September 18, 2024

Vijayanagara Express

Kannada News Portal

ಶಾಸಕರ ನಡೆ, ಗ್ರಾಮದ ಕಡೆ ಕಾರ್ಯಕ್ರಮದ ಮೂಲಕ ಕರುಣಾಕರ ರೆಡ್ಡಿ ಗ್ರಾಮಗಳಿಗೆ ಭೇಟಿ

1 min read

ಶಾಸಕರ ನಡೆ, ಗ್ರಾಮದ ಕಡೆ ಕಾರ್ಯಕ್ರಮದ ಮೂಲಕ ಕರುಣಾಕರ ರೆಡ್ಡಿ ಗ್ರಾಮಗಳಿಗೆ ಭೇಟಿ

ಹರಪನಹಳ್ಳಿ: ಶಾಸಕರ ನಡೆ ಗ್ರಾಮಗಳ ಕಡೆ ವಿನೂತನ ಕಾರ್ಯಕ್ರಮದ ಮೂಲಕ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅವರು ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಿದರು.

ತೆಲಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟಂತೆ ತೆಲಿಗಿ ಗ್ರಾಮ ಮತ್ತು ತೆಲಿಗಿ ತಿಮ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ಜನರ ಕಷ್ಟ ಸುಖಗಳನ್ನು ಆಲಿಸಿದರು .
ತೆಲಿಗಿ ಗ್ರಾಮದ 1 ವಾರ್ಡಿನಲ್ಲಿ ಶಾಸಕರು ಸಂಚರಿಸಿ ಬಹುತೇಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ವಾಸಿಸುವ ಈ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಜನರು ಶಾಸಕರ ಕಾಲೋನಿಯ ಕೆಲವು ನಿವಾಸಿಗಳು ಗಮನಕ್ಕೆ ತಂದರೆ,
ಚರಂಡಿಯ ತುಂಬಾ ಊಳು ತುಂಬಿ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತಿದೆ ಇದರಿಂದ ಚಿಕನ್ ಗುನ್ಯಾ, ಡೆಂಗ್ಯೊ, ಕಾಯಿಲೆಗಳು ಬರುವ ಭೀತಿಯಿಂದ ಬದುಕುತ್ತಿದ್ದೇವೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನಾವು ಆಸ್ಪತ್ರೆಗೆ ದುಡಿಯಬೇಕಾಗುತ್ತದೆ ನಾವು ಬಡವರು ಇದ್ದೇವೆ ಇದು ನಮಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಶಾಸಕರನ್ನು ಕಂಡ ತಕ್ಷಣ ಕೆಲವರು ತಮಗೆ ತಾವೇ ಗೊಣಗಿದರು .

ಇದಕ್ಕೆ ಶಾಸಕ ಕರುಣಾಕರ ರೆಡ್ಡಿ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್ ರವರನ್ನು ಕರೆದು ಇಷ್ಟೊಂದು ಚಂರಂಡಿ ತುಂಬಿ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತಿದೆ
ಏಕೆ ಹೀಗೆ ಇದೆ ಎಂದು ಕೇಳಿದರು ಇದಕ್ಕೆ ಪ್ರತಿಕ್ರಿಸಿದ ಅಭಿವೃದ್ಧಿ ಅಧಿಕಾರಿ ಶಿವರಾಜ್ ಕುಮಾರ್ ರವರು ಒಂದು ತಿಂಗಳ ಹಿಂದೆ ಚರಂಡಿಯನ್ನು ಸ್ವಚ್ಚಗೊಳಿಸಿದ್ದೆವು ಈಗ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಮಿಕರು ಯಾರು ಸಿಕ್ಕಿರುವುದಿಲ್ಲ ಆದುದರಿಂದ ಶೀಘ್ರದಲ್ಲೇ ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಸರ್ ಎಂದು ಸಮಜಾಯಿಷಿ ನೀಡಿದರು
ಇದಕ್ಕೆ ಶಾಸಕ ಕರುಣಾಕರ ರೆಡ್ಡಿ ಅವರು ನಾಳೆಯೇ ಇದನ್ನೆಲ್ಲ ಸ್ವಚ್ಚಗೊಳಿಸಲು ಮುಂದಾಗಿರಿ ಎಂದು ಹೇಳಿದರು.

ಇನ್ನೂ ಕೆಲವು ಮಹಿಳೆಯರು ರಸ್ತೆಯನ್ನು ನಿರ್ಮಿಸಲು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು,ಮತ್ತೆ ಕೆಲವು ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಹೋದ ನಂತರ ಈಗ ಬಂದಿದ್ದಾರೆ,ಈಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ಅಲ್ಲಲ್ಲಿ ಗ್ರಾಮದ ಮಹಿಳೆಯರು ಗೊಣಗುತ್ತಿದ್ದುದ್ದು ಕಂಡುಬಂದಿತು.
ಮತ್ತೊಬ್ಬ ಅಲ್ಪಸಂಖ್ಯಾತ ಮಹಿಳೆ ನಮ್ಮ ಮನೆ ಕಟ್ಟಿಕೊಳ್ಳಲು
ಸರ್ಕಾರದ ಆಶ್ರಯ ಯೋಜನೆಡಿ ಆರಂಭಿಸಿದ್ದೇವೆ ಎರಡು ವರ್ಷಗಳಿಂದ ಕೇವಲ ಎರಡು ಕಂತುಗಳ ಹಣ ಮಾತ್ರ ಬಿಡುಗಡೆ ಯಾಗಿರುತ್ತದೆ ಆದುದರಿಂದ ನಮಗೆ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿರಿ ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ಆಗ ಶಾಸಕ ಕರುಣಾಕರ ರೆಡ್ಡಿ ಅವರು ಪ್ರತಿಕ್ರಿಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕರೆದು ಮಾಹಿತಿ ಕೇಳಿದರು ಆಗ ಅಭಿವೃದ್ಧಿ ಅಧಿಕಾರಿ ಸರ್ ಈ ಮನೆಗೆ ಎರಡು ಕಂತು ಹಣ ಮಾತ್ರ ಬಿಡುಗಡೆ ಯಾಗಿರುತ್ತದೆ ಮನೆಯನ್ನು ಪೂರ್ತಿಗೊಳಿಸಿದರೆ ಉಳಿದಿರುವ ಕಂತುಗಳು ಬಿಡುಗಡೆ ಯಾಗುತ್ತವೆ ಎಂದು ಹೇಳಿದರು ಇದಕ್ಕೆ ಪ್ರತಿಕ್ರಿಸಿದ ಶಾಸಕರು ಸರ್ಕಾರದ ಅನುದಾನ ಎಷ್ಟು ಬರುತ್ತದೆ ಅಷ್ಟನ್ನೇ ಬಿಡುಗಡೆ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರಲ್ಲದೆ ಅಭಿವೃದ್ಧಿ ಅಧಿಕಾರಿಗೆ ನೀನೇ ಯಾರಾದರೂ ಒಬ್ಬ ಗುತ್ತಿಗೆದಾರರಿಗೆ ಹೇಳಿ ಮನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ಹೇಳಿದರು.


ನಂತರ ದುಗ್ಗಾವತಿ ಗ್ರಾಮದಲ್ಲಿ ಜೆಜೆಎಂ ಕುಡಿಯುವ ನೀರಿನ ಕಾಮಗಾರಿಗೆ ಭೂಮಿ ಪೂಜಿ ನೆರವೇರಿಸಿದರು ನಂತರ ದುಗ್ಗಾವತಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಶಾಸಕರು ಸನ್ಮಾನ ಸ್ವೀಕರಿಸಿ ನಂತರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ನಮ್ಮ ಊರಿನ ಬಡ ವರ್ಗದ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಾಲೋನಿಯಲ್ಲಿ ರಸ್ತೆ ಇರುವುದಿಲ್ಲ ಕಳೆದ ನಾಲ್ಕು ವರ್ಷಗಳಿಂದ ನಾವು ಕೇಳುತ್ತಲೇ ಇದ್ದೇವೆ ಆದರೆ ರಸ್ತೆಯೂ ಆಗಿಲ್ಲ ಗ್ರಾಮದ ಯುವಕನೊಬ್ಬ ಶಾಸಕರ ಗಮನಕ್ಕೆ ತಂದರು ಇದಕ್ಕೆ ಉತ್ತರಿಸಿದ ಶಾಸಕರು ನಾಲ್ಕು ವರ್ಷ ರಸ್ತೆ ಆಗಿಲ್ಲ ಎಂದು ಈಗ ನಾನು ನಿಮ್ಮ ಊರಿಗೆ ಬಂದಾಗ ಹೇಳುತ್ತಿಯಲ್ಲಪ್ಪಾ ಹರಪನಹಳ್ಳಿ ಯ ನಮ್ಮ ಕಚೇರಿಗೆ ಬಂದು ಕೋರಿಕೊಂಡಿದ್ದರೆ ನಾನು ಕ್ರಮ ಕೈಗೊಳ್ಳುತ್ತಿದ್ದೆ ಆದಾಗ್ಯೂ ನಾನು ಈಗಾಗಲೇ ನಿಮ್ಮ ಊರಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಾಲೋನಿಯಲ್ಲಿನ ರಸ್ತೆಯ ಎಸ್ಟಿಮೇಟ್ ಮಾಡಿಸಿದ್ದು ಶೀಘ್ರದಲ್ಲೇ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ತೆಲಿಗಿ ಗ್ರಾಮದ ವೃದ್ದ ದಂಪತಿಗಳು ದುಗ್ಗಾವತಿ ಗ್ರಾಮದಲ್ಲಿ ಬಂದು ನಮಗೆ ಇರಲು ಮನೆ ಇಲ್ಲ ಮನೆ ಕಟ್ಟಿಕೊಳ್ಳಲು ಖಾಲಿ ನಿವೇಶನ ಇಲ್ಲ ಆದುದರಿಂದ ದಯವಿಟ್ಟು ನಮಗೆ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿರಿ ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ಈ ಆಹವಾಲನ್ನು ಆಲಿಸಿದ ಕರುಣಾಕರ ರೆಡ್ಡಿ ಅವರು ಆ ವೃದ್ದ ದಂಪತಿಗಳಿಗೆ ಮನೆ ಇಲ್ಲದಿರುವುದು ಅವರ ಗಮನಕ್ಕೆ ಬಂದಿತು ಕೂಡಲೇ ಕಂದಾಯ ನಿರೀಕ್ಷಕ ರಾಜಪ್ಪರವರನ್ನು ಕರೆಯಿಸಿ ಇವರಿಗೆ ಮನೆ ಕಟ್ಟಿಕೊಡಲು ಸರ್ಕಾರಿ ಭೂಮಿಯ ಅವಶ್ಯಕತೆ ಇದೆ ಅದು ತೆಲಿಗಿ ಗ್ರಾಮದಲ್ಲಿ ಲಭ್ಯವಿದೆಯೇ ಎಂದು ಪ್ರಶ್ನಿಸಿದರು ಅದಕ್ಕೆ ಉತ್ತರಿಸಿದ ಕಂದಾಯ ನಿರೀಕ್ಷಕ ರಾಜಪ್ಪರವರು ತೆಲಿಗಿ ಗ್ರಾಮದ ಸರ್ವೆ ನಂಬರ್ 262-ಎ, ನಲ್ಲಿ 1.47 ಎಕ್ಕರೆ ಸರ್ಕಾರಿ ಭೂಮಿ ಇದೆ ಸಾರ್ ಅದನ್ನು ಸರ್ವೇ ಮಾಡಿಸಿ ಕಾರ್ಯನಿರ್ವಾಧಿಕಾರಿಗಳು ಸಭೆಯಲ್ಲಿ ಅನುಮೋದಿಸಿ ನಂತರ ಫಲಾನುಭವಿಗಳಿಗೆ ನೀಡಬಹುದು ಎಂದು ತಿಳಿಸಿದರು ಇದನ್ನು ತುರ್ತಾಗಿ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಿ ಎಂದು ಅಲ್ಲೇ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಕಾಶ್ ರವರಿಗೆ ಸೂಚಿಸಿದರು.

ಗ್ರಾಮದ ಅನೇಕ ಜನರು ತಮ್ಮ ಸಮಸ್ಯೆಗಳ ಕುರಿತಾಗಿ ಮನವಿ ಪತ್ರಗಳನ್ನು ಶಾಸಕರಿಗೆ ನೀಡಿದರು ಅಲ್ಲದೆ ಕೆಲವು ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ  ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನಾಯ್ಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಕಾಶ್ ನಾಯ್ಕ್,ಗ್ರಾಮದ ಮುಖಂಡರು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು, ಆರ್ ಲೋಕೇಶ್,,ಕಣಿವಿಹಳ್ಳಿ ಮಂಜುನಾಥ್, ಬಾಗಳಿ ಕೊಟ್ರೇಶಪ್ಪ,ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ, ಗುಂಡಿ ಮಂಜುನಾಥ್ , ಕೆಂಗಳ್ಳಿ ಪ್ರಕಾಶ್ ವಕೀಲರು,ಪೂರಿಯಾ ನಾಯ್ಕ್, ಮಹೇಶ್, ಮಜ್ಜಿಗೇರಿ ಭೀಮಪ್ಪ , ಮಾಚಿಹಳ್ಳಿ ಮಲ್ಲೇಶ್ ನಾಯ್ಕ್, ಮತ್ತಿಹಳ್ಳಿ ಪ್ರಕಾಶ್, ಮುಂತಾದವರು ಹಾಜರಿದ್ದರು .

Leave a Reply

Your email address will not be published. Required fields are marked *