Vijayanagara Express

Kannada News Portal

ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟಣೆ

1 min read

 

 

ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟಣೆ

 

 

ಹರಪನಹಳ್ಳಿ : ಪಟ್ಟಣದ “ಜೀವಜಲ ಟ್ರಸ್ಟ್ ” ವತಿಯಿಂದ ಆಯೋಜಿಸಿದ್ದ ‘ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ’ ಪ್ರಬಂಧ ಸ್ಪರ್ಧೆಯಲ್ಲಿ ಮೈದೂರು ಗ್ರಾಮದ ಅಂಬ್ಲಿ ದೊಡ್ಡ ಭರಮಪ್ಪ ಮಹಾವಿದ್ಯಾಲಯದಲ್ಲಿ ಅಂತಿಮ ಬಿ ಎ ಓದುತ್ತಿರುವ ಪಿ.ದೀಪಿಕಾ ,  – ಪ್ರಥಮ, ಔಷಧ ಪದವೀಧರ
ಎನ್.ಸಾಹುಲ್ ಬಾಷ-ದ್ವಿತಿಯ, ಪಿಯುಸಿ ಓದುತ್ತಿರುವ
ಎಂ.ಕಿೃಷ್ಣಚಾರಿ, ತೆಲಿಗಿ-ತೃತಿಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.


ಅಲ್ಲದೇ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಹರಪನಹಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಸಗೋಡು ಗೀತ , ಬಿ.ಎಂ.ಮೀನಾಕ್ಷಿ ಹ.ಹಳ್ಳಿ, ಸಿ.ಬಸವರಾಜ ಉಚ್ಚಂಗಿದುರ್ಗದ ಎಸ್.ಎಂ.ಗಿರಿಜಮ್ಮ, ಉಜ್ಜಯಿನಿ ಜಗದ್ಗುರು ಮರುಳರಾದ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಕೆ.ಶಿಲ್ಪ ಇವರು ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಈ ಮೊದಲಿನ ಕೆರೆಗಳ ರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಪ್ರಸ್ತುತ ಪ್ರಬಂಧ ಸ್ಪರ್ಧೆಯ ಎರಡೂ ಬಹುಮಾನ ವಿತರಣೆ ಕಾರ್ಯಕ್ರಮಗಳನ್ನು ಈ ತಿಂಗಳ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಆಯ್ಕೆಯಾದ ಎಲ್ಲರಿಗೂ ಮಾಹಿತಿ ನೀಡಲಾಗುವುದು ಎಂದು
ಜೀವಜಲ ಟ್ರಸ್ಟ್” ನ ಅಧ್ಯಕ್ಷರಾದ ಹೇಮಪ್ಪ.ಬಿ.ಮೋರಿಗೇರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *