September 18, 2024

Vijayanagara Express

Kannada News Portal

ಯುವಕರು ಸ್ವಯಂ ಉದ್ಯೋಗ ಮಾಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು -ಇಮ್ಮಡಿಸಿದ್ದರಾಮೇಶ್ವರ ಸ್ವಾಮಿಜಿ

1 min read

 

ಯುವಕರು ಸ್ವಯಂ ಉದ್ಯೋಗ ಮಾಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು -ಇಮ್ಮಡಿಸಿದ್ದರಾಮೇಶ್ವರ ಸ್ವಾಮಿಜಿ

 

ಹರಪನಹಳ್ಳಿ:ಇಂದಿನ ಯುವ ಸಮೂಹವು ಉತ್ತಮ ಶಿಕ್ಷಣ
ಪಡೆದು ಸರ್ಕಾರಿ ನೌಕರಿಗೆ ಆಸೆ ಪಡದೆ ಸ್ವಯಂ ಉದ್ಯೋಗ ಮಾಡುವ ಮೂಲಕ ಮುಖ್ಯ ವಾಹಿನಿಗೆ ಬರಬೇಕು ಎಂದು ಚಿತ್ರ ದುರ್ಗದ ಬೋವಿಗುರುಪೀಠದ ಇಮ್ಮ ಡಿಸಿದ್ದ ರಾಮೇಶ್ವರ ಸ್ವಾಮಿಯವರು ಭಾನುವಾರ ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ತಾಲ್ಲೂಕು ಬೋವಿ ಸಮಾಜದ ಸಮಾದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ದೇಶದಭವಿಷ್ಯ ಯುವಕರ ಮೇಲಿ ನಿಂತಿದ್ದು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ಯುವಕರು ಸೋಮರಿತನ ರೂಡಿಸಿಕೊಳ್ಳದೆ ಕ್ರೀಯಾಶೀಲರಾಗಿ ಜೀವನ ನೆಡೆಸಬೇಕು.
ಶಿಕ್ಷಣದ ಜೋತೆಗೆ ವಿನಯತೆ ಕಲಿಯಬೇಕು ತಂದೆ ತಾಯಿಗೆ ತಕ್ಕ ಮಗನಾಗಬೇಕು ಎಂದರು.


ಶಾಸಕ ಕರುಣಕರ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೋವಿ ಸಮಾಜದ ಬಂಧುಗಳು ಶ್ರಮ ಜೀವಿಗಳಾಗಿದ್ದು ಮನೆ ಕಟ್ಟುವ ಸೇತುವೆ ನಿರ್ಮಾಣಮಾಡುವ ಕೆಲಸ ಮಾಡುತ್ತಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ,  ಸಮಾಜದ  ಜೊತೆಗೆ ನಾನು ಸದಾ ಇರುತ್ತತೇನೆ  ಸಹಾಯ ಸಹಕಾರವನ್ನು ನೀಡುತ್ತತಾಸಮಾಜದೊಂದಿಗೆ  ಇರುತ್ತತೇನೆ ಎಂದು ಹೇಳಿದರು.

ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ
ಕೆಳವರ್ಗದ ಸಮುದಾಯದಲ್ಲಿ ಅನಕ್ಷರತೆಯ ಪ್ರಮಾಣ
ಹೆಚ್ಚಿರುವುದರಿಂದ ಅವರಿಗೆ ಶಿಕ್ಷಣದ ಅರಿವು ಮೂಡಿಸುವ ಅಗತ್ಯತೆ ಇದ್ದು
ಶಿಕ್ಷಣ ದಿಂದ ಸಾರ್ವಂಗಿಣ ಅಭಿವೃದ್ದಿ ಸಾಧ್ಯ ಅ ನಿಟ್ಟಿನಲ್ಲಿಬೋವಿ ಸಮಾಜದವರು
ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ ಎಂದರಲ್ಲದೆ ಸಾಕ್ರೆಟಿಸ್ ಒಬ್ಬ ಕಲ್ಲುಹೊಡೆಯುವವರ ಮಗನಾಗಿದ್ದರು ಶ್ರೇಷ್ಠ ಚಿತ್ರಕಾರ ಮೈಕಲೆಂಜಲೋ ರವರು ನನಗೆ ಕಲ್ಲುಹೊಡೆಯುವ ಮಹಿಳೆಯು ಕುಡಿಯಲು ಹಾಲು ಕೊಡುತ್ತಿದ್ದುದುರಿಂದ ಈ ರೀತಿಯ ಚಿತ್ರಗಳನ್ನು ಬಿಡಿಸಲು ಸಾದ್ಯವಾಯಿತು ಎಂದು ಹೇಳಿಕೊಂಡಿದ್ದರಂತೆ ಎಂದು ಹೇಳಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ ಪರಿಶ್ರಮದ ಜೀವನ ನೆಡೆಸುವ ಬೋವಿ ಸಮಾಜ ರಾಜಕೀಯ. ಶೈಕ್ಷಣಿಕ. ಆರ್ಥಿಕವಾಗಿ
ಮುಖ್ಯವಾಹಿನಿಗೆ ಬರಬೇಕು ಹೀಗಾಗಿ ಬೇಕಾದರೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು .


ಭೋವಿ ಸಮಾಜದ ರಾಜ್ಯ ಅಧ್ಯಕ್ಷ ಎಚ್. ಆನಂದಪ್ಪ, ಗಜೇಂದ್ರ ಗಡದ ಅರವಿಂದ್ ಎಸ್ ವಡ್ಡರ್, ಕೆಪಿಸಿಸಿ ವಕ್ತಾರೆ ಹಾಗೂ ಚುನಾವಣೆ ಉಸ್ತುವಾರಿಗಳಾದ ಕವಿತಾ ರೆಡ್ಡಿ, ಕರ್ನಾಟಕ ರೆಷ್ಮೆ ಉದ್ಯೆಮೆಗಳ ಮಾಜಿ ಅದ್ಯಕ್ಷ ಡಿ.ಬಸವರಾಜ, ಅಂಬೆಡ್ಕರ್ ಸಮಾಜದ
ತಾಲ್ಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ, ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಬಿ. ಅಂಜಿನಪ್ಪ ರವರುಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಹಾರಳ್ ಅಶೋಕ, ತಾಲ್ಲೂಕು ಭೋವಿ ಸಮಾಜದ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಅಂಜಿನಪ್ಪ, ಚಟ್ನಿಹಳ್ಳಿವಿ.ರಾಜಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅದ್ಯಕ್ಷ
ಕೆ.ಉಚ್ಚೆಂಗೆಪ್ಪ, ಕುರುಬ ಸಮಾಜದ ತಾಲ್ಲೂಕು ಅದ್ಯಕ್ಷ ಬಿ.
ಗೋನಿಬಸಪ್ಪ, ಕೋರಚ ಕೋರಮ ಸಮಾಜದ ತಾಲ್ಲೂಕು ಅದ್ಯಕ್ಷ ಅಶೋಕ ಚಲುವಾದಿ ಸಮಾಜದ ತಾಲ್ಲೂಕು ಅದ್ಯಕ್ಷ ಪರುಶುರಾಮ, ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಟಿ. ಮನೋಜ, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಶಿಕ್ಷಕ ವಿ. ಹನುಮಂತಪ್ಪ, ನೀಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮವ್ವ ರಾಮಪ್ಪ, ಹೊಸಕೋಟೆ
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ವಿರೇಶ ಮುಖಂಡರುಗಳಾದಆರ್. ಲೊಕೇಶ, ಕಣಿವಿಹಳ್ಳಿ ಮಂಜುನಾಥ, ನಂದಿಬೇವೂರು ಮಂಜುನಾಥ ವಿ. ಸಂಪತ್ ಸಂಪತ್ ಕುಮಾರ್, ನೀಲಗುಂದ ಮಹಾಂತೇಶ್, ಮಂಜುನಾಥ್, ಬಸವರಾಜ್,ಎಂ.ವಿ. ತಿಪ್ಪೇಶ, ಮಹಾತೇಂಶ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *