Vijayanagara Express

Kannada News Portal

ಹರಪನಹಳ್ಳಿ ಪುರಸಭೆಯಲ್ಲಿ ಕ ದಡಿದ ಕೈ , ಅರಳಿದ ತಾವರೆ

1 min read

ಹರಪನಹಳ್ಳಿ ಪುರಸಭೆಯಲ್ಲಿ
ಕ ದಡಿದ ಕೈ ,  ಅರಳಿದ ತಾವರೆ

ಹರಪನಹಳ್ಳಿ: ಪುರಸಭೆ ಅಧ್ಯಕ್ಷರಾಗಿ ಹರಾಳ್ ಹೆಚ್ ಎಂ ಅಶೋಕ್ ಆಯ್ಕೆ ಯಾಗಿದ್ದಾರೆ .
ಒಟ್ಟು 27 ಜನ ಸದಸ್ಯರ ಬಲದ ಪುರಸಭೆಯಲ್ಲಿ 14 ಸದಸ್ಯರು ಕಾಂಗ್ರೆಸ್ ಪಕ್ಷದವರು,10 ಜನ ಸದಸ್ಯರು ಬಿಜೆಪಿ ಯವರು, 2 ಪಕ್ಷೇತರರು,1 ಜೆಡಿಎಸ್ ನ ಸದಸ್ಯರು ಇದ್ದರು ಇವುಗಳ ಪೈಕಿ ಕಾಂಗ್ರೆಸ್ ಸರಳ ಬಹುಮತ ಹೊಂದಿದ್ದು ಪುರಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಲು ಯಾವುದೇ ಅಡ್ಡಿ ಇರಲಿಲ್ಲ . ಹಿಂದುಳಿದ ( ಅ )ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಬಯಸಿ ಬಿಜೆಪಿ ಯಿಂದ ಹಾರಳ್ ಹೆಚ್ ಎಂ ಅಶೋಕ್ ನಾಮಪತ್ರ ಸಲ್ಲಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿ ಅಬ್ದುಲ್ ರಹಿಮಾನ್ ಸಾಬ್ ನಾಮಪತ್ರ ಸಲ್ಲಿಸಿದ್ದರು .

ಒಟ್ಟು 27 ಜನರ ಪೈಕಿ ಚುನಾವಣೆ ಕೊಠಡಿಯಲ್ಲಿ 18 ಸದಸ್ಯರು ಹಾಜರಿದ್ದರು ಆ ಪೈಕಿ
ಬಿಜೆಪಿ ಅಭ್ಯರ್ಥಿ ಹರಾಳ್ ಅಶೋಕ್ ರವರಿಗೆ 9 ಸದಸ್ಯರು ಮತ್ತು ಒಂದು ಶಾಸಕರಮತ ಹಾಗೂ ಒಂದು ಸಂಸದರ ಮತ ಸೇರಿ ಒಟ್ಟು 11 ಮತಗಳು ಚಲಾವಣೆ ಗೊಂಡಿದ್ದವು ,
ಪಕ್ಷೇತರ ಅಭ್ಯರ್ಥಿ ಡಿ ಅಬ್ದುಲ್ ರಹಿಮಾನ್ ರವರಿಗೆ 6 ಕಾಂಗ್ರೆಸ್,2 ಪಕ್ಷೇತರ ಹಾಗೂ 1ಜೆಡಿಎಸ್ ನ ಮತಗಳು ಸೇರಿದಂತೆ ಒಟ್ಟು 9 ಮತಗಳು ಚಲಾವಣೆ ಗೊಂಡಿದ್ದವು .

ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಆರಂಭಗೊಂಡು ಕಾಂಗ್ರೆಸ್ ನ ಒಳಜಗಳ ದಿಂದಾಗಿ ಕಾಂಗ್ರೆಸ್ ಪಕ್ಷದ 8 ಸದಸ್ಯರು ಹಾಗೂ ಬಿಜೆಪಿ ಪಕ್ಷದ ಒಬ್ಬರು ಗೈರು ಹಾಜರಾಗಿದ್ದರು, ಕಾಂಗ್ರೆಸ್ ಪಕ್ಷದ ಸದಸ್ಯರ ಗೈರು ಹಾಜರಿಗೆ ಕಾರಣ ಮಾಜಿ ಸಚಿವ , ಹಾಲಿ ಹಡಗಲಿ ಶಾಸಕ ಪಿ ಟಿ ಪರಮೇಶ್ವರ್ ನಾಯ್ಕ ಮತ್ತು ಹರಪನಹಳ್ಳಿ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ರವರ ಸಹೋದರಿ ಎಂ ಪಿ ಲತಾ ಮಲ್ಲಿಕಾರ್ಜುನ ರವರ ಅನುಯಾಯಿಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಸಮನ್ವಯತೆಯ ಕೊರತೆಯಿಂದಾಗಿ ವೈಯಕ್ತಿಕ ದ್ವೇಷ ಈಗ ಪಕ್ಷದ ದ್ವೇಷ ಸಮಸ್ಯೆಯಾಗಿ ಮಾರ್ಪಟ್ಟು ಈ ಸೊಲಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ವಿಪ್ ನೀಡಿದ್ದರೂ ಸಹ ಕಾಂಗ್ರೆಸ್ ಪಕ್ಷದ ಒಟ್ಟು 8 ಜನ
ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದಾರೆ. ಬಣ ರಾಜಕಾರಣದಿಂದ ಪುರಸಭೆ ಯಲ್ಲಿ 14 ಸ್ಥಾನ ಹೊಂದಿದ್ದರೂ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಮತ್ತೊಮ್ಮೆ ವಿಫಲವಾಗಿದೆ.

ಮುಯ್ಯಿಗೆ ಮುಯ್ಯಿ

ಕಳೆದ ಒಂದುವರೆ ವರ್ಷಗಳ ಹಿಂದೆ ಹರಪನಹಳ್ಳಿ ಪುರಸಭೆ ಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು
ಬಿಜೆಪಿಯಿಂದ ಈಜಂತ್ಕರ್ ಮಂಜುನಾಥ್ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷದ ವತಿಯಿಂದ ಜೋಗಿನ ಭರತೇಶ ನಾಮಪತ್ರ ಸಲ್ಲಿಸಿದ್ದರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಡಿ ಅಬ್ದುಲ್ ರಹಿಮಾನ್ ಎಂಬವವರು ನಾಮಪತ್ರ ಸಲ್ಲಿಸಿದ್ದರು
ಆಗ ಕಾಂಗ್ರೆಸ್ ಪಕ್ಷದ 14 ಸದಸ್ಯರ ಪೈಕಿ 6 ಕಾಂಗ್ರೆಸ್ ಸದಸ್ಯರು, ಇಬ್ಬರು ಪಕ್ಷೇತರ ಸದಸ್ಯರು,ಒಬ್ಬ ಜೆಡಿಎಸ್ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರು ಹಾಜರಾಗಿದ್ದರು .

ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಧ್ಯಕ್ಷ ರಾಗುವ ಅವಕಾಶ ತಪ್ಪಿತ್ತು ಬಿಜೆಪಿಗೆ ಅಧಿಕಾರ ಒಲಿದಿತ್ತು ಅಂದು ಗೈರು ಹಾಜರಾದ ಕಾಂಗ್ರೆಸ್ ಸದಸ್ಯರು ಎಂಪಿ ಲತಾ ಮಲ್ಲಿಕಾರ್ಜುನ್ ರವರ ಹಿಂದೆ ಗುರುತಿಸಿಕೊಂಡವರಾಗಿದ್ದರು ಎಂದು ಹೇಳಲಾಗಿತ್ತು ಅದಕ್ಕೆ ಪ್ರತಿಯಾಗಿ ಈಗ ಗೈರು ಹಾಜರಾದ ಕಾಂಗ್ರೆಸ್ ಪಕ್ಷದ ಎಂಟು ಜನ ಸದಸ್ಯರು ಪಿ.ಟಿ ಪರಮೇಶ್ವರ ನಾಯ್ಕ್ ರವರ ಹಿಂದೆ ಗುರುತಿಸಿಕೊಂಡವರು ಎಂದು ಹೇಳಲಾಗುತ್ತಿದೆ ಅಂದು ಲತಾ ಮಲ್ಲಿಕಾರ್ಜುನ ಹಿಂಬಾಲಕರು ಮಾಡಿದ ಪ್ರತಿಕಾರಕ್ಕೆ ಇಂದು ಪರಮೇಶ್ವರ್ ನಾಯ್ಕ ರವರ ಬಣದವರು ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ ಆದುದರಿಂದ ಜನರು ಇದನ್ನು ಮುಯ್ಯಿಗೆ ಮುಯ್ಯಿ ತೀರಿಸಲಾಗಿದೆ ಎಂದೇ ಹೇಳಲಾಗುತ್ತದೆ.

 

ಅಭ್ಯರ್ಥಿ ಕಣಕ್ಕೆ ಇಳಿಸದ ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿ ಗೆ ಅಸ್ತು
ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿದ ಒಂದು ಅಭ್ಯರ್ಥಿಯ ಸೋಲಿಗೆ ಡಿ ಅಬ್ದುಲ್ ರೆಹಮಾನ್ ಕಾರಣರಾಗಿದ್ದರು ಆ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾದ ಡಿ ಅಬ್ದುಲ್ ರಹಿಮಾನ್ ರವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಕಣಕ್ಕಿಳಿಸಿದ್ದರಿಂದಲೇ ಕಾಂಗ್ರೆಸ್ ನ ಎಂಟು ಜನ ಸದಸ್ಯರು ಗೈರು ಹಾಜರಾಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಪುರಸಭೆ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದಿಲ್ಲ ಬದಲಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುವ ಡಿ ಅಬ್ದುಲ್ ರೆಹಮಾನ್ ಸಾಬ್ ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು ಗೈರು ಹಾಜರಾಗಿರುವ ಸದಸ್ಯರು ಪಕ್ಷದ ಚಿಹ್ನೆ ಅಡಿ ಗೆದ್ದಿರುವ ಅಭ್ಯರ್ಥಿಗಳ ಬದಲು ಪಕ್ಷೇತರವಾಗಿ ಗೆದ್ದ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೆಂದು ಘೋಷಿಸಿದ್ಧರ ಪರಿಣಾಮವಾಗಿ ಕಾಂಗ್ರೆಸ್ ಎಂಟು ಜನ ಸದಸ್ಯರು ಗೈರು ಹಾಜರಾಗಿದ್ದಾರೆ ಎಂದು ಹೀಗೂ ಹೇಳಲಾಗುತ್ತದೆ .


ಈ ವೇಳೆ ಪುರಸಭೆ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಹಾರಾಳ್ ಹೆಚ್ ಎಂ ಅಶೋಕ್ ರವರಿಗೆ ಅಭಿನಂದಿಸಿ ಮಾತನಾಡಿದ ಶಾಸಕ ಜಿ.ಕರುಣಾಕರರೆಡ್ಡಿ ಅಶೋಕ್ ರವರು ರಸ್ತೆ, ಕುಡಿಯುವ ನೀರು, ಚರಂಡಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ ಅದ್ಯತೆ ಕೊಡುತ್ತಾರೆ ಎಂಬ ವಿಶ್ವಾಸವಿದೆ ನಾವು ಅವರಿಗೆ ಸಹಕಾರ ನೀಡಿ ಒಟ್ಟಾರೆಯಾಗಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಸದಸ್ಯರೂ ಪುರಸಭೆಯ ಹಾಲಿ ಉಪಾಧ್ಯಕ್ಷರೂ ಆದ ಶ್ರೀಮತಿ ಭಿಮವ್ವ ಸಣ್ಣಹಾಲಪ್ಪ ರವರು ಚುನಾವಣೆಗೆ ಗೈರು ಹಾಜರಾಗಿದ್ದಾರಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು ನಮಗೆ ಗೊತ್ತಿಲ್ಲ ಎಂದು ಸಂಭಾಷಣೆಗೆ ಪೂರ್ಣವಿರಾಮ ನೀಡಿದರು .

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ಇದು ಕಾಂಗ್ರೆಸ್ ವೈಫಲ್ಯವೋ, ಬಿಜೆಪಿ ಫಲವೋ ಗೊತ್ತಿಲ್ಲ ಒಟ್ಟಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.

12.45ಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಅವರು ಸದಸ್ಯರ ವಾಹನದಲ್ಲಿಯೇ ಪುರಸಬೆಗೆ ಆಗಮಿಸಿದರು. ಜೊತೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಕೂಡ ಬಂದರು. ಅಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ನೂತನ ಅಧ್ಯಕ್ಷ ಹಾರಾಳು ಅಶೋಕ್ ಅವರು ಮಾತನಾಡಿ,
ಪಟ್ಟಣದ ಉದ್ಯಾನವನಗಳ ಹಸಿರೀಕರಣಕ್ಕೆ ಕ್ರಮ ಕೈಗೊಳ್ಳುತ್ತೇನೆ, ಕುಡಿಯುವ ನೀರು, ಬೀದಿ ದೀಪ ಚರಂಡಿ ವ್ಯವಸ್ಥೆ ಶೌಚಾಲಯ ರಸ್ತೆ ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಶಿವಕುಮಾರ್ ಬಿರದಾರ್ ಕಾರ್ಯ ನಿರ್ವಹಿಸಿದರು, ಪುರಸಭೆ ಆರೋಗ್ಯಾಧಿಕಾರಿ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಯರಿಗುಡಿ ಶಿವಕುಮಾರ್, ಹಾಗೂ ಪುರಸಭೆ ಸಿಬ್ಬಂದಿ ಹಾಜರಿದ್ದರು.
ಡಿವೈಎಸ್ಪಿ ಹಾಲಮೂರ್ತಿರಾವ್ ಹಾಗೂ ಸಿಪಿಐ ನಾಗರಾಜ್ ಕಮ್ಮರ್ ನೇತೃತ್ವದಲ್ಲಿ ಬಿಗಿ ಪೊಲಿಸ್ ಬಂದೋಬಸ್ತ್ ಹಾಕಲಾಗಿತ್ತು. ಯಾವುದೇ ಅವಗಡ ಸಂಬಂಧಿಸಿದಂತೆ ಶಾಂತಿಯುತವಾಗಿ ಚುನಾವಣೆ ನಡೆಯಿತು.

Leave a Reply

Your email address will not be published. Required fields are marked *