Vijayanagara Express

Kannada News Portal

ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕಾಗಿ ಪಾದಯಾತ್ರೆ – ಎಂ.ಪಿ.ವೀಣಾಮಹಾಂತೇಶ್

1 min read

 

 

ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕಾಗಿ ಪಾದಯಾತ್ರೆ – ಎಂ.ಪಿ.ವೀಣಾಮಹಾಂತೇಶ್


ಹರಪನಹಳ್ಳಿ.ಸೆ.15 ,ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕಾಗಿ ಸೆಪ್ಟೆಂಬರ್ 19 ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಬಳ್ಳಾರಿ ಜಿಲ್ಲೆಯ ಮಾದ್ಯಮ ವಿಶ್ಲೇಷಕಿ ಎಂ.ಪಿ.ವೀಣಾಮಹಾಂತೇಶ್ ಅವರು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಹಾಗೂ ತಾಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವ ಈ ಭಾಗದ ಜನತೆಯ ಬಹುದಿನಗಳ ಕನಸ್ಸಾಗಿದ್ದು, ಕಾಮಗಾರಿ ಆರಂಭವಾಗಿ ನೆನೆಗುದಿಗೆ ಬಿದ್ದಿದ್ದು ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ಯಿಂದ ಸೆ.19 ರಂದು ಬೃಹತ್ ಹೋರಾಟ
ಹಮ್ಮಿಕೊಳ್ಳಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.

ಸೆಪ್ಟೆಂಬರ್ 19 ರ ಬೆಳಿಗ್ಗೆ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್  ಕಾಮಗಾರಿ ಸ್ಥಳದಿಂದ  ಕೆರೆಗಳಿಗೆ ನೀರು ತುಂಬಿಸುವ ನಿಟ್ಟೂರಿನ ಜಾಕ್ ವೆಲ್ ಮತ್ತು ಪಂಪ್ ಹೌಸ್ ವರೆಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದರಲ್ಲದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ  ಅವರ ಸಚಿವ ಸಂಪುಟದಲ್ಲಿ ಎಂ.ಬಿ.ಪಾಟೀಲ್ ಅವರುಜಲಸಂಪನ್ಮೂಲ   ಸಚಿವರಾಗಿದ್ದರು ಹಾಗೂ ದಿ.ಎಂ.ಪಿ.ರವೀಂದ್ರ ಶಾಸಕರಾಗಿದ್ದ ಸಂದರ್ಭದಲ್ಲಿ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ 60 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗಳು ಮಂಜೂರಾತಿ ಪಡೆದಿದ್ದವು.

ಈ ಯೋಜನೆಗಳು 2020 ಕ್ಕೆ ಪೂರ್ಣಗೊಳ್ಳಬೇಕಿತ್ತು, ಆದರೆ ಈವರೆಗೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿವೆ, ಇದಕ್ಕೆ ಇಲ್ಲಿಯ ಶಾಸಕರ ನಿರ್ಲಕ್ಷ್ಯ ವೇ ಕಾರಣ ಎಂದು ಅವರು ದೂರಿದರು.

ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ 208 ಕೋಟಿ
ರು.ಗಳದ್ದು, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ 58 ಕೋಟಿ ರು.ಮಂಜೂರಾಗಿತ್ತು, ಇದು ಜನರ ತೆರಿಗೆ ಹಣವಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ಇಚ್ಚಾಶಕ್ತಿ ಈ ಸರ್ಕಾರಕ್ಕೆ ಇಲ್ಲವಾಗಿದೆ ಎಂದರು.

ಪಕ್ಕದ ಜಗಳೂರು ತಾಲ್ಲೂಕಿನ ಕೆರೆಗಳಿಗೆ ನದಿ ನೀರು ಹಾಗೂ
ಹಗರಿಬೊಮ್ಮನಹಳ್ಳಿ ಯ ಮಾಲ್ವಿ ಡ್ಯಾಂ ಗೆ ನದಿ ನೀರು ಹರಿಸಿ ತುಂಬಿರುವಾಗ ಹರಪನಹಳ್ಳಿ ತಾಲೂಕಿನ ಯೋಜನೆಗಳಿಗೆ ಮಾತ್ರ ಏಕೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರ ಮತ್ತು ರಾಜ್ಯ ಹಾಗೂ ಸ್ಥಳೀಯ ಶಾಸಕರು ಬಿಜೆಪಿಯವರು ಅಂದರೆ ದೇಶದಲ್ಲಿ ತ್ರಿಬಲ್ ಎಂಜಿನ್ ಸರ್ಕಾರಗಳು ಇದ್ದರೂ  ಸಹ ಇಂತಹ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಶಾಸಕರ ನಿರ್ಲಕ್ಷ್ಯತನದಿಂದ  ನೆನೆಗುದಿಗೆ ಬಿದ್ದಿವೆ ಎಂದು ಅವರು  ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಹರಿಹಾಯ್ದರು .

ಆದ್ದರಿಂದ ಈ ಯೋಜನೆಗಳ ಅನುಷ್ಠಾನಕ್ಕಾಗಿ ಹೋರಾಟ ಹಮ್ಮಿಕೊಂಡಿದ್ದು, ಹೋರಾಟಗಾರರು ಸೇರಿದಂತೆ
ಎಲ್ಲರೂ ಇದನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಈಗ ನಡೆದಿರುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ಥಾಪ ಮಾಡಲು ವಿಪಕ್ಷ ನಾಯಕರಿಗೆ ಮನವಿ ಸಲ್ಲಿಸುತ್ತೇವೆ ಡಿಸೆಂಬರ್ ಒಳಗೆ ಕೆರೆಗಳಿಗೆ ನದಿ ನೀರು ತುಂಬಿಸಬೇಕು ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನ ಯುವ ಮುಖಂಡ ವಕೀಲ ಸಿದ್ದಲಿಂಗನಗೌಡ ಮಾತನಾಡಿ ನದಿ ನೀರು ತುಂಬಿಸುವ ಯೋಜನೆಯಲ್ಲಿ ಅಲ್ಲಿಯೇ ಇದ್ದ ನದಿಯ ಮರಳನ್ನು ಬಳಸಿ ಸರ್ಕಾರಕ್ಕೆ
ಬಿಲ್ ಸಲ್ಲಿಸಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕಂಚಿಕೇರಿ ದಾನಮ್ಮನವರ ಡಾ. ಕೊಟ್ರೇಶಪ್ಪ, ಕೊಡಿ ತಾಂಡದ ಶೇಕ್ರನಾಯ್ಕ್ , ಗಾಯಿತ್ರಮ್ಮ, ದೇವರ ತಿಮ್ಲಾಪುರದ ಬಣಕಾರ ನಾಗರಾಜ್,ಮೂಡ್ಲಪ್ಪ, ತಳವಾರ ಕಾರ್ತಿಕ್, ದಾದಪೀರ್ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷೆ ಶೃತಿ ಭಾಗ್ಯ ಸೇರಿದಂತೆ ಇತರರು
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *