Vijayanagara Express

Kannada News Portal

ಎಲ್ ಐ ಸಿ ಪ್ರತಿನಿಧಿಗಳೇ ಹೋರಾಟಕ್ಕೆ ಸಿದ್ದರಾಗಿರಿ- ಮೊರಿಗೇರಿ ಹೇಮಣ್ಣ ಕರೆ

1 min read

 

ಎಲ್ ಐ ಸಿ ಪ್ರತಿನಿಧಿಗಳೇ ಹೋರಾಟಕ್ಕೆ ಸಿದ್ದರಾಗಿರಿ- ಮೊರಿಗೇರಿ ಹೇಮಣ್ಣ ಕರೆ

 

 

ಹರಪನಹಳ್ಳಿ: ಎಲ್ ಐ ಸಿ ಪ್ರತಿನಿಧಿಗಳೇ ಹೋರಾಟಕ್ಕೆ ಸಿದ್ದರಾಗಿರಿ ಎಂದು ಎಲ್ ಐ ಸಿ  ಪ್ರತಿನಿಧಿ ಮೊರಿಗೇರಿ ಹೇಮಣ್ಣನವರು  ಶುಕ್ರವಾರ  ಕೋಟೆ ಪ್ರದೇಶದಲ್ಲಿರುವ  ಎಲ್ ಐ ಸಿ ಕಚೇರಿ ಬಳಿ  ಎಲ್ ಐ ಸಿ ಪ್ರತಿನಿಧಿಗಳಿಗೆ ಕರೆ ನೀಡಿದರು.

ಪಟ್ಟಣದ ಎಲ್ ಐ ಸಿ ಕಚೇರಿ ಬಳಿ ಹಮ್ಮಿಕೊಳ್ಳಲಾಗಿದ್ದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಮಾರಕ ಕಾಯ್ದೆ ತರುತ್ತಿವುನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿನಿಧಿಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಮೋರಿಗೇರಿ ಹೇಮಣ್ಣ
ನವರು ಗ್ರಾಮಾಭಿವೃದ್ಧಿಯೇ ದೇಶಾಭಿವೃದ್ಧಿ ಎಂಬ ಮಹತ್ಮಗಾಂಧಿ ಯವರ ಮಂತ್ರದಂತೆ ರೈತರು, ಕಾರ್ಮಿಕರು, ವ್ಯಾಪಾಸ್ಥರು ಮುಂತಾದವರಿಗೆ ಮನವೊಲಿಸಿ ವಿಮೆಯನ್ನು ಒದಗಿಸುತ್ತ ಹಲವು ಕುಟುಂಬಗಳ ರಕ್ಷಣೆ ಹಾಗೂ ಆರ್ಥಿಕ ಭದ್ರತೆ ಒದಗಿಸುವಲ್ಲಿ ಎಲೈಸಿ ಪ್ರತಿನಿಧಿಗಳ ಪಾತ್ರ ಅಮೋಘವಾದುದು ಎಂದರು.

ಇಂತಹ ಪ್ರತಿನಿಧಿಗಳಿಗೆ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು ಮಾರಕ ಕಾಯ್ದೆ ತರಲು ಪ್ರಯತ್ನ ನಡೆಸಿದೆ.ಈ ಹಿಂದೆ ಸ್ವರೂಪ್ ಕಮಿಟಿ ವಿರುದ್ದ ಹೋರಾಡಿದಂತೆ ಹೋರಾಟ ಮಾಡುವ ಸಂದರ್ಭ ಬಂದರೂ ಬರಬಹುದು ಅದಕ್ಕಾಗಿ ಶಾಖೆಯ ಪ್ರತಿನಿಧಿಗಳು ಹೋರಾಟಕ್ಕೆ ಸಿದ್ದರಾಗಿರಬೇಕೆಂದು ಹೇಳಿದರು.

ದೇಶಾದ್ಯಾಂತ ಎಲ್ಲಾ ಎಲೈಸಿ ಪ್ರತಿನಿಧಿಗಳು ಇಂದು ‘ಐಆರ್ ಡಿಎ”ಯ ವಿರುದ್ದ ಪ್ರತಿಭಟನೆ ನಡೆಸಿದ್ದರಿಂದ ಹರಪನಹಳ್ಳಿ ಯಲ್ಲಿಯೂ ಸಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಆದುದರಿಂದ ಎಲೈಸಿ ಶಾಖಾ ಕಛೇರಿಯ ಮುಂದೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ನಮ್ಮ ದೇಶದಲ್ಲಿ ವಾಹನ ವಿಮೆ ಮಾತ್ರ ಕಡ್ಡಾಯವಿದ್ದು ಜೀವವಿಮೆ ಮತ್ತು ಆರೋಗ್ಯ ವಿಮೆ ಕಡ್ಡಾಯವಿಲ್ಲ.ವಿದೇಶಗಳಲ್ಲಿ ಜನರೇ ಪ್ರತಿನಿಧಿಗಳನ್ನು ಹುಡುಕಿಕೊಂಡು ವಿಮೆ ಮಾಡಿಸುತ್ತಾರೆ.ಆದರೆ ನಮ್ಮ ದೇಶದಲ್ಲಿ ಪ್ರತಿನಿಧಿಗಳೇ ಜನರಿಗೆ ವಿಮೆಯ ಮಹತ್ವ ತಿಳಿಸಿ ಮಾರಾಟ ಮಾಡುತ್ತಿದ್ದೇವೆ.ಪ್ರತಿನಿಧಿಗಳಿಗೆ ಹೆಚ್ಚಿನ ಸೌಲಭ್ಯ ಕೊಡಬೇಕಾದ ಪ್ರಾಧಿಕಾರ, ಪ್ರತಿನಿಧಿಗಳಿಗೆ ಮಾರಕವಾದ ಕಾಯ್ದೆತರಲು ಹಾವಣಿಸುತ್ತಿದೆ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿದರು.

ಲಿಯಾಫಿಯ ಮಾಜಿ ಅಧ್ಯಕ್ಷ ವಿ.ಹೆಚ್. ಚರಂತಿಮಠ್ ಮಾತನಾಡಿ ಪ್ರತಿನಿಧಿಗಳಿಗೆ ಮಾರಕವಾದ ಕಾನೂನನ್ನು ಜಾರಿಗೊಳಿಸಲು ವಿಮಾ ಪ್ರಾಧಿಕಾರ ಕೈಗೊಳ್ಳುವುದನ್ನು ಯಾವುದೇ ಕಾರಣಕ್ಕೂ ಬಿಡಬಾರದು.ದೇಶದಲ್ಲಿ ಎಲೈಸಿಯ ಹನ್ನೊಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಒಗ್ಗಟ್ಟಾಗಿ ಹೋರಾಡೋಣವೆಂದರು.

ಶಾಖೆಯ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಂ.ಅಂಬಣ್ಣ ಮಾತನಾಡಿ ಹೋರಾಟದಿಂದಲೇ ಅನೇಕ ಸೌಲಭ್ಯ ಪಡೆದುಕೊಂಡಿದ್ದೇವೆ.ಹೋರಾಟದ ಮೂಲಕವೇ ಮಾರಕ ಕಾಯ್ದೆ ಜಾರಿಯಾಗದಂತೆ ತಡೆಯೋಣ ಇದಕ್ಕೆ ಎಲ್ಲಾ ಪ್ರತಿನಿಧಿಗಳ ಸಹಕಾರ ಇರಲಿ ಎಂದರು.

ಈ ಸಂದರ್ಭದಲ್ಲಿ ರಾಯಚೂರು ವಿಭಾಗದ ಲಿಯಾಫಿ ಸಹ ಕಾರ್ಯದರ್ಶಿ ಎಂ.ವೀರಭದ್ರಪ್ಪ, ಶಾಖೆಯ ಕಾರ್ಯದರ್ಶಿ ಎ.ರೇವಣ್ಣ,ಪದಾಧಿಕಾರಿಗಳಾದ ಬಿ.ರವೀಂದ್ರಚಾರಿ, ಎಂ.ಬಸವರಾಜ್, ಯರಬಳ್ಳಿ ಮಂಜುನಾಥ್,ಬಿ.ಆನಂದ್ ಎಂ.ಈಶ್ವರಪ್ಪ,ಮೈದೂರುರಾಮಣ್ಣ,ಸಿ.ಪ್ರಭು ,ಕೆ.ಎಂ.ರಾಜಶೇಖರಯ್ಯ, ಆರ್ ರಾಮನಗೌಡ, ಡಿ.ಬಸವರಾಜ್ ಕೆ.ಧನಂಜಯ, ಹೆಚ್ .ವೃಷಬೇಂದ್ರ ಶೇಕ್ರನಾಯ್ಕ ,ನೀಲಪ್ಪ, ರಮೇಶ್ ಕಲ್ಲೂರು, ಹೆಚ್.ಶಿವಕುಮಾರ್, ಕೂಡ್ಲಿಗಿಯ ಜಿ.ಲೋಕಪ್ಪ, ಪರಮೇಶ್ ಕೊಟ್ಟೂರಿನ ಎಲ್ .ಶಿವಕುಮಾರ್, ಜಿ.ಜಗದೀಶ್, ಬಿ.ಶರಣೇಶ್, ಕೆ.ರಾಜಪ್ಪ, ಚಾಪಿ ಬಸವರಾಜ್, ಮಾನಪ್ಪ ,ಸೋಗಿ ಜಗದೀಶ್ ಸೇರಿದಂತೆ ಅನೇಕ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *