Vijayanagara Express

Kannada News Portal

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸೌಂದರ್ಯ ರವರನ್ನು ಸನ್ಮಾನಿಸಿದ ಆರುಂಡಿ ನಾಗರಾಜ್

1 min read

 

ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸೌಂದರ್ಯ ರವರನ್ನು ಸನ್ಮಾನಿಸಿದ ಆರುಂಡಿ ನಾಗರಾಜ್

 

ಹರಪನಹಳ್ಳಿ: ತಾಲೂಕಿನ ತಾವರಗೊಂದಿ ಗ್ರಾಮದ ಅಂತಿಮ ಬಿ ಕಾಂ ವಿದ್ಯಾರ್ಥಿನಿ ಸೌಂದರ್ಯ ರವರು ಅಂತರರಾಷ್ಟ್ರೀಯ ಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಗ್ರಾಮೀಣ ಪ್ರತಿಭೆಯಾಗಿದ್ದು ಇವರನ್ನು ಪ್ರೋತ್ಸಾಹಿಸುವ ಮೂಲಕ ಆರುಂಡಿ ನಾಗರಾಜ್ ರವರು ಸನ್ಮಾನ ಮಾಡಿದರು.

ತಾವರಗೊಂದಿ ಗ್ರಾಮದ ಸಿದ್ದಪ್ಪ ಹಾಗೂ ರೇಣುಕಾ ದಂಪತಿಗಳ ಸುಪುತ್ರಿಯಾದ ಸೌಂದರ್ಯ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದು , ದಿನಾಂಕ 12-11-2022 ರಿಂದ 14-11-2022 ರವರೆಗೆ ನೇಪಾಳದ ಫೋಕಾಕ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಥ್ರೋ ಬಾಲ್ ಪಂದ್ಯಾಟಕ್ಕೆ ‘ರಾಷ್ಟ್ರೀಯ ಥ್ರೋಬಾಲ್ ಅಕಾಡೆಮಿ ಬೆಂಗಳೂರು ‘ ಇವರ ಪ್ರೋತ್ಸಾಹದಿಂದ ಆಯ್ಕೆಯಾಗಿದ್ದಾಳೆ . ಸೌಂದರ್ಯ ಕಡು ಬಡತನದ ಕುಟುಂಬದವಳಾಗಿದ್ದು ,ಈ ಹಿಂದೆಯೂ ಆಂಧ್ರಪ್ರದೇಶ , ತಮಿಳುನಾಡು ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಳು .

ಸೌಂದರ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಹಾರೈಸಿ
ಸನ್ಮಾನಿಸಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಮ ನಿರ್ದೇಶನ ಸದಸ್ಯರಾದ ಆರುಂಡಿ ನಾಗರಾಜ್ ರವರು ಇಂತಹ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತರು ಇದ್ದರೂ ಅವರಿಗೆ ಸರಿಯಾದ ಪ್ರೋತ್ಸಾಹ ಅವಕಾಶಗಳು ಸಿಗುತ್ತಿಲ್ಲ ಎಂದ ಅವರು
ಈ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಜಯಗಳಿಸಲಿ ಇಂತಹ ಪ್ರತಿಭೆಗಳನ್ನು ಎಲ್ಲೆಡೆ ಗುರುತಿಸಿ ಪ್ರೋತ್ಸಾಹಿಸುವಂತಾಗಲಿ ” ಎಂದು ಹೇಳಿದರು .

ಈ ಸಂಧರ್ಭದಲ್ಲಿ ಡಾ. ಸುವರ್ಣ ಆರುಂಡಿ ನಾಗರಾಜ್ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಲಿ ಅಧ್ಯಕ್ಷರು ವಿಜಯನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ,ಹಲವಾಗಲು ಸಹಕಾರಿ ಸಂಘ ಮತ್ತು ಯಾದವ ಸಮಾಜದ ಅಧ್ಯಕ್ಷರಾದ ಮತ್ತೂರು ಪ್ರಕಾಶ್ ,ದ್ಯಾಮಪ್ಪ, ಸೋಮಲಿಂಗಪ್ಪ , ಬಸವರಾಜಪ್ಪ , ಮಲ್ಲನಗೌಡ ,ಹೆಚ್. ಎಂ. ಶಿವಾನಂದಯ್ಯ , ಬಸವರಾಜ್ ,ಕೊಟ್ರೇಶ್, ಒಳಗೊಂಡಂತೆ ತಾವರ ಗೊಂದಿ ಗ್ರಾಮದ ಅನೇಕರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *