Vijayanagara Express

Kannada News Portal

ಕೈ ಕದತಟ್ಟಿದ ಕೊಟ್ರೇಶ್ ಕೈ,ಹಿಡಿಯುವರೇ….ಹೈಕಮಾಂಡ್ ?

1 min read

 

 

 

ವಿಶೇಷ ವರದಿ ಪಟ್ನಾಮದ ವೆಂಕಟೇಶ್ ತಿಮ್ಮಪ್ಪ ಹರಪನಹಳ್ಳಿ

 

ಕೈ ಕದತಟ್ಟಿದ ಕೊಟ್ರೇಶ್ ಕೈ,ಹಿಡಿಯುವರೇ….ಹೈಕಮಾಂಡ್ ?

 

ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್ ಕೊಟ್ರೇಶ್ ಯಾರಿಗೆ ಗೊತ್ತಿಲ್ಲ ಹೇಳಿ ಇವರ ಹೆಸರು ,ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಮಾತಾಗಿದೆ ಇವರು ಸಹ ಈಗ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿದ್ದಾರೆ.

ಯಾರು ಈ ಎನ್ . ಕೊಟ್ರೇಶ್

ಎನ್ ಕೊಟ್ರೇಶ್ ರವರು ಅರಸೀಕೆರೆ ಗ್ರಾಮದವರಾಗಿದ್ದು ಎಂ ಎಸ್ಸಿ (AG) ಪದವೀಧರ,ಆರಂಭದಲ್ಲಿ ಇವರೊಬ್ಬ ಕೃಷಿಕ ,ವ್ಯಾಪಾರಿಯಾಗಿದ್ದು ಬೀಜ ಉತ್ಪಾದನಾ ಘಟಕಗಳನ್ನು ತೆರೆದು ರೈತರಿಂದ ಮೆಣಸಿನ ಬೀಜಗಳು ಟೊಮೇಟೊ ಬೀಜಗಳು ಇತ್ಯಾದಿ ಸೀಡ್ಸ್ ಗಳನ್ನು ಮಾಡಿಸಿ, ದೇಶ ವಿದೇಶಗಳಲ್ಲಿ ಬೇರೆ ಬೇರೆ ಕಂಪನಿಗಳಿಗೆ ಬೀಜಗಳನ್ನು ಮಾರಾಟ ಮಾಡಿ ಅದರಿಂದ ಸಾಕಷ್ಟು ಸಂಪಾದನೆಯನ್ನು ಮಾಡಿ ವ್ಯಾಪಾರದಿಂದ ರಾಜಕೀಯದೆಡೆಗೆ ಮುಖ ಮಾಡಿದರು.

ಆರಂಭದಲ್ಲಿ ಇವರು ಬಿಜೆಪಿ ಪಕ್ಷದಿಂದ ತಾಲೂಕು ಪಂಚಾಯಿತಿಗೆ ಸ್ಪರ್ಧಿಸಿ ಅರಸಿಕೆರೆ ಕ್ಷೇತ್ರದಿಂದ ವಿಜಯಿಯಾಗಿದ್ದರು ತದನಂತರ 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಬಿಎಸ್ಆರ್ ಪಕ್ಷದ ಆಕಾಂಕ್ಷಿಯಾಗಿದ್ದರು ಬಿಎಸ್ಆರ್ ಪಕ್ಷದ ಟಿಕೆಟ್ ಕೈತಪ್ಪಿ ಸಿರಾಜ್ ಶೇಖ್ ಕೈ ಸೇರಿದ್ದರಿಂದ ಬೇಸತ್ತು ಯಡಿಯೂರಪ್ಪನವರು ಸ್ಥಾಪಿಸಿದ್ದ ಕೆಜೆಪಿ ಪಕ್ಷದ ತೆಂಗಿನಕಾಯಿಯನ್ನು ಹಿಡಿದಿದ್ದರು ಅಲ್ಲಿ 27 ಸಾವಿರ ಮತಗಳನ್ನು ಪಡೆದು ಸೋಲನ್ನು ಕಂಡಿದ್ದರು ಇದಾದ ನಂತರ ಯಡಿಯೂರಪ್ಪನವರು ಮರಳಿ ಬಿಜೆಪಿಯಲ್ಲಿ ಕೆಜೆಪಿಯನ್ನು ಸೇರ್ಪಡೆಗೊಳಿಸಿದ್ದರಿಂದ ಎನ್ ಕೊಟ್ರೇಶ್ ರವರು ಸಹ ಮರಳಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು 2018 ರ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿಯಾಗಿದ್ದರು ಜಿ ಕರುಣಾಕರ ರೆಡ್ಡಿ ಮತ್ತು ಎನ್ ಕೊಟ್ರೇಶ್ ರವರ ನಡುವೆ ನಡೆದ ತೀವ್ರತರನಾದ ಪೈಪೋಟಿಯಿಂದಾಗಿ ಕೊನೆಗಳಿಗೆ ರಾಜಕೀಯ ಲೆಕ್ಕಾಚಾರ ಬುಡ ಮೇಲಾಗಿ ಕರುಣಾಕರ ರೆಡ್ಡಿಗೆ ಬಿಜೆಪಿ ಟಿಕೆಟ್ ದಕ್ಕಿತ್ತು.

ಇದರಿಂದ ರೊಚ್ಚಿಗೆದ್ದ ಎನ್ ಕೊಟ್ರೇಶ್ ರವರು ಜೆಡಿಎಸ್ ಪಕ್ಷದ ಮೊರೆ ಹೋಗಿದ್ದರು ಜೆಡಿಎಸ್ ಪಕ್ಷದಿಂದ 2018 ರ ಚುನಾವಣೆಯನ್ನು ಎದುರಿಸಿದ ಕೊಟ್ರೇಶ್ 38,000 ಮತಗಳನ್ನು ಪಡೆದು ಮತ್ತೊಮ್ಮೆ ಸೋಲಿನ ಪ್ರಪಾತಕ್ಕೆ ಕುಸಿದಿದ್ದರು .

ಹೀಗೆ ಕೊಟ್ರೇಶ್ ರವರು ಪ್ರತೀ ಬಾರಿಯೂ ಒಂದೊಂದು ಪಕ್ಷ ದಲ್ಲಿ ದುಡಿದು ಮತ್ತೊಂದು ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸರಣಿ ಸೋಲಿಗೆ ಸಾಕ್ಷಿಯಾಗಿದ್ದಾರೆ ಹಾಗಾಗಿಯೇ
ಬಿಎಸ್ಆರ್ ಪಕ್ಷದಲ್ಲಿ ಗುರುತಿಸಿಕೊಂಡು ಕೆಜೆಪಿ ಯಿಂದ, ಬಿಜೆಪಿಯಲ್ಲಿ ಗುರುತಿಸಿಕೊಂಡು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದರು ಈ ಬಾರಿ ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದಾರೆ ಒಂದು ವೇಳೆ ಕೊಟ್ರೇಶ್ ಅವರಿಗೆ ಟಿಕೆಟ್ ಸಿಗದೇ ಹೋದರೆ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೋ ಕಾದುನೋಡಬೇಕಿದೆ.

ನಂತರ 2018-19 ,2019- 20 ,2020-21 ಕರೋನಾದ ಎರಡು ವರ್ಷಗಳು ಸೇರಿ 2022ರ ಜೂನ್, ಜುಲೈ, ತಿಂಗಳವರೆಗೂ ಹರಪನಹಳ್ಳಿ ತಾಲೂಕಿನ ಯಾವುದೇ ರಾಜಕೀಯ ಪಕ್ಷಗಳ ಜೊತೆಗೂ ನೆಂಟನ್ನು ಹೊಂದದೆ ರಾಜಕೀಯದಿಂದಲೂ ಕ್ಷೇತ್ರದಿಂದಲೂ ದೂರ ಇದ್ದರು.

 

2022 ರ ಆಗಸ್ಟ್ ತಿಂಗಳಲ್ಲಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು ಇದಾದ ನಂತರ ಒಂದು ತಿಂಗಳ ಅವಧಿಯಲ್ಲಿ ಮತ್ತೆ ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಸುದ್ದಿಗಳನ್ನು ಹರಿಡುತ್ತಾ ಮಾಜಿ ಸಚಿವರಾದ ಶಾಮನೂರು ಮಲ್ಲಿಕಾರ್ಜುನರವರನ್ನು ಓಲೈಸಿ ಅವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಹೀಗೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಅಭ್ಯಾಸವಿರುವ ಎನ್ ಕೊಟ್ರೇಶ್ ರವರು ಬದ್ದತೆ ಮತ್ತು ಪಕ್ಷ ನಿಷ್ಠೆ ಇಲ್ಲದಿರುವುದೆ ಪದೇ ಪದೇ ಪಕ್ಷ ಬದಲಿಸಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ಯಾವ ಲೆಕ್ಕಚಾರವಿಟ್ಟುಕೊಂಡು ನನಗೆ ಕಾಂಗ್ರೆಸ್ ನಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ನೀಡುವರು ಎಂಬುದನ್ನು ಅಂದುಕೊಂಡಿರುವರೊ ಏನೋ ಗೊತ್ತಾಗುತ್ತಿಲ್ಲ ಇದನ್ನು ಇಚ್ಛಾಶಕ್ತಿ ಕೊರತೆಯ ದಿವಾಳಿತನ ಎನ್ನಬಹುದೊ ಇಲ್ಲವೆ ರಾಜಕೀಯ ವಿಶ್ಲೇಷಣೆಯ ಮೂರ್ಖತನದ ಪರಮಾವಧಿ ಎಂಬುದಾಗಿ ಕರೆಯಬಹುದೊ ಎನ್ನುವುದು ತಿಳಿಯದಾಗಿದೆ.

2018 ರ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಿ ನಾಪತ್ತೆ ಯಾಗಿದ್ದ ಕೊಟ್ರೇಶ್ ರವರು ಇದೀಗ ದಿಡೀರನೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರೆದುವರಿಗೆ ಬಂದು ನಾನು ಕ್ಷೇತ್ರದಲ್ಲಿ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ ಕ್ಷೇತ್ರದ ಜನರನ್ನು ನಾನು ಮರೆತಿಲ್ಲ ಕಷ್ಟ ಸುಖಗಳಿಗೆ ಸ್ಪಂದಿಸಿ ನನ್ನ ಬಳಿ ಬಂದ ಅನೇಕರಿಗೆ ಸಹಾಯ ಹಸ್ತ ನೀಡಿದ್ದೇನೆ ಎಂದು ಹೇಳುತ್ತಿದ್ದಾರಂತೆ ಅದು ಯಾವ ಪುಣ್ಯಾತ್ಮರು ಇವರಿಂದ ಸಹಾಯ ಪಡೆದುಕೊಂಡರೊ ದೇವರೇ ಬಲ್ಲ ಕರೋನಾದ ಸಮಯದಲ್ಲಂತೂ ಇತ್ತ ಕಡೆ ತಲೆ ಹಾಕೊದು ಇರಲಿ ಕ್ಷೇತ್ರದ ಬಗ್ಗೆ ಯೋಚನೆನೂ ಮಾಡಿಲ್ಲ ಎಂದು ಜನರು ಮಾತಾಡ್ಕೊಳ್ತಾ ಇದ್ದಾರೆ ಎನ್ನಲಾಗುತ್ತಿದೆ .

ಹೋಗ್ಲಿ ಬಿಡಿ, ಕರೋನ ಬಂತು ಹೋಯಿತು 2018 ರಿಂದ 22 ನೇ ಇಸ್ವಿ ಬಂತು ಹೋಯಿತು ಆದರೆ ಅನೇಕ ಜನ ಆಕಾಂಕ್ಷಿಗಳು ಚುನಾವಣೆ ಉದ್ದೇಶ ಇಟ್ಕೊಂಡು ಬರ್ತಾ ಇದ್ದಾರೆ ಇವರಿಗೆ ನಿಜವಾಗಿಯೂ ಬೇಕಾಗಿರೋದು ಜನ ಸೇವೆ ಅಲ್ಲ ಅಧಿಕಾರದ ಹಂಬಲ , ಈ ಬಾರಿ ಕ್ಷೇತ್ರದಲ್ಲಿ ” ಹರಪನಹಳ್ಳಿ ಕ್ಷೇತ್ರ ಸ್ಥಳೀಯರಿಗೆ ” ಎಂಬ ಕೂಗು ಎದ್ದಿದೆ ಅಲ್ಲದೆ “ಉತ್ತಮ ಕೆಲಸಗಾರರಿಗೆ ಈ ಬಾರಿ ಕ್ಷೇತ್ರ” ಎಂಬ ಕೂಗು ಸಹ ಎದ್ದಿದೆ ಹಂಗೆ ನೋಡಿದರೆ ಸ್ಥಳೀಯ ಆಕಾಂಕ್ಷಿಗಳು ಇದ್ದರೂ ಕೂಡ ಅವರು ಅಂತಹ ಪ್ರಭಾವಶಾಲಿ ಅಲ್ಲ ಒಂದು ಲೆಕ್ಕಚಾರದ ಪ್ರಕಾರ ನೋಡಿದರೆ ಎನ್ ಕೊಟ್ರೇಶ್ ರವರು ಕೂಡ ಜಗಳೂರು ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಾರೆ .

ಮುಖಂಡರು ಹಳ್ಳ ಹಿಡಿಸಿದರೆ ಅರಸಿಕೇರೆ ಕೊಟ್ರೇಶ್ ಗೆ ?

ಹೀಗೆ ಪಕ್ಷದಿಂದ ಪಕ್ಷಕ್ಕೆ ಜಿಗಿದ ಕೊಟ್ರೇಶ್ ರವರಿಗೆ ಜೆಡಿಎಸ್ ನಲ್ಲಿ ಇದ್ದಿದ್ದರೆ ಬಹುಷ್ಯ ಇತ್ತೋ ಏನೋ ಗೊತ್ತಿಲ್ಲ ಆದರೆ ಇವರನ್ನು ಕಾಂಗ್ರೆಸ್ಸಿಗೆ ಕರೆತಂದು ಇಲ್ಲಿ ಟಿಕೆಟ್ ಕೊಡಿಸುತ್ತೇವೆ ಚುನಾವಣೆ ಮಾಡು ನಿನ್ನನ್ನು ಗೆಲ್ಲಿಸುವ ಜವಾಬ್ದಾರಿ ನಮ್ದು ಎಂದು ಅದು ಯಾವ ಪುಣ್ಯಾತ್ಮರು ಇವರಿಗೆ ಹೇಳಿದ್ದಾರೋ ಏನೋ ದೇವರೇ ಬಲ್ಲ ಅಂತವರ ಮಾತುಕೇಳಿ ಕಾಂಗ್ರೆಸ್ ಗೆ ಬಂದು ಹಣನೂ ಕಳಕೊಂಡು ಟಿಕೆಟ್ ಸಿಗದೇ ಮತ್ತೆ ಅತಂತ್ರ ಆಗೋ ಸ್ಥಿತಿ ಉಂಟಾಗುತ್ತೋ ಏನೋ ಗೊತ್ತಿಲ್ಲ ಎಂದು ಜನರು ಕ್ಷೇತ್ರದಲ್ಲಿ ವಿಶ್ಲೇಷಿಸತೊಡಗಿದ್ದಾರೆ .

ಕೊಟ್ರೇಶ್ ರವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡದೆ ಹಳ್ಳ ಹಿಡಿಸಿದರೆ ಎಂಬ ಅನುಮಾನವೂ ಇಲ್ಲಿ ಕಾಡುತ್ತಿದೆ ಅದೇನೇ ಇರಲಿ ಕೊಟ್ರೇಶ್ ರವರಿಗೆ ರಾಜಕಾರಣದ ವಿಷಯದಲ್ಲಿ ಅವರು ಬೇರೆಯವರ ಮಾರ್ಗದರ್ಶನಬಯಸಿ ಈ ರೀತಿ ಪಕ್ಷದಿಂದ ಪಕ್ಷಕ್ಕೆ ಹಾರುವುದು ಅಭ್ಯಾಸವಾದಂತಿದೆ ಎಂದೆ ಅನ್ಸುತ್ತೆ.


ಕೊಟ್ರೇಶ್ ರವರು ಸ್ವಭಾವತಃ ಒಳ್ಳೆಯವರು ಬೇದ ಬಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಸ್ವಭಾವದವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆಗಳನ್ನು ಮಾಡುವ ಹಕ್ಕು ಇದೆ ಅದೇ ರೀತಿ ಪ್ರತಿಯೊಬ್ಬ ಮತದಾರನಲ್ಲಿಯೂ ತಮ್ಮ ಪ್ರಭುವನ್ನು ಆರಿಸುವ ಶಕ್ತಿ ಇದೆ ಹಾಗೆಂದ ಮಾತ್ರಕ್ಕೆ ಪ್ರತೀ ಬಾರಿ ಪಕ್ಷವನ್ನು ಬದಲಿಸಿ ಏಕಾಏಕಿ ಅದೃಷ್ಟ ಪರೀಕ್ಷೆಗೆ ಇಳಿದರೆ ಯಶಸ್ಸು ಸುಮ್ಮನೆ ಬಂದುಬಿಡಲ್ಲ ಅದಕ್ಕಾಗಿ ಸೂಕ್ತವಾದ ಸ್ಥಳ, ಆಯ್ಕೆ, ಸಂಘಟನೆ, ಜನರೊಂದಿಗಿನ ನಿರಂತರ ಒಡನಾಟ ಮುಂತಾದವುಗಳನ್ನು ಪೂರ್ವ ಬಾವಿಯಾಗಿ ತಯಾರಿ ಮಾಡಿಕೊಂಡಿರಬೇಕಾಗುತ್ತದೆ ಆಗ ಮಾತ್ರ ನಮ್ಮ ನಿರೀಕ್ಷೆಗೆ ತಕ್ಕ ಯಶಸ್ಸು ದೊರೆಯಲು ಸಾಧ್ಯ.

ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕ್ಷೇತ್ರದ ಕಡೆಗೆ ಬಂದು ಜನರನ್ನು ಭೇಟಿ ಮಾಡಿ ಮತ ಹಾಕಿರಿ ನಾವು ಒಳ್ಳೆಯ ಕೆಲಸ ಮಾಡುತ್ತೇವೆ ನಿಮ್ಮ ಜೊತೆ ಇರುತ್ತೇವೆ ನಿಮಗೆ ಸ್ಪಂದಿಸುತ್ತೇವೆ ಎಂದು ಹೇಳಿ ಚುನಾವಣೆ ಮುಗಿದ ನಂತರ ನಾಲ್ಕು ವರ್ಷ ಕ್ಷೇತ್ರದಿಂದ ದೂರವಿದ್ದು ಮತ್ತೆ ಚುನಾವಣೆ ಬಂದ ನಂತರ ಬಂದರೆ ಕ್ಷೇತ್ರದ ಜನರು ಮುಖಂಡರು ಗ್ರಾಮಸ್ಥರು ಹೇಗೆ ಸಂಪರ್ಕಕ್ಕೆ ಬರುತ್ತಾರೆ ಎಂಬುದನ್ನು ಒಂದು ಬಾರಿ ಅವರೇ ಯೋಚಿಸಿ ನೋಡಬೇಕು ಇದೇ ಅವರ ಸೋಲಿಗೆ ಕಾರಣವಾಗುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಅದೇನೆ ಇರಲಿ ಜನರು ಯಾವಾಗಲೂ ಒಳ್ಳೆಯದನ್ನೇ ಆಯ್ಕೆ ಮಾಡೇ ಮಾಡುತ್ತಾರೆ ಏನೇ ಆಗಲಿ ಒಂದು ವೇಳೆ ಕೊಟ್ರೇಶ್ ಅವರಿಗೆ ಪಕ್ಷದ ಟಿಕೆಟ್ ಸಿಕ್ಕು ಚುನಾವಣೆಯಲ್ಲಿ ಗೆದ್ದದ್ದೇ ಆದರೆ ಉತ್ತಮ ಜನಪ್ರತಿನಿಧಿಯಾಗಿ ಜನಸೇವೆ ಮಾಡಲಿ ಎನ್ನುವುದು ನಮ್ಮ ಆಶಯ ಅಷ್ಟೇ.

Leave a Reply

Your email address will not be published. Required fields are marked *