October 11, 2024

Vijayanagara Express

Kannada News Portal

ಜಾಕ್ ವೆಲ್ ನ ದಾರಿ ಬಂದ್ ಮಾಡಿ ಎಲ್ ಎನ್ ಟಿ ಕಂಪನಿಯವರ ಮೇಲೆ ದೂರು

1 min read

 

ಜಾಕ್ ವೆಲ್ ನ ದಾರಿ ಬಂದ್ ಮಾಡಿ ಎಲ್ ಎನ್ ಟಿ ಕಂಪನಿಯವರ ಮೇಲೆ ದೂರು

ಹರಪನಹಳ್ಳಿ: ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಸುಮಾರು ಐದು ವರ್ಷಗಳಿಂದ 60 ಕೆರೆಗೆ ನೀರು ತುಂಬುವ ಯೋಜನೆಯನ್ನು ಕೈಗೊಂಡಿದ್ದು ಕಂಪನಿಯು  ಜಾಕ್ ವೆಲ್ ಗೆ ಹೋಗುವ ರಸ್ತೆಯನ್ನು ನಾಗಪ್ಪ ಎಂಬ ವ್ಯಕ್ತಿಯ ಹೊಲದಲ್ಲಿ ರಸ್ತೆಯನ್ನು ನಿರ್ಮಿಸಿದ್ದು ಅವರಿಗೆ ಒಂದು ಎಕ್ಕರೆಗೆ ವಾರ್ಷಿಕವಾಗಿ ಇಂತಿಷ್ಟು ಹಣವನ್ನು ನೀಡುತ್ತಿದ್ದರು ಅದು ನಾಗಪ್ಪನವರಿಗೆ ಸಂಬಂಧ ಪಟ್ಟ ಹೊಲ ಗದ್ದೆ ಅಲ್ಲ ಅದು ನನಗೆ ಸಂಬಂಧಿಸಿದ ಹೊಲವಾಗಿರುತ್ತದೆ ಎಂದು ದಿನಾಂಕ ಸೆಪ್ಟೆಂಬರ್ 9, 2022 ರಂದು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಎ ಕೊಟ್ರೇಶ್ ಎಂಬ ವ್ಯಕ್ತಿಯು ಎಲ್ ಎನ್ ಟಿ ಕಂಪನಿಯವರು ನನ್ನ ಹೊಲವನ್ನು ಒತ್ತುವರಿ ನನ್ನ ಅನುಮತಿ ಪಡೆಯದೆ ಹಾಗೂ ನನಗೆ ಯಾವುದೇ ಪರಿಹಾರ ಅಥವಾ ಬಾಡಿಗೆ ಬಾಬ್ತ ನ್ನು ನೀಡಿದೆ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿರುತ್ತಾರೆ.

ಹಾಗೂ ಕಂಪನಿಗೆ ಹೋಗುವ ದಾರಿಗೆ ಮುಳ್ಳನ್ನು ಹಾಕಿ ಕಂಪನಿಯ ವ್ಯವಸ್ಥಾಪಕರಾದ ಸುಬ್ಬರಾಯಡು ರವರ ಮೇಲೆ ಹಲುವಾಗಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಘಟನೆಯ ವಿವರ: ಈ ಹಿಂದೆ ಈಗ ಪ್ರಸ್ತುತ ರಸ್ತೆ ಇರುವ ಜಾಗವು ನಾಗಪ್ಪನವರಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತು ನಂತರ ಇತ್ತೀಚೆಗೆ ಅಳತೆ ಮಾಡಿಸಿದಾಗ ಆತನಿಗೆ ಸಂಬಂಧಪಟ್ಟ ಭೂಮಿ ಅಲ್ಲ ಅದು ಕೊಟ್ರೇಶಪ್ಪನಿಗೆ ಸಂಬಂಧಿಸಿದ ಭೂಮಿಯೆಂದು ಭೂ ಮಾಪಕರು ಅಳತೆಯನ್ನು ಮಾಡಿ ಮೇರೆಗಳನ್ನು ಗುರುತಿಸಿರುತ್ತಾರೆ ಈ ಕಾರಣದಿಂದ ಕೊಟ್ರೇಶಪ್ಪನವರು ಕಳೆದ ಐದು ವರ್ಷಗಳಿಂದ ನನ್ನ ಜಮೀನಿನಲ್ಲಿ ರಸ್ತೆಯನ್ನು ಮಾಡಿಕೊಂಡಿದ್ದೀರಿ ಅದರ ಬಾಡಿಗೆಯನ್ನು ನಾಗಪ್ಪ ಎಂಬುವರಿಗೆ ನೀಡಿದ್ದೀರಿ ಆ ಎಲ್ಲಾ ಹಣವು ನನಗೆ ಸೇರಬೇಕು ಎಂದು ಆರೋಪಿಸಿ ಎಲ್ ಎನ್ ಟಿ ಕಂಪನಿಯವರು ಜಾಕ್ ವೆಲ್ ಹತ್ತಿರ ಹೋಗಲು ಮಾಡಿಕೊಂಡಿರುವ ರಸ್ತೆಗೆ ಮುಳ್ಳಿನ ಬೇಲಿಯನ್ನು ಹಚ್ಚಿ ರಸ್ತೆಯನ್ನು ಬಂದ್ ಮಾಡಿರುತ್ತಾರೆ ಅಲ್ಲದೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ.
ಸ್ಥಳಕ್ಕೆ ಭೇಟಿ ನೀಡಿದ ಬೃಹತ್ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ್ ರವರು ಪರಿಶೀಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಪಟ್ಟಿದ್ದಾರೆ ಇನ್ನೊಂದು ಬಾರಿ ಅಳತೆಯನ್ನು ಮಾಡುವವರೆಗೂ ನಮಗೆ ರಸ್ತೆಯ ಉಪಯೋಗಿಸಲು ಅವಕಾಶವನ್ನು ಕೊಡಿ ಎಂದು ಕೊಟ್ರೇಶ್ ಪ್ಪನವರಿಗೆ ಮನವಿ ಮಾಡಿದ್ದಾರೆ ಅಲ್ಲದೆ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡು ಬಾಡಿಗೆಯನ್ನು ಕೊಟ್ರೆಶಪ್ಪನವರಿಗೆ ಮರಳಿಸುವಂತೆ ನಾಗಪ್ಪನವರಿಗೆ ತಿಳಿಸಿರುತ್ತಾರೆ .

ಇದನ್ನು ನಾಗಪ್ಪನವರು ಹಣವನ್ನು ಮರಳಿ ಕೊಡಲು ಒಪ್ಪಿಕೊಳ್ಳುತ್ತಿಲ್ಲ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ್ ರವರು ಪತ್ರಿಕೆಗೆ ತಿಳಿಸಿದ್ದಾರೆ.

 

ರಸ್ತೆಯು ನನ್ನ ಜಮೀನಿನಲ್ಲಿ ಹಾದು ಹೋಗಿರುತ್ತದೆ ಆದರೆ ಹಣವು ಬೇರೆಯವರಿಗೆ ಸಂದಾಯವಾಗಿರುತ್ತದೆ ಆದುದರಿಂದ ನಾನು ಕಂಪನಿಯವರ ಮೇಲೆ ಪ್ರಕರಣವನ್ನು ದಾಖಲಿಸಿರುತ್ತೇನೆ. ನನಗೆ ನಾಲ್ಕು ವರ್ಷಗಳ ಕಾಲ ನನ್ನ ಜಮೀನಿನಲ್ಲಿ ರಸ್ತೆ ನಿರ್ಮಿಸಿಕೊಂಡಿದ್ದಾರೆ ಬಾಡಿಗೆಯನ್ನು ನೀಡಿದರೆ ಮಾತ್ರ ಮುಂದೆ ನಾನು ದಾರಿಗೆ ಜಮೀನನ್ನು ನೀಡುತ್ತೇನೆ ಇಲ್ಲವಾದಲ್ಲಿ ನಾನು ರಸ್ತೆಯನ್ನು ಬಂದ್ ಮಾಡುತ್ತೇನೆ .ಕೊಟ್ರೇಶಪ್ಪ ನಿಟ್ಟೂರ್, ಜಾಕ್ ವೆಲ್ ಗೆ ಹೋಗುವ ರಸ್ತೆಯನ್ನು ಬಂದ್ ಮಾಡಿರುವ ರೈತ.


ಶೀಘ್ರದಲ್ಲಿಯೇ ಮತ್ತೊಂದು ಬಾರಿ ಹಳೇತ ಕಾರ್ಯವನ್ನು ರೈತರು ಮಾಡಿಸಿಕೊಳ್ಳುವಂತೆ ಸೂಚಿಸಿ ಸಂಬಂಧಿಸಿದವರಿಗೆ ಬಾಡಿಗೆಯನ್ನು ಸರಿಯಾಗಿ ತಲುಪಿಸಿ ಸಮಸ್ಯೆಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತೇನೆ.

ಬಸವರಾಜ್ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಬೃಹತ್ ನೀರಾವರಿ ಇಲಾಖೆ ದಾವಣಗೆರೆ ವಿಭಾಗ

Leave a Reply

Your email address will not be published. Required fields are marked *