Vijayanagara Express

Kannada News Portal

ಕುರಿಗಾಹಿಯ ಮೇಲೆ ಚಿರತೆ ದಾಳಿ , ಯುವಕನಿಗೆ ಗಾಯ

1 min read

ಕುರಿಗಾಹಿಯ ಮೇಲೆ ಚಿರತೆ ದಾಳಿ , ಯುವಕನಿಗೆ ಗಾಯ

 

ಹರಪನಹಳ್ಳಿ: ತಾಲೂಕಿನ ಕಂಡಿಕೇರಿ ತಾಂಡದ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಕುರಿಮೇಯಿಸಲು ಹೋಗಿದ್ದ ವೇಳೆ ಕುರಿಗಾಹಿ ಮೇಲೆ ಚಿರತೆ ಏಕಾಏಕಿ ಎರಗಿ ದಾಳಿ ಮಾಡಿದ ಘಟನೆ ಕಂಡಿಕೇರಿ ತಾಂಡದ ಅರಣ್ಯ ಬಳಿ ನಡೆದಿದೆ.ತಾಲೂಕಿನ ತೆಲಿಗಿ ಗ್ರಾಮದ ಕುರಿಗಾಹಿ ಹೂಗಾರ್

ಕರಿಬಸಪ್ಪ(21) ಎನ್ನುವ ಯುವಕ ಕುರಿ ಮೇಯಿಸಲು ಕಂಡಿಕೇರಿ ತಾಂಡದ ತೆಲಿಗಿ ಗ್ರಾಮದ ಜಮೀನುಗಳಿಗೆ ಹೊಂದಿಕೊಂಡಿರುವ ಅರಣ್ಯ ದ ಬಳಿ ಹೊಗಿದ್ದ ಸಂದರ್ಭದಲ್ಲಿ ಏಕಾಏಕಿ ಕುರಿಗಾಹಿ ಯುವಕನ ಮೇಲೆ ಇಂದು ಮಧ್ಯಾಹ್ನ ಚಿರತೆ ದಾಳಿ ಮಾಡಿದ್ದು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಕೊಡಲಿಯಿಂದ ಚಿರತೆಗೆ ಎದುರಿಸಿ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಎರಡು ತಂಡವನ್ನು ರಚಿಸಲಾಗಿದೆ ಹಾಗೂ ಚಿರತೆಯನ್ನು ಹಿಡಿಯುವವರೆಗೂ ಸ್ಥಳೀಯರು ಅರಣ್ಯದ ಕಡೆಗೆ ಹೋಗದಂತೆ ಎಚ್ಚರಿಸಿದ್ದಾರೆ ಗಾಯಾಳು ಕರಿಬಸಪ್ಪನಿಗೆ ವೈದ್ಯರು ವೈದ್ಯಕೀಯ ತಪಾಸಣಾ ಮಾಡಿ ಗಾಯಗಳಾದ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದರೆ ಅವರಿಗೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಪ್ಪ ಪತ್ರಿಕೆಗೆ ತಿಳಿಸಿರುತ್ತಾರೆ.

ಚಿರತೆಯನ್ನು ಹಿಡಿಯಲು ಎರಡು ತಂಡವನ್ನು ರಚಿಸಲಾಗಿದೆ ಹಾಗೂ ಚಿರತೆಯನ್ನು ಹಿಡಿಯುವವರೆಗೂ ಸ್ಥಳೀಯರು ಅರಣ್ಯದ ಕಡೆಗೆ ಯಾರೂ ಹೋಗದಂತೆ ಎಚ್ಚರಿಸಿದ್ದಾರೆ .

ಮಲ್ಲಪ್ಪ ವಲಯ ಅರಣ್ಯ ಸಂರಕ್ಷಣಾಧಿಕಾರಿಹರಪನಹಳ್ಳಿ.

Leave a Reply

Your email address will not be published. Required fields are marked *