ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡೋಣ -ಎಂ.ಪಿ.ಲತಾಮಲ್ಲಿಕಾರ್ಜುನ
1 min read
ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡೋಣ -ಎಂ.ಪಿ.ಲತಾಮಲ್ಲಿಕಾರ್ಜುನ
ಹರಪನಹಳ್ಳಿ:ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡೋಣ ಎಂದು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆಶಿ ಯವರು ಹೇಳುತ್ತಾರೆ ಹಾಗಾಗಿ ನಾವು ಕೂಡ ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡೋಣ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾಮಲ್ಲಿಕಾರ್ಜುನ ಬುಧವಾರ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಹೇಳಿದರು.
ಪಟ್ಟಣದ ತಮ್ಮ ಜನ ಸಂಪರ್ಕ ಕಛೇರಿಯಲ್ಲಿ ಎಂಪಿ ಲತಾ ಮಲ್ಲಿಕಾರ್ಜುನ್ ರವರ ಅಭಿಮಾನಿಗಳು ಏರ್ಪಡಿಸಿದ್ದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನ್ಮದಿನೋತ್ಸವ ಆಚರಿಸಿಕೊಂಡ ಎಂಪಿ ಲತಾ ಮಲ್ಲಿಕಾರ್ಜುನ ರವರು ಮಾತನಾಡಿ ನನ್ನ ಅಭಿಮಾನಿಗಳು ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದಾಗಆರಂಭದಲ್ಲಿ ನಾನು ಬೇಡ ಎಂದು ಹೇಳಿದೆ ನಾನು ಯಾವಾಗಲೂ ಅದ್ಧೂರಿಯಾಗಿ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಚರಿಸಿಕೊಂಡಿಲ್ಲ ಹೀಗಾಗಿ ಈ ರೀತಿಯಾದ ಅದ್ದೂರಿಯಾದ ಕಾರ್ಯಕ್ರಮ ಬೇಡ ಅಂತ ಹೇಳಿದೆ ಆದರೆ ಕಾರ್ಯಕರ್ತರು ಒತ್ತಾಯ ಮಾಡಿ ಪ್ರೀತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಬೇಡ ಎನ್ನಬಾರದು ಎಂದು ಹಿತೈಷಿಗಳು ಹೇಳಿದ್ದಕ್ಕಾಗಿ ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡೆ ಎಂದರು .
ನನ್ನ ಸಹೋದರ ಎಂಪಿ ರವೀಂದ್ರರವರು ಕಾಲವಾದ ನಂತರ ನಾನು ಹರಪನಹಳ್ಳಿಯಲ್ಲಿ ರಾಜಕೀಯ ಸಂಘಟನೆಯನ್ನು ಆರಂಭಿಸಿದೆ ಎಂಪಿ ರವೀಂದ್ರ ರವರು ಸಂಘಟಿಸಿದ್ದ ಯುವ ಪಡೆಯು ಬಹಳಷ್ಟು ನಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯ ಮಾಡಿತು ಹಾಗಾಗಿ ರವೀಂದ್ರರವರ ಸಂಘಟಿಸಿದ ಸಂಘಟನೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಜನರ ಪ್ರೀತಿ-ವಿಶ್ವಾಸಕ್ಕೆ ನಾನು ಸದಾ ಆಭಾರಿಯಾಗಿರುವೆ ಇಂದು 56 ವರ್ಷ ತುಂಬಿ 57ನೇ ಜನ್ಮದಿನ ಆಗಿದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾಕ್ಕಾಗಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಹಾಗೂ ಇಲ್ಲಿ ಸೇರಿರುವ ಎಲ್ಲರಿಗೂ ನಾನು ಅಭಿನಂದಿಸುವೆ ಎಂದು ತಿಳಿಸಿದರು.
ಎಂಪಿ ರವೀಂದ್ರರವರು 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅವರ ಕನಸಾಗಿತ್ತು ಇಂದಿಗೂ ಅದು ಕನಸಾಗಿಯೇ ಉಳಿದಿದೆ ಸಕಾರಗೊಂಡಿಲ್ಲ ಮುಂದಿನ ದಿನಗಳಲ್ಲಿ ಆ ಯೋಜನೆಯ ಜಾರಿಗಾಗಿ ಹಲವಾಗಲು ಗರ್ಭಗುಡಿಯಿಂದ ಪಾದಯಾತ್ರೆ ಮಾಡುತ್ತೇವೆ ಎಂದರು.
ನನ್ನ ರಾಜಕೀಯ ಜೀವನ ಆರಂಭವಾದದ್ದು ಹಲವಾಗಲು ಗ್ರಾಮದಿಂದ ಹಲವಾಗಲಿನ ರುದ್ರಪ್ಪ ಅವರು ತಾಲೂಕು ಪಂಚಾಯಿತಿ ಚುನಾವಣೆಗೆ ನಿಂತಿದ್ದಾಗ ನನ್ನನ್ನು ಆಹ್ವಾನ ಮಾಡಿದ್ದರು ಆಗ ನಾನು ಹಲವಾಗಲು ಗ್ರಾಮದಲ್ಲಿ ಪಾಲುಗೊಂಡಿದ್ದೆ ಅಂದಿನಿಂದ ನನ್ನ ರಾಜಕೀಯ ಜೀವನ ಆರಂಭವಾಯಿತು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ ಎಂ ಮಲ್ಲಿಕಾರ್ಜುನ್ , ಎಂ ವಿ ಅಂಜಿನಪ್ಪ, ಗುಂಗಡಿ ನಾಗರಾಜ್,ಹಲುವಾಗಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ, ಕೂಸುಂಬಿ ಮಂಜುನಾಥ್, ಬಾಣದ ಅಂಜಿನಪ್ಪ, ಹೆಚ್.ಎಂ.ಗೌತಮ್, ಟಿ.ವೆಂಕಟೇಶ್, ಮತ್ತೂರು ಬಸವರಾಜ್, ಕಲ್ಲಹಳ್ಳಿ ಗೋಣೆಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ವಿಜಯಲಕ್ಷ್ಮೀ,ಕಂಚಿಕೇರಿ ನಿಜಗುಣ ಶಾನುಭೋಗ, ಕಂಚಿಕೇರಿ ಚಲುವಾದಿ ಜಗದೀಶ್, ಮಹಾಂತೇಶ್ ನಾಯ್ಕ್ , ತೆಲಿಗಿ ಉಮಾಕಾಂತ್, ಎನ್ ಟಿ ರತ್ನಮ್ಮ, ನೇತ್ರಾವತಿ, ಕೆ.ಎಂ ಬಸವರಾಜ್, ಉದಯಶಂಕರ್, ಮುಂತಾದವರು ಉಪಸ್ಥಿತರಿದ್ದರು