Vijayanagara Express

Kannada News Portal

ನದಿ ಜೋಡಣೆ ವಾಜಪೇಯಿ ಅವರ ಕನಸಾಗಿತ್ತು- ಗಾಲಿ ಕರುಣಾಕರ ರೆಡ್ಡಿ

1 min read

ನದಿ ಜೋಡಣೆ ವಾಜಪೇಯಿ ಅವರ ಕನಸಾಗಿತ್ತು- ಗಾಲಿ ಕರುಣಾಕರ ರೆಡ್ಡಿ

ಹರಪನಹಳ್ಳಿ:ನದಿ ಜೋಡಣೆ ವಾಜಪೇಯಿ ಅವರ ಕನಸಾಗಿತ್ತು ಎಂದು ಶಾಸಕ ಗಾಲಿ ಕರುಣಾಕರ ರೆಡ್ಡಿಯವರು ಮಂಗಳವಾರ ಭೈರಾಪುರದ ಕಾರ್ಯಕ್ರಮದಲ್ಲಿ ಹೇಳಿದರು.

ಭೈರಾಪುರದಲ್ಲಿ ಆಯೋಜಿಸಲಾಗಿದ್ದ ಅಲೆಮಾರಿ ಕುಟುಂಬಗಳ ವಸತಿ ಫಲಾನುಭವಿಗಳಿಗೆ ಕಟ್ಟಡವನ್ನು ಆರಂಭಿಸಲು ಆದೇಶ ಪ್ರತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸುವುದು ಆ ಮೂಲಕ ತಾಲೂಕಿನಲ್ಲಿ ನೀರಾವರಿಗೆ ಉತ್ತೇಜನ ನೀಡುವುದು ನಮ್ಮ ಗುರಿಯಾಗಿದೆ ಎಂದರು.


ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ 6000 ,ರಾಜ್ಯ ಸರ್ಕಾರ ನಾಲ್ಕು ಸಾವಿರ, ರೂಪಾಯಿಗಳನ್ನು ಪ್ರತಿವರ್ಷವೂ ಹಾಕುತ್ತಿದೆ ನರೇಂದ್ರ ಮೋದಿ ಅವರು ಉಚಿತ ಪಡಿತರವನ್ನು ಜನರಿಗೆ ನೀಡುತ್ತಿದ್ದಾರೆ ತಾಲೂಕಿನಲ್ಲಿ ಉತ್ತಮ ರಸ್ತೆ ನಿರ್ಮಾಣ ಹಳ್ಳಿ ಹಳ್ಳಿಗಳಿಗೂ ಕುಡಿಯಲು ನದಿ ನೀರು ವ್ಯವಸ್ಥೆ ತಾಲೂಕಿನಲ್ಲಿ ಅಭಿವೃದ್ಧಿ ಪಡಿಸುತ್ತೇವೆ ಎಂದರು .

ನಾಲ್ಕು ವರ್ಷದಲ್ಲಿ ತಾಲೂಕಿಗೆ ಒಟ್ಟು 220 ಕೋಟಿ ರೂಪಾಯಿಗಳನ್ನು ಅನುದಾನವನ್ನು ತಂದಿದ್ದೇನೆ ಭೈರಾಪುರ ಗ್ರಾಮದಲ್ಲಿ ಶೀಘ್ರದಲ್ಲೇ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಿದ್ದೇನೆ ,ಗುರುಶಾಂತನ ಹಳ್ಳಿಯಲ್ಲಿ ಶೀಘ್ರದಲ್ಲೇ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡುತ್ತೇನೆ ತಾಲೂಕಿನಲ್ಲಿ ಸುಸಜ್ಜಿತವಾದ ಅನೇಕ ವಿದ್ಯಾರ್ಥಿ ನಿಲಯಗಳನ್ನು ಈಗಾಗಲೇ ಉದ್ಘಾಟನೆ ಮಾಡಿದ್ದೇನೆ ಜಿಕೆಆರ್ ಫೌಂಡೇಶನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ನಮ್ಮದೇ ಫೌಂಡೇಶನ್ ಮೂಲಕ ಉಚಿತವಾಗಿ ಮೂರು ತಿಂಗಳುಗಳ ಕಾಲ ಕೋಚಿಂಗ್ ಅನ್ನು ನೀಡಲಾಗುವುದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು .

ಬೈರಾಪುರ ಗ್ರಾಮದ ಮುಖಂಡ ಎಂ ನಾಗರಾಜ್ ಪ್ರಸ್ತಾವಿಕವಾಗಿ ಮಾತನಾಡಿ ಕರುಣಾಕರ ರೆಡ್ಡಿ ಅವರು ನಮ್ಮ ತಾಲೂಕಿಗೆ ಶ್ರೀ ಕೃಷ್ಣರಂತೆ ಬಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಲ್ಲೇರ ಬಸವರಾಜ್ ,ಲೋಕೇಶ್ ಆರ್, ರೊಕ್ಕಪ್ಪ, ಕಣಿವೆಹಳ್ಳಿ ಮಂಜುನಾಥ್ , ಮ್ಯಾಕಿ ದುರುಗಪ್ಪ ,ಯಾದವ ಸಮಾಜದ ತಾಲ್ಲೂಕು ಅಧ್ಯಕ್ಷ ಮತ್ತೂರು ಶಿವರಾಮಪ್ಪ ,ಹನುಮಂತಪ್ಪ , ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನಾಯ್ಕ್, ಕಡತಿ, ಬೆಣ್ಣಿಹಳ್ಳಿ ನಿಟ್ಟೂರು ಕೊಂಚೂರು ಕಲ್ಲಳ್ಳಿ ಅನುವಾಗಲು ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬೈರಾಪುರ ಗ್ರಾಮದ ಗ್ರಾಮಸ್ಥರು 311 ಅಲೆಮಾರಿ ಕುಟುಂಬಗಳ ವಸತಿ ಫಲಾನುಭವಿಗಳು ಹಾಜರಿದ್ದರು .

Leave a Reply

Your email address will not be published. Required fields are marked *