Vijayanagara Express

Kannada News Portal

ಜೀವಜಲ ಪರಿಸರ ರಕ್ಷಿಸಿರಿ – ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ

1 min read

ಜೀವಜಲ ಪರಿಸರ ರಕ್ಷಿಸಿರಿ – ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ

ಹರಪನಹಳ್ಳಿ : ಅ-22 ,ಜೀವಜಲ ಪರಿಸರ ರಕ್ಷಿಸಿರಿ ಎಂದು ವ್ಯಂಗ್ಯಚಿತ್ರಕಾರ ನಾಮದೇವ ಕಾಗದಗಾರ ಹೇಳಿದರು.

ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ  ಜೀವಜಲ ಟ್ರಷ್ಟ್ ಆಯೋಜಿಸಿದ್ದ ವ್ಯಂಗ್ಯಚಿತ್ರಕಲಾ ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ವ್ಯಂಗ್ಯಚಿತ್ರಕಾರ, ವನ್ಯಜೀವಿ ಬರಹಗಾರ ನಾಮದೇವ ಕಾಗದಗಾರ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರ “ಜೀವವೈವಿಧ್ಯ ತಾಣ’  ಕೇವಲ 10  ವರ್ಷಗಳ ಹಿಂದೆ ಕಂಡ ದೃಶ್ಯವನ್ನು ಇಂದು ನೋಡಲು ನಮಗೆ ಅಸಾಧ್ಯ.  ಈ ಬದಲಾವಣೆ ಕಂಡು ಮರುಗುತ್ತಿದ್ದೇವೆ.  ಆಧುನಿಕತೆಯ ಮುಖವಾಡಗಳಾದ ನಗರೀಕರಣ, ಕೈಗಾರೀಕರಣ , ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಗೆ ಮಾರುಹೋಗಿ ಇಂದು ನಾವು ಪರಿಸರಕ್ಕೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಹಳಷ್ಟು ಹಾನಿಯನ್ನುಂಟು ಮಾಡುತ್ತಿದ್ದೇವೆ.

ನಮ್ಮ ಪರಿಸರವನ್ನು ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದ್ದು ಆಗಿದ್ದರೂ ನಾವು ಅದು ನಮಗೆ ಸಂಭಂದಿಸಿದಲ್ಲ ಎಂದು ಉದಾಸೀನತೆ ತೋರುತ್ತಿದ್ದೇವೆ.ಈ ಕಾರಣದಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಕಾರ ಪಡುವಂತಾಗಿದೆ ,ಪರಿಸರ ರಕ್ಷಿಸಿದರೆ ಜೀವಜಲವೂ ಸಮತೋಲನವಾಗಿ ದೊರೆಯುತ್ತದೆ ಎಂದರು.


ಆಧುನಿಕ ಶೈಲಿಯ ಜೀವನ ಕಸ ಹೆಚ್ಚಳಕ್ಕೆ ದಾರಿಯಾಗಿದೆ. ಬೇಕಾಬಿಟ್ಟಿ ಆಗುತ್ತಿರುವ ಈ ಬೆಳವಣಿಗೆಯನ್ನು ನಿಯಂತ್ರಿಸಲು ನಾವೆಲ್ಲರೂ  ವಿಫಲರಾಗಿದ್ದೇವೆ. ಇದು ಸಫಲವಾಗಬೇಕಾದರೆ ಅದು ನಮ್ಮ-ನಿಮ್ಮಿಂದ ಮಾತ್ರ ಸಾಧ್ಯ.
ಭೂ ಸಂಪನ್ಮೂಲಗಳಾದ ಅರಣ್ಯ , ಮಣ್ಣು, ಮರಳು, ಕಲ್ಲುಬೆಟ್ಟಗಳನ್ನು ಸಂರಕ್ಷಿಸುವುದು ಹಾಗೂ ಇವುಗಳ ಮಹತ್ವವನ್ನು  ಸಾಮಾನ್ಯ ನಾಗರೀಕರೂ ಅರಿಯಬೇಕು. ನಮ್ಮ ಮಕ್ಕಳಿಗೂ ಕೂಡ ಶಾಲೆಗಳಲ್ಲಿ ಅರಿವು ಮೂಡಿಸಬೇಕೆಂದರು.

 

ನಾವೇನೂ ಮಾಡಲಾಗದು ಎಂದು ಕೈ ಕಟ್ಟಿ  ಕುಳಿತುಕೊಳ್ಳದೇ ಪ್ರತಿಯೊಬ್ಬರು ಜಾಗೃತಿ ಮೂಡಿಸುವುದರ ಮೂಲಕ ಪರಿಸರ ಶುದ್ಧತೆಗಾಗಿ ಕೈ ಜೋಡಿಸಬೇಕು.
ಭೂಮಿ ತಾಯಿಯ ಸಮತೋಲನ ಕಾಪಾಡಲು ವನ್ಯಜೀವಿಗಳ ಸಂರಕ್ಷಣೆ ಅಗತ್ಯವೆಂದು ಹೇಳಿದರು.
ಕಾರ್ಯಕ್ರಮ ಉಧ್ಘಾಟನೆ ನೆರವೇರಿಸಿ ಮಾತನಾಡಿದ ವಿಜಯನಗರ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪನವರ ಮಾತನಾಡಿ ಹೇಮಣ್ಣ ನವರ ಹಳೇ ಬಸ್ ನಿಲ್ದಾಣದ ಅಂಗಡಿ ಸಾಹಿತಿಗಳ ಪ್ರಗತಿಪರರ ಸಂಗಮದ ಸ್ಥಳವಾಗಿತ್ತು ಅವರ ಸಾಂಸ್ಕೃತಿಕ ಮನಸ್ಸೇ ಇಂತಹ ಕೆಲಸ ಮಾಡಲು ಸಾಧ್ಯವೆಂದರು.ನಮ್ಮ ರಾಜ್ಯದಲ್ಲಿ ಪ್ರತಿ 40 ಕಿ.ಮೀ.ಗೆ ಕನ್ನಡ ಭಾಷೆ ವೈವಿಧ್ಯತೆಯಿಂದ ಕೂಡಿರುತ್ತದೆ ಆದರೆ ಚಿತ್ರಕಲೆ ಅಥವಾ ವ್ಯಂಗ್ಯ ಚಿತ್ರಕಲೆ ವಿಶ್ವ ಭಾಷೆಯಾಗಿದೆ.

ನಾಮದೇವ ಕಾಗದಗಾರ ಒಬ್ಬ ಪ್ರತಿಭಾನ್ವಿತ ಕಲಾವಿದರಾಗಿದ್ದು ನಮ್ಮ ಅನೇಕ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದರು ಎಂದು ನೆನೆದರು.
ಪರಿವರ್ತನಾ ಶಾಲೆಯ ಅಧ್ಯಕ್ಷರಾದ ರವೀಂದ್ರ ಅಧಿಕಾರರವರು ಮಾತನಾಡಿ ವಿದ್ಯಾರ್ಥಿಗಳಿಗೆ ಈ ವಯಸ್ಸು ಸಾಧನೆಗೆ ಸೂಕ್ತವಾದದ್ದುಸಾಧನೆಯ ಕನಸು ಕಾಣಿರಿ,ಸಾಧಿಸುವ ಛಲದೊಂದಿಗೆ ಗುರಿ ಮುಟ್ಟಿರಿ ನಿಮ್ಮ ಸುತ್ತ ಮುತ್ತ ಮನೆ ಶಾಲೆಯಲ್ಲಿ ಪರಿಸರ ಸ್ವಚ್ಛತೆಗೆ ಆಧ್ಯತೆ ಇರಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೀವಜಲ ಟ್ರಷ್ಟ್ ಅಧ್ಯಕ್ಷ ಹೇಮಣ್ಣ ಮೋರಿಗೇರಿ ಈಗ ಅಂಕಕ್ಕಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದೇವೆ.ಬರೆಯುವ, ಓದುವ, ಆಟ ಹಾಡುವ ಜೊತೆಗೆ ಕೆರೆ ಕಟ್ಟೆಗಳು, ನದಿ ಮೂಲಗಳು, ಅರಣ್ಯ ಮುಂತಾದ ಪ್ರದೇಶಗಳನ್ನು ಕಲುಷಿತಗೊಳಿಸದಂತೆ ಸ್ವಚ್ಛತೆ, ರಕ್ಷಣೆ ಮತ್ತು ಅರಿವು ಮೂಡಿಸುವ ಉದ್ದೇಶ ನಮ್ಮದು.ಈ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು, ಯುವಜನತೆಯನ್ನು ಜಾಗೃತಗೊಳಿಸುವ ಕೆಲಸವನ್ನು ನಮ್ಮ ಟ್ರಷ್ಟ್ ಮಾಡುತ್ತಿದೆ ಎಂದರು.
ಸ್ಫರ್ಧೆಯಲ್ಲಿ ಪಿ ಎಚ್ ಡಿ ವಿದ್ಯಾರ್ಥಿಗಳು, ಹೈಸ್ಕೂಲ್ ಶಿಕ್ಷಕರು, ನಿ.ಸ.ನೌಕರರು, ನಾಗರೀಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅತ್ಯಂತ ಖುಷಿದಾಯಕವೆಂದರು.
ಎಲೈಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಎಂ.ಅಂಬಣ್ಣ ಮಾತನಾಡಿ ಪರಿಸರ ಕಾಳಜಿ ಭೂತಾಯಿಯ ನೋವು ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಮುಂತಾದ ಜನಪರ ಕಾಳಜಿಯ ಚಿತ್ರಗಳು ಸಾವಿರ ಸಾವಿರ ಕಥೆಗಳನ್ನು ಹೇಳುತ್ತಿವೆ ಇಂತಹ ಪ್ರತಿಭಾನ್ವಿತರ ಚಿತ್ರ ಕಲಾ ಪ್ರದರ್ಶನ ನಮ್ಮ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಖುಷಿ ಎಂದರು.ಅಲ್ಲದೇ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಈ ಮೂಲಕ ಜ್ನಾನಾರ್ಜನೆ ಬೆಳಸಿಕೊಳ್ಳಬೇಕೆಂದರು.

ಬೆಳಗ್ಗೆಯಿಂದ ಸಂಜೆಯವರೆಗೆ ಚಿತ್ರ ಕಲಾ ಪ್ರದರ್ಶನ ನಡೆಯಿತು.ಪಂಪಾಪತಿ .ವಿ, ಟಿ.ಎಚ್. ಎಂ.ಬಿಂದಿಯಾ, ಪಿ.ದೀಪಿಕಾ, ಎಸ್ .ಎಂ.ಗಿರಿಜಮ್ಮ, ಬಿ.ಎಂ.ಮೀನಾಕ್ಷಿ, ಶೇಖರಗೌಡ ಪಾಟೀಲ್, ಕೃಷ್ಣಚಾರಿ, ಸಿ.ಬಸವರಾಜ್, ಸಾಹುಲ್ ಭಾಷ, ರಿಜ್ವಾನ್, ಟಿ.ಎಲ್.ಗಗನ್ ಕುಮಾರ್ ಮುಂತಾದವರಿಗೆ ನಗದು, ಪ್ರಶಸ್ತಿ ಪತ್ರ, ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಬಿ.ರವೀಂದ್ರನಾಥ್,
ಶಿಕ್ಷಕಿಡಿ.ಶಶಿಕಲಾ,ನಾರಾಯಣ,ಎಂ.ಶ್ರವಣ್ ,ಎಚ್.ಶಿವಕುಮಾರ, ಶಿಕ್ಷಕರು, ವಿದ್ಯಾರ್ಥಿಗಳು, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *