ಮಳೆಯಿಂದಾಗಿ ರಸ್ತೆ ಹಾನಿ ದುರಸ್ತಿಗೊಳಿಸಿ ಅಪಾಯ ತಪ್ಪಿಸಲು ಮನವಿ
1 min read
ಮಳೆಯಿಂದಾಗಿ ರಸ್ತೆ ಹಾನಿ ದುರಸ್ತಿಗೊಳಿಸಿ ಅಪಾಯ ತಪ್ಪಿಸಲು ಮನವಿ
ಹರಪನಹಳ್ಳಿ: ತಾಲೂಕಿನ ಕಂಚಿಕೇರಿ ಗ್ರಾಮದ ಬಳಿ ಹಾದು ಹೋಗಿರುವ ರಾಜ್ಯ ಮುಖ್ಯ ಹೆದ್ದಾರಿ 25 ರಸ್ತೆಯು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಂಚಿಕೇರಿ ಕೆರೆ ಕೊಡಿ ಬಿದ್ದಿದ್ದು ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ನೀರು ಕೆರೆಗೆ ಹರಿದು ಬಂದಿದ್ದು ಬಿಡ್ಜ್ ತುಂಬಿ ರಸ್ತೆಯ ಮೇಲೆ ಹರಿದಿರುತ್ತದೆ ಪರಿಣಾಮವಾಗಿ ರಸ್ತೆಯ ತಡೆಗೋಡೆ ಪಕ್ಕದಲ್ಲಿ ರಸ್ತೆಕ್ಕಿತ್ತು ಹಾಳಾಗಿರುತ್ತದೆ .
ರಸ್ತೆ ಕಿತ್ತ ಜಾಗದಲ್ಲಿ ತಿರುಗುಗಳಿರುವುದರಿಂದ ಇದು ಅಪಾಯದ ವಲವಾಗಿರುತ್ತದೆ ಅದಲ್ಲದೆ ರಸ್ತೆಯ ಪಕ್ಕದಲ್ಲಿ ರಸ್ತೆ ಕಿತ್ತು ಹೋಗಿ ದೊಡ್ಡ ಗುಂಡಿಯು (ರಂದ್ರ )ಬಿದ್ದಿರುತ್ತದೆ ದಿನದ 24 ತಾಸು ಇಲ್ಲಿ ವಾಹನಗಳು ಸಂಚರಿಸುತ್ತವೆ ಈ ರಸ್ತೆಯು ದಾವಣಗೆರೆ ಜಿಲ್ಲಾ ಕೇಂದ್ರದಿಂದ ಹರಪನಹಳ್ಳಿ ತಾಲೂಕು ಕೇಂದ್ರಕ್ಕೆ ಸಂಚರಿಸುವ ಪ್ರಮುಖ ಮಾರ್ಗ ಇದಾಗಿರುತ್ತದೆ ಬೈಕ್ ಮತ್ತು ಕಾರ್ ಹಾಗೂ ಇತರೆ ವಾಹನಗಳ ಸವಾರರು ಆಯತಪ್ಪಿ ಗುಂಡಿಯಲ್ಲಿ ಬಿದ್ದು ಅಪಾಯವಾಗುವ ಸಾಧ್ಯತೆ ಇರುತ್ತದೆ ಆದುದರಿಂದ ಕೂಡಲೇ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ದುರಸ್ತಿಗೊಳಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ .
ಬಾರಿ ಮಳೆಯಿಂದಾಗಿ ಕೆರೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಿರುತ್ತದೆ ಹಾಗಾಗಿ ರಸ್ತೆ ಕಿತ್ತು ಹಾಳಾಗಿ ಹೋಗಿರುತ್ತದೆ ಆದುದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇದನ್ನು ಸರಿಪಡಿಸಿ ಅಪಾಯ ತಪ್ಪಿಸಲಿ.
ಸಾರ್ಥಿ ಅಣ್ಣಪ್ಪ ಯುವ ಮುಖಂಡರು ಕಂಚಿಕೇರಿ.
ರಸ್ತೆಯನ್ನು ದುರಸ್ತಿಗೊಳಿಸಲು ದಿನಗಳನ್ನು ದೂಡದೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ರಸ್ತೆಯನ್ನು ಸರಿಪಡಿಸಿ ವಾಹನ ಸವಾರರಿಗೆ ಆಗುವ ಅನಾಹುತಗಳನ್ನು ತಪ್ಪಿಸಬೇಕು .
ಪೂಜಾರ್ ಜಗದೀಶ್ ಯುವ ಮುಖಂಡರು ಕಂಚಿಕೇರಿ.
ಮಳೆಯಿಂದಾಗಿ ಕಂಚಿಕೇರಿ ಹತ್ತಿರ ರಸ್ತೆ ಕಿತ್ತು ಹಾಳಾಗಿ ಹೋಗಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ ಶೀಘ್ರದಲ್ಲೇ ಅದನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಸತೀಶ್ ಪಾಟೀಲ್ ಎನ್ .ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಹರಪನಹಳ್ಳಿ ಉಪವಿಭಾಗ.