Vijayanagara Express

Kannada News Portal

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ- ಶಂಕರನಹಳ್ಳಿ ಡಾಕ್ಟರ್ ಉಮೇಶ್ ಬಾಬು ವಿಶ್ವಾಸ

1 min read

 

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ- ಶಂಕರನಹಳ್ಳಿ ಡಾಕ್ಟರ್ ಉಮೇಶ್ ಬಾಬು ವಿಶ್ವಾಸ

 

ಹರಪನಹಳ್ಳಿ: ಜು-10,ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷರಾದ ಶಂಕರನಹಳ್ಳಿ ಡಾ. ಉಮೇಶ್ ಬಾಬುರವರು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ದುಗ್ಗಾವತಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

ಇಂದು ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ತಿಂಗಳಿಗೆ 15 ರಿಂದ 20 ಸಾವಿರ ಕೂಲಿ ಸಿಗುತ್ತದೆ ಆದರೆ ಆಶಾ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ದುಡಿದರೂ ತಿಂಗಳಿಗೆ 7, ಸಾವಿರ ರೂಪಾಯಿಗಳನ್ನು ಸರ್ಕಾರ ಕೊಡುತ್ತಿರುವುದು ಅವೈಜ್ಞಾನಿಕವಾಗಿದೆ . ಎಲ್ಲಾ ಆಶಾ ಕಾರ್ಯಕರ್ತರನ್ನು ಅಂಗನವಾಡಿ ಕಾರ್ಯಕರ್ತರನ್ನು ಖಾಯಂ ಗೊಳಿಸಬೇಕು, ಬಿಜೆಪಿಯ ದುರಾಡಳಿತ ಕೊನೆಗೊಳಿಸಬೇಕಾದರೆ ಇಂದು ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುವುದು ತುಂಬಾ ಅವಶ್ಯಕತೆ ಇದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಈಗಿನ ಕೇಂದ್ರ ಸರ್ಕಾರ ಅಂಬಾನಿ,ಆದಾನಿ ಮುಂತಾದ ಕಾರ್ಪೋರೇಟ್ ರಗಳ ಕೈ ಗೊಂಬೆಯಾಗಿದೆ ,ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ದೇಶದ ಜನತೆಗೆ ಸುಳ್ಳು ಆಶ್ವಾಸನೆಯನ್ನು ನೀಡುತ್ತಿದೆ ಈ ಸರ್ಕಾರದ ಅವಧಿಯಲ್ಲಿ ಬಡವರು ಉನ್ನತವಾದಂತ ಕನಸುಗಳನ್ನೂ ಕಾಣಲು ಸಹ ಸಾಧ್ಯವೇ ಇಲ್ಲದಂತಾಗಿದೆ ಎಂದ ಅವರು ಹರಪನಹಳ್ಳಿ ತಾಲೂಕಿನಲ್ಲಿ ಬರಿ ಹೊರಗಿನಿಂದ ಬಂದ ಅಭ್ಯರ್ಥಿಗಳೇ ಗೆದ್ದು ತಾಲೂಕನ್ನು ನಿರ್ಲಕ್ಷಕ್ಕೆ ಕೆಡವಿದ್ದಾರೆ ಸ್ಥಳೀಯರು ಇಲ್ಲಿ ಎಲೆಕ್ಷನ್ ಮಾಡಲು ಯಾರು ಗಂಡಸರು ಇಲ್ಲವಾ ಅಂತ ಪ್ರಶ್ನೆ ಎದುರಾಗಿ ಹೋಗಿದೆ ಎಂದರು.


ಈ ಬಾರಿ ಸ್ಥಳೀಯರಿಗೆ ಅವಕಾಶ ಎಂದು ನಮ್ಮ ಸ್ಥಳೀಯ ಯುವಕರು ತೀರ್ಮಾನ ಮಾಡಿದ್ದಾರೆ ಹರಪನಹಳ್ಳಿ ನನ್ನದು ಸ್ವಂತ ತಾಲೂಕು, ನಾವು ಎಲ್ಲೇ ಹೋಗಿ , ಎಲ್ಲೇ ಇದ್ದರೂ ನನ್ನ ತಾಲೂಕು ನನ್ನ ಮಣ್ಣು ಎಂಬ ಅಭಿಮಾನ ನನಗಿದೆ ಬೇರೆಯವರಿಗೆ ಇಂತಹ ಅಭಿಮಾನ ಇರಲಾರದು ಎಂದರು ನಮ್ಮ ತಂದೆಯವರು ಸಹ ಸಾಕಷ್ಟು ಸಮಾಜ ಸೇವೆಯನ್ನು ಮಾಡುವ ಹಂಬಲ ಹೊಂದಿದ್ದರು ಎಂದರು.

ದುಗ್ಗಾವತಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ವಿಶ್ವನಾಥ ರವರು ಮಾತನಾಡಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಈ ಕಾರ್ಯಕ್ರಮದಲ್ಲಿ ಕರೋನದ ಸಂದರ್ಭದಲ್ಲಿ ಹಗಲಿರುಳು ಜನರ ಸೇವೆ ಮಾಡಿದ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೂ ಈ ವೇಳೆ ಸನ್ಮಾನ ಮಾಡಿರುವುದು ನನಗೆ ಖುಷಿ ತಂದಿದೆ ಎಂದರು.

ಉಪ್ಪಾರ ಸಮಾಜದ ಮುಖಂಡ ತಿಮ್ಮಣ್ಣ ಮಾತನಾಡಿ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ಎಂದುಕೊಂಡಿದ್ದೆ ಆದರೆ ಇಲ್ಲಿ ಅಂಗನವಾಡಿಯ ಕಾರ್ಯಕರ್ತರು ಆಶಾ ಕಾರ್ಯಕರ್ತರುಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಿರುವುದು ನಿಜಕ್ಕೂ ಶ್ಲಾಘನೀಯ ನಮ್ಮ ತಾಲೂಕಿನಲ್ಲಿ ಕರುಣಾಕರ ರೆಡ್ಡಿ ಸಮುದಾಯದ ಎಷ್ಟು ಜನರಿದ್ದಾರೆ ಎರಡು ನೂರು ಜನಸಂಖ್ಯೆ ಇಲ್ಲದವರು ನಮ್ಮ ತಾಲೂಕಿನ ಶಾಸಕರಾಗಬಹುದು ಆದರೆ ಸ್ಥಳೀಯರು ಇಲ್ಲಿ ಗೆಲ್ಲುವಂತಿಲ್ಲ ,ಪಿಜಿಆರ್ ಸಿಂಧ್ಯಾ ರವರ ವೋಟುಗಳು ಎಷ್ಟಿವೆ ,ಆದರೆ ಅವರು ಮಾತ್ರ ಆರು ಬಾರಿ ಶಾಸಕರಾಗಬಹುದು ಎಂದು ಹೇಳಿದ ಅವರು ಸ್ಥಳೀಯರಿಗೆ ಈ ಬಾರಿ ಅವಕಾಶ ನೀಡಬೇಕು ಎಂದು ನಮ್ಮ ತಾಲೂಕಿನಲ್ಲಿ ಅಂತದೊಂದು ಕೂಗು ಎದ್ದಿದೆ ಎಂದರು.

ದುಗ್ಗಾವತಿ ಗ್ರಾಮದ ಕಾಂಗ್ರೆಸ್ ಮುಖಂಡ ಬಸವರಾಜ್ ಮಾತನಾಡಿ ಸ್ಥಳೀಯರಿಗೆ ಈ ಬಾರಿ ಅವಕಾಶ ನೀಡಬೇಕು ಎಲ್ಲಿಂದಲೋ ಬಳ್ಳಾರಿ ಬೊಂಬಾಯಿ,ಯಿಂದ ಬಂದವರಿಗೆ ಇಲ್ಲಿ ಅವಕಾಶವನ್ನು ನೀಡಬಾರದು ಎಂದು ಆಕ್ರೋಶಬರಿತವಾಗಿ ಹೇಳಿದರು.

ದಾದಾಪುರದ ಪರಶುರಾಮ್ ಮಾತನಾಡಿ ಪರಿಶಿಷ್ಟ ಜಾತಿ ವರ್ಗಗಳು ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುತ್ತಿರುವ ಸ್ಥಳೀಯರಿಗೆ ಅವಕಾಶವನ್ನು ನೀಡಬೇಕು ಎಂದು ಹೇಳಿದರು.

ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೂ ಆಶಾ ಕಾರ್ಯಕರ್ತೆಯರಿಗೂ ಸನ್ಮಾನವನ್ನು ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಅನುಸೂಯಮ್ಮ ರಾಗಿ ಮಸಾಲವಾಡ ,ಪಾರ್ವತಮ್ಮ, ನಾಗಮ್ಮ ಮಾತನಾಡಿದರು.

ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಉಚ್ಚಂಗೆಪ್ಪ, ನಿಂಗಪ್ಪ ,ಲಕ್ಷ್ಮಪ್ಪ, ಕೋಟೆಪ್ಪ ,ಹನುಮಂತ, ರವಿಕುಮಾರ್ ಕಿಟ್ಟಿ, ಪರಶುರಾಮ್ , ಪ್ರಕಾಶ್, ದುರ್ಗೇಶ್, ಕೊಟ್ರೇಶ್ ನವೀನ್ ,ಅಶೋಕ್, ಮೇಘರಾಜ್ ಮಹಾಂತೇಶ್ ವಿಶ್ವನಾಥ್, ಜಗದೀಶ್ ರವರುಗಳು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ್, ರವಿಕುಮಾರ್, ಗಣೇಶ್ ನಾಯ್ಕ, ಪ್ರಸನ್ನಕುಮಾರ್, ರಾಹುಲ್ ರೆಡ್ಡಿ,ಹಲುವಾಗಲು, ಮಲ್ಲನಗೌಡರು,ಹಲುವಾಗಲು ರಾಮಣ್ಣ,ಉಧ್ಘಟ್ಟಿ ಮಹೇಶಪ್ಪ, ಶಂಕರನಹಳ್ಳಿ ರಾಜು,ಹಲುವಾಗಲು ಹೂವಕ್ಕ, ಅಲಮರಸೀಕೇರಿ , ಬಸವರಾಜ್, ರಮೇಶ್,ಪಕ್ಕಿರಪ್ಪ ,ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *