Vijayanagara Express

Kannada News Portal

ಹರಪನಹಳ್ಳಿಯ ಐತಿಹಾಸಿಕ ಹಿರೆಕೆರೆಗೆ ಬಾಗೀನ ಅರ್ಪಿಸಿದ ಎಂ ಪಿ ಲತಾ ಮಲ್ಲಿಕಾರ್ಜುನ

1 min read

 

ಹರಪನಹಳ್ಳಿ ಯ ಐತಿಹಾಸಿಕ ಹಿರೆಕೆರೆಗೆ ಬಾಗೀನ ಅರ್ಪಿಸಿದ ಎಂ ಪಿ ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ: ಅ-21 , ಪಟ್ಟಣದ ಐತಿಹಾಸಿಕ ಹಿರೆಕೆರೆಗೆ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಬಾಗೀನವನ್ನು ಅರ್ಪಿಸಿದರು .

ಹರಪನಹಳ್ಳಿ ಪಟ್ಟಣದಲ್ಲಿ ಪಾಳೆಯಗಾರರ ಕಾಲದಲ್ಲಿ ನಿರ್ಮಿಸಿರುವ ಐತಿಹಾಸಿಕ ಹಿರೆಕೆರೆಯು ತುಂಬಿ ಕೊಡಿ ಬಿದ್ದಿರುವ ಹಿನ್ನೆಲೆಯಲ್ಲಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಬಾಗೀನವನ್ನು ಅರ್ಪಿಸಿದರು .

ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಹರಪನಹಳ್ಳಿಯ ಪಟ್ಟಣದಲ್ಲಿರುವ ಹಿರೇಕೆರೆಯು ಸುಮಾರು ವರ್ಷಗಳಿಂದ ತುಂಬಿರಲಿಲ್ಲ ಬಳ್ಳಾರಿ ಜಾಲಿ ಬೆಳೆದು ಕೆರೆ ಅಂಗಳದ ತುಂಬೆಲ್ಲ ಜಾಲಿ ಗಿಡಗಳೇ ಕಾಣುತ್ತಿದ್ದವು. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಕೆರೆಯು ತುಂಬಿ ರೈತರಿಗೆ ಅನುಕೂಲ ಆಗುತ್ತಿದೆ ಇದರಿಂದಾಗಿ ಸುತ್ತಮುತ್ತಲ 10 ಕಿ.ಮೀ ವ್ಯಾಪ್ತಿಯಲ್ಲಿ ಅಂತರ್ಜಲವು ಬತ್ತುವುದಿಲ್ಲ ಕೊಳವೆ ಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರುತ್ತದೆ ಕೆರೆಯು ಇನ್ನೂ ಮೂರರಿಂದ ನಾಲ್ಕು ವರ್ಷಗಳ ಕಾಲ ಖಾಲಿಯಾಗುವುದಿಲ್ಲ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಅರಸೀಕೆರೆಯ ಶ್ರೀ ಕೊಲ ಶಾಂತೇಶ್ವರ ವಿರಕ್ತಮಠದ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ನೀರು ಎಂಬುದು ಅತ್ಯಾವಶ್ಯಕ ವಸ್ತು ಆದ್ದರಿಂದಲೇ ಇದನ್ನು ಜೀವ ಜಲ ಎಂದು ಕರೆಯುವರು ಯಾರು ಏನೇ ಮಾಡಿದರು ಮೊದಲು ಹೇಳುವುದು ನೀರಿನ ಅವಶ್ಯಕತೆ ಬಗ್ಗೆನೇ ಹಾಗಾಗಿ ರೈತ ಬೆಳೆಗಳನ್ನು ಬೆಳೆಯುವುದರಿಂದ ಹಿಡಿದು ಮನುಷ್ಯನ ಅತ್ಯಾವಶ್ಯಕ ವಸ್ತು ಎಂದರೆ ನೀರು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ ತಾಲೂಕಿನ ಬಹುತೇಕ ಸುತ್ತಮುತ್ತಲ ಎಲ್ಲಾ ಕೆರೆಗಳು ತುಂಬಿ ಕೊಡಿ ಬಿದ್ದು ಮೈದುಂಬಿ ಹರಿಯುತ್ತಿವೆ ಹೀಗಾಗಿ ಈ ವರ್ಷ ತಾಲೂಕಿನ ರೈತರು ಸಂಪೂರ್ಣ ಸಂತೃಪ್ತರಾಗಿದ್ದಾರೆ ಎಂದು ಹೇಳಬಹುದು ಎಂದು ಅಭಿಪ್ರಾಯ ಪಟ್ಟರು .


ಈ ಕೆರೆಯನ್ನು ಮಹಾರಾಜ ಬಸವಂತಪ್ಪ ನಾಯಕರು ದುರಸ್ಥಿಯನ್ನು ಮಾಡಿಸಿ ಕೆರೆಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರಲು ವ್ಯವಸ್ಥೆಯನ್ನು ಮಾಡಿದ್ದರು ಅಡಿವಿಹಳ್ಳಿ ಕಂದಾಯ ಗ್ರಾಮಕ್ಕೆ ಸಂಬಂಧಿಸಿದಂತೆ ಆ ಭಾಗದ ನೀರು ಹರಿದು ಮರಿಯಮ್ಮನಹಳ್ಳದ ಮೂಲಕ ತಿಪ್ಪನಾಯಕನಹಳ್ಳಿಯ ಕೆರೆಗೆ ಸೇರುತ್ತಿತ್ತು ಆದುದರಿಂದ ಈ ನೀರಿನ ಪ್ರಾಮುಖ್ಯತೆಯನ್ನು ಅರಿತಂತ ಮಹಾರಾಜರು ಮರಿಯಮ್ಮನಹಳ್ಳಕ್ಕೆ ಹಡ್ಡಲಾಗಿ ವಡ್ಡನ್ನು ಕಟ್ಟಿಸಿ ಅಲ್ಲಿಂದ ಇಪ್ಪತ್ತು ಅಡಿಗಳಷ್ಟು ಅಗಲವಿರುವ ಇಪ್ಪತ್ತೈದು ಅಡಿಗಳಷ್ಟು ಆಳವಾದ ಸುಮಾರು 800 ಮೀಟರ್ ಗಳಷ್ಟು ಉದ್ದನೆಯ ಕಾಲುವೆಯನ್ನು ನಿರ್ಮಿಸಿ ಹಿರೆಕೆರೆಗೆ ನೀರು ಸರಾಗವಾಗಿ ಹರಿದು ಬರಲು ವ್ಯವಸ್ಥೆ ಮಾಡಿದ್ದರು ಈ ವಡ್ಡು 2013 ರಲ್ಲಿ ಹೊಡೆದು ಹೋಗಿತ್ತು ಆದಾದ ನಂತರ ಮಳೆಯ ಕೊರತೆ ಮತ್ತು ಮರಿಯಮ್ಮನಹಳ್ಳದ ನೀರು ತಿಪ್ಪನಾಯಕನಹಳ್ಳಿ ಕೆರೆಗೆ ಸೇರಿತಿದ್ದುದ್ದರಿಂದ ಕೆರೆಯು ತುಂಬಿರಲಿಲ್ಲ ಇದನ್ನು ಮನಗಂಡ ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು 2016-17 ರಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವಡ್ಡು ನಿರ್ಮಾಣ ಮತ್ತು ಕಾಲುವೆ ಹಾಗೂ ಕೆರೆಯಲ್ಲಿನ ಜಂಗಲ್ ಕಟಾವು ಕಾಮಗಾರಿಯ ಮೂಲಕ ದುರಸ್ತಿಗೊಳಿಸುವ ಮೂಲಕ ಹಿರೆಕಟ್ಟಿ ,ಮರಿಯಮ್ಮನಹಳ್ಳದ ನೀರು ಸರಾಗವಾಗಿ ಪಟ್ಟಣದ ಹಿರೆಕೆರೆಗೆ ಬಂದು ಸೇರಲು ವ್ಯವಸ್ಥೆಯನ್ನು ಮಾಡಿಸಿದ್ದರು.

2009 ರಲ್ಲಿಈ ಕೆರೆಯು ತುಂಬಿ ಕೋಡಿ ಬಿದ್ದಿತ್ತು ಈಗ ಸುಮಾರು 13 ವರ್ಷಗಳಿಂದ ತುಂಬಿರಲಿಲ್ಲ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಕೆರೆ ತುಂಬಿದೆ ಇದರಿಂದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಎಂ ವಿ ಅಂಜಿನಪ್ಪ, ಟಿ. ವೆಂಕಟೇಶ್,ಲಾಠಿ ದಾದಾಪೀರ್,ಗೊಂಗಡಿ ನಾಗರಾಜ್,
ಮುಖಂಡರಾದ
ಬೇಲೂರು ಅಂಜಿನಪ್ಪ,ಬಿಕೆ ಪ್ರಕಾಶ್, ಚಂದ್ರೇಗೌಡ ವಕೀಲರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ,ಎಂ.ಎಂ ವಿಶ್ವನಾಥ್,ಕೆ ಎಂ ಬಸವರಾಜ್,ಕಂಚಿಕೇರಿ ಅಂಜಿನಪ್ಪ, ರೈತ ಮುಖಂಡ ಮಹೇಶ್ವರ ಸ್ವಾಮಿ,ಚಿಕ್ಕೇರಿ ಬಸಪ್ಪ, ಘಾಟಿನ ಬಸಪ್ಪ,ಪಟ್ನಾಮದ ದುರುಗಪ್ಪ,ಒ ಮಹಾಂತೇಶ್,ಮತ್ತೂರು ಬಸವರಾಜ್, ಜೀಶನ್, ಬಾಣದ ಅಂಜಿನಪ್ಪ,ತೆಲಿಗಿ ಉಮಾಕಾಂತ, ಮಹಾಂತೇಶ್ ನಾಯ್ಕ್, ಮಂಜುನಾಥ್, ಎಲ್ ಮಂಜ್ಯನಾಯ್ಕ್,ಎಂ ವಿ ಕೃಷ್ಣಕಾಂತ್ ,ಶಿವರಾಜ್, ಬಾಲರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *