Vijayanagara Express

Kannada News Portal

ಶಾಸಕ ಕರುಣಾಕರ ರೆಡ್ಡಿಯವರಿಂದ ಐಸಿಯು ಘಟಕ ಉದ್ಘಾಟನೆ

1 min read

 

ಶಾಸಕ ಕರುಣಾಕರ ರೆಡ್ಡಿಯವರಿಂದ ಐಸಿಯು ಘಟಕ ಉದ್ಘಾಟನೆ

ಹರಪನಹಳ್ಳಿ: ಜು-16,ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 20 ಬೆಡ್ ಗಳ ಐಸಿಯು ಘಟಕವನ್ನು ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಶನಿವಾರ ಉದ್ಘಾಟಿಸಿದರು.

ಐಸಿಯು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿ ಅವರು ,ಸುಮಾರು 78 ಲಕ್ಷ ವೆಚ್ಚದಲ್ಲಿ ಶಾಸಕರ ಅನುದಾನವನ್ನು ತಂದು ಈಗಾಗಲೇ ಇದ್ದ 5 ಹಾಸಿಗೆಯ ಐ ಸಿ ಯುಗೆ ಇನ್ನು ಹೆಚ್ಚುವರಿಯಾಗಿ 20 ಬೆಡ್ ಗಳನ್ನು ಸೇರಿಸಲಾಗಿದೆ , 3 ವೆಂಟಿಲೇಟರ್ ಗಳ ಪೈಕಿ ಒಂದು ವೆಂಟೆ ಲೇಟರ್ ಆಂಬುಲೆನ್ಸ್ ನಲ್ಲಿ ಇನ್ನೆರಡು ವೆಂಟಿಲೇಟರ್ ಗಳು ಆಸ್ಪತ್ರೆಯ ಐ ಸಿ ಯು ಕೊಠಡಿಯಲ್ಲಿವೆ , ಮತ್ತು ಇಸಿಜಿ ಯಂತ್ರ,ಆಸ್ಪತ್ರೆಯಲ್ಲಿ ಸೇವೆಗೆ ಸಿದ್ದವಾಗಿವೆ ಎಂದು ಹೇಳಿದರು.

ಸುಸಜ್ಜಿತವಾದ ವೈದ್ಯಕೀಯ ಪರಿಕರಗಳನ್ನು ಸುಧಾರಿತ ಯಂತ್ರೋಪಕರಣಗಳನ್ನು ಆಸ್ಪತ್ರೆಗೆ ಶಾಸಕರ ಅನುದಾನದಲ್ಲಿ ಒದಗಿಸಲಾಗಿದೆ ಇವುಗಳ ಸಮರ್ಪಕ ಬಳಕೆಯಾಗಬೇಕಾದರೆ ಸಾರ್ವಜನಿಕರಿಗೆ ಉತ್ತಮವಾದ ಸೇವೆಯು ದೊರೆತರೆ ಮಾತ್ರ ಇವುಗಳಿಗೆ ಬೆಲೆ ಬಂದಂತಾಗುತ್ತದೆ ಎಂದರು.

ಈ ವೇಳೆ ಸುದ್ದಿಗಾರರು ನೆಬಲೈಜೇಷನ್ ಮಿಷನ್ ಗಳ ಹೆಚ್ಚುವರಿ ಮಿಷನ್ ಗಳ ಅವಶ್ಯಕತೆ ಇದೆ ಅವುಗಳನ್ನು ಅಸ್ಪತ್ರೆಗೆ ಪೂರೈಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಒಂದು ಯಂತ್ರದ ಬೆಲೆ 2000 ಇದ್ದರೆ ಉತ್ತಮ ಕಂಪನಿಯ ನೆಬಲೈಜೇಷನ್ ಯಂತ್ರೋಪಕರಣಗಳನ್ನು ಖರೀದಿಸಿ ಏಕೆಂದರೆ ಸಾರ್ವಜನಿಕರು ಬಹಳ ಲೆಕ್ಕದಲ್ಲಿ ಬರುವುದರಿಂದ ಅಲ್ಲದೇ ಅತಿ ಹೆಚ್ಚು ಬಳಕೆಯಾಗುವುದರಿಂದ ಶಾಸಕರ ಅನುದಾನದಲ್ಲೇ ಹಣವನ್ನು ನೀಡುತ್ತೇನೆ ಇನ್ನೂ ಹೆಚ್ಚುವರಿಯಾಗಿ ಎಂಟು ನೆಬುಲೈಜೇಷನ್ ಯಂತ್ರವನ್ನು ಖರೀದಿಸಿರಿ ಎಂದು ಅಧಿಕಾರಿಗಳಿಗೆ ಹೇಳಿದರು .

ರಕ್ತ ಪರೀಕ್ಷೆ ಯಂತ್ರಗಳನ್ನು ಪೂರೈಸಲಾಗಿದೆ ಆದರೆ ಸಿಬಿಸಿ ರಕ್ತಪರೀಕ್ಷೆ ಮಾಡುವ ಯಂತ್ರದ ರಾಸಾಯನಿಕ ವಸ್ತು ಖಾಲಿಯಾಗಿದೆ ಆದುದರಿಂದ ಹೊಸ ಯಂತ್ರ ಖರೀದಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಶೀಘ್ರದಲ್ಲೇ ಸಿಬಿಸಿ ರಕ್ತ ಪರೀಕ್ಷೆಯ ಹೊಸ ಯಂತ್ರ ಉಪಕರಣವನ್ನು ಆಸ್ಪತ್ರೆಗೆ ನೀಡಲಾಗುವುದು ಎಂದು ಶಾಸಕರು ಹೇಳಿದರು.

ಅಲ್ಲದೆ ಸುದ್ದಿಗಾರರು ಆಸ್ಪತ್ರೆಗೆ ರಕ್ತ ನಿಧಿ ಕೇಂದ್ರದ ಅವಶ್ಯಕತೆ ಇದೆ ಈಗಾಗಲೇ ರಕ್ತ ಶೇಖರಣ ಘಟಕ ಕೇಂದ್ರ ಇದೆ ಆದರೆ ಅದಕ್ಕೆ ತಾಂತ್ರಿಕ ಸಿಬ್ಬಂದಿ ಇಲ್ಲದಿರುವುದನ್ನು ಗಮನಕ್ಕೆ ತಂದಾಗ ಶೀಘ್ರದಲ್ಲೇ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಲ್ಲದೆ ಈ ಎನ್ ಟಿ ಮೈಕ್ರೋಸ್ಕೋಪ್ ಯಂತ್ರ ದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು ಇದಕ್ಕೆ ಆಯ್ತು ಅದನ್ನು ಸಹ ಶಾಸಕರ ಅನುದಾನದಲ್ಲಿ ತರಿಸಿಕೊಡಲು ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಹೇಳಿದರು .

ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ರಾಘವೇಂದ್ರ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಹಾಲ ಸ್ವಾಮಿ ವೈದ್ಯರಾದ ಶಂಕರ್ ನಾಯ್ಕ, ಕಿವಿ ಗಂಟಲು,ಮೂಗು ತಜ್ಞರಾದ ಡಾ.ತ್ರಿವೇಣಿ, ಆಸ್ಪತ್ರೆ ಆಡಳಿತಾಧಿಕಾರಿ ಬಿ ವೆಂಕಟೇಶ್,ದಾದಿಯರ ಸಿಬ್ಬಂದಿ ಔಷಧಾಲಯದ ಸಿಬ್ಬಂದಿ ,ಬಿಜೆಪಿ ಕಾರ್ಯಕರ್ತರಾದ ಆರ್ ಲೋಕೇಶ್ ,ಡಿ ರೊಕ್ಕಪ್ಪ, ಕಣಿವೆಹಳ್ಳಿ ಮಂಜುನಾಥ್, ಬಾಗಳಿ ಕೊಟ್ರೇಶಪ್ಪ ,ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ, ಗುಂಡಿ ಮಂಜುನಾಥ್ , ಕೆಂಗಳ್ಳಿ ಪ್ರಕಾಶ್ ವಕೀಲರು,ಪೂರಿಯಾ ನಾಯ್ಕ್, ಮಹೇಶ್, ಮಜ್ಜಿಗೇರಿ ಭೀಮಪ್ಪ , ಮಾಚಿಹಳ್ಳಿ ಮಲ್ಲೇಶ್ ನಾಯ್ಕ್, ಮತ್ತಿಹಳ್ಳಿ ಪ್ರಕಾಶ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *