November 6, 2024

Vijayanagara Express

Kannada News Portal

ಮೇಗಳಪೇಟೆ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

1 min read

 

 

ಮೇಗಳಪೇಟೆ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

 

ಹರಪನಹಳ್ಳಿ: ಸೆ-18,ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಮೇಗಳಪೇಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಶಾಲೆಯ ಆವರಣದಲ್ಲಿ ನಡೆಸಲಾಯಿತು.

ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪಾರಸ್ ಮಲ್ಲ ಜೈನ್ ಮಾತನಾಡಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಅಧಿಕಾರಿಗಳಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗಾಗಿ ಈ ಶಾಲಾ ಶತಮಾನೋತ್ಸವ ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ನುಡಿದರು.

ಈ ಶತಮಾನೋತ್ಸವ ಕಾರ್ಯಕ್ರಮವನ್ನು ಮಾಡಲು ಅನೇಕ ಉಪಸಮಿತಿಗಳನ್ನು ರಚಿಸಲಾಗುವುದು ಎಲ್ಲಾ ಉಪಸಮಿತಿಗಳಿಗೂ ಐದರಿಂದ ಎಂಟು ಜನರ ಗುಂಪನ್ನು ರಚಿಸಲಾಗುವುದು ಅಲ್ಲದೆ ಒಂದೊಂದು ಆಯ್ದ ಜವಾಬ್ದಾರಿಯನ್ನು ನೀಡಲಾಗುವುದು ಆಯಾ ಜವಾಬ್ದಾರಿಯನ್ನು ಆಯ ಉಪ ಸಮಿತಿಗಳೇ ಸಂಪೂರ್ಣ ಮುತುವರ್ಜಿಯಿಂದ ನಿಭಾಯಿಸಬೇಕು. ಎಲ್ಲಾ ಹಳೆಯ ವಿದ್ಯಾರ್ಥಿಗಳು ಉಳಿದಂತಹ ಹಳೆಯ ಸ್ನೇಹಿತರು ವಿದ್ಯಾರ್ಥಿಗಳಿಗೆ ಸಂವಹನವನ್ನು ಮಾಡಿಕೊಂಡು ಸುದ್ದಿಯನ್ನು ಎಲ್ಲರಿಗೂ ಮುಟ್ಟಿಸುವಂತೆ ಮಾಡಿ ಅವರು ಇದರಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಹಳೆಯ ವಿದ್ಯಾರ್ಥಿಗಳೆಲ್ಲರನ್ನೂ ಕರೆತರುವಲ್ಲಿ ಯಶಸ್ವಿ ಆಗಬೇಕು ಎಂದು ಹೇಳಿದರು.

ಇಂದು ರಚನೆ ಮಾಡುವ ಎಲ್ಲಾ ಉಪಸಮಿತಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಶೀಘ್ರದಲ್ಲಿಯೇ ಈ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳನ್ನೂ ಸ್ಥಳೀಯ ಶಾಸಕರನ್ನು ಒಳಗೊಂಡಂತೆ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿಕೊಳ್ಳಬೇಕು ಆ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಲು ಶ್ರಮಿಸಬೇಕು ಎಂದು ಮನವಿ ಮಾಡಿದರು .

ಈ ಕಾರ್ಯಕ್ರಮವನ್ನು ಆಚರಿಸಲು ಶಾಲಾ ಆವರಣ ಮತ್ತು ಶಾಲೆಯ ಮುಂಭಾಗದ ರಸ್ತೆ ಸೂಕ್ತ ಎಂದು ಎಲ್ಲರೂ ಒಕ್ಕೂರಲಿನಿಂದ ತೀರ್ಮಾನವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಪುರಸಭೆಯ ಅಧ್ಯಕ್ಷ ಹಾರಳ್ ಹೆಚ್ ಎಂ ಅಶೋಕ ಮಾತನಾಡಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳು ಎಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಯಾರಾಗುವುದರ ಜೊತೆಗೆ ವಿವಿಧ ಸಮಿತಿಗಳಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳಬೇಕು .ಜೊತೆಗೆ ಪ್ರತಿಯೊಂದು ಸಮಿತಿಗಳಲ್ಲಿಯೂ ಶಾಲಾ ಸಿಬ್ಬಂದಿಯನ್ನು ಸಹ ಪಾಲ್ಗೊಳ್ಳುವಂತೆ ಮಾಡುವುದು ಸೂಕ್ತ ,ಕಾರ್ಯಕ್ರಮವನ್ನು ಒಂದೇ ದಿನದಲ್ಲಿ ಪೂರ್ತಿಗೊಳಿಸಲು ಸಾಧ್ಯವಿಲ್ಲ ಆದುದರಿಂದ ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ನಡೆಸುವುದು ಸೂಕ್ತ ಅದಕ್ಕೆ ನನ್ನ ವೈಯಕ್ತಿಕವಾಗಿ ಮತ್ತು ಪುರಸಭೆವತಿಯಿಂದ ಏನಾದರೂ ಸಹಾಯ ಸಹಕಾರ ಬೇಕಿದ್ದರೆ ಖಂಡಿತ ನಾನು ಅದನ್ನು ನೀಡುವುದರ ಜೊತೆಗೆ ಕಾರ್ಯಕ್ರಮ ಯಶಸ್ವಿ ಮಾಡಲು ನನ್ನ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕ ಪಾಟೀಲ್ ಬೆಟ್ಟನಗೌಡ , ಪುರಸಭೆ ಮಾಜಿ ಅಧ್ಯಕ್ಷ ಈಜಂತ್ಕರ್ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮುಖ್ಯೋಪಾಧ್ಯಾಯ ಸಲೀಂ ,ಉಳ್ಳಿಕೊಟ್ರಪ್ಪ ಮಾತನಾಡಿದರು .

ಈ ವೇಳೆ ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಘೋಷಿಸಿದರು ಅಲ್ಲದೆ ಗ್ರಾಮದ ಮುಖಂಡರುಗಳು ಹಿರಿಯರು ದೇಣಿಗೆ ನೀಡುವುದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ಈ ವೇಳೆ 243000 ರೂಪಾಯಿಗಳು ಸಂಗ್ರಹವಾಯಿತು ಹಳೆಯ ವಿದ್ಯಾರ್ಥಿಗಳಂತೂ ನಾ ಮುಂದು ತಾಮುಂದು ಎಂದು ಸ್ಪರ್ಧಾ ರೀತಿಯಲ್ಲಿ ದೇಣಿಗೆಯನ್ನು ಘೋಷಿಸಿದರೆ ಊರಿನ ಮುಖಂಡರು, ಹಿರಿಯರು ಅದೇ ಮಾದರಿಯಲ್ಲಿ ದೇಣಿಗೆಯನ್ನು ಘೋಷಿಸಿದರು. ಅಲ್ಲದೆ ಈ ಶತಮಾನೋತ್ಸವ ಕಾರ್ಯಕ್ರಮಕ್ಕೆಂದು ಮುಂಚಿತವಾಗಿ 86 ಸಾವಿರ ರೂಪಾಯಿಗಳನ್ನು ದೇಣಿಗೆಯನ್ನು ನೀಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಸಲೀಂ ರವರು ತಿಳಿಸಿದರು.

ಕಾರ್ಯಕ್ರಮಕ್ಕೆ ಅನೇಕ ಉಪಸಮಿತಿಗಳನ್ನು ರಚನೆ ಮಾಡಿದ್ದು ಅವುಗಳಲ್ಲಿ ಸಂಪನ್ಮೂಲ ಸಮಿತಿ,ವೇದಿಕೆ ಸಮಿತಿ ,ಆಹಾರ ಸಮಿತಿ ,ಪ್ರಚಾರ ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ,ಗಳನ್ನು ರಚನೆ ಮಾಡುವ ಮೂಲಕ ಈ ಸಮಿತಿಗಳು ಕಾರ್ಯಕ್ರಮಕ್ಕೆ ಸೀಮಿತ ಅಷ್ಟೇ ಎಂಬುದನ್ನು ಸಭೆಯಲ್ಲಿ ಸೇರಿದ್ದ ಸರ್ವ ಸದಸ್ಯರಲ್ಲಿ ಮನವರಿಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಭೀಮವ್ವ ನಿಟ್ಟೂರು ,ಪುರಸಭೆ ಸದಸ್ಯ ಜಾವಿದ್, ಎಸ್ ಡಿ ಎಂ ಸಿ ಅಧ್ಯಕ್ಷ ರೇಖಮ್ಮ, ಸದಸ್ಯ ಪಟ್ನಾಮದ ಬಸವರಾಜ್, ನಿವೃತ್ತ ಶಿಕ್ಷಕಿಯರಾದ ಲಲಿತಮ್ಮ,ಸಿದ್ದಮ್ಮ, ನಿವೃತ್ತ ಶಿಕ್ಷಕ ಶರಣಪ್ಪ, ಚಂದ್ರಶೇಖರಯ್ಯ, ಕೊಟ್ರಯ್ಯ, ಹಳೆಯ ವಿದ್ಯಾರ್ಥಿಗಳು ಸಾರ್ವಜನಿಕರು,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *