Vijayanagara Express

Kannada News Portal

ಶಾಸಕ ಕರುಣಾಕರ ರೆಡ್ಡಿ ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿಲ್ಲ – ಬಿಜೆಪಿ ಎಸ್ಟಿ ಮೋರ್ಚಾದ ಮುಖಂಡರು ಸ್ಪಷ್ಟನೆ

1 min read

 

ಶಾಸಕ ಕರುಣಾಕರ ರೆಡ್ಡಿ ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿಲ್ಲ – ಬಿಜೆಪಿ ಎಸ್ಟಿ ಮೋರ್ಚಾದ ಮುಖಂಡರು ಸ್ಪಷ್ಟನೆ

 

ಹರಪನಹಳ್ಳಿ:ಶಾಸಕ ಕರುಣಾಕರ ರೆಡ್ಡಿ ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿಲ್ಲ ಎಂದು ಬಿಜೆಪಿ ಎಸ್ಟಿ ಮೋರ್ಚಾದ ಮುಖಂಡರು ಸ್ಪಷ್ಟನೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಎಸ್ಟಿ ಮೋರ್ಚಾದ ಮುಖಂಡರು ಹೊಸಳ್ಳಿ ಮಲ್ಲೇಶ್ ರವರು ಹೇಳಿರುವ ಹೇಳಿಕೆಗೆ ಪ್ರತಿಯಾಗಿ ಹೇಳಿಕೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಮುಖಂಡ ಆರ್ ಲೋಕೇಶ್ ಅವರು ಸಂಘಟನೆಯ ಮುಖಂಡ ಹೊಸಳ್ಳಿ ಮಲ್ಲೇಶ್ ಅವರು ವಾಲ್ಮೀಕಿ ನಾಯಕ ಸಮಾಜದ ವಿರೋಧಿ ಶಾಸಕ ಜಿ.ಕರುಣಾಕರರೆಡ್ಡಿ ಎಂದು ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಮಲ್ಲೇಶ್ ಅವರು ಯಾರೊ ಮಾತನ್ನು ಕೇಳಿ ಉದ್ದೇಶ ಪೂರ್ವಕವಾಗಿ ಶಾಸಕರ ವಿರುದ್ಧ ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ ಇದು ಖಂಡನೀಯ ಎಂದು ಸ್ಪಷ್ಟಪಡಿಸಿದರು.

ತಾಲೂಕಿನಲ್ಲಿ ಶಾಸಕ ಜಿ.ಕರುಣಾಕರರೆಡ್ಡಿ ಅವರು 2008 ರಿಂದ ಇಲ್ಲಿಯವರೆಗೂ ವಾಲ್ಮೀಕಿ ನಾಯಕ ಸಮುದಾಯಕ್ಕೆ ಯಾವುದೇ ತರಹದ ತೊಂದರೆ ನೀಡಿಲ್ಲ ಬದಲಿಗೆ ಸಹಕಾರ ನೀಡಿದ್ದಾರೆ ಈಗಲೂ ಕೂಡಾ ಅವರು ಸಮಾಜವನ್ನು ಕಡೆಗಣಿಸಿಲ್ಲ ಅವರ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳೇ ಇದಕ್ಕೆ ಸಾಕ್ಷಿಯಾಗಿವೆ ಎಂದರು.

ಪಟ್ಟಣದ ವಾಲ್ಮೀಕಿ ನಗರದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನ, ನೀಲಗುಂದ ಗ್ರಾಮದಲ್ಲಿ 2 ಕೋಟಿ ವೆಚ್ಚದಲ್ಲಿ ಹಾಗೂ ತಲುವಾಗಲು ಎಡಿಹಳ್ಳಿ ಗ್ರಾಮದಲ್ಲಿ 1 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ,ತಿಪ್ಪನಾಯಕನಹಳ್ಳಿ ಗ್ರಾಮಗಳಲ್ಲಿ ತಲಾ 1 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ
2.93 ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕೆಕೆಆರ್ ಡಿಬಿ ಟಿಎಸ್ ಟಿ ಅನುದಾನ, ಬಾಲಕರ ವಸತಿ ನಿಲಯದ ಖಾಲಿ ನಿವೇಶನ ಖರೀದಿಗೆ 25 ಲಕ್ಷ ಅನುದಾನವನ್ನು ನೀಡಿದ್ದಾರೆ ಎಂದು ಹೇಳಿದರು.

ತಾಲೂಕು ಹಾಗೂ ಪ್ಪಟಣ ಸೇರಿದಂತೆ ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿದ್ದಾರೆ.
ತಾಲೂಕಿನಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಮತ್ತು ನಿರುದ್ಯೋಗಿ ಯುವಕರಿಗೆ ಎಸ್ಟಿ ನಿಗಮದ ಅಡಿಯಲ್ಲಿ 25 ಫಲಾನುಭವಿಗಳಿಗೆ ವಾಹನ ಸೇರಿದಂತೆ ಇತರೆ ಸಾಲ ಸೌಲಭ್ಯ ಒದಗಿಸಿದ್ದಾರೆ. ಮುಂದೆಯೂ ಕೂಡಾ ಸಮಾಜದ ಅಭಿವೃದ್ಧಿಗೆ ಶಾಸಕರು ಶ್ರಮಿಸಲಿದ್ದಾರೆ ಎಂದರು.

ಕೆಂಗಳ್ಳಿ ಪ್ರಕಾಶ್ ವಕೀಲರು ಮಾತನಾಡಿ ಹೊಸಳ್ಳಿ ಮಲ್ಲೇಶ್ ಅವರು ಯಾರದೊ ಒತ್ತಡಕ್ಕೆ ಮಣಿದು ಈ ರೀತಿ ಆರೋಪ ಮಾಡುತ್ತಿರುವುದು ಸರಿಯಲ್ಲ ಸಮಾಜದ ಮೇಲೆ ಕಳಕಳಿ ಇರುವವರು ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ ಅವರು ಶಾಸಕರು ತಾಲೂಕಿನಾದ್ಯಂತ ಎಸ್ಟಿ ಸಮುದಾಯಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೇ ಬೇಕಾದರೆ ತಾಲೂಕಿನಾಧ್ಯಂತ ಸಂಚರಿಸಿ ಅವರ ಅವಧಿಯಲ್ಲಿ ನೆಡೆದಿರುವ ಕೆಲಸಗಳನ್ನ ಪಟ್ಟಿಮಾಡಿಕೊಂಡು ಭಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಮುಖಂಡ ದಾದಾಪುರ ಶಿವಾನಂದ್ ಮಾತನಾಡಿ ಹರಪನಹಳ್ಳಿಯನ್ನ ಆಳ್ವಿಕೆ ನಡೆಸಿದ ರಾಜ ಸೋಮಶೇಖರ ನಾಯಕರನ್ನ ಯಾರೂ ಕಡೆಗಣಿಸಿಲ್ಲ ಅವರ ಹೆಸರಿನಲ್ಲಿ ಈಗಾಗಲೇ ಹರಿಹರ ವೃತ್ತಕ್ಕೆ ರಾಜಸೋಮಶೇಖರ ನಾಯಕ ವೃತ್ತ ಎಂದು ನಾಮಕರಣ ಮಾಡಲಾಗಿದೆ ಈ ಹಿಂದೆ ತಾಲೂಕಿನಲ್ಲಿ ಆಡಳಿತ ನಡೆಸಿದ ಶಾಸಕರು ಯಾರೂ ಕೂಡ ಇಂತಹ ಕೆಲಸವನ್ನು ಮಾಡಿರುವುದಿಲ್ಲ ಶಾಸಕರಿಗೆ ವಾಲ್ಮೀಕಿ ನಾಯಕ ಸಮಾಜದ ಪರಂಪರೆ ಮತ್ತು ಇತಿಹಾಸ ಹಾಗೂ ಸ್ಥಳೀಯವಾಗಿ ಆಳಿದ ಮಹಾರಾಜರ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು.

ಈ ನಾಡಿನ ಏಳಿಗೆಗೆ ಹೋರಾಡಿದ ತ್ಯಾಗ ಬಲಿದಾನ ಮಾಡಿದ ,ಹರಪನಹಳ್ಳಿನ್ನು ಆಳಿದ ಮಹಾರಾಜರ ಹೆಸರನ್ನು ಬಸ್ ನಿಲ್ದಾಣಕ್ಕೆ, ರೈಲ್ವೆ ನಿಲ್ದಾಣಕ್ಕೆ, ತಾಲೂಕು ಕ್ರೀಡಾಂಗಣಕ್ಕೆ ಮತ್ತು ಪಟ್ಟಣದ ಪ್ರಮುಖ ವೃತ್ತಗಳಿಗೆ ಇಡಬೇಕು ಎಂಬ ಕೂಗು
ಇಷ್ಟು ದಿನಗಳ ಕಾಲ ಎದ್ದಿರಲಿಲ್ಲ ಈಗ ಈ ಕೂಗು ಎದ್ದಿದೆ ಇದನ್ನು ಶಾಸಕರ ಗಮನಕ್ಕೆ ತರುತ್ತೇವೆ ನಂತರ ಹಂತಹಂತವಾಗಿ ಮುಂದಿನ ದಿನಗಳಲ್ಲಿ ತಾಲೂಕು ಕ್ರೀಡಾಂಗಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ಮಹಾರಾಜರ ಹೆಸರನ್ನ ಇಡಲು ಶಾಸಕರಿಗೆ ಮನವಿ ಮಾಡುತ್ತೇವೆ ಎಂದರು.
ಇನ್ನೂ ಮುಂದೆ ಶಾಸಕರ ಬಗ್ಗೆ ಈ ರೀತಿಯಾದ ಹೇಳಿಕೆಗಳನ್ನು ನೀಡುವುದನ್ನು ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ ಮುಖಂಡರಾದ ನೀಲಗುಂದ ಮನೋಜ್ , ಕೆ.ಪ್ರಾಣೇಶ್, ತೆಲಿಗಿ ಗಿರಜ್ಜಿ ನಾಗರಾಜ್, ಮ್ಯಾಕಿ ದುರುಗಪ್ಪ, ನಂದಿಬೇವೂರು ರಾಜಪ್ಪ, ಕವಸರ ನಾಗರಾಜ್, ಗುಂಡಿ ಮಂಜುನಾಥ್, ನಿಟ್ಟೂರು ಮೂಲಿಮನಿ ಹನುಮಂತ, ರಾಘು ಸೇರಿದಂತೆ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *