಜನಿಕ ಕ್ಷೇತ್ರದಲ್ಲಿರುವ ಇದ್ದವರು ಮಾದಿಗರ ಬಗ್ಗೆ ಅದೆಷ್ಟು ದ್ವೇಷದ ಭಾವನೆ ಹೊಂದಿರಬೇಕು ಎಂದು ಯೋಚಿಸಬೇಕಾಗಿದೆ. ಜಾತಿ ನಿಂದನೆ ಮಾಡಿರುವ ಬೇಲೂರು ಅಂಜಪ್ಪ ಮತ್ತು ಬೇಲೂರು ಸಿದ್ದೇಶ್ ಇಬ್ಬರೂ ಮಾದಿಗ ಸಮಾಜಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬೇಲೂರು ಸಿದ್ದೇಶ್ ಗ್ರಾ.ಪಂ ಚುನಾವಣೆಯಲ್ಲಿ ಗೆದ್ದಿರುವುದೇ ಮಾದಿಗ ಜನಾಂಗದ ಮತಗಳಿಂದ. ಆದರೆ ಇದೀಗ ಮಾದಿಗ ಸಮುದಾಯವನ್ನು ಅವಮಾನಿಸುವ ಸಿದ್ದೇಶ್‌ಗೆ ಮತ ಕೇಳುವಾಗ ಮಾದಿಗ ಜಾತಿ ಕೀಳು ಅನಿಸಿರಲಿಲ್ಲ, ಮಾದಿಗರ ಮತಗಳಿಂದ ಗೆಲುವು ಪಡೆಯುವಾಗಲೂ ಅವರು ಕೀಳು ಜಾತಿಯವರು ಅನಿಸಲಿಲ್ಲ ಆದರೆ ಮಾದಿಗರಿಗೆ ಅಧಿಕಾರ ಕೊಡಬೇಕಾದರೆ ಕೀಳು ಜಾತಿ ಎಂದು ಸಂಬೋಧಿಸುತ್ತಿದ್ದಾರೆ. ಇಂತಹ ಕೀಳುಮನಸ್ಥಿತಿಯ ಬೇಲೂರು ಸಿದ್ದೇಶ್ ಮತ್ತು ಅವರ
ತಂದೆ ಬೇಲೂರು ಅಂಜಪ್ಪ ರಾಜಕಾರಣದಲ್ಲಿರಲುನಾಲಾಯಕ್ ಎಂದು ಕಿಡಿಕಾರಿದರು.
ಮಾದಿಗರನ್ನು ಅಧಿಕಾರದ ಕುರ್ಚಿ ಮೇಲೆ ಕೂರಿಸಿ ನಾವು ಅವರ ಕೈಕೆಳಗೆ ಕುಳಿತುಕೊಳ್ಳಬೇಕಾ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಹಾಗೂ ಅವರ ಪುತ್ರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿರುವ ಬೇಲೂರು ಸಿದ್ದೇಶ್ ಮಾತನಾಡುತ್ತಾರಂತೆ.ಜಾತಿಗಳನ್ನು ಪೋಷಿಸುತ್ತಿರುವ ಮತ್ತು ಜಾತಿ ನಿಂದನೆ ಮಾಡಿರುವ ಈ ಇಬ್ಬರೂಜನಪ್ರತಿನಿಧಿಗಳನ್ನು ಕಾಂಗ್ರೆಸ್ ಪಕ್ಷದಿಂದ ನಾಯಕರುಉಚ್ಚಾಟನೆ ಮಾಡಬೇಕು ಎಂದು
ಕಾಂಗ್ರೆಸ್ ಪಕ್ಷದ ನಾಯಕರಿಗೆ ಒತ್ತಾಯಿಸಿದರು.
ದಲಿತರನ್ನು ಎತ್ತಿಕಟ್ಟಿ ಭೋವಿ ಸಮಾಜದವರಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಇಂದಿಗೂಸಮಾಜದಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ ಎನ್ನುವುದಕ್ಕೆ ಇದೊಂದು ದೊಡ್ಡ
ನಿದರ್ಶನವಾಗಿದೆ. ಜಾತಿ ಜಾತಿಗಳ ನಡುವೆ ಸಂಘರ್ಷ ಹಚ್ಚಿ ತಮ್ಮ ಬೆಳೆಕಾಳುಬೇಯಿಸಿಕೊಳ್ಳುತ್ತಿರುವ ಮೇಲ್ವರ್ಗ ಸಮುದಾಯದ ಬೇಲೂರು ಅಂಜಪ್ಪ, ಬೇಲೂರು ಸಿದ್ದೇಶ್
ಅವರಿಗೆ ಮಾದಿಗ ಸಮಾಜದ ಧಿಕ್ಕಾರವಿದೆ. ಮುಂದಿನ ದಿನಗಳಲ್ಲಿ ಈ ಇಬ್ಬರಿಗೂ ಮಾದಿಗ ಸಮಾಜ
ತಕ್ಕ ಪಾಠ ಕಲಿಸಲಿದೆ ಎಂದು ಗುಡುಗಿದರು.
ಮುಖಂಡರಾದ ನಾಗರಾಜ್ ಪಾಟೀಲ್, ತಳವಾರ್ ವೆಂಕಟೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಅಳವಂಡಿ
ವಿಜಯಪ್ಪ, ಷಣ್ಮುಖಪ್ಪ, ಬಣಕಾರ ಮಲ್ಲೇಪ್ಪ, ಮಾಳಿಗಿ ತಿಮ್ಮೇಶ್ ಮತ್ತಿತರರು
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *