Vijayanagara Express

Kannada News Portal

ಮೇ 1 ಕ್ಕೆ ಬೃಹತ್ ಉಚಿತ ಆರೋಗ್ಯ ಮೇಳ

1 min read

ಮೇ 1 ಕ್ಕೆ ಬೃಹತ್ ಉಚಿತ ಆರೋಗ್ಯ ಮೇಳ

 

ಹರಪನಹಳ್ಳಿ: ಏ -23 , ಮೇ 1 ಕ್ಕೆ ಹರಪನಹಳ್ಳಿ ಯಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ನಡೆಯಲಿದೆ ಎಂದು ಎಂ ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ವೀಣಾ ಮಹಾಂತೇಶ್ ರವರು ಹೇಳಿದರು.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹರಪನಹಳ್ಳಿ ಮಾಜಿ ಶಾಸಕ ಎಂ ಪಿ ರವೀಂದ್ರ ರವರ ಹುಟ್ಟು ಹಬ್ಬದ ಪ್ರಯುಕ್ತ ಮತ್ತು ಕಾರ್ಮಿಕರ ದಿನಾಚರಣೆ ಪ್ರಯುಕ್ತ ಈ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹರಪನಹಳ್ಳಿಯ ರಾಜಸೋಮಶೇಖರ ನಾಯಕ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.
ತಾಲೂಕಿನಲ್ಲಿ ಈ ರೀತಿಯ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಿದ್ದು ನಾಲ್ಕನೇ ಬಾರಿಗೆ ಎಂದ ಅವರು ವಿವಿಧ ರೀತಿಯ ರೋಗ ರುಜಿನಗಳಿಗೆ ಸಂಬಂಧ ಪಟ್ಟ ತಜ್ಞವೈದ್ಯರಿಂದ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆಗೆ ಮತ್ತು ಕೌನ್ಸೆಲಿಂಗ್ ನಡೆಸಿ ಸಲಹೆನೀಡಲಾಗುವುದು ವೀಶೇಷ ವಾಗಿ ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ಕಣ್ಣು,ದಂತ ವೈದ್ಯಕೀಯ, ಮಧುಮೇಹ, ರಕ್ತದೊತ್ತಡ, ಮುಂತಾದ ಕಾಯಿಲೆಗಳಿಗೆ ತಪಾಸಣೆ ನಡೆಸಲಾಗುವುದು ಎಂದರು

ಡಾ.ಮಹಾಂತೇಶ್ ಚರಂತಿಮಠ ರವರು ಮಾತನಾಡಿ ರಾಜ್ಯದಲ್ಲಿರುವ ಹೆಸರಾಂತ ಅಸ್ಪತ್ರೆಗಳಾದ ತಥಾಗತ್ ಹಾರ್ಟ್ ಆಸ್ಪತ್ರೆ ಬೆಂಗಳೂರು,ಸಿ.ಎಸ್.ಐ. ಕರ್ನಾಟಕ ಚಾಪ್ಟರ್ ಆಸ್ಪತ್ರೆ ಬೆಂಗಳೂರು, ಲಯನ್ಸ್ ಡಾಕ್ಟರ್ ಕ್ಲಬ್ , ಗ್ರೇಟ್ ಡಿಸ್ಟ್ರಿಕ್ಟ್ 371-E ಕೋರಮಂಗಲ ಬೆಂಗಳೂರು,ಎಸ್.ಎಸ್.ಆಸ್ಪತ್ರೆ ದಾವಣಗೆರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು, ರೆಮಿಡೀಯೋ ಕಣ್ಣಿನ ಆಸ್ಪತ್ರೆ, ಐಎಂಎ ಹರಪನಹಳ್ಳಿ ಇವರ ಸಹಯೋಗದಲ್ಲಿ ಪ್ರಖ್ಯಾತ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ನಡೆಯುತ್ತದೆ.

ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಈ.ಸಿ.ಜಿ. ಹೃದಯ ಸ್ಕ್ಯಾನಿಂಗ್ ಪರೀಕ್ಷೆ ಮಾಡಲಾಗುವುದು ಮತ್ತು ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುವುದು ಇದನ್ನು ಯಾವುದೇ ಒಂದು ಪಕ್ಷದಿಂದ ಅಥವಾ ಪಕ್ಷದ ಪರವಾಗಿ ಮಾಡುತ್ತಿಲ್ಲ ಇದನ್ನು ನಿಷ್ಪಕ್ಷಪಾತವಾಗಿ ನಡೆಸಲು ತೀರ್ಮಾನಿಸಲಾಗಿದೆ ಆದುದರಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುವಂತ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದರು ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲು ಶಾಲೆಯನ್ನು ನೀಡಿದ್ದಕ್ಕಾಗಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರುಗಳಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷರಾದ ಡಾಕ್ಟರ್ ಮಹಾಂತೇಶ್ ಚರಂತಿಮಠ , ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅಧ್ಯಕ್ಷರು ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ , ಪುರಸಭೆ ಮಾಜಿ ಅಧ್ಯಕ್ಷರಾದ ಕವಿತಾ ವಾಗೀಶ್ ,ಸಾಸ್ವೆಹಳ್ಳಿ ಮಲ್ಲನಗೌಡ, ನಾಗರಾಜ್ , ಅಸಂಘಟಿತ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಶಿವಣ್ಣ, ಗುಂಡಗತ್ತಿ ಮಹೇಶಪ್ಪ , ಬೆಣ್ಣೆಹಳ್ಳಿ ರಾಮನಗೌಡ , ಕಡಬಗೆರೆ ತಾತನ ಗೌಡ , ನಾರಾನಗೌಡ , ಹುಣಸೆಹಳ್ಳಿ ಸುರೇಶ್ , ಸಂತೋಷ್ , ಹಗರಿಗುಡಿಹಳ್ಳಿ ಗೋವಿಂದರಾಜ್ , ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ , ಹರಪನಹಳ್ಳಿ ಅರುಣ್ ಕುಮಾರ್ , ಶಿವರಾಜ್ ತಳವಾರ್ , ಮದನ್ ಸ್ವಾಮಿ , ದಾದಾ ಕಲಂದರ್ , ಪ್ರಜ್ವಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *