Vijayanagara Express

Kannada News Portal

ಭಾವೈಕ್ಯತೆಯ ಸಂಕೇತವೇ ಮೊಹರಂ – ಶಾಸಕ ಗಾಲಿ ಕರುಣಾಕರರೆಡ್ಡಿ

1 min read

 

 

ಭಾವೈಕ್ಯತೆಯ ಸಂಕೇತವೇ ಮೊಹರಂ – ಶಾಸಕ ಗಾಲಿ ಕರುಣಾಕರರೆಡ್ಡಿ

ಹರಪನಹಳ್ಳಿ : ಆ- 9 , ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವೇ ಮೋಹರಂ ಹಬ್ಬವಾಗಿದೆ ಎಂದು ಶಾಸಕ ಜಿ ಕರುಣಾಕರ ರೆಡ್ಡಿ ಅವರು ಮಂಗಳವಾರ ಹೇಳಿದರು.

ಪಟ್ಟಣದ ಹರಿಹರ ವೃತ್ತದ ಬಳಿ ಸೇರಿದ್ದ ಅಲ್ಲಾಹು ದೇವರ ( ಸ್ಥಳೀಯ ಭಾಷೆಯಲ್ಲಿ,ಹಲೇದೇವರ) ದರ್ಶನ ಪಡೆದು ಮಾತನಾಡಿದ ಶಾಸಕ ಗಾಲಿ ಕರುಣಾಕರ ರೆಡ್ಡಿಯವರು ಮೊಹರಂ ಹಬ್ಬವು ಆಚರಣೆಯ ಹನ್ನೊಂದನೇ ದಿನವಾದ ಇಂದು ಕೊನೆಯ ದಿನವಾಗಿದ್ದು ಇದನ್ನು ಮೊಹರಂ ಕೊನೆಯ ದಿನ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ದೇಶದಲ್ಲಿ ಯಾವುದೇ ಜಾತಿ ಧರ್ಮದ ಭೇದ ಭಾವವಿಲ್ಲದೆ ಸಡಗರ ಸಂಭ್ರಮದಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿಕೊಂಡು ಆಚರಿಸುವಂತ ಮತ್ತು ಭಾವೈಕ್ಯತೆಯನ್ನು ಸಾರುವಂಥ ಏಕೈಕ ಹಬ್ಬವೇ ಮೋಹರಂ ಹಬ್ಬವಾಗಿದೆ ಎಂದು ಹೇಳಿದರು.

ಹರಪನಹಳ್ಳಿಯಲ್ಲಿ ಒಟ್ಟು 12 ಮಸೀದಿಗಳಿದ್ದು ಇದಲ್ಲದೆ 12 ಉಕ್ಕುಡ 12 ಗರಡಿ ಮನೆಗಳು ಐತಿಹಾಸಿಕವಾದ ಹಿನ್ನೆಲೆಯನ್ನು ಹರಪನಹಳ್ಳಿಯಲ್ಲಿ ಹೊಂದಿದೆ ಈ ಎಲ್ಲಾ ಮಸೀದಿಗಳಿಂದಲೂ ಮೊಹರಂ ಪ್ರಯುಕ್ತ ಮಸೀದಿಗಳಲ್ಲಿ ಪೂಜೆ ಮಾಡಲಾಗಿದ್ದ ದೇವರುಗಳನ್ನು ಕೈಯಲ್ಲಿ ಹಿಡಿದುಕೊಂಡು ಯುವಕರು ಮಕ್ಕಳು ಮೆರವಣಿಗೆ ಮುಖಾಂತರ ಪಟ್ಟಣದ ಹರಿಹರ ವೃತ್ತದ ಬಳಿ ಇರುವ ಹಿರೇಕೆರೆ ಹತ್ತಿರ ಜಮಾವಣೆಕೊಳ್ಳುತ್ತಾರೆ ಇಲ್ಲಿ ಹೊತ್ತಿಗೆಗಳನ್ನು ಹೇಳಿ ಇಸ್ಲಾಂ ಪ್ರಕಾರ ಶಾಸ್ತ್ರೋಕ್ತ ವಾಗಿ ಪೂಜೆ ಪುನಸ್ಕಾರ ನೆರವೇರಿಸಿ ನಂತರ ಹಿರೇಕೆರೆ ಬಳಿ ಹೋಗಿ ದೇವರ ಸ್ನಾನ ಮಾಡಿಸಿ ಸೇರಿದ್ದ ಜನರೆಲ್ಲರಿಗೂ ನೈವೇದ್ಯವನ್ನು ವಿತರಿಸಿ ಅಲ್ಲಿಂದ ಜಾನಪದ ಶೈಲಿಯ ಉರ್ದು ಮತ್ತು ಕನ್ನಡದಲ್ಲಿ ಕವಾಲಿ ಪದಗಳನ್ನು ಹಾಡುತ್ತ ಮನೆಗೆ ತೆರಳವರು .
ನೆರೆದಿದ್ದ ಸಾವಿರಾರು ಹಿಂದೂ ಮುಸ್ಲಿಂ ಭಕ್ತರು ಭಾವೈಕ್ಯತೆಯ ಈ ಹಬ್ಬಕ್ಕೆ ಸಾಕ್ಷಿಯಾದರು .

ಹಬ್ಬದ ಹಿನ್ನೆಲೆ : ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊಹರಂ ಹಬ್ಬವನ್ನು ಮುಸ್ಲಿಂ ಸಮುದಾಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ, ಇಸ್ಲಾಂ ಪ್ರಕಾರ ಇದು ವರ್ಷದ ಮೊದಲ ತಿಂಗಳು. ಈ ತಿಂಗಳಲ್ಲಿ ಯೌಮೆ ಅಶುರಾ (ಮೊಹರಂನ ಹತ್ತನೇ ದಿನ) ಮತ್ತು ತಾಜಿಯಾವನ್ನು ವಿಸರ್ಜನೆ ಮಾಡುವ ಸಂಪ್ರದಾಯವಿದೆ.

ಮೊಹರಂ ಅಥವಾ ತಾಜಿಯಾ ವಿಸರ್ಜನೆ ಸಂಪ್ರದಾಯವನ್ನು ಹಲವು ವರ್ಷಗಳ ಹಿಂದೆ ಶಿಯಾ ಪಂಗಡಕ್ಕೆ ಸೇರಿದ ಚಕ್ರವರ್ತಿ ತೈಮೂರ್ ಲ್ಯಾಂಗ್ ಪ್ರಾರಂಭಿಸಿದನು. ಅಂದಿನಿಂದ ಭಾರತದ ಶಿಯಾ-ಸುನ್ನಿಗಳು ಇರಾಕ್‌ನ ಕರ್ಬಲಾ ಎಂಬ ಸ್ಥಳದಲ್ಲಿ ಇಮಾಮ್ ಹುಸೇನ್ ಅವರ ಸಮಾಧಿಯನ್ನು ಪುನರಾವರ್ತಿಸುವ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ.

ಭಾರತದಲ್ಲಿ ಮೊಹರಂ ಸಂಪ್ರದಾಯ
ತೈಮೂರ್‌ಗಿದ್ದ ಅನಾರೋಗ್ಯದ ಕಾರಣದಿಂದ ಈ ಸಂಪ್ರದಾಯವನ್ನು ಜೋರಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಅವರ ಅನಾರೋಗ್ಯದ ಹೊರತಾಗಿಯೂ ಅವರು ಚೀನಾ ಅಭಿಯಾನಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿದರು. ಆದರೆ 1405 ರ ಫೆಬ್ರವರಿ 19 ರಂದು ತೈಮೂರ್‌ ಖಜಾಕಿಸ್ಥಾನ್‌ ಬಳಿಯ ಬಟಾರಾರ್ನಲ್ಲಿ ನಿಧನರಾದರು. ಆದರೆ ತೈಮೂರ್ ನಿರ್ಗಮನದ ನಂತರವೂ ಭಾರತದಲ್ಲಿ ಈ ಸಂಪ್ರದಾಯ ಮುಂದುವರೆಯಿತು.

ಈ ದಿನವನ್ನು ಪ್ರಪಂಚದಾದ್ಯಂತ ಹೆಚ್ಚಿನ ಪ್ರಾಮುಖ್ಯತೆ, ಗೌರವ ಮತ್ತು ಸಂತೋಷದ ದಿನವೆಂದು ಪರಿಗಣಿಸಲಾಗಿದೆ. ತೈಮೂರ್‌ನ ಆಚರಣೆಗಳನ್ನು ನಂಬುವ ಮುಸ್ಲಿಮರು ಈ ದಿನದಂದು ಉಪವಾಸ-ಪ್ರಾರ್ಥನೆಯ ಜೊತೆಗೆ ತಾಜಿಗಳು-ಅಖಾಡಗಳನ್ನು ಹೂಳುವ ಮೂಲಕ ಅಥವಾ ತಂಪಾಗಿಸುವ ಮೂಲಕ ಶೋಕ ವ್ಯಕ್ತಪಡಿಸುತ್ತಾರೆ. ತೊಘಲಕ್-ತೈಮೂರ್ ರಾಜವಂಶದ ನಂತರ ಮೊಘಲರು ಸಹ ಈ ಸಂಪ್ರದಾಯವನ್ನು ಮುಂದುವರೆಸಿದರು.

ಹಸೇನ್, ಹುಸೇನ್ ರ ಮರಣದ ಪ್ರಯುಕ್ತ ಅವರ ನೆನಪಿಗಾಗಿ ಅವರ ಆತ್ಮಕ್ಕೆ ಶಾಂತಿ ಕೋರಿ ಆಚರಿಸುವ ಹಬ್ಬವೇ ಮೋಹರಂ ,ಹಿಂದೂ ಮತ್ತು ಮುಸ್ಲಿಂ ರು ಕೂಡಿ ಒಟ್ಟಾಗಿ ಭಾವೈಕ್ಯತೆಯನ್ನು ಸಾರುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಬೇಲ್ದಾರ್ ದಾದಾಪೀರ್ ಬಾಣಗೇರಿ.

ಮೊಹರಂ ಹಬ್ಬವು ಒಂದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿದೆ ಜಾನಪದ ಶೈಲಿಯ ಸೊಗಡು ಇರುವ ಮಹಮ್ಮದ್ ಪೈಗಂಬರ್ ರವರ ಕೊನೆಯ ಕೊಂಡಿ ಹಸೇನ್ ಹುಸೇನ್ ರವರ ಮರಣದ ಕಥೆ ಇದರಲ್ಲಿ ಹಡಗಿದೆ .ಹಿಂದೂ ಮುಸ್ಲಿಂ ರು ಹುಲಿ ವೇಷ ಹಾಕಿ ಕೊಳ್ಳಿ ಬುವ್ವಾ ವೇಷ ಹಾಕಿ ದೇವರಿಗೆ ಹರಕೆ ತೀರಿಸುವ ಪದ್ದತಿ ಹಿಂದಿನಿಂದಲೂ ಬಂದಿದೆ.

ಸಾವಳಗಿ ನಾಗರಾಜ್ ಕಲಾವಿದರು ಮೇಗಳಪೇಟೆ.

 

Leave a Reply

Your email address will not be published. Required fields are marked *