Vijayanagara Express

Kannada News Portal

ಮೇ 15 ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ

1 min read

ಮೇ 15 ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ

 

ಹರಪನಹಳ್ಳಿ: ತಾಲೂಕಿನ ದೇವರ ತಿಮ್ಮಲಾಪುರದ ಗ್ರಾಮದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ಮೂಲದ ಕಾಂಗ್ರೆಸ್ ನ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಅಂಬಾಡಿ ನಾಗರಾಜ್ ಅವರು ಹೇಳಿದರು.

ಹೊಸ ಪೇಟೆ ರಸ್ತೆಯ ಪಕ್ಕದ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಮೇ15 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಆದುದರಿಂದ ಹರಪನಹಳ್ಳಿ ತಾಲೂಕಿನ ಬಡ ಜನರಿಗೆ ಇದರ ಉಪಯೋಗವಾಗಲಿ ಎಂದರು. ಈ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನರು ರೋಸಿ ಹೋಗಿದ್ದಾರೆ ಅಡುಗೆ ಅನಿಲ, ಅಡುಗೆ ಎಣ್ಣೆ, ತರಕಾರಿ, ಸಾಂಬಾರು ಪದಾರ್ಥಗಳು, ದಿನಸಿ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ ಸಾರಿಗೆ ವೆಚ್ಚ ಮುಂತಾದವುಗಳನ್ನು ಜನರು ಅದರಲ್ಲೂ ಬಡ ವರ್ಗದ ಜನರಿಗೆ ಮದುವೆ ಮಾಡುವುದು ದುಬಾರಿಯಾಗಿ ಪರಿಣಮಿಸುತ್ತದೆ ಆದುದರಿಂದ ಇಂತಹ ವರ್ಗದ ಜನರಿಗೆ ಅನುಕೂಲವಾಗಲು ಈ ತರಹದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಮದುವೆಗಳನ್ನು ಆಯೋಜಿಸಲಾಗಿದೆ ಎಂದ ಅವರು ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು .

ಮದುವೆಗೆ ಬರುವ ಜೋಡಿ ಗೆ ಯಾವುದೇ ಶುಲ್ಕವಿಲ್ಲ ಮತ್ತು ಎರಡು ತಾಳಿ, ಕಾಲುಂಗುರ, ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು ಆದುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು .
ಮದುವೆಗೆ ಬರುವ ಜನರ ಸಂಖ್ಯೆ ಎಷ್ಟೇ ಇದ್ದರೂ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ 6 ಜೋಡಿಗಳು ನಮ್ಮಲ್ಲಿ ಮದುವೆಯಾಗಲು ನೋಂದಾಯಿಸಿಕೊಂಡಿರುತ್ತಾರೆ ಒಂದು ವೇಳೆ 100 ಜೊತೆ ಜೋಡಿಗಳು ಮದುವೆಗಾಗಿ ನಮ್ಮಲ್ಲಿ ನೋಂದಾಯಿಸಿ ಕೊಂಡರೆ ಕಾಂಗ್ರೆಸ್ ನ ರಾಜ್ಯ ನಾಯಕರನ್ನು ಕರೆಸಿ ದೊಡ್ಡದಾದ ವೇದಿಕೆ ಕಾರ್ಯಕ್ರಮವನ್ನು ಮಾಡಲಾಗುವುದು ಎಂದರು .

ಈ ಕ್ಷೇತ್ರದಲ್ಲಿ ತುಂಬಾ ಅಭ್ಯರ್ಥಿ ಗಳು ಟಿಕೆಟ್ ಆಕಾಂಕ್ಷಿಗಳಿದ್ದಾರೆ ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ದರೆ ಚುನಾವಣೆ ಯನ್ನು ಇದೇ ಕ್ಷೇತ್ರದಲ್ಲಿ ಇದ್ದುಕೊಂಡು ಕಾಂಗ್ರೆಸ್ ಪರ ಪ್ರಚಾರಕ್ಕೆ ಭಾಗವಹಿಸುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹೌದು ನನಗೆ ಅವಕಾಶ ಸಿಗದಿದ್ದರೂ ಇದೇ ಕ್ಷೇತ್ರದಲ್ಲಿ ಇದ್ದುಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ತಾಲೂಕಿನಲ್ಲಿ ಎಷ್ಟು ಜನ ಅಭ್ಯರ್ಥಿ ಗಳು ಇದ್ದಾರೊ ಅವರೆಲ್ಲರೂ ಒಂದೇ ವೇದಿಕೆಯಡಿಯಲ್ಲಿ ಹೋರಾಟಗಳಿಗೆ ಭಾಗವಹಿಸಬೇಕು ಇದನ್ನು ಕಾಂಗ್ರೆಸ್ ಮುಖಂಡರು ಮತ್ತು ಹೈಕಮಾಂಡ್ ಶೀಘ್ರದಲ್ಲಿ ಬಗೆಹರಿಸಬೇಕು ಎಂದು ತಿಳಿಸಿದರು.

ಈ ಕ್ಷೇತ್ರದಲ್ಲಿ ಅಭ್ಯರ್ಥಿ ಗಳು ಮತ್ತು ಆಕಾಂಕ್ಷಿಗಳು ಎಷ್ಟೇ ಇದ್ದರೂ ನನಗೆ ಅದರ ಬಗ್ಗೆ ಯೋಚನೆ ಇಲ್ಲ ನಾನು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ವಿವಿಧ ಸ್ಥಳೀಯ ಸ್ಥಂಸ್ಥೆಗಳ 26 ಚುನಾವಣೆಗಳನ್ನು ಮಾಡಿದ್ದೇನೆ ಜನರು ಕಾಂಗ್ರೆಸ್ ಪಕ್ಷದ ಮೇಲೆ ಬೇಸರಗೊಂಡು ಕಾಂಗ್ರೆಸ್ ತೊರೆಯುವ ಮನಸ್ಸು ಮಾಡಿದ್ದಾಗಲೂ ಅಂತಹ ಕಾರ್ಯಕರ್ತರನ್ನು ಪುನಃ ಕಾಂಗ್ರೇಸ್ ಪಕ್ಷಕ್ಕೆ ಕರೆ ತಂದು ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ ಮೂಲತಃ ನಮ್ಮದು ವ್ಯಾಪಾರಸ್ಥ ಕುಟುಂಬ ಅದರ ಜೊತೆಗೆ ಸಮಾಜಸೇವೆ, ರಾಜಕೀಯವನ್ನು ಕೂಡ ಮಾಡುತ್ತಾ ಬಂದಿದ್ದೇವೆ ನನ್ನ ಅಜ್ಜಿಯ ಊರು ಇದೆ ತಾಲೂಕಿನ ಚಿಗಟೇರಿ ಗ್ರಾಮ ,ಅಲ್ಲದೆ ನಮ್ಮ ತಾಯಿ ಊರು ಕೂಡ ಅದೇ ಆಗಿದೆ ಈಗ ನಾನು ಮದುವೆ ಯಾಗಿರುವುದು ಚಿಗಟೇರಿ ಗ್ರಾಮದಲ್ಲಿ ಆದ್ದರಿಂದ ಅರ್ಧ ಭಾಗ ನಾನು ಹರಪನಹಳ್ಳಿ ತಾಲೂಕಿನವನಾಗಿದ್ದೇನೆ, ಅದಕ್ಕಿಂತ ಹೆಚ್ಚಾಗಿ ತಾಲೂಕಿನ ಅನೇಕ ಊರುಗಳಲ್ಲಿ ನಮ್ಮ ತಂದೆಯವರು ವ್ಯಾಪಾರ ಮಾಡುವ ಮೂಲಕ ಇನ್ನರ್ಧ ನನ್ನ ಸ್ವಂತ ತಾಲೂಕು ಆಗಿದೆ ಆಗಾಗಿ ಒಂದು ಬಗೆಯಲ್ಲಿ ನಾನು ಸಹ ಈ ತಾಲೂಕಿನ ಸ್ವಂತ ಪ್ರಜೆ ಎಂದರು. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಚಿಗಟೇರಿ ಸುರೇಶ್, ಶರೀಫ್, ಭಾಗವಹಿಸಿದ್ದರು.

Leave a Reply

Your email address will not be published. Required fields are marked *