October 11, 2024

Vijayanagara Express

Kannada News Portal

ಪಾಳೆಯಗಾರರ ಕಾಲದ ಐತಿಹಾಸಿಕ ಪುಷ್ಕರಣಿಗೆ ಗ್ರಾಮಸ್ಥರಿಂದ ಬಾಗಿನ

1 min read

 

 

ಪಾಳೆಯಗಾರರ ಕಾಲದ ಐತಿಹಾಸಿಕ ಪುಷ್ಕರಣಿಗೆ ಗ್ರಾಮಸ್ಥರಿಂದ ಬಾಗಿನ

 

ಹರಪನಹಳ್ಳಿ : ಪಟ್ಟಣದ ಹೊರವಲಯದ ದೇವರ ತಿಮ್ಮಲಾಪುರದ ಪುರಾತನವಾದ ಪುಷ್ಕರಣಿಯು ಹರಪನಹಳ್ಳಿ ಪಾಳೆಯಗಾರರಕೊಡುಗೆಯಾಗಿದೆ ಇದನ್ನು ಮಹಾರಾಜ ದಾದಣ್ಣ ನಾಯಕರು ಆ ಕಾಲದಲ್ಲಿ ಪುಷ್ಕರಣಿಯನ್ನು ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತದೆ.

ಇತ್ತೀಚೆಗೆ ಸುರಿದ ಭಾರಿ ಮಳೆ ಯಿಂದಾಗಿ ಪುಷ್ಕರಣಿಯು ತುಂಬಿಕೊಂಡು ನೋಡುಗರ ಕಣ್ಮನ ಸೆಳೆಯುತ್ತದೆ ಈ ಪುಷ್ಕರಣಿಯ ನೀರನ್ನು ದೇವರ ತಿಮ್ಮಲಾಪುರದ ಊರಿನ ಗ್ರಾಮಸ್ಥರು ಹಾಗೂ ದೇವಾಲಯದ ಕಾರ್ಯ ಚಟುವಟಿಕೆಗಳಿಗೆ ಆರಂಭದಿಂದಲೂ ಅವಲಂಬಿಸಲಾಗಿತ್ತು ಇತ್ತೀಚಿನ ದಿನಗಳಲ್ಲಿ ಕೊಳವೆಬಾವಿ ಮುಂತಾದ ವಿವಿಧ ಬಗೆಯ ನೀರಿನ ಮೂಲಗಳಿಂದಾಗಿ ಇದರ ಬಳಕೆಯು ಸ್ವಲ್ಪ ಕಡಿಮೆಯಾಗಿದೆ ಹಾಗಾಗಿ ಈ ಪುಷ್ಕರಣಿಯನ್ನು ಶ್ರೇಷ್ಠದ ಸಂಕೇತವೆಂದೇ ಗ್ರಾಮಸ್ಥರು ಇಂದಿಗೂ ಭಾವಿಸಿದ್ದಾರೆ ಹಾಗಾಗಿ ಊರಿನ ಪ್ರಮುಖರೆಲ್ಲರೂ ಈದಿನ ಸೇರಿ ಗಂಗೆ ಪೂಜೆಯನ್ನು ನೆರೆಯವೇರಿಸುವರೊಂದಿಗೆ ಬಾಗಿನ ಆರ್ಪಸಿದರು .

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಆನಂದ ,ಸೋಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸನ್ನಕುಮಾರ್, ಮೂಡ್ಲಪ್ಪ, ನಾಗರಾಜ್, ಪರಸಪ್ಪ, ಪೂಜಾರ್ ಪುನೀತ ಶ್ರೀನಿವಾಸ್ , ರೇಣುಕಮ್ಮ, ಬಸಮ್ಮ ,ಊರಿನ ಹಿರಿಯರು ಯುವಕರು ಮುತ್ತೈದೆ ಮಹಿಳೆಯರು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *