ಕಾಂಗ್ರೆಸ್ ನ ಆಂತರಿಕ ಭಿನ್ನಾಭಿಪ್ರಾಯವೇ ಸೋಲಿಗೆ ಕಾರಣ -ಕವಿತಾರೆಡ್ಡಿ
1 min readಕಾಂಗ್ರೆಸ್ ನ ಆಂತರಿಕ ಭಿನ್ನಾಭಿಪ್ರಾಯವೇ ಸೋಲಿಗೆ ಕಾರಣ -ಕವಿತಾರೆಡ್ಡಿ
ಹರಪನಹಳ್ಳಿ: ತಾಲೂಕಿನ ಕಾಂಗ್ರೆಸ್ ನಲ್ಲಿರುವ ಆಂತರಿಕ ಭಿನ್ನಾಭಿಪ್ರಾಯವೇ ಪುರಸಭೆ ಅಧ್ಯಕ್ಷರ ಸ್ಥಾನದಲ್ಲಿ ಸೋಲಲು ಪ್ರಮುಖ ಕಾರಣ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಕವಿತಾ ರೆಡ್ಡಿ ಅವರು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಚುನಾವಣೆ ಉಸ್ತುವಾರಿವಹಿಸಿಕೊಂಡಿದ್ದ ಕವಿತಾರೆಡ್ಡಿ ಅವರು ಪುರಸಭೆಯಲ್ಲಿ 14 ಕಾಂಗ್ರೆಸ್ ಸದಸ್ಯರು ಇದ್ದರು ಆಗಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಆಗುತ್ತಾರೆ ಎಂಬ ವಿಶ್ವಾಸ ನಮಗಿತ್ತು ಆದರೆ ನಮ್ಮ ಲೆಕ್ಕಚಾರ ತಪ್ಪಾಗಿದೆ ಏಕೆಂದರೆ ಬಹುಮತವಿದ್ದರೂ ಸೋತಿದ್ದೇವೆ ಇದು ಬೇಸರದ ಸಂಗತಿಯಾಗಿದೆ ಕಾಂಗ್ರೆಸ್ ಪಕ್ಷದ ಹೆಸರು ಹೇಳಿಕೊಂಡು ಗೆದ್ದಂತ ಸದಸ್ಯರುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿರುವುದಿಲ್ಲ ಅವರು ಮತದಾರರಿಗೂ ಕಾರ್ಯಕರ್ತರಿಗೂ ಜನರಿಗೂ ದ್ರೋಹ ಮಾಡಿದ್ದಾರೆ ಎಂದರು ಇದರಲ್ಲೇ ಗೊತ್ತಾಗುತ್ತದೆ ಅವರು ಪಕ್ಷ ನಿಷ್ಠರಾಗಿಲ್ಲ ಪಕ್ಷದ ಗುರುತನ್ನು ನೋಡಿ ಜನರು ಮತವನ್ನು ಹಾಕಿದ್ದಾರೆ ಅಂತ ಜನರಿಗೆ ಇವರು ಮೋಸ ಮಾಡಿದ್ದಾರೆ ಎಂದು ಹೇಳಿದರು.
ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿದ ಒಂದು ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದರು ಆ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾದ ಡಿ ಅಬ್ದುಲ್ ರಹಿಮಾನ್ ರವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಕಣಕ್ಕಿಳಿಸಿದ್ದರಿಂದಲೇ ಕಾಂಗ್ರೆಸ್ ನ ಎಂಟು ಜನ ಸದಸ್ಯರು ಗೈರು ಹಾಜರಾಗಿದ್ದಾರೆ ಎಂದು ಸಹ ಹೇಳಲಾಗುತ್ತದೆಯಲ್ಲಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು
ಈ ಬಾರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬೇಕು ಎಂಬ ಉದ್ದೇಶದಿಂದ ರಾಜ್ಯ ನಾಯಕರು ಲಾಟಿ ದಾದಾಪೀರ್ ,ಜಾಕಿರ್ ಸರ್ಕವಾಸ್, ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಡಿ ಅಬ್ದುಲ್ ರೆಹಮಾನ್ ಅವರುಗಳ ಹೆಸರನ್ನು ಸೂಚಿಸಲಾಗಿತ್ತು ಇವುಗಳಲ್ಲಿ ಹಿರಿಯರಾದ ಮತ್ತು ಅನುಭವಿಗಳು ಎಂದು ರಹಿಮಾನ್ ರವರನ್ನು ರಾಜ್ಯಾಧ್ಯಕ್ಷರು ಅಂತಿಮ ಗೊಳಿಸಿ ಸೂಚಿಸಿದ್ದರು ಎಂದು ಹೇಳಿದರು.
ಎರಡು ಮೂರು ಬಣಗಳು ಇದ್ದಾವೆ ಎಂಬುದು ನನ್ನ ಗಮನಕ್ಕೆ ಬಂದಿತ್ತು ಅದನ್ನು ಶಮನ ಗೊಳಿಸುವ ಉದ್ದೇಶದಿಂದ ಎಲ್ಲರನ್ನೂ ಕಚೇರಿಗೆ ಕರೆದು ಸಮನ್ವಯ ತರಲು ಪ್ರಯತ್ನಪಟ್ಟಿದ್ದೆ ಆಗ ಯಾರೂ ನಮ್ಮ ಎದುರಿಗೆ ಭಿನ್ನಾಭಿಪ್ರಾಯದ ಬಗ್ಗೆ ಏನನ್ನು ಹೇಳಿರಲಿಲ್ಲ ಆದಾಗ್ಯೂ ವಿಪ್ ನ್ನು ಜಾರಿಗೊಳಿಸಿದ್ದೆವು ಇಷ್ಟಾದರೂ ಪಕ್ಷಕ್ಕೆ ಮೋಸ ಮಾಡಿ ಗೈರು ಹಾಜರಾಗಿರುವುದು ಬೇಸರದ ಸಂಗತಿಯಾಗಿದೆ ಚುನಾವಣೆಯ ಸಂದರ್ಭದಲ್ಲಿ ನಡೆದಂತ ಎಲ್ಲಾ ಘಟನೆಗಳ ಸಂಪೂರ್ಣ ವಿವರವನ್ನು ರಾಜ್ಯ ಮುಖಂಡರುಗಳ ಗಮನಕ್ಕೆ ತಂದು ವರದಿ ನೀಡುತ್ತೇನೆ ಎಂದು ಹೇಳಿದರು .
ಪುರಸಭೆ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಏಕೆ ಕಣಕ್ಕೆ ಇಳಿಸಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕವಿತಾ ರೆಡ್ಡಿ ಅವರು ಡಿ ಅಬ್ದುಲ್ ರೆಹಮಾನ್ ರವರು ಪಕ್ಷೇತರ ಅಭ್ಯರ್ಥಿ ಎಂಬುದು ಸ್ಪಷ್ಟ ಆದರೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರಾಗಿದ್ದರು ಆ ಕಾರಣಕ್ಕಾಗಿ ನಮ್ಮ ರಾಜ್ಯಾಧ್ಯಕ್ಷರು ಪುರಸಭೆ ಸದಸ್ಯರೊಂದಿಗೆ ಚರ್ಚೆ ಮಾಡಿ ಇವರಿಗೆ ಬೆಂಬಲಿಸುವಂತೆ ಅಬ್ದುಲ್ ರೆಹಮಾನ್ ಹೆಸರನ್ನು ಸೂಚಿಸಿದ್ದರು ಎಂದು ಉತ್ತರಿಸಿದರು.
ಪುರಸಭಾ ಚುನಾವಣೆ ವಿಚಾರದಲ್ಲಿ ನಾವು ಸೋತಿದ್ದೇವೆ ಎಂದು ಸೋಲನ್ನು ಒಪ್ಪಿಕೊಳ್ಳುತ್ತೇವೆ ಇದು ನಮ್ಮ ಪಕ್ಷದಲ್ಲಿರುವ ಆಂತರಿಕ ಗಲಭೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹೈಕಮಾಂಡ್ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ಟಿ.ಸುಭಾಶ್ ಚಂದ್ರ, ಕಾನಹಳ್ಳಿ ರುದ್ರಪ್ಪ, ಇರ್ಫಾನ್ ಮುದುಗಲ್ , ಚಿಕ್ಕೇರಿ ಬಸಪ್ಪ , ಹುಲಿಕಟ್ಟಿ ಚಂದ್ರಪ್ಪ ,ಪುರಸಭೆ ಸದಸ್ಯರಾದ ಲಾಟಿ ದಾದಾಪೀರ್ ಎಂ ವಿ ಅಂಜಿನಪ್ಪ ,ಗೊಂಗಡಿ ನಾಗರಾಜ್,ವೆಂಕಟೇಶ್ ಟಿ ಪಕ್ಷೇತರ ಅಭ್ಯರ್ಥಿಗಳಾದ ಹನುಮವ್ವ ಚಿಕ್ಕೇರಿ ಡಿ ಅಬ್ದುಲ್ ರೆಹಮಾನ್ ಜೆಡಿಎಸ್ ಅಭ್ಯರ್ಥಿಯಾದ ಷಹನಾಬೀ
ಮಂಜ್ಯನಾಯ್ಕ್ ಎಲ್, ಮುಂತಾದವರು ಉಪಸ್ಥಿತರಿದ್ದರು.