December 7, 2024

Vijayanagara Express

Kannada News Portal

ಸೆಪ್ಟೆಂಬರ್ 24ರಂದು ಬೃಹತ್ ಉದ್ಯೋಗಮೇಳ

1 min read

 

ಸೆಪ್ಟೆಂಬರ್ 24ರಂದು ಬೃಹತ್ ಉದ್ಯೋಗಮೇಳ

 

ಹರಪನಹಳ್ಳಿ.ಸೆ-7, ಶಂಕರನಹಳ್ಳಿ ಡಾ.ಭೀಮಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸೆ.24 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್
ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಶಂಕರನಹಳ್ಳಿ ಡಾ.ಉಮೇಶ್ ಬಾಬು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ
ಅವರು ಡಾ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ತಾಲೂಕು ಕೂಡ ಹೊಂದಾಗಿದ್ದು, ತಾಲೂಕಿನಲ್ಲಿ
ಸಾಕಷ್ಟು ನಿರುದ್ಯೋಗ ಸಮಸ್ಯೆ ಇದ್ದು, ತಾಲೂಕಿನ ಬಹುತೇಕ
ಹಳ್ಳಿಗಳಿಗೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅನೇಕ ಯುವಕರು ವಿದ್ಯಾಭ್ಯಾಸ ಮುಗಿಸಿಕೊಂಡು ಮನೆಯಲ್ಲಿ ಖಾಲಿ ಕುಳಿತಿರುವುದನ್ನು ಗಮನಿಸಿ ಇದಕ್ಕೆ ಪರಿಹಾರ ಹುಡುಕುವ ಯೋಚನೆ ಮಾಡಿದಾಗ ಅಕ್ಷರ ಫೌಂಡೇಶನ್‌ರವರನ್ನು ಸಂಪರ್ಕಿಸಿ ಚರ್ಚಿಸಿದಾಗ ಇದಕ್ಕೆ ಅವರು ಸ್ಪಂದಿಸಿ
ನಿಮ್ಮ ತಾಲೂಕಿನಲ್ಲಿ ಉದ್ಯೋಗ ಮೇಳ ನೆಡಸಿಕೊಡಲಾಗುವುದೆಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಈ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
ಈ ಉದ್ಯೋಗ ಮೇಳಕ್ಕೆ ತಾಲೂಕಿನ ನಿರುದ್ಯೋಗ ಯುವಕ-
ಯುವತಿಯರು ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವಯೋಗಿ ಮಾತನಾಡಿ ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುತ್ತೇವೆಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದುವರೆಗೂ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಆಗುತ್ತಿಲ್ಲ.

ಹಾಗಾಗಿ ನಮ್ಮ ಪಕ್ಷದ ಅಡಿಯಲ್ಲಿ ಮುಖಂಡ
ಉಮೇಶ ಬಾಬು ಅವರು ಅಯೋಜಿಸಿರುವ ಈ ಉದ್ಯೋಗ ಮೇಳವು ತಾಲೂಕಿನ
ಯುವಕರಿಗೆ ಅನುಕೂಲವಾಗಲಿದೆ ಈ ಉದ್ಯೋಗ ಮೇಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಈಶ್ವರ ಖಂಡ್ರೆ ಜಿಲ್ಲೆಯ ಎಲ್ಲಾ ಹಾಲಿ ಮಾಜಿ ಶಾಸಕರುಗಳು ಬರುವ ನಿರೀಕ್ಷೆ ಇದ್ದು, ಅದೇ ರೀತಿ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಅಕಾಂಕ್ಷೆಗಳು ಮುಖಂಡರು ಭಾಗವಹಿಸಬೇಕೆಂದು ಕರೆ ನೀಡಿದರು.

ಕೆಪಿಸಿಸಿ ವಕ್ತಾರೆ ಹಾಗೂ ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕವಿತಾರೆಡ್ಡಿ ಮಾತನಾಡಿ ದೇಶದಲ್ಲಿ
ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದ್ದು, ಇದರ ಬಗ್ಗೆ ಗಮನ
ಹರಿಸದೇ ಕೇಂದ್ರ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ಅಗತ್ಯ ವಸ್ತುಗಳ ಮತ್ತು ಜಿಎಸ್‌ಟಿ ದರ ಏರಿಸುವುದೇ ಇವರ ಸಾಧನೆಯಾಗಿದೆ ಶೇ ಇಂದು ಶೇ 8.1ರಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಿದೆ. ಅಲ್ಲದೇ ತಾತ್ಕಾಲಿಕವಾಗಿ ಅಗ್ನಿಪಥ್ ಮೂಲಕ ಯುವಕರನ್ನು ನೇಮಕ ಮಾಡಿಕೊಂಡು ನಂತರ ಅವರನ್ನು ಸಂಪೂರ್ಣ ನಿರುದ್ಯೋಗಗಳನ್ನು ಮಾಡುವ ಉನ್ನಾರ ನಡೆದಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಮಾತನಾಡಿ ನಮ್ಮ ಪಕ್ಷದ ಅಡಿಯಲ್ಲಿ ಉಮೇಶ್ ಬಾಬುರವರು ಇಂತಹ ಉದ್ಯೋಗ ಮೇಳವನ್ನು ಆಯೋಜಿಸುವುದು ಶ್ಲಾಘನೀಯ ಇದರಿಂದ ತಾಲೂಕಿನ ಬಡ
ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಕ್ಷರ ಪೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕುಮಾರ್ ಉಪ್ಪಾರ್ ಮಾತನಾಡಿ ಈ ಉದ್ಯೋಗ ಮೇಳದಲ್ಲಿ 80 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದ್ದು, ಸುಮಾರು ೫೦೦೦ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲಿದ್ದು, ಈ ಮೇಳದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲೇ ಆದೇಶ ಪತ್ರ ನೀಡಲಾಗುವುದು. ಈ ಉದ್ಯೋಗ ಮೇಳಕ್ಕೆ ಭಾಗವಹಿಸುವ ಯುವಕರು ತಮ್ಮ ಮೂಲ ಅಂಕಪಟ್ಟಿ ಜೆರಾಕ್ಸ್ ಮತ್ತು
ಆಧಾರ್‌ಕಾರ್ಡ್ ಇತರೆ ದಾಖಲಾತಿಯೊಂದಿಗೆ ಆಗಮಿಸಬೇಕು. ಈ ಮೇಳಕ್ಕೆ ವಯೋಮಿತಿ 18 ರಿಂದ 33 ವರ್ಷಗಳು ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ರಮೇಶ್ ಮೊ.ನಂ: 7619197742, ಮಂಜು 8722021267, ಶಶಿ 9900239953, ಸಂಪರ್ಕಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ತಿಮ್ಮಪ್ಪ,ಶಂಕರನಹಳ್ಳಿಹನುಮಂತಪ್ಪ,ರಾಜು,ಅಲಮರಸೀಕೆರೆ ರಮೇಶ, ಮಂಜುನಾಥ, ಒಬಿಸಿ ತಾಲೂಕು ಘಟಕದ ಅಧ್ಯಕ್ಷ ಚಿರಸ್ಥಹಳ್ಳಿ ಬಸವರಾಜ್,ಸಾಸ್ವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ್ , ನಿಚ್ಚಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೆಂದ್ರಪ್ಪ, ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳ ಸದಸ್ಯರಾದ ದೇವಲನಾಯ್ಕ , ಉಮೇಶ್ ನಾಯ್ಕ, ತೇಜನಾಯ್ಕ್ ಪ್ರಸನ್ನಕುಮಾರ್ , ಪರಶುರಾಮಪ್ಪ , ತೊಗರಿಕಟ್ಟಿ ಶಿವು , ಶ್ರೀಕಾಂತ್ ,ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *