Vijayanagara Express

Kannada News Portal

ನಾಲ್ಕು ಮಕ್ಕಳು ಹೊಂಡದಲ್ಲಿ ಮುಳುಗಿ ಸಾವು

1 min read

 

ನಾಲ್ಕು ಮಕ್ಕಳು ಹೊಂಡದಲ್ಲಿ ಮುಳುಗಿ ಸಾವು

 

ಹರಪನಹಳ್ಳಿ :ನ-2,ತಾಲೂಕಿನ ಚನ್ನಹಳ್ಳಿತಾಂಡದಲ್ಲಿ ನಾಲ್ಕು ಮಕ್ಕಳು ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ಬೆಳಗ್ಗೆ 11 ಘಂಟೆಗೆ ನಡೆದಿರುತ್ತದೆ .

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ ಚನ್ನಹಳ್ಳಿ ತಾಂಡದ ಹತ್ತಿರವಿರುವ ಹೊಂಡಕ್ಕೆ ನಂದಿಬೇವೂರು ತಾಂಡಾದ ಈರಣ್ಣನಾಯ್ಕ್ ರವರ ಮಕ್ಕಳಾದ ಅಭಿಷೇಕ್(15) ಮತ್ತು ಅಶ್ವಿನಿಯವರು (18) ಚೆನ್ನಳ್ಳಿ ತಾಂಡದ ನೆಂಟರ ಮನೆಗೆ ಬಂದಿದ್ದರು ತುಂಬಿನಕೇರಿ ದೊಡ್ಡ ತಾಂಡದ ಅಪೂರ್ವ (14), ಹಾಗೂ ಚೆನ್ನಹಳ್ಳಿ ತಾಂಡದ ಕಾವ್ಯಂಜಲಿ ( 21) ರವರು ಬಟ್ಟೆ ತೊಳೆಯಲು ಹೊಂಡಕ್ಕೆ (ಮಿನಿಕೆರೆಗೆ) ಹೋಗಿದ್ದರು ಆ ಸಮಯದಲ್ಲಿ ಗೌತಮ್ ಎಂಬ ಚಿಕ್ಕ ಬಾಲಕನು ನೀರಿನಲ್ಲಿ ಆಟವಾಡಲು ಹೋಗಿರುತ್ತಾನೆ ಆಗ ಆತ ಮಗುವನ್ನು ಕರೆದುಕೊಂಡು ಬರಲು ಲಕ್ಷ್ಮೀಬಾಯಿ,ಕಾವ್ಯಾಂಜಲಿ, ಅಪೂರ್ವ, ಅಶ್ವಿನಿಯವರು ಹೋಗಿದ್ದರು ಅವರ ಪೈಕಿ ಕಾವ್ಯಾಂಜಲಿ, ಅಪೂರ್ವ, ಅಶ್ವಿನಿಯವರು ನೀರಿನ ಆಳ ಗೊತ್ತಾಗದೆ ಒಬ್ಬರಿಗೊಬ್ಬರು ತಬ್ಬಿಕೊಂಡು ಮುಳುಗುತ್ತಿರುವದನ್ನು ಕಂಡು ಲಕ್ಷ್ಮೀಬಾಯಿ ಎಂಬುವವರು ಗೌತಮ ಎಂಬ ಬಾಲಕನನ್ನು ಕರೆದುಕೊಂಡು ಹೋಗಿ ಗ್ರಾಮದಲ್ಲಿ ಜನರನ್ನು ಕರೆದುಕೊಂಡು ಬಾ ಎಂದು ಅಭಿಷೇಕ ನಿಗೆ ಹೇಳಿದರು ಕೂಡ ಅವರನ್ನು ಕಾಪಾಡಲು ಅಭಿಷೇಕ್ ಹೋದಾಗ ಆ ಮೂರು ಜನರು ಅಭಿಷೇಕನನ್ನು ತಬ್ಬಿಕೊಂಡು ನಾಲ್ಕು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ ಎಂದು ಪ್ರಕರಣಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.


ಪ್ಳ್ಸ್ಲ್ತ್ತ್ತ್ತ್ತ್ತ್ಳ್ಸ್ಲ್ತ್ತ್ತ್ತ್ತ್ಳ್ಸ್ಲ್ತ್ತ್ತ್ತ್ತ್ತ್ಳ್ಸ್ಲ್

ಅಭಿಷೇಕ್ (15)ಅಶ್ವಿನಿ (18), ಕಾವ್ಯಾಂಜಲಿ (21), ಅಪೂರ್ವ (14) ಮೃತ ದುರ್ದೈವಿಗಳಾಗಿರುತ್ತಾರೆ.

ಈ ದಾರುಣ ಘಟನೆಗೆ ಮಕ್ಕಳ ಪೋಷಕರು ವೆಸ್ಟಾಸ್ ವಿಂಡ್ ಪವರ್ ಕಂಪನಿ ಆಗಿರುತ್ತದೆ ಎಂದು ಆರೋಪಿಸಿರುತ್ತಾರೆ ಏಕೆಂದರೆ ಕಳೆದ ಒಂದು ತಿಂಗಳಿನಿಂದ ವೆಸ್ಟಾಸ್ ವಿಂಡ್ ಪವರ್ ಕಂಪನಿಯು 29 ಜನ ಕಾವಲುಗಾರರ ವೃತ್ತಿ ಮಾಡುತ್ತಿದ್ದ ಕಾರ್ಮಿಕರನ್ನು ತೆಗೆದು ಹಾಕಿದ್ದರು ಅವರ ಪೈಕಿ ಇವರ ಪೋಷಕರು ಆಗಿರುತ್ತಾರೆ ಹಾಗಾಗಿ ಕಂಪನಿ ವಿರುದ್ಧ ಹೋರಾಟ ಆರಂಭಿಸಿದ್ದರು ಇಂದು ಕೂಡ ಧರಣಿ ಸತ್ಯಾಗ್ರಹ ಕೈಗೊಂಡ ಪರಿಣಾಮವಾಗಿ ಪಾಲಕರು ಹೋರಾಟದಲ್ಲಿ ಭಾಗಿಯಾದ ಸಮಯದಲ್ಲಿ ಇಂತಹ ದುರ್ಗಘಟನೆ ನಡೆದಿದೆ ಎಂದು ಧರಣಿ ನಿರತರು ಆರೋಪಿಸುತ್ತಿದ್ದಾರೆ.

ಇತ್ತೀಚಿಗೆ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ ಹೊಂಡದಲ್ಲಿ‌ ಮುಳುಗಿ ಸಾವನಪ್ಪಿರುವ ಘಟನೆ ನಡೆದಿದೆ
ಹಾಗಾಗಿ ದಯವಿಟ್ಟು ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಬೇಕು ಇಲ್ಲವಾದಲ್ಲಿ ಕರುಳಿಂಡುವ ಇಂತಹ ದುರಂತಗಳು ಸದ್ದಿಲ್ಲದೆ ಪದೇ ಪದೇ ನಡೆಯುತ್ತಿರುತ್ತವೆ ಆದುದರಿಂದ ಪೋಷಕರು ಹೊಲಗದ್ದೆಗಳಿಗೆ ಕೆಲಸಕ್ಕೆಂದು ಹೋದಾಗ ಮಕ್ಕಳ ಬಗ್ಗೆ ನಿಗಾವಹಿಸಬೇಕು ಹಾಗೂ ಮಕ್ಕಳನ್ನು ಹೊಲಕ್ಕೆ ಕರೆದುಕೊಂಡು ಹೋದಾಗ ಆಗಲಿ ಇಂತಹ ನೀರಿರುವ ಪ್ರದೇಶದಲ್ಲಿ ಮಕ್ಕಳು ಇರುವಾಗ ಜಾಗೃತ ವಾಗಿರುವುದು ಅವಶ್ಯವಾಗಿರುತ್ತದೆ.

Leave a Reply

Your email address will not be published. Required fields are marked *