September 18, 2024

Vijayanagara Express

Kannada News Portal

ಪೆಟ್ರೋಲ್/ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ:ಒರ್ವ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರ

1 min read

ಪೆಟ್ರೋಲ್/ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ:ಒರ್ವ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರ

ಹರಪನಹಳ್ಳಿ : ಪಟ್ಟಣದ ಕಂಚಿಕೇರಿ ಬೆಂಡಿಗೇರಿ ರಸ್ತೆಯ ಹೊರವಲಯದಲ್ಲಿ ಪೆಟ್ರೋಲ್ ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಬೈಕ್ ಸವಾರರ ನಡುವೆ ಡಿಕ್ಕಿಯಾಗಿ ಓರ್ವ ಮೃತಪಟ್ಟು ,ಇನ್ನೊಬ್ಬನ ಸ್ಥಿತಿ ಗಂಭೀರ ವಾಗಿರುವ ಘಟನೆ ಭಾನುವಾರಬೆಳಗ್ಗೆ ನಡೆದಿದೆ.

ಕಂಚಿಕೇರಿ ಬೆಂಡಿಗೇರಿ ರಸ್ತೆಯ ಹೊರವಲಯದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪೆಟ್ರೋಲ್/ ಡೀಸೆಲ್ ತುಂಬಿದ ಲಾರಿಯೊಂದು ಹಾಸನದಿಂದ ಹರಪನಹಳ್ಳಿ ಪಟ್ಟಣದ ಕೊಟ್ಟೂರು ರಸ್ತೆಯ ಬಂಕ್ ಗೆ ಟ್ಯಾಂಕರ್ ತೆರಳುತ್ತಿತ್ತು ಎಂದು ಹೇಳಲಾಗುತ್ತದೆ.

ಹರಪನಹಳ್ಳಿ ಪಟ್ಟಣಕ್ಕೆ ಸಮೀಪದಲ್ಲಿ ಬರುತ್ತಿರುವಾಗ ಕಣಿವೆಯ ಇಳಿಜಾರಿನ ಹತ್ತಿರ ಅದಕ್ಕೆ ಎದುರಾಗಿ ನಾಗರಾಜ್ (38) ಮೋರಿಗೇರಿ ನಿವಾಸಿ ಎಂಬುವವರು ಮೃತದುರ್ದೈವಿಯಾಗಿರುತ್ತಾರೆ ಇನ್ನೊಬ್ಬ ಹಿಂಬದಿ ಸವಾರ ಚಂದ್ರು ( 32 ) ಬೆಂಕಿಯಿಂದ ಈತನು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುತ್ತಾನೆ.

ಲಾರಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಲಾರಿಯು ಬೀಳುತ್ತಿದ್ದದ್ದನ್ನು ಗಮನಿಸಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಮೃತ ಬೈಕ್ ಸವಾರ ನಾಗರಾಜನು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮೋರಿಗೇರಿ ಗ್ರಾಮದನಿವಾಸಿಯಾಗಿದ್ದು, ಈತನು ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಮದುವೆಯಾಗಿ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡು ಪಟ್ಟಣದಲ್ಲೆ ವಾಸವಾಗಿದ್ದ ಎಂದು ತಿಳಿದುಬಂದಿದೆ ಈತನನ್ನು ನೋಡಲು ಮೋರಿಗೇರಿ ನಿವಾಸಿ ಚಂದ್ರು ಎನ್ನುವವನು ಭಾನುವಾರ ಬೆಳಿಗ್ಗೆ ನಾಗರಾಜ್ ನನ್ನು ನೋಡಿ ಮಾತನಾಡಿಸಲು ಹರಪನಹಳ್ಳಿಗೆ ಬಂದಿದ್ದು ಈ ಇಬ್ಬರೂ ಸೇರಿ ಬೈಕ್ ನಲ್ಲಿ ಹೊಲಕ್ಕೆ ಹೋಗಿಬರಲು ಹೋಗುತ್ತಿದ್ದರು ಎಂದು ಹೇಳಲಾಗುತ್ತದೆ.

ಘಟನೆಯ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಸ್ಥಳಕ್ಕೆ ವೃತ್ತ ಪೊಲೀಸ್ ನಿರೀಕ್ಷಕ ನಾಗರಾಜ್ ಕಮ್ಮಾರ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

Leave a Reply

Your email address will not be published. Required fields are marked *