ಪಿ ಟಿ ಉಷಾ ಅನೇಕ ಕ್ರೀಡಾಪಟುಗಳಿಗೆ ಮಾದರಿ – ಶಾಸಕ ಗಾಲಿ ಕರುಣಾಕರ ರೆಡ್ಡಿ
1 min read
ಪಿ ಟಿ ಉಷಾ ಅನೇಕ ಕ್ರೀಡಾಪಟುಗಳಿಗೆ ಮಾದರಿ – ಶಾಸಕ ಗಾಲಿ ಕರುಣಾಕರ ರೆಡ್ಡಿ
ಹರಪನಹಳ್ಳಿ:ಆ-26, .ಪಿ ಟಿ ಉಷಾ ಅನೇಕ ಕ್ರೀಡಾಪಟುಗಳಿಗೆ ಮಾದರಿ ಎಂದು ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದ ಎಸ್‌ಯುಜೆಎಂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಎಸ್‌ಯುಜೆಎಂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗುಂಡು ಎಸೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಭಾರತದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 26 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ
ಕೀರ್ತಿಯನ್ನು ತಂದಿದ್ದರು.
ಇತ್ತೀಚೆಗೆ ನಮ್ಮ ದೇಶದಲ್ಲಿ ಕ್ರೀಡೆಗಳಲ್ಲಿ ಯಶಸ್ಸು ಕಾಣುತ್ತಿದ್ದಾರೆ ,ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಲಿವೆ ಈ ನಿಟ್ಟಿನಲ್ಲಿ
ಪಠ್ಯದ ಜತೆಗೆ ತಾವು ಸಹ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿರಿ,
ಕ್ರೀಡೆಯಲ್ಲಿ ಸೋಲು ಗೆಲವು ಸಹಜ, ಇದರಿಂದ ಸ್ನೇಹಮಯ ವಾತವರಣ ಮನಸ್ಥಾಪ ಮಾಡಿಕೊಳ್ಳಬಾರದು ಎಂದರು.
ಇತ್ತೀಚೆಗೆ ಥಾಯ್ ಲ್ಯಾಂಡ್ ನಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ತಾಲೂಕಿನ ಹಲುವಾಗಲು ಗ್ರಾಮದ ಮಲ್ಲಿಕಾರ್ಜುನ ರವರು ಭಾಗವಹಿಸಿ ಗೆಲುವು ಸಾಧಿಸಿದ್ದು ನಮಗೆ ಹೆಮ್ಮೆ ಪಡುವ ವಿಷಯ ಎಂದು ಹೇಳಿದರು.
ನಿಜವಾದ ಪ್ರತಿಭೆ ಇರುವವರಿಗೆ ಸರಿಯಾದ ನ್ಯಾಯವಾದ ತೀರ್ಪು ನೀಡಿರಿ ಎಂದು ಕಿವಿ ಮಾತು ಹೇಳಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಎಂದು ಶುಭಹಾರೈಸಿದರು.
ಪುರಸಭೆ ಅದ್ಯಕ್ಷ ಎಚ್.ಎಂ.ಅಶೋಕ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಭಾಗವಹಿಸಿ, ಯೋಗ ಸಹ ಆರೋಗ್ಯದಾಯಕ ಕ್ರೀಡೆಯಾಗಿದ್ದು, ಯೋಗವನ್ನು ನಮ್ಮ
ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ, ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಿ ಎಂದು ಹೇಳಿದರು.
ತಾಲೂಕಿನ ಚಿಗಟೇರಿ, ಹಲುವಾಗಲು, ಹರಪನಹಳ್ಳಿ, ಅರಸೀಕೆರೆ, ಮಾದಿಹಳ್ಳಿ,ಸಾಸ್ವಿಹಳ್ಳಿ, ಸಿಂಗ್ರಿಹಳ್ಳಿ, ಕಂಚಿಕೇರಿ, ಉಚ್ಚಂಗಿದುರ್ಗ, ಲಕ್ಷ್ಮೀಪುರ ಸೇರಿದಂತೆ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಡಾ.ಶಿವಕುಮಾರ ಬಿರಾದಾರ ಎಸ್‌ಯುಜೆಎಂ ಕಾಲೇಜು ಪ್ರಾಚಾರ್ಯ ಎಸ್.ಕೆ.ಹಿರೇಮಠ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸಿದ್ದಲಿಂಗನಗೌಡ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜನರ್ದನರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಚನ್ನಬಸಪ್ಪ,
ಪ್ರಾಚಾರ್ಯರರಾದ ಸಿ.ಬಿ.ವೆಂಕಟೇಶ್, ರಾಮಚಂದ್ರಪ್ಪ, ತೊಪ್ಪಲ ಹಾಲೇಶ್, ಆರ್.ಹೆಚ್.ಕಲ್ಯಾಣದವರ್, ಅರುಣಕುಮಾರಕೆ.ವಿ., ಬಿ.ಬಸವರಾಜ, ಎಂ.ಎಸ್.ಸುಭಾಸ್, ಮಾರೇರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.