Vijayanagara Express

Kannada News Portal

ಕಳಪೆ ಕಾಮಗಾರಿ ಕರ್ಮಕಾಂಡ ,ಬಗೆದಷ್ಟು ಆಳ

1 min read

ವಿಶೇಷ ವರದಿ: ಪಟ್ನಾಮದ ವೆಂಕಟೇಶ್.ಹರಪನಹಳ್ಳಿ

 

ಕಳಪೆ ಕಾಮಗಾರಿ ಕರ್ಮಕಾಂಡ ,ಬಗೆದಷ್ಟು ಆಳ

ಹಳೆ ಕಟ್ಟಡದ ತ್ಯಾಜ್ಯದಲ್ಲಿ ಹೊಸ ರಸ್ತೆ ನಿರ್ಮಾಣ ಮಾಡುವ ಮೂಲಕ ಸರ್ಕಾರದ ಅನುದಾನಕ್ಕೆ ಪಂಗನಾಮ ಹಾಕಿದ ಘಟನೆ ಹರಪನಹಳ್ಳಿ ಪಟ್ಟಣದ ಬಾಪೂಜಿ ನಗರದ ಹತ್ತಿರವಿರುವ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ.

ಕೆಕೆಆರ್ ಡಿ ಬಿ ಮೈಕ್ರೋ ಮತ್ತು ಮ್ಯಾಕ್ರೋ 2021-2022 ನೇ ಸಾಲಿನ ಯೋಜನೆಯ ಅನುದಾನದಲ್ಲಿ ಕಾಮಗಾರಿಯನ್ನು
ಕೆಆರ್ ಐಡಿ ಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ) ಇಲಾಖೆಯ ವತಿಯಿಂದ ನಿರ್ಮಿಸಲು ಯೋಜಿಸಲಾಗಿದೆ ಹಾಗೂ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಭೂಮಿ ಪೂಜೆಯನ್ನು ಮಾಡಿರುತ್ತಾರೆ .

ಹೌದು ಹರಪನಹಳ್ಳಿ ಪಟ್ಟಣದ ಹೊಂಬಳಗಟ್ಟಿ ರಸ್ತೆಗೆ ಹೊಂದಿಕೊಂಡಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬಾಲಕಿಯರ ವಿದ್ಯಾರ್ಥಿ ನಿಲಯಗಳ ವಿಭಾಗದ ವರೆಗಿನ ರಸ್ತೆಯನ್ನು ಶಾಸಕರು 19.71 ಲಕ್ಷ ರೂಪಾಯಿಗಳಲ್ಲಿ ನಿರ್ಮಿಸಲು ಭೂಮಿ ಪೂಜೆಯನ್ನು ಮಾಡಿರುತ್ತಾರೆ ಈಗ ಈ ರಸ್ತೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಈ ಕಾಮಗಾರಿಯನ್ನು ಮೊದಲು ರಸ್ತೆಯನ್ನು ಗ್ರಾವಲ್ ಹಾಕಿ ನಂತರ ಎಂ ಸ್ಯಾಂಡ್ ಬೋಡರಸ್ ಜಲ್ಲಿಕಲ್ಲುಗಳನ್ನು ಹಾಕಿ ಕ್ರಮಬದ್ಧವಾಗಿ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗದೆ ಪಟ್ಟಣದ ಪ್ರವಾಸಿ ಮಂದಿರದ ವೃತ್ತದ ಹತ್ತಿರ ಇರುವ ಕೃಷಿ ಕಚೇರಿಯ ಹಳೆ ಕಟ್ಟಡವನ್ನು ಶಾಸಕರು ಈಗಾಗಲೇ ಅದನ್ನು ನವೀಕರಿಸಿ ಉಪನೊಂದಾಣಿ ಕಚೇರಿಗೆ ಬಳಕೆ ಮಾಡುವ ಉದ್ದೇಶದಿಂದ ಮೇಲ್ಚಾವಣೆಯನ್ನು ಪುನರ್ ನಿರ್ಮಿಸಲಾಗುತ್ತಿದೆ .


ಈ ಹಳೆ ಕಟ್ಟಡವು ಸೋರುತ್ತಿದ್ದುದರಿಂದ ಆರ್ಸಿಸಿ ಚಾವಣಿಯನ್ನು ಒಡೆದು ಸಂಪೂರ್ಣ ಕೆಡವಲಾಗಿದೆ ಕೆಳಗಡೆ ಬಿದ್ದ ಆರ್ ಸಿ ಸಿ ತ್ಯಾಜ್ಯವನ್ನು ತೆಗೆದುಕೊಂಡು ಹೊಂಬಳಗಟ್ಟಿ ರಸ್ತೆಯ ಪಕ್ಕದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ನಿರ್ಮಿಸಲು ಲ್ಯಾಂಡ್ ಆರ್ಮಿ ಇಂಜಿನಿಯರ್ ಅತಿಬುದ್ದಿವಂತಿಕೆಯನ್ನು ಮಾಡಿ ರಸ್ತೆಯನ್ನು ಗುಣಮಟ್ಟದಲ್ಲಿ ನಿರ್ಮಿಸದೆ ಕಳಪೆ ಮಟ್ಟದ ರಸ್ತೆಯನ್ನು ನಿರ್ಮಿಸಿ ಸರ್ಕಾರದ ಅನುದಾನಕ್ಕೆ ಪಂಗನಾಮವಾಕಿ ದುಡ್ಡನ್ನು ಲಪಟಾಯಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ .


ಇದರ ಬಗ್ಗೆ ಸಹಾಯಕ ಇಂಜಿನಿಯರ್ ರಮೇಶ್ ರವರನ್ನು ಪ್ರಶ್ನಿಸಿದರೆ ರಸ್ತೆ ಅಗಿಯುವಾಗ ಮಾತ್ರ ನಾವು ಸ್ಥಳಕ್ಕೆ ಭೇಟಿಕೊಟ್ಟಿದ್ದೇವೆ ಅಲ್ಲಿಂದ ಈ ರೀತಿ ತ್ಯಾಜ್ಯದಿಂದ ರಸ್ತೆ ನಿರ್ಮಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಇದರ ಉಸ್ತುವಾರಿಯನ್ನು ಜೂನಿಯರ್ ಇಂಜಿನಿಯರ್ ಆದ ಆನಂದ್ ಅವರಿಗೆ ಕೊಟ್ಟಿದ್ದೇವೆ ಎಂದು ಜವಾಬ್ದಾರಿಯಿಂದ ಜಾರಿಕೊಂಡರೆ ಜೂನಿಯರ್ ಇಂಜಿನಿಯರ್ ಆದ ಆನಂದ್ ರವರನ್ನು ಕೇಳಿದರೆ ಈ ರೀತಿ ಹಳೆ ತ್ಯಾಜ್ಯವನ್ನು ಹಾಕಿ ರಸ್ತೆ ಕಾಮಗಾರಿಯನ್ನು ಮಾಡಿದರೆ ರಸ್ತೆ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಸಮಾಜಾಯಿಸಿ ನೀಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಒಂದು ವೇಳೆ ಹೀಗೆ ಹಳೆ ಕಟ್ಟಡದ ತ್ಯಾಜ್ಯವನ್ನು ಹಾಕಿ ರಸ್ತೆ ಮಾಡುವುದರಿಂದ ರಸ್ತೆ ಕಾಮಗಾರಿ ಗಟ್ಟಿ ಆಗುವುದಾದರೆ ಸರ್ಕಾರ ಈ ತರಹ ಹಳೆ ಕಟ್ಟಡಗಳ ತ್ಯಾಜ್ಯವನ್ನು ತಂದು ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲು ಆದೇಶಿಸುತ್ತಿತ್ತು ಇದರಿಂದ ಸರ್ಕಾರದ ಖಜಾನೆಗೆ ಹಣ ಉಳಿತಾಯವಾತ್ತಿತ್ತು .


ರಸ್ತೆಯನ್ನು ಹೀಗೆ ಹಳೆ ತ್ಯಾಜ್ಯವನ್ನು ಬಳಸಿ ಮಾಡುವುದರಿಂದ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು ಎಂಬ ಅತೀ ಆಸೆಯಿಂದಾಗಿ ಈ ರೀತಿ ಬುದ್ದಿವಂತಿಕೆಯನ್ನು ಜೂನಿಯರ್ ಇಂಜಿನಿಯರ್ ಆನಂದ್ ಪ್ರದರ್ಶಿಸಿದ್ದಾರೆ ಎಂದೇ ಹೇಳಲಾಗುತ್ತದೆ.

ಅದೆನೇ ಇರಲಿ ಸರ್ಕಾರ ಅನುದಾನ ಬಿಡುಗಡೆ ಮಾಡುವುದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎಂದು, ಅದನ್ನು ಬಿಟ್ಟು ಅಧಿಕಾರಿಗಳು ಈ ರೀತಿ ನಿರ್ಲಕ್ಷ್ಯ ಧೋರಣೆ ತಾಳಿ , ಕಳಪೆ ಕಾಮಗಾರಿ ಮಾಡಿ ರಸ್ತೆ ನಿರ್ಮಿಸಿದರೆ  ಕೇವಲ ಒಂದು, ಅಥವಾ ಎರಡೇ ತಿಂಗಳಲ್ಲಿ ರಸ್ತೆ ಕಿತ್ತು ಹಾಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಳೆಕಟ್ಟಡದ ತ್ಯಾಜ್ಯವನ್ನು ತೆಗೆದುಕೊಂಡು ಬಂದು ನೂತನ ರಸ್ತೆ ನಿರ್ಮಾಣ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಅದರ ಮಾಹಿತಿ ಪಡೆದು ತ್ಯಾಜ್ಯವನ್ನು ತೆಗೆಸಿ ಸರಿಪಡಿಸುತ್ತೇವೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ರವರು ಹೇಳಿದರು.

ಈ ರೀತಿ ಹಳೆ ಕಟ್ಟಡದ ತ್ಯಾಜ್ಯವನ್ನು ತೆಗೆದುಕೊಂಡು ನೂತನ ರಸ್ತೆ ನಿರ್ಮಾಣ ಮಾಡಿದರೆ ರಸ್ತೆ ಗಟ್ಟಿಯಾಗಿ ನಿಲ್ಲುತ್ತದೆ.
ಆನಂದ್ ಜೆ.ಇ. , ಕೆ ಆರ್ ಐ ಡಿ ಎಲ್ ಇಲಾಖೆ ಹರಪನಹಳ್ಳಿ

 

Leave a Reply

Your email address will not be published. Required fields are marked *