September 18, 2024

Vijayanagara Express

Kannada News Portal

ಶ್ರೀರಾಮುಲು ಕಾಂಗ್ರೆಸ್ ಟೀಕಿಸುವುದನ್ನು ಬಿಟ್ಟು ವಾಲ್ಮೀಕಿ ಸಮಾಜಕ್ಕೆ ಶೇ. 7.5 ಮೀಸಲಾತಿ ಕೊಡಿಸಲು ಪ್ರಯತ್ನಿಸಲಿ – ಶಾಸಕ ಎಲ್ ಭೀಮಾನಾಯ್ಕ್

1 min read

 

 

ಶ್ರೀರಾಮುಲು ಕಾಂಗ್ರೆಸ್ ಟೀಕಿಸುವುದನ್ನು ಬಿಟ್ಟು ವಾಲ್ಮೀಕಿ ಸಮಾಜಕ್ಕೆ ಶೇ. 7.5 ಮೀಸಲಾತಿ ಕೊಡಿಸಲು ಪ್ರಯತ್ನಿಸಲಿ – ಶಾಸಕ ಎಲ್ ಭೀಮಾನಾಯ್ಕ್

 


ಹರಪನಹಳ್ಳಿ: ಅ-1,ಶ್ರೀರಾಮುಲು ಕಾಂಗ್ರೆಸ್ ಟೀಕಿಸುವುದನ್ನು ಬಿಟ್ಟು ವಾಲ್ಮೀಕಿ ಸಮಾಜಕ್ಕೆ ಶೇ. 7.5 ಮೀಸಲಾತಿ ಕೊಡಿಸಲು ಪ್ರಯತ್ನಿಸಲಿ ಎಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಶಾಸಕ ಎಲ್ ಭೀಮಾನಾಯ್ಕ್ ರವರು ಸೋಮವಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮ ಪೂರ್ವಭಾವಿ ವೀಕ್ಷಣೆಗೆಂದು ದಾವಣಗೆರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸೇರಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸುದ್ದಿಗಾರರು ಶ್ರೀರಾಮುಲು ಅವರ ಮಾತನ್ನು ಪ್ರಾಸ್ಥಾಪಿಸಿ ಕಾಂಗ್ರೆಸ್ ಪಕ್ಷದಲ್ಲಿ ಈಗ ಹೋರಾಟಗಾರರು ಉಳಿದಿಲ್ಲ ಕೇವಲ ಉತ್ಸವ ಮೂರ್ತಿಗಳು ಮಾತ್ರ ಉಳಿದುಕೊಂಡಿದ್ದಾರೆ ಹಾಗಾಗಿಯೇ ಸಿದ್ದಾರಾಮಯ್ಯನವರ ಹೆಸರಿನಲ್ಲಿ ಸಿದ್ದರಾಮೋತ್ಸವವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಭೀಮಾನಾಯ್ಕ್ ರವರು ಮೊದಲು ಶ್ರೀರಾಮುಲು ರವರು ಎಸ್ ಟಿ ಜಾತಿಗೆ ಶೇ.7.5 ಮೀಸಲಾತಿಯನ್ನು ಕೊಡಿಸಲಿ ಆಮೇಲೆ ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕಿಸಲಿ ಎಂದು ಹೇಳಿದರು ಯಡಿಯೂರಪ್ಪನವರು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ತಾವು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ಮೀಸಲಾತಿ ಕೊಡಿಸುತ್ತೇವೆ ಎಂದಿದ್ದರು, ಶ್ರೀರಾಮುಲು ರವರು ವಾಲ್ಮೀಕಿ ಸಮಾಜಕ್ಕೆ ಶೇ.7.5 ಮೀಸಲಾತಿಯನ್ನು ಕೊಡಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಲ್ಲದೆ ಅದಕ್ಕೆ ಭರವಸೆಯನ್ನು ನಾನೇ ಕೊಡುತ್ತೇನೆ ಅದಕ್ಕೆ ಬೇಕಿದ್ದರೆ ನನ್ನ ರಕ್ತದಲ್ಲೇ ಬರೆದುಕೊಡುತ್ತೇನೆ ಎಂದಿದ್ದ ಶ್ರೀರಾಮುಲು ರವರು ಈಗ ಪ್ರಾಣ ಕೊಡಲು ಸಿದ್ಧವಾಗಿದ್ದೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ವಾಗಿದೆ ಎಂದರು.

ದಾವಣಗೆರೆ ನಗರದಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮವು 2023 ನೇ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸರಗೊಂಡಿರುವ ಮತದಾರರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ, ಪಕ್ಷದಲ್ಲಿ ಯಾರು ಸನ್ಯಾಸಿಗಳಲ್ಲ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಹೈಕಮಾಂಡ್ ಮುದ್ರೆ ಒತ್ತುತ್ತದೆ ಎಂದರು.
ಎಲ್ಲಾ ಸಮುದಾಯಗಳಿಗೂ ನ್ಯಾಯ ಸಿಗಬೇಕು ಅಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾದ್ಯ, ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ 7.5 ಮೀಸಲಾತಿ ಕೊಡಿಸುವುದಾಗಿ ಭರವಸೆಯನ್ನು ನೀಡಿದರು.

ಸಿದ್ದರಾಮಯ್ಯನವರು ಶೋಷಿತರ, ದಮನಿತರ ಪರವಾಗಿ ಕೆಲಸ ಮಾಡಿದವರು, ರಾಜ್ಯ ಕಂಡಂತ ಎರಡು ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಮೊದಲನೆಯವರು ದೇವರಾಜ ಅರಸ್ ಅವರನ್ನು ಬಿಟ್ಟರೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಐದು ವರ್ಷಗಳ ಕಾಲ ಅವಧಿ ಪೂರ್ಣಗೊಳಿಸಿ ಉತ್ತಮ ಆಡಳಿತ ನಡೆಸಿದ ಕೀರ್ತಿಯು ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು .

ಸಿದ್ದರಾಮಯ್ಯರವರನ್ನು, ಭಾಗ್ಯಗಳ ಸರದಾರ ಎಂದು ಕರೆಯಲಾಗುತ್ತದೆ ನೀಡಿದ ಅನೇಕ ಭಾಗ್ಯಗಳು ಜನ ಉಪಯೋಗಿಯಾಗಿವೆ ಸಿದ್ದರಾಮಯ್ಯನವರ 75 ನೇ ವಸಂತಗಳ ನೆನಪಿನಲ್ಲಿ ಅವರ ರಾಜಕೀಯ ಜೀವನದ ಕೊಡುಗೆಗಳನ್ನು ಸ್ಮರಿಸುವುದು ಮತ್ತು ಸಂವಿಧಾನ ಹಾಗೂ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಈ ಅಮೃತ ಮಹೋತ್ಸವ ಸಮಾರಂಭ ಸಾಕ್ಷಿಯಾಗಲಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿದೆಡೆಯಿಂದ 10 ಲಕ್ಷ ಜನರು ಸೇರುವ ನೀರಿಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಪ್ರೇಮಕುಮಾರ ಗೌಡ, ಮಾಜಿ ಜಿಪಂ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್ , ಲಾಟಿ ದಾದಪೀರ, ಉದ್ದಾರ ಗಣೇಶ್, ಭರತೇಶ್ ಜೋಗಿನ್ನರ, ಮುಖಂಡರಾದ ಮುತ್ತಿಗಿ ಜಂಬಣ್ಣ, ಚಿಕ್ಕೇರಿ ಬಸಪ್ಪ, ಪವಾಡಿ ಹನುಮಂತಪ್ಪ, ಎ.ಮೂಸಾಸಾಬ್, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪಯುವ ಘಟಕದ ಅಧ್ಯಕ್ಷ ಬಸವರಾಜ ಮತ್ತೂರು, ಬಾಣದ ಅಂಜಿನಪ್ಪ, ತೆಲಿಗಿ ಉಮಾಕಾಂತ, ಟಿ.ಮಂಜುನಾಥ, ಸಾಸ್ವಿಹಳ್ಳಿ ನಾಗರಾಜ, ಗಿಡ್ಡಳಿ ನಾಗರಾಜ್,ತಿಮ್ಮಣ್ಣ, ಬಸವರಾಜ, ನವರಂಗ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *