Vijayanagara Express

Kannada News Portal

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪೂಜಾರ್

1 min read

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪೂಜಾರ್

 

 

ಹರಪನಹಳ್ಳಿ: ಭಾನುವಾರ ಮೇ – 29 ಸರ್ಕಾರಿ ನೌಕರರ ಕ್ರಿಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ಬಿಜೆಪಿ ವಿಜಯನಗರ ಜಿಲ್ಲೆ ಉಪಾಧ್ಯಕ್ಷರಾದ ಚಂದ್ರಶೇಖರ ಪೂಜಾರ್ ರವರು ವಿತರಣೆ ಮಾಡಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಾನುವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಕ್ರೀಡಾ ಪಟುಗಳಿಗೆ ಸಮವಸ್ತ್ರ ವಿತರಣೆಯನ್ನು ಮೇ 30 ರಿಂದ ಜೂನ್ 1ರ ವರೆಗೆ 3 ದಿನಗಳ ಕಾಲ ನಡೆಯಲಿರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳು ನಡೆಯುತ್ತಿದ್ದು ಅದರಲ್ಲಿ ಭಾಗವಹಿಸಲು ನೂತನ ವಿಜಯನಗರ ಜಿಲ್ಲೆಯ ವತಿಯಿಂದ ಒಟ್ಟು 14 ಕ್ರೀಡಾ ಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ಚಂದ್ರಶೇಖರ ಪೂಜಾರ್ ರವರು ವಿತರಿಸಿ ಕ್ರೀಡಾಪಟುಗಳಿಗೆ ಶುಭವನ್ನು ಹಾರೈಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ಭಾಗವಹಿಸುವುದೇ ಭಾಗ್ಯ ವಿಜಯ ವೈಭವ ವಲ್ಲ ಎಂದು ಕಿವಿಮಾತುಗಳನ್ನು ಹೇಳಿದರು ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತರಲಿ ಎಂದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮಾತುಗಳನ್ನು ಆಡಿದರು .


ಈ ಸಂದರ್ಭದಲ್ಲಿ ಕ್ರೀಡಾಂಗಣ ದ ವ್ಯವಸ್ಥಾಪಕ ಮಂಜುನಾಥ್,ಕ್ರೀಡಾಪಟುಗಳಾದ ಶಿಕ್ಷಕರಾದ ಶಿವಮೂರ್ತಿ, ಗುಣಸಾಗರ, ಬಸವರಾಜ್, ಪೋಲಿಸ್ ಪೇದೆ ಚಿಂಚೋಳಿ ನಾಗರಾಜ್, ಕೆ.ಅಂಜಿನಿ, ಸೇರಿದಂತೆ ಅನೇಕ ಕ್ರೀಡಾಭಿಮಾನಿಗಳು ಹಾಜರಿದ್ದರು.

 

Leave a Reply

Your email address will not be published. Required fields are marked *