Vijayanagara Express

Kannada News Portal

ಕಾವಿ ತೊಟ್ಟವರೆಲ್ಲ ದೊಡ್ಡವರಲ್ಲ ಮುತ್ತು ಕಟ್ಟಿಕೊಂಡವರೆಲ್ಲ ಜೋಗತಿಯರಲ್ಲ- ಮಂಜಮ್ಮ ಜೋಗತಿ

1 min read

ಕಾವಿ ತೊಟ್ಟವರೆಲ್ಲ ದೊಡ್ಡವರಲ್ಲ ಮುತ್ತು ಕಟ್ಟಿಕೊಂಡವರೆಲ್ಲ ಜೋಗತಿಯರಲ್ಲ- ಮಂಜಮ್ಮ ಜೋಗತಿ

ಹರಪನಹಳ್ಳಿ : ಜು-3,ಕಾವಿ ತೊಟ್ಟವರೆಲ್ಲ ದೊಡ್ಡವರಲ್ಲ ಮುತ್ತು ಕಟ್ಟಿಕೊಂಡವರೆಲ್ಲ ಜೋಗತಿಯರಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಅಧ್ಯಕ್ಷೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರತಿಮ್ಮಲಾಪುರದ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಜನರು ಹೇಗಿದ್ದರೂ ಆಡಿಕೊಳ್ಳುತ್ತಾರೆ ಅಂಥವರ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳುಬಾರದು ನಮ್ಮ ಕೆಲಸವನ್ನು ನಾವು ಮಾಡುವಂತಾಗಬೇಕು, ಪ್ರತಿಯೊಬ್ಬರಿಗೂ ಸಮಯ ಪ್ರಜ್ಞೆಯನ್ನುವಂತದ್ದು ಗೊತ್ತಿರಬೇಕು ,ಯಾರಿಗಾದರೂ ತೃತೀಯಲಿಂಗಿ ಮಕ್ಕಳು ಹುಟ್ಟಿದರೆ ಅವರನ್ನು ತಿರಸ್ಕರಿಸದೆ ಶಿಕ್ಷಣವನ್ನು ನೀಡಿರಿ ಶಿಕ್ಷಣ ಪಡೆದರೆ ಎಂಥವರ ಬದುಕಾದರೂ ಬದಲಾಗಬಹುದು ಆಗ ಅವರ ಬದುಕು ಬೀದಿಗೆ ಬರಲಾರದು ಮತ್ತು ಲೈಂಗಿಕ ಕಾರ್ಯಕರ್ತರಾಗಲು ಸಾಧ್ಯವಿರುವುದಿಲ್ಲ ನಾನು ಎಸ್ ಎಸ್ ಎಲ್ ಸಿ ವರೆಗೂ ಶಿಕ್ಷಣ ಪಡೆದಿದ್ದಕ್ಕಾಗಿ ಈ ಹಂತಕ್ಕೆ ಬಂದಿದ್ದೇನೆ ಎಂದರು.

ಹವ್ಯಾಸಿ ಕಲಾವಿದರಾಗಿ ವೃತ್ತಿ ಕಲಾವಿದರಾಗಬೇಡಿ ನಾನು ಎಂದೂ ಕಾಲೇಜ್ ಮೆಟ್ಟಿಲು ಹತ್ತಿರುವುದಿಲ್ಲ ಆದರೆ ಇಂದು ಅನೇಕ ಕಾಲೇಜುಗಳಲ್ಲಿ ನನ್ನನ್ನು ಕರೆದು ಸನ್ಮಾನ ಮಾಡುತ್ತಿದ್ದಾರೆ ಅಲ್ಲದೆ ಕೆಲವು ವಿಶ್ವವಿದ್ಯಾಲಯಗಳಲ್ಲಿ ನನ್ನ ಜೀವನ ಅನುಭವದ ಪಠ್ಯವೂ ವಿದ್ಯಾರ್ಥಿಗಳಿಗೆ ಪಾಠವಾಗಿದೆ ಎಂದರು.
ನನಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯು ಅದು ನನಗಲ್ಲ ಜಾನಪದ ಕಲೆಗೆ, ನನ್ನನ್ನು ಪ್ರಚಾರಪಡಿಸಿದ ಪತ್ರಕರ್ತರಿಗೆ , ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಜನತೆಗೆ ಕೊಟ್ಟ ಪ್ರಶಸ್ತಿಯಾಗಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ತೆಗ್ಗಿನ ಮಠದ ಶ್ರೀ ವರ ಸದ್ಯೋಜಾತ ಮಹಾಸ್ವಾಮಿಗಳು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಅರಿತು ಪೋಷಕರು ಕೋರ್ಸುಗಳಿಗೆ ಕಳುಹಿಸಬೇಕು ಅನ್ನವನ್ನು ಹಾಕಿದರೆ ಕೇವಲ ನಾಲ್ಕು ತಾಸು ಮಾತ್ರ ಶಿವನು ನೀಗಿಸಬಹುದು ಆದರೆ ಅಕ್ಷರವನ್ನು ಕಲಿಸಿ ಶಿಕ್ಷಣವನ್ನು ನೀಡಿದರೆ ಅವರು ಕೊನೆಯವರೆಗೂ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ಈಗಿನ ಕಾಲದಲ್ಲಿ ಶಿಕ್ಷಣವೆಂಬುದು ಅತಿ ಅಮೂಲ್ಯ ಆದ್ದರಿಂದಲೇ ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತಲೂ ಕೀಳು ಎಂದು ಶಾಸ್ತ್ರಗಳು ಹೇಳುತ್ತವೆ ಆದುದರಿಂದ ಮಕ್ಕಳಿಗೆ ಶಿಕ್ಷಣವನ್ನು ಅಗತ್ಯವಾಗಿ ನೀಡಬೇಕು ಈ ಭಾಗದಲ್ಲಿ ಅರಸೀಕೆರೆಯ ವೈಡಿ ಅಣ್ಣಪ್ಪನವರು ವೈಡಿ ಅಣ್ಣಪ್ಪ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ನೀಲಗುಂದದ ಗುಡ್ಡದ ವಿರಕ್ತ ಮಠದ ಶ್ರೀ ಚೆನ್ನಬಸವ ಶಿವಯೋಗಿ ಮಹಾಸ್ವಾಮಿಗಳು ಮಾತನಾಡಿ ದೇಶ ನಾಶ ಮಾಡಲು ಅಣುಬಾಂಬ್ ನ ಅಗತ್ಯವಿಲ್ಲ ಆ ದೇಶದ ಶಿಕ್ಷಣ ಪಡೆದವರ ಸಂಖ್ಯೆ ಕುಸಿದರೆ ಸಾಕು ದೇಶ ನಾಶವಾಗುತ್ತದೆ ಎಂದರು .

ಸ್ವಾಮೀಜಿಗಳಿಗೆ ಸಮಾಜ ಸೇವೆ ಮಾಡಲು ಯಾವುದೇ ಅಡೆತಡೆಗಳು ಇರುವುದಿಲ್ಲ ಆದರೆ ಸಂಸಾರಿಕರಾದವರು ಸಮಾಜ ಸೇವೆ ಮಾಡುವುದು ತುಂಬಾ ಕಷ್ಟ ಏಕೆಂದರೆ ಸಂಸಾರ ಎಂಬ ಜಂಜಾಟದಲ್ಲಿ ಎಲ್ಲಾವುಗಳನ್ನು ನಿಭಾಯಿಸಿ ಬಂಧು ಬಾಂಧವರ ನ್ನು ಸಂತೈಸಿ ಸಮಾಜ ಸೇವೆ ಮಾಡುವುದು ಇದು ಸಣ್ಣ ಮಾತೇನಲ್ಲ ಇಂತಹದರಲ್ಲಿ ಅರಸೀಕೆರೆಯ ವೈಡಿ ಅಣ್ಣಪ್ಪನವರು ಬಡ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ಮತ್ತು ಸನ್ಮಾನ ಹಾಗೂ ಸಮಾಜ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.


ವೈಡಿ ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ನ ಮುಖ್ಯಸ್ಥ ಅರಸಿಕೇರಿಯ ವೈಡಿ ಅಣ್ಣಪ್ಪ ಅವರು ಮಾತನಾಡಿ ಅರಸೀಕೆರೆ ಗ್ರಾಮದ ನಮ್ಮ ಮನೆಗೆ ನಮ್ಮ ಸುತ್ತಮುತ್ತಲಿನ ಗ್ರಾಮದ ಮತ್ತು ನಮ್ಮ ಊರಿನ ಬಡ ವಿದ್ಯಾರ್ಥಿಗಳು ಬಂದು ಅಣ್ಣ ನಮಗೆ ಕಾಲೇಜಿನ ಶುಲ್ಕವನ್ನು ಕಟ್ಟಲು ಆಗುವುದಿಲ್ಲ ಎಂದು ಹೇಳಿಕೊಂಡು ಮನೆಗೆ ಬರುತ್ತಿದ್ದರು ಆಗ ನಾನು ಹರಪನಹಳ್ಳಿ ಪಟ್ಟಣದ ಉಜ್ಜಯಿನಿ ಕಾಲೇಜ್ ಎಡಿಬಿ ಕಾಲೇಜ್ ಮತ್ತು ದಾವಣಗೆರೆಯ ಕೆಲವು ಕಾಲೇಜ್ ಗಳಲ್ಲಿ ಹಾಗೂ ಅರಸೀಕೆರೆಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕವನ್ನು ಪಡೆದು ಪ್ರವೇಶವನ್ನು ನೀಡುವಂತೆ ಹೇಳುತ್ತಿದ್ದೆ ಇದಾದ ನಂತರ ಐಎಎಸ್ ಕೆಎ ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಂತಹ ಬಡ ವಿದ್ಯಾರ್ಥಿಗಳಿಗೆ ನಮ್ಮ ಟ್ರಸ್ಟ್ ವತಿಯಿಂದ ಸಹಾಯವನ್ನು ಮಾಡುತ್ತಾ ಬಂದಿದ್ದೇವೆ.
ದೆಹಲಿ ಬೆಂಗಳೂರು ಮುಂತಾದಡೆಗಳಲ್ಲಿ ಈ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ ಇಂತಹ ವಿದ್ಯಾರ್ಥಿಗಳು ಯಾರಾದರೂ ನನ್ನನ್ನು ಸಂಪರ್ಕಿಸಿದರೆ ಖಂಡಿತವಾಗಿಯೂ ಅವರಿಗೆ ಸಹಾಯ ಮಾಡುತ್ತೇನೆ ಎಂದರು ಏಕೆಂದರೆ ಸಮಾಜದಲ್ಲಿ ಏನನ್ನಾದರೂ ಬದಲಾವಣೆ ಮಾಡಬೇಕೆಂದರೆ ಅದು ಶಿಕ್ಷಣದಿಂದಲೇ ಮಾತ್ರವೇ ಸಾಧ್ಯ ಎಂಬುದು ನನ್ನ ನಿಲುವಾಗಿದೆ ಆದ್ದರಿಂದ ನಾನು ಓದುವ ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಅರಸೀಕೆರೆಯ ಶ್ರೀಕೋಲ ಶಾಂತೇಶ್ವರ ಮಠದ ಶಾಂತಲಿಂಗ ದೇಶಿ ಕೇಂದ್ರ ಮಹಾಸ್ವಾಮಿಗಳು ಮತ್ತು ಅರಸಿಕೇರೆ ಗ್ರಾಮದ ಮುಖಂಡ ಪ್ರಾಶಾಂತ್ ಪಾಟೀಲ್, ಯರಬಳ್ಳಿ ಉಮಾಪತಿ ,ಎಸ್ಎಂಸಿಕೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದುರ್ಗೇಶ್ ಮಾತನಾಡಿದರು.
ಈ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ತಾಲೂಕಿನ ಒಟ್ಟು 283 ವಿದ್ಯಾರ್ಥಿಗಳಿಗೆ ವೈಡಿ ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹರಪನಹಳ್ಳಿ ಪಟ್ಟಣದ ಸಣ್ಣಹಾಲಸ್ವಾಮಿಗಳು, ಥೈಲ್ಯಾಂಡ್ ನಲ್ಲಿ ಚಿನ್ನದ ಪದಕ ಗಳಿಸಿದ ಮಲ್ಲಿಕಾರ್ಜುನ, ಶ್ರೀ ಯೋಗ ನರಸಿಂಹ ಸಹಕಾರಿ ಸಂಘದ ಮುಖ್ಯ ಸ್ಥರಾದ ಶ್ರೀಮತಿ ವೈ.ಡಿ.ಲಕ್ಷ್ಮೀದೇವಿ ಅಣ್ಣಪ್ಪ , ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೇಂಗೆಪ್ಪ, ಮಾದಿಹಳ್ಳಿ ಮಂಜುನಾಥ್, ಮೈದೂರು ಮಾರುತಿ , ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *