ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳು ರಾಜಕಾರಣಿಗಳ ನಿರ್ಲಕ್ಷಕ್ಕೊಳಗಾಗಿವೆ- ರೈತ ಮುಖಂಡ ದೇವರ ಮನೆ ಮಹೇಶ್
1 min readವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳು ರಾಜಕಾರಣಿಗಳ ನಿರ್ಲಕ್ಷಕ್ಕೊಳಗಾಗಿವೆ- ರೈತ ಮುಖಂಡ ದೇವರ ಮನೆ ಮಹೇಶ್
ಹರಪನಹಳ್ಳಿ: ಜು-18, ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳು ಕೆಲವು ರಾಜಕಾರಣಿಗಳ ನಿರ್ಲಕ್ಷಕ್ಕೊಳಗಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ದೇವರಮನೆ ಮಹೇಶ್ ರವರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ದೇವರ ಮನೆ ಮಹೇಶ್ ರವರು ಹರಪನಹಳ್ಳಿ ತಾಲೂಕಿಗೆ ತಮ್ಮ ಸಂಘಟನೆಗೆ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕ ಪತ್ರವನ್ನು ವಿತರಿಸಿ ಮಾತನಾಡಿದ ಅವರು ರಾಜ್ಯದ 25 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದೇವೆ ಹಾಗೂ ಕರ್ನಾಟಕದ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಸಮಿತಿಗಳನ್ನು ರಚಿಸಿದ್ದೇವೆ ರೈತರ ಸಮಸ್ಯೆಗಳಿಗಾಗಿ ಹೋರಾಟ ಮಾಡಲು ವಾಸುದೇವ ಮೇಟಿ ಯವರ ನೇತೃತ್ವದಲ್ಲಿ ಸಂಘವನ್ನು ಸ್ಥಾಪಿಸಿದ್ದು ಎಲ್ಲಾ ತಾಲ್ಲೂಕುಗಳಲ್ಲಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿದ್ದ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಹೊಸದಾಗಿ ಯಾವ ಪುರುಷಾರ್ಥಕ್ಕೆ ಮಾಡಿದರೋ ಏನೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಆನಂದ್ ಸಿಂಗ್ ರವರನ್ನು ಟೀಕಿಸಿದ ಅವರು ಅಖಂಡ ಬಳ್ಳಾರಿ ಜಿಲ್ಲೆಯು ಉತ್ತಮವಾಗಿತ್ತು ಎಂದರಲ್ಲದೆ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಕೂಡ್ಲಿಗಿ ,ಮತ್ತು ಕೊಟ್ಟೂರು ತಾಲೂಕುಗಳು ತೀರ ಬರಪೀಡಿತ ಮತ್ತು ಒಣ ಬೇಸಾಯ ಹೊಂದಿದ ಹಿಂದುಳಿದ ತಾಲೂಕುಗಳಾಗಿವೆ ಪಶ್ಚಿಮ ತಾಲೂಕುಗಳಾದ ಇವುಗಳನ್ನು ಕಡೆಗಣಿಸಲಾಗುತ್ತದೆ ಕೇವಲ 30 ರಿಂದ 40 ಕಿಲೋಮೀಟರ್ ದೂರದಲ್ಲಿರುವ ತುಂಗಭದ್ರಾ ನದಿ ನೀರನ್ನು ತಾಲೂಕುಗಳಿಗೆ ತಂದು ಸಮರ್ಪಕವಾದ ನೀರಾವರಿ ಯೋಜನೆಯನ್ನು ರೂಪಿಸುವಲ್ಲಿ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ ಎಂದರು .
ಅಲ್ಲದೆ ವಿಜಯನಗರ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಅಗ್ರಪಡಿಸಿದರು , ತುಮಕೂರು ಜಿಲ್ಲೆಯ ಪಾವಗಡ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ 3300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತುಂಗಭದ್ರ ನದಿಯಿಂದ ನೀರಿನ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗಿದೆ ಆದರೆ ತುಂಗಭದ್ರ ನದಿ ದಡದಲ್ಲಿಯೇ ಇರುವ ಹರಪನಹಳ್ಳಿ ಕೊಟ್ಟೂರು ಕೂಡ್ಲಿಗಿ ತಾಲೂಕುಗಳಿಗೆ ನೀರಾವರಿ ಭಾಗ್ಯ ಕನಸಿನ ಮಾತಾಗಿಯೇ ಉಳಿದಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ 100 ಟಿಎಂಸಿ ನೀರನ್ನು ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದ್ದು ಒಂದು ದಿನಕ್ಕೆ 7 ಟಿಎಂಸಿ ಯಷ್ಟು ನೀರು ಒಳಹರಿವು ಇರುತ್ತದೆ ಆದರೆ ಇದರಲ್ಲಿ ಹೆಚ್ಚು ಊಳು ತುಂಬಿ 65 ಟಿಎಂಸಿ ಯಷ್ಟು ಮಾತ್ರ ನೀರು ಶೇಖರಣೆಯಾಗಿರುತ್ತದೆ ಆದುದರಿಂದ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಊಳನ್ನು ತೆಗೆಯಿಸಿ ಪಶ್ಚಿಮ ತಾಲೂಕುಗಳಿಗೆ ತುಂಗಾ ಭದ್ರಾ ಜಲಾಶಯದ ಯಿನ್ನೀರಿನಿಂದ ನೀರಾವರಿ ವ್ಯವಸ್ಥೆಯನ್ನು ಮಾಡಬೇಕೆಂದು ಈ ಮೂಲಕ ಆಗ್ರಪಡಿಸುತ್ತೇವೆ ಎಂದರು.
ರಾಜಕಾರಣಿಗಳಿಗೆ ಇಂದು ರಾಜಕೀಯವು ಒಂದು ವ್ಯಾಪಾರವಾಗಿ ಮಾರ್ಪಟ್ಟಿದೆ ರಾಜಕೀಯವನ್ನು ಒಂದು ವ್ಯಾಪಾರವಾಗಿ ನೋಡದೆ ,ಅಭಿವೃದ್ಧಿಗೆ ಪೂರಕವಾಗಿ ಒತ್ತು ನೀಡಬೇಕು, ನೀರಾವರಿ ಸೌಲಭ್ಯಗಳಿಗೆ ಮಹತ್ವ ಕೊಡಬೇಕು ನೀರಾವರಿ ಸೌಲಭ್ಯದಿಂದ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಇದರಿಂದ ರೈತ ಕುಟುಂಬದವರು ಹೈನುಗಾರಿಕೆ ಮಿಶ್ರ ಬೇಸಾಯ ಮಾಡಿ ಉಪಜೀವನ ನಡೆಸಲು ಸಾಧ್ಯವಾಗುತ್ತದೆ ಇದರಿಂದಾಗಿ ಅವರ ಕುಟುಂಬಗಳು ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ರಾಜಕಾರಣಿಗಳಿಗೆ ಮಾತಿನಿಂದ ತಿವಿದರು.
ಈ ತಾಲೂಕುಗಳಿಗೆ ನೀರಾವರಿಯನ್ನು ಮಾಡಲು ರಾಜಕಾರಣಿಗಳು ನಿರ್ಲಕ್ಷತನ ತೋರಿರುವುದು ಇಲ್ಲಿಯ ಜನರ ದೌರ್ಭಾಗ್ಯವೇ ಸರಿ ಇದಕ್ಕೆ ಈ ಭಾಗದ ಜನ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣ ಆಗಾಗಿ ಈ ಬಾರಿ ಅದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ ಪಿ ಪ್ರಕಾಶ್ ರವರು ಹಡಗಲಿ ತಾಲೂಕಿಗೆ ಮಾಡಿರುವ ನೀರಾವರಿಯ ಅಭಿವೃದ್ಧಿ ಕಾರ್ಯಗಳು ಅವಿಸ್ಮರಣೀಯವಾಗಿವೆ ಹೀಗೆ ಜನಪ್ರಿಯವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ರೈತರ ಬಗ್ಗೆ ರಾಜಕಾರಣಿಗಳಿಗೆ ಜನಪರ ಕಾಳಜಿ ಇದೆ ಎಂದೆ ಹೇಳಬಹುದಾಗಿದೆ ಎಂದರು.
ಸರ್ಕಾರ ಬಗಾರ್ ಹುಕುಂ ಹಿಡುವಳಿದಾರರಿಗೆ ಹಕ್ಕು ಪತ್ರ ಪಟ್ಟವನ್ನು ವಿತರಣೆ ಮಾಡದೇ ಇನ್ನು ಮುಂದೆ ರೈತರುಗಳಿಗೆ ಅದನ್ನು ವರ್ಷಕ್ಕೆ ಇಂತಿಷ್ಟು ಎಂದು ಗೇಣಿ (ಗುತ್ತಿಗೆ )ಕೊಡುತ್ತೇವೆ ಎಂದು ಹೇಳಿರುವುದು ಅಸಮಂಜಸವಾದ ಕಾಯ್ದೆಆಗಿದೆ ಇಂಥ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬಾರದು ಎಂದರು ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ ತ್ವರಿತವಾಗಿ ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ನೀಡಬೇಕು ಅಲ್ಲದೇ ನಿರಾಶ್ರಿತವಾದಂತಹ ಕುಟುಂಬಗಳಿಗೆ ಈ ಕೂಡಲೇ ಗಂಜಿ ಕೇಂದ್ರವನ್ನು ಹಾಗೂ ತಾತ್ಕಾಲಿಕ ವಸತಿ ಕ್ಯಾಂಪ್ ಗಳನ್ನು ತೆರೆಯಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರವು ಎಪಿಎಂಸಿ ಕಾಯಿದೆ, ವಿದ್ಯುತ್ ಕಾಯಿದೆ ,ಭೂ ಸುಧಾರಣೆ ಕಾಯ್ದೆಗಳನ್ನು ವಾಪಸ್ ಪಡೆದಿದೆ ಆದರೆ ರಾಜ್ಯ ಸರ್ಕಾರವು ಈ ಕಾಯ್ದೆಗಳನ್ನು ಇನ್ನೂ ವಾಪಸ್ ಪಡೆದಿರುವುದಿಲ್ಲ ಈ ಕೂಡಲೇ ಈ ಕಾಯ್ದೆಗಳೆಲ್ಲವನ್ನು ರಾಜ್ಯ ಸರ್ಕಾರವು ವಾಪಸ್ ಪಡೆದುಕೊಳ್ಳಬೇಕು ವಿಜಯನಗರ ಜಿಲ್ಲೆಯಾದ್ಯಂತ ಒಟ್ಟು 270 ಕೆರೆಗಳು ಇವೆ ಈ ಎಲ್ಲಾ ಕೆರೆಗಳಿಗೆ ತುಂಗಭದ್ರ ಜಲಾಶಯದ ಹಿನ್ನೀರಿನಿಂದ ಕೆರೆಗಳನ್ನು ತುಂಬಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸುಲಭವಾಗಿ ಎಲ್ಲಾ ಕುಟುಂಬಗಳಿಗೆ ದೊರೆಯುವಂತೆ ಯೋಜನೆ ಕೈಗೊಳ್ಳಬೇಕು ಕೇಂದ್ರ ಸರ್ಕಾರ ಕರ್ನಾಟಕವನ್ನು ನೆನಪಿಡಿತ ರಾಜ್ಯವೆಂದು ಘೋಷಣೆ ಮಾಡಿ ರಾಜ್ಯಕ್ಕೆ ನೆರೆಹಾವಳಿ ಗೆ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಪರಶುರಾಮಪ್ಪ ಇವರು ಮಾತನಾಡಿ ತಾಲೂಕಿನ ಸಮಸ್ಯೆಗಳ ಬಗ್ಗೆ ತಾಲೂಕಿನ ಪದಾಧಿಕಾರಿಗಳು ಮತ್ತು ಸದಸ್ಯರು ಜನರ ,ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟವನ್ನು ನಡೆಸಬೇಕು ಎಂದು ಕಿವಿ ಮಾತನ್ನು ಹೇಳಿದರು ಸಂಘಟನೆ ಎಂದರೆ ಬಲ್ಲವನು ಬಲ್ಲ ,ಬೆಲ್ಲದ ರುಚಿಯ ಎನ್ನುವಂತೆ ಸಂಘಟನೆಯ ಮಹತ್ವವನ್ನು ಅರಿತವರಿಗೆ ಮಾತ್ರ ಗೊತ್ತು ಆದುದರಿಂದ ಸಂಘಟನೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಿ ಜನರ ಸಮಸ್ಯೆಗಳ ಬಗ್ಗೆ ಹೋರಾಟವನ್ನು ನಡೆಸಿರಿ ಎಂದು ಹೇಳಿದರು.
ಸಂಘದ ವಿಜಯನಗರ ಜಿಲ್ಲಾ ಗೌರವಾಧ್ಯಕ್ಷರಾದ ಕೊಟ್ರೇಶಪ್ಪ ಮಾತನಾಡಿ ರೈತರ ಸಮಸ್ಯೆಗಳಿಗಾಗಿ ನೀವು ಹೋರಾಟವನ್ನು ಮಾಡಿರಿ ನಿಮ್ಮ ಕಷ್ಟ ಸುಖಗಳಿಗೆ ಸದಾ ನಾವು ನಿಮ್ಮ ಜೊತೆ ಇರುತ್ತೇವೆ ಹರಪನಹಳ್ಳಿ ,ಕೂಡ್ಲಿಗಿ , ಮತ್ತು ಕೊಟ್ಟೂರಿನ ಸಂಘಟನೆಯ ಪದಾಧಿಕಾರಿಗಳು ಸದಾ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಅಧ್ಯಕ್ಷ ನಿವೃತ್ತ ಪೊಲೀಸ್ ಉಪನಿರೀಕ್ಷಕರಾದ ಪ್ರಕಾಶ್ ರವರು ಮಾತನಾಡಿ ಆರಂಭದಲ್ಲಿ ನಾನೊಬ್ಬ ರಂಗ ಕಲಾವಿದ ನಾನು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯನ್ನು ಹೊಂದಿದ್ದೇನೆ ಈಗ ಸಮಾಜ ಸೇವೆ ಮಾಡುವ ಉದ್ದೇಶದಿಂದ ರೈತ ಸಂಘದಲ್ಲಿ ನಾನು ಸೇರಿಕೊಂಡಿದ್ದೇನೆ ಎಂದರು ರೈತನ ಬಗ್ಗೆ ದೇಶದಲ್ಲಿ ಯಾರೂ ಗಮನ ಕೊಡುವುದಿಲ್ಲ ರೈತ ದೇಶದ ಬೆನ್ನೆಲುಬು ಎಂದು ಕೇವಲ ಮಾತಿನಲ್ಲಿ ಹೇಳುವರು ಅಷ್ಟೇ ರೈತನ ಅನ್ನವನ್ನು ತಿಂದು ಯೋಧರು ದೇಶವನ್ನು ಕಾಯುತ್ತಾರೆ, ಪೊಲೀಸರು ಸಮಾಜವನ್ನು ಕಾಯುತ್ತಾರೆ , ಎಲ್ಲರೂ ರೈತರು ಬೆಳೆದ ಅನ್ನದಿಂದಲೇ ಬದುಕುತ್ತಾರೆ, ರೈತರು ಈ ದೇಶಕ್ಕೆ ಅನ್ನವನ್ನು ಅಳೆಯುತ್ತಾರೆ ರೈತನಿಗೆ ಕಷ್ಟ ಬಂದಾಗ ಸಂಕಷ್ಟದಲ್ಲಿದ್ದಾಗ ಸರ್ಕಾರಗಳು ಅವರ ನೋವಿಗೆ ಸ್ಪಂದಿಸದಿರುವುದು ನೋವಿನ ಸಂಗತಿಯಾಗಿದೆ ಎಂದರು .
ಈ ವೇಳೆ ಇಪ್ಟ ಸಂಘಟನೆಯ ದ್ವಾರಕೇಶ್ ರೈತ ಕ್ರಾಂತಿಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಗೌರವಾಧ್ಯಕ್ಷರಾದ ಎಂ ಕೊಟ್ರೆಶಪ್ಪ, ವಿಜಯನಗರ ಜಿಲ್ಲೆಯ ಉಪಾಧ್ಯಕ್ಷರಾದ ಎಮ್ ಸೋಮಪ್ಪ, ಡೆಲ್ಲಿ ಭೀಮಪ್ಪ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ನಿವೃತ್ತ ಪೊಲೀಸ್ ನಿರೀಕ್ಷಕ ಡಿ ಹನುಮಂತಪ್ಪ ಹರಪನಹಳ್ಳಿ ತಾಲೂಕು ಸಮಿತಿ ಅಧ್ಯಕ್ಷರಾದ ವೈ ತಾತೇಶ್ ತಾಲೂಕು ಗೌರವಾಧ್ಯಕ್ಷರಾದ ಕೊಟ್ರಯ್ಯ ತಾಲೂಕು ಅಧ್ಯಕ್ಷರಾದ ಎ ಕರಿಬಸಪ್ಪ ಪ್ರಧಾನ ಕಾರ್ಯದರ್ಶಿಗಳಾದ ಬಸವನಗೌಡ ಕಾರ್ಯದರ್ಶಿಯಾದ ಬೊಮ್ಮಜ್ಜ ಕಾರ್ಯದರ್ಶಿಗಳಾದ ಹಾಲಪ್ಪ ಸದಸ್ಯರುಗಳಾದ ಸಂತೋಷ್ ,ಚಂದ್ರಪ್ಪ ,ಮಂಜುನಾಥ್ ಉಮೇಶ್ ,ಇಪ್ಟ ಸಂಘಟನೆಯ ದ್ವಾರಕೇಶ್, ಮುಂತಾದವರು ಉಪಸ್ಥಿತರಿದ್ದರು.