Vijayanagara Express

Kannada News Portal

ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗೆ ಶಾಸಕರ ದಿಡೀರ್ ಬೇಟಿ ವಿದ್ಯಾರ್ಥಿನಿಯರಿಂದ ಸಮಸ್ಯೆಗಳ ಸುರಿಮಳೆ

1 min read

ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗೆ ಶಾಸಕರ ದಿಡೀರ್ ಬೇಟಿ ವಿದ್ಯಾರ್ಥಿನಿಯರಿಂದ ಸಮಸ್ಯೆಗಳ ಸುರಿಮಳೆ†

ಹರಪನಹಳ್ಳಿ:ಜು-12, ತಾಲೂಕಿನ ಮಾಚಿಹಳ್ಳಿ ಗ್ರಾಮದ ಬಳಿ ಇರುವ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಗೆ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ದೀಡಿರ್ ಬೇಟಿ ನೀಡಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರುಗಳಿಂದ ಸಮಸ್ಯೆಗಳನ್ನು ಆಲಿಸಿದ ಘಟನೆ ಮಂಗಳವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ.

ಶಾಸಕರು ಇದ್ದಕ್ಕಿದ್ದ ಹಾಗೆ ವಸತಿ ನಿಲಯಕ್ಕೆ ಊಟದ ಸಮಯಕ್ಕೆ ಸರಿಯಾಗಿ ಬೇಟಿಕೊಟ್ಟಾಗ ತಟ್ಟೆಗಳನ್ನು ಹಿಡಿದು ವಿದ್ಯಾರ್ಥಿನಿಯರುಗಳು ಊಟದ ಕೋಣೆಯ ಕಡೆ ಸಾಗಿದ್ದರು ಊಟದ ಕೊಣೆಕಡೆಗೆ ಶಾಸಕರು ದೌಡಾಯಿಸಿದರು ಇದೇ ಸಂದರ್ಭದಲ್ಲಿ ಶಾಸಕರು ಎಲ್ಲಾ ವಿದ್ಯಾರ್ಥಿನಿರುಗಳನ್ನು ಕುರಿತು ಊಟ ರುಚಿಕಟ್ಟಾಗಿದೆಯೇ, ರುಚಿಇರುತ್ತದೆಯೇ, ಶುಚಿತ್ವವಾಗಿದೆಯೇ, ಹೊಟ್ಟೆ ತುಂಬಾ ಊಟವನ್ನು ನೀಡುವರೆ ಎಂದು ಪ್ರಶ್ನಿಸಿದಾಗ ವಿದ್ಯಾರ್ಥಿನಿಯರು ಒಂದರ ಮೇಲೊಂದರಂತೆ ಸಮಸ್ಯೆಯನ್ನು ಹೇಳಲಾರಂಬಿಸಿದರು ಊಟ ಚೆನ್ನಾಗಿರುವುದಿಲ್ಲ ,ರುಚಿ ಮೊದಲೇ ಇರುವುದಿಲ್ಲ , ಉಪ್ಪಿನಕಾಯಿ ನೀಡುವುದಿಲ್ಲ ಎಂದು ತಿಳಿಸಿದಾಗ ಸ್ವತಃ ಶಾಸಕರೇ ಊಟವನ್ನು ಸವಿಯಲು ಮುಂದಾದರು ಚಪಾತಿ ಪಲ್ಯವನ್ನು ತಟ್ಟೆಯಲ್ಲಿ ತಂದು ಶಾಸಕರಿಗೆ ನೀಡಿದಾಗ ಶಾಸಕರು ಊಟವನ್ನು ಸೇವಿಸಿ ಅಡಿಗೆಯವರಿಗೆ ಅಡುಗೆಯನ್ನು ಹೀಗಾ ಮಾಡುವುದು ಎಂದು ತರಾಟೆಗೆ ತೆಗೆದುಕೊಂಡರು ಇದಕ್ಕೆ ಪ್ರತಿಕ್ರಿಸಿದ ಅಡುಗೆ ಸಹಾಯಕರು ವಾರ್ಡನ್ ಗಳು ಕೊಟ್ಟಿರುವುದನ್ನು ನಾವು ಅಡುಗೆ ಮಾಡಿ ಬಡಿಸುತ್ತೇವೆ ಸರ್ ಇದರಲ್ಲಿ ನಮ್ಮದೇನು ತಪ್ಪಿಲ್ಲ ಸಾರ್ ಎಂದು ಹೇಳಿದರು.

ಶಾಸಕರು ಪ್ರಾಚಾರ್ಯರು ಎಲ್ಲಿ ಇರುವರು ಎಂದು ಕೇಳಿದರು ಅಂಜಿನಪ್ಪ ವಿ ಸಿ ಎಂಬುವವರು ಚಾರ್ಜ್ ತೆಗೆದು ಕೊಂಡಿರುವರು ಆದರೆ ಅವರು ರಜೆ ಮೇಲೆ ಹೋಗಿರುವರು ಎಂದಾಗ ಇವತ್ತು ಯಾರಿಗೆ ಚಾರ್ಜ್ ಕೊಟ್ಟಿದ್ದಾರೆ ಎಂದು ಕೇಳಿದರು ಆಗ ರವಿ ಎನ್ನುವವರು ನನಗೆ ಸರ್ ಎಂದು ಹೇಳಿದರು ಆಗ ನಿಲಯಪಾಲಕಿ ಸುಚಿತ್ರಾ ರವರನ್ನು ಕರೆಸಿದರು ಸಾಂಬಾರ್ ನಲ್ಲಿ ತರಕಾರಿ ಇಲ್ಲ ಎಷ್ಟು ತರಕಾರಿಗಳನ್ನ ಖರೀದಿಸುತ್ತೀರಿ, 250 ವಿದ್ಯಾರ್ಥಿನಿಯರಿರುವ ಈ ವಸತಿ ಶಾಲೆಯಲ್ಲಿ ತರಕಾರಿಗಳು ಬೇಳೆ, ಸೊಪ್ಪನ್ನು ಸರಿಯಾಗಿ ಹಾಕಿ ಸಾಂಬಾರನ್ನು ತಯಾರಿಸಬೇಕು ಎಂದು ಹೇಳಿದರು.

ಫ್ರಿಡ್ಜ್ ನಲ್ಲಿ ಶನಿವಾರ ಮಾಡಿಟ್ಟ ಗುಲಾಬ್ ಜಾಮೂನ್ ಗಳು ಇನ್ನೂ ಹಾಗೇ ಇರುವುದನ್ನು ವಿದ್ಯಾರ್ಥಿನಿಯರುಗಳು ಶಾಸಕರ ಗಮನಕ್ಕೆ ತಂದಾಗ ಯಾಕೆ ಹೀಗೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದರು ವಿದ್ಯಾರ್ಥಿಗಳಿಗಾದರೂ ಕೊಡಿ ಸಿಬ್ಬಂದಿಗಾದರೂ ಕೊಡಿ ಇವುಗಳನ್ನು ಹಾಗೆ ಇಟ್ಟು ಸಮಯ ಆದ ಮೇಲೆ ವಿದ್ಯಾರ್ಥಿಗಳಿಗೆ ನೀಡಿ ಆರೋಗ್ಯ ಹಾಳು ಮಾಡಬೇಡಿ ಎಂದರು.

ಚಿಕ್ಕನ್ ಅನ್ನು ಸರಿಯಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರನ್ನು ಹೇಳಿದಾಗ 250 ಜನರಿರುವ ವಿದ್ಯಾರ್ಥಿನಿಲಯದಲ್ಲಿ ಎಷ್ಟು ಚಿಕನ್ ತರಬೇಕು ಎಂಬ ನಿಯಮವಿದೆ ಎಂದರು, ಅಡಿಗೆಯವರು 40 ಕೆಜಿ ತರಬೇಕಾಗುತ್ತದೆ ಎಂದರೆ ನಿಲಯ ಪಾಲಕಿ 25 ಕೆಜಿ ತರಬೇಕಾಗುತ್ತದೆ ಎಂದರು ಅಡುಗೆ ಸಹಾಯಕರನ್ನು ಎಷ್ಟು ಕೆಜಿ ತಂದು ಮಾಡುತ್ತೀರಿ ಎಂದಾಗ ಪ್ರತಿ ವಾರ 15 ಕೆಜಿ ಚಿಕನ್ ಅನ್ನು ತಂದು ಅಡುಗೆ ಮಾಡುತ್ತೇವೆ ಎಂದು ತಿಳಿಸಿದರು ಇದಕ್ಕೆ ಅಡುಗೆಯವರ ಮತ್ತು ಶಾಸಕರ ನಡುವೆ ನಡೆಯುತ್ತಿದ್ದ ಸಂಭಾಷಣೆಯಲ್ಲಿ ನಡುವೆ ವಿದ್ಯಾರ್ಥಿನಿಯರು ಎಂಟರಿಂದ ಹತ್ತು ಕೆಜಿ ಚಿಕನ್ ಅಷ್ಟೇ ತರುತ್ತಾರೆ ಸರ್ ಎಂದು ದೂರಿದರು.

ಮೇ ತಿಂಗಳಲ್ಲಿ 16 ನೇ ತಾರೀಖಿನಂದು ಶಾಲೆ ಆರಂಭವಾಗಿದೆ ಮೂರು ತಿಂಗಳುಗಳು ಕಳೆದರೂ ಪೇಸ್ಟ್,ಬಟ್ಟೆ ಸೋಪು,ಮೈ ಸೋಪು, ಟೂಥ್ ಬ್ರಷ್, ಪೌಡರ್ ಹೊಂದಿರುವ ಕಿಟ್ ಗಳನ್ನು ಇದುವರೆಗೂ ನೀಡಿರುವುದಿಲ್ಲ, ಹಾಗೂ ಸ್ನ್ಯಾಕ್ಸ್ ನ್ನು ಸರಿಯಾಗಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರನ್ನು ಹೇಳಿದರು.

ಇಷ್ಟಾದ ಮೇಲೆ ಸಾಕಷ್ಟು ಸಮಸ್ಯೆಗಳು ಇವೆ ಸಾರ್ ಸರಿಯಾಗಿ ವ್ಯವಸ್ಥೆಯನ್ನು ಮಾಡುತ್ತಿಲ್ಲ ಸಾಂಬಾರುಗಳಿಗೆ ತರಕಾರಿಗಳನ್ನು ನಿಯಮ ಬದ್ಧವಾಗಿ ಹಾಕುತ್ತಿಲ್ಲ ಕೇವಲ ಕ್ಯಾರೆಟ್ ( ಗೆಜ್ಜರಿ )ಬೀಟ್ರೂಟ್, ಗಳನ್ನು ಅಷ್ಟೇ ಹಾಕುತ್ತಾರೆ ಸೊಪ್ಪು ಬೇಳೆ ಇತರ ತರಕಾರಿಗಳನ್ನು ಹಾಕುವುದಿಲ್ಲ ಸರ್ ಎಂದು ದೂರಿದರು.
ಅಲ್ಲದೆ ಶಾಸಕರು ಈ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಕರುಣಾಕರ ರೆಡ್ಡಿ ಅವರು ಒಂದು ವಾರ ಸಮಯ ನೀಡುತ್ತೇನೆ ಅಷ್ಟರಲ್ಲಿ ಈ ರೀತಿ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಒಳ್ಳೆಯ ವ್ಯವಸ್ಥೆಯನ್ನು ಮಾಡಿ ಇಲ್ಲವಾದರೆ ನಿಮ್ಮ ಮೇಲೆ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

ವಿದ್ಯಾರ್ಥಿನಿಯರು ಶಾಸಕರೊಟ್ಟಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳುವುದು ಇದೆ ಸಾರ್ ಎಂದು ಕೋರಿಕೊಂಡರು ವಿದ್ಯಾರ್ಥಿನಿಯರ ಕೋರಿಕೆಯನ್ನು ಮನ್ನಿಸಿದ ಶಾಸಕರು ಸ್ವಲ್ಪ ದೂರ 10 ರಿಂದ 15 ವಿದ್ಯಾರ್ಥಿನಿಯರುಗಳನ್ನು ಕರೆಸಿಕೊಂಡು ಅವರ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿದರು ಆದರೆ ಯಾವ ರೀತಿಯ ಸಮಸ್ಯೆಗಳನ್ನು ಶಾಸಕರೊಂದಿಗೆ ವಿದ್ಯಾರ್ಥಿನಿಯರು ಚರ್ಚಿಸಿದರು ಎಂಬುದು ಮಾತ್ರ ತಿಳಿದು ಬಂದಿರುವುದಿಲ್ಲ.

ಈ ಸಂದರ್ಭದಲ್ಲಿ ವಸತಿ ನಿಲಯದ ನಿಲಯ ಪಾಲಿಕರಾದ ಸುಚಿತ್ರಾ ,ಶಿಕ್ಷಕರುಗಳು ,ಪ್ರಾಂಶುಪಾಲರು ರವಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನಾಯ್ಕ್ ,ಬಿಜೆಪಿ ಮುಖಂಡರಾದ ಕಣಿವೆಹಳ್ಳಿ ಮಂಜುನಾಥ್, ಆರ್ ಲೋಕೇಶ್, ಕಲ್ಲೇರ ಬಸವರಾಜ್ ,ಮಾಚಹಳ್ಳಿ ಮಲ್ಲೇಶ್ , ಶಾಸಕರ ಪುತ್ರ ವಿಷ್ಣುವರ್ಧನ್ ರೆಡ್ಡಿ,ಮಜ್ಜಿಗೇರಿ ಭೀಮಪ್ಪ ,ಕೆಂಗಳ್ಳಿ ಪ್ರಕಾಶ್ ,ಪುರಸಭೆ ಸದಸ್ಯ ರೊಕ್ಕಪ್ಪ, ಮತ್ತು ಬಿಜೆಪಿ ಕಾರ್ಯಕರ್ತರು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *