Vijayanagara Express

Kannada News Portal

ಅಮೃತ ಸ್ವಾತಂತ್ರ್ಯ ಮಹೋತ್ಸವ ನಡೆಯುವ ತಾಲೂಕು ಕ್ರೀಡಾಂಗಣವನ್ನು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ

1 min read

 

ಅಮೃತ ಸ್ವಾತಂತ್ರ್ಯ ಮಹೋತ್ಸವ ನಡೆಯುವ ತಾಲೂಕು ಕ್ರೀಡಾಂಗಣವನ್ನು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ

ವಿಶೇಷ ವರದಿ ಪಟ್ನಾಮದ ವೆಂಕಟೇಶ್ ಹರಪನಹಳ್ಳಿ.

 

ಹರಪನಹಳ್ಳಿ: 75ನೇ ವರ್ಷದ ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮ ನಡೆಯುವ ಕ್ರೀಡಾಂಗಣವನ್ನು ತಾಲೂಕು ಆಡಳಿತ ನಿರ್ಲಕ್ಷ ಮಾಡಿರುವ ಘಟನೆ ನಡೆದಿದೆ.

ಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ 75ನೇ ವರ್ಷದ ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.


ದೇಶಾದ್ಯಂತ ಸಡಗರ ಸಂಭ್ರಮದಿಂದ ಈ ಕಾರ್ಯಕ್ರಮವನ್ನು ನಡೆಸಲು ಸರ್ಕಾರವು ಆದೇಶವನ್ನು ಕೊಟ್ಟಿದೆ ಅಲ್ಲದೆ ಪ್ರತಿಸಾರಿಗಿಂತಲೂ ಈ ಬಾರಿ ವಿಶೇಷವಾದಂತಹ ಭಿನ್ನವಾದ ರೀತಿಯಲ್ಲಿ ಸ್ವಾತಂತ್ರ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸರ್ಕಾರವು ಆದೇಶವನ್ನು ನೀಡುವುದರ ಜೊತೆಗೆ ಹರ್ ಘರ್ ತಿರಂಗ ಎಂದು ಪ್ರತಿಯೊಬ್ಬರೂ ದೇಶದಲ್ಲಿ ಮನೆಮನೆಯ ಮೇಲೂ ಬಾವುಟವನ್ನು ಹಾರಿಸಬೇಕು ಎಂದು ಸರ್ಕಾರ ಹೇಳಿದೆ ಆದರೆ ಇದಕ್ಕೆ ಅಪವಾದ ಎಂಬುವಂತೆ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿರುವ 75ನೇ ವರ್ಷದ ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮಕ್ಕೆ ಕಾರ್ಯಕ್ರಮ ನಡೆಯುವ ಕ್ರೀಡಾಂಗಣದ ಕಾಂಪೌಂಡ್ ಗೆ ಮತ್ತು ಒಳಗೆ ಇರುವ ಗ್ಯಾಲರಿಗೂ ಸಹ ಸುಣ್ಣಬಣ್ಣವನ್ನು ಬಳಿಯದೆ ಕೇವಲ ಧ್ವಜದ ಕಟ್ಟೆಗೆ ಮಾತ್ರ ಬೇಕೋ ಬೇಡೋ ಎನ್ನುವಂತೆ ಬೇಜವಾಬ್ದಾರಿಯಿಂದ ಬಣ್ಣವನ್ನು ಬಳಿಯಲಾಗಿದೆ .

ಕ್ರೀಡಾಂಣಕ್ಕೆ ಸುಣ್ಣ ಬಣ್ಣವನ್ನು ಬಳಿದು ಎಷ್ಟು ದಿನಗಳಾಗಿತ್ತೊ, ಎಷ್ಟು ವರ್ಷಗಳಾಗಿತ್ತೊ ಆ ದೇವರೇ ಬಲ್ಲ ಎಂಬುದು ತಿಳಿಯದಾಗಿದೆ ಆದರೆ ಇದು ಸಂಭ್ರಮದ ರಾಷ್ಟ್ರೀಯ ಹಬ್ಬವಾದರೂ ಕೂಡ ಅಧಿಕಾರಿಗಳು ನಿರ್ಲಕ್ಷ ತೋರಿರುವುದನ್ನು ಎತ್ತಿ ತೋರಿಸುತ್ತದೆ .

ಅದು ಇರಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುವ ಧ್ವಜ ಸ್ತಂಭ ಮುರಿದು ಬೆಸುಗೆ ಹಾಕಿ ಬಹಳ ದಿನಗಳಿಂದ ಇದರಲ್ಲೇ ಧ್ವಜಾರೋಹಣವನ್ನು ಮಾಡುತ್ತಾ ಬಂದಿದ್ದಾರೆ ಈಗಲಾದರೂ ಇದನ್ನು ಬದಲಿಸಿ, ತೇಪೆ ಹಾಕಲ್ಪಟ್ಟಿರುವ ಧ್ವಜಸ್ಥಂಭವನ್ನು ಬದಲಿಸಬೇಕೆಂಬ ಕನಿಷ್ಠ ಪ್ರಜ್ಞೆಯನ್ನು ತಾಲೂಕು ಆಡಳಿತ ಕಳೆದುಕೊಂಡಂತಿದೆ .

ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕಾದಂತ ಈ ಸಂದರ್ಭದಲ್ಲಿ ಅದರಲ್ಲೂ 75 ವರ್ಷಗಳು ತುಂಬಿರುವ ಈ ಸಮಯದಲ್ಲಿ ರಾಷ್ಟ್ರಾದ್ಯಂತ ಸಡಗರ ಸಂಭ್ರಮದಿಂದ ಅಮೃತ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಲು ಸರ್ಕಾರಿ ಕಟ್ಟಡಗಳಿಗೆ ಸುಣ್ಣ ಬಣ್ಣಗಳನ್ನು ಬಳಿದು ಸಿದ್ಧತೆಯನ್ನು ಮಾಡಿಕೊಂಡು ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಲು ಮತ್ತು ಆ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತು ದೇಶದ ಜನರು ಕಾಯುತ್ತಿರುವಾಗ ಹರಪನಹಳ್ಳಿ ತಾಲೂಕು ಆಡಳಿತಕ್ಕೆ ಇಂತಹ ನಿರ್ಲಕ್ಷ್ಯ ಏಕೆ ಎಂಬುದು ಅರ್ಥವಾಗುತ್ತಿಲ್ಲ .

ಅದೇನೇ ಇರಲಿ ತಾಲೂಕ ಆಡಳಿತವು ತಾಲೂಕು ಆಡಳಿತದ ವತಿಯಿಂದ ಸ್ವತಂತ್ರ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲು ಆಯೋಜಿಸಿರುವ ಕ್ರೀಡಾಂಗಣದಲ್ಲಿ ಸುಣ್ಣ ಬಣ್ಣವನ್ನು ಬಳಿದು ಮದುವೆಯ ಮನೆಯಂತೆ ಸಿಂಗರಿಸಿ ಕಾಂಪೌಂಡ್ ಮತ್ತು ಗ್ಯಾಲರಿಗೆ ಬಣ್ಣವನ್ನು ಬಳಿದು ಹೂವಿನಿಂದ ಅಲಂಕಾರವನ್ನು ಮಾಡಿ ದೀಪ ಅಲಂಕಾರದಿಂದ ಕಂಗೊಳಿಸುವ ರೀತಿ ತಯಾರಿ ನಡೆಸಬೇಕಾಗಿತ್ತು ಅದು ಯಾವುದು ಇಲ್ಲಿ ಕಾಣದಿರುವುದು ಇವರ ನಿರ್ಲಕ್ಷವಲ್ಲದೆ ಮತ್ತಿನ್ನೇನು ಬೇರೆ ಹೇಳಲು ಸಾಧ್ಯವಿಲ್ಲದಂತಾಗಿದೆ ಎಂದು ಹೇಳಲಾಗುತ್ತದೆ.


75ನೇ ವರ್ಷದ ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮವನ್ನು ದೇಶದಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿರುವಾಗ ತಾಲೂಕು ಆಡಳಿತ ಈ ರೀತಿಯ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿಯಾಗಿದೆ.

ಕಲ್ಲಹಳ್ಳಿ ಗೋಣೆಪ್ಪ ರೈತ ಮುಖಂಡರು.

ಇದು ಶಾಸಕರ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ , ತಾಲೂಕು ಆಡಳಿತವು ಈ ರೀತಿ ನಿರ್ಲಕ್ಷ್ಯ ವಹಿಸಿರುವುದು ಯಥಾ ರಾಜ ತಥಾ ಪ್ರಜೆ ಎನ್ನುವಂತೆ ಆಗಿದೆ .ಆಳುವ ಜನಪ್ರತಿನಿಧಿಗಳು ಹೇಗಿರುತ್ತಾರೋ ಅಧಿಕಾರಿಗಳು ಅದನ್ನು ಅನುಸರಿಸುತ್ತಾರೆ ಎಂಬುದು ಇಲ್ಲಿ ಸಾಬೀತಾಗಿದೆ .ಅವರಿಗೆ ರಾಷ್ಟ್ರ ಪ್ರೇಮ ,ರಾಷ್ಟ್ರಭಕ್ತಿ ಈ ರೀತಿ ಸಭೆ ಸಮಾರಂಭಗಳು ಬೇಡವಾಗಿದೆ ಇದು ಅಮೃತ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮ ಆಚರಿಸಬೇಕು ಅದರಲ್ಲಿ ಯಾಂತ್ರಿಕವಾಗಿ ನಾವು ಪಾಲ್ಗೊಳ್ಳಬೇಕು ಅಷ್ಟೇ ಎಂಬುದು ಅವರ ಮನಸ್ಥಿತಿಯನ್ನು ಇಲ್ಲಿ ತೋರಿಸುತ್ತದೆ .

ಎಂ ಪಿ ವೀಣಾ ಮಹಾಂತೇಶ್ ಕೆಪಿಸಿಸಿ ಮಾದ್ಯಮ ವಿಶ್ಲೇಷಕಿ.

 

 

Leave a Reply

Your email address will not be published. Required fields are marked *