Vijayanagara Express

Kannada News Portal

ವಿದ್ಯಾರ್ಥಿಗಳಿಂದ ಹಿರೇಕೆರೆ ಸ್ವಚ್ಫತೆ

1 min read

 

ವಿದ್ಯಾರ್ಥಿಗಳಿಂದ ಹಿರೇಕೆರೆ ಸ್ವಚ್ಫತೆ

ಹರಪನಹಳ್ಳಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹಿರೇಕೆರೆ
ಏರಿಯ ಮೇಲೆ ವಿದ್ಯಾರ್ಥಿಗಳು ಹಿರೇಕೆರೆ ಸ್ವಚ್ಫತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಾರ್ವಜನಿಕರಿಗೆ ಕೂಡಲು ಹಾಕಿರುವ ಹಾಸನಗಳು ಸಹ ಕಾಣದಂತೆ ಬೆಳೆದಿದ್ದ ಗಿಡಗಂಟೆ,ಬಳ್ಳಾರಿ ಜಾಲಿ ಗಿಡಗಳು, ಖಾಲಿ ಗಾಜಿನ ಬಾಟಲುಗಳು, ಪ್ಲಾಸ್ಟಿಕ್ ನೀರಿನ ಬಾಟಲು, ಪ್ಲಾಸ್ಟಿಕ್ ಮುಂತಾದ ಅಪಾಯಕಾರಿ ಕೊಳೆಯಲಾರದ ಹಾಗೂ ಅನುಪಯಯುಕ್ತ ವಸ್ತುಗಳು ಎಲ್ಲೆಂದರಲ್ಲಿ ಬಿದ್ದು ಜನರು ಏರಿಯ ಮೇಲೆ ಹೊಗಲು ಆಗದಷ್ಟು ಮಾಲಿನ್ಯದಿಂದ ಕೂಡಿತ್ತು ಹಾಗಾಗಿ ಇದನ್ನು ಮನಗಂಡ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ ನವರ ಮುಂದಾಳತ್ವದಲ್ಲಿ ಪ್ರಕೃತಿ ಪಂಥ ತಂಡದ ಹಾಸ್ಟೇಲ್ ವಿದ್ಯಾರ್ಥಿಗಳು ಸ್ವಚ್ಛತೆಗೊಳಿಸಿದರು.

ವಿಷಯ ತಿಳಿದ ಪುರಸಭಾ ಅಧ್ಯಕ್ಷ ಎಚ್.ಅಶೋಕ, ಹಾಗೂ ಸಿಬ್ಬಂದಿ ಮುಖ್ಯಾಧಿಕಾರಿ ಶಿವಕುಮಾರ ಎರೆಗುಡಿ,ಆರೋಗ್ಯ ಪರಿವೀಕ್ಷಕ ಮಂಜುನಾಥ್, ಚಾಮರಾಜ ಮುಂತಾದವರು ಆಗಮಿಸಿ ಟ್ರಾಕ್ಟರ್ ಮೂಲಕ ಕಸ ಸಾಗಿಸಲು ವ್ಯವಸ್ಥೆ ಮಾಡಿದರು.


ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಧ್ಯಕ್ಷ ಅಶೋಕ ಹರಾಳ್ ರವರು ವಿದ್ಯಾರ್ಥಿಗಳ ಶ್ರಮದಾನದ ಕೆಲಸವು ಸಾರ್ಥಕವಾದದ್ದು ಇಂತಹ ಒಳ್ಳೆಯ ಕೆಲಸ ಮಾಡುವ ಮೂಲಕ ನಿಮ್ಮ ವಿದ್ಯಾರ್ಥಿ ಜೀವನದಲ್ಲಿಯೂ ಯಶ ಸಾಧಿಸಬೇಕೆಂದು ವಿದ್ಯಾರ್ಥಿಗಳಿಗೆ ಆಶಯದ ಮಾತುಗಳನ್ನು ಆಡಿದರು .

ಮುಖ್ಯಾಧಿಕಾರಿ ಶಿವಕುಮಾರ್ ರವರು ಮಾತನಾಡಿ ಪ್ರಕೃತಿಯನ್ನು ರಕ್ಷಿಸುವ ಮೂಲಕ ನಾವು ಹಾಗೂ ನಮ್ಮ ಮುಂದಿನ ಪೀಳಿಗೆಗೆ ಒಳಿತು ಮಾಡಬೇಕಾಗಿದೆ ಪ್ರಕೃತಿ ಸರಿ ಇದ್ದರೆ ಪರಿಸರ ಸಮತೋಲನ ಸಾಧ್ಯವೆಂದರು.

ಜೀವಜಲ ಟ್ರಸ್ಟ್ ನ ಅಧ್ಯಕ್ಷರಾದ ಹೇಮಣ್ಣ ಮೋರಿಗೇರಿ ಮಾತನಾಡಿ ಎಲ್ಲದನ್ನು ಸರ್ಕಾರವೇ ಮಾಡಲಿ ಎನ್ನುವುದಕ್ಕಿಂತ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಮೂಹ ಇಂತಹ ಜಾಗೃತಿ ಕಾರ್ಯಕೈಗೊಂಡಾಗ ಮಾತ್ರ ಯಶಸ್ವಿಯಾಗುತ್ತವೆ.ಅದರಲ್ಲೂ ಮುಖ್ಯವಾಗಿ ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಕಾರ್ಯದಲ್ಲಿ ತೊಡಗಿಕೊಂಡಾಗ ಸುಖೀ ಹಾಗೂ ಸುಂದರ ಸಮಾಜವಾಗಲು ಸಾಧ್ಯ, ಈ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದವರು ಪರ ಊರಿನಿಂದ ಓದಲು ಬಂದವರಾಗಿದ್ದಾರೆ ನಮ್ಮೂರಿನ ಜನರೂ ಸಹ ಇದರ ಬಗ್ಗೆ ಗಮನ ಹರಿಸ ಬೇಕಿದೆ. ಪಟ್ಟಣದ ಸಾರ್ವಜನಿಕರು, ಯುವಕರು ಇಂತಹ ಅರಿವು ಮತ್ತು ಪರಿಸರ ಪೂರಕ ಕೆಲಸಕ್ಕೆಸ್ವಯಂಪ್ರೇರಣೆಯಿಂದಪಾಲ್ಗೊಳ್ಳಬೇಕೆಂದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *