Vijayanagara Express

Kannada News Portal

ಅರಸಿಕೇರೆಯ ಎನ್ ಕೊಟ್ರೇಶ್ ರವರು ನವೆಂಬರ್11ರಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆ : ರಂಗೇರಿದ ರಾಜಕೀಯ ರಣಕಣ

1 min read

ವಿಶೇಷ ವರದಿ:ಪಟ್ನಾಮದ ವೆಂಕಟೇಶ್ ಹರಪನಹಳ್ಳಿ

ಅರಸಿಕೇರೆಯ ಎನ್ ಕೊಟ್ರೇಶ್ ರವರು ನವೆಂಬರ್11ರಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆ : ರಂಗೇರಿದ ರಾಜಕೀಯ ರಣಕಣ

 

ಹರಪನಹಳ್ಳಿ:ಅರಸಿಕೇರೆಯ ಎನ್ ಕೊಟ್ರೇಶ್ ರವರು ನವೆಂಬರ್ 11 ರಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ವೇದಿಕೆ ಸಿದ್ಧವಾಗಿದೆ ಎಂದು ಸ್ವತಃ ಕೊಟ್ರೇಶ್ ರವರೆ ಸ್ಪಷ್ಟಪಡಿಸಿದ್ದಾರೆ ಆದುದರಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಾಗಿದೆ.

ಹೌದು , ಹರಪನಹಳ್ಳಿಯ ರಾಜಕೀಯ ವಲಯದಲ್ಲಿ ಇಷ್ಟು ದಿನ ಇದ್ದ ಊಹಾಪೋಹಗಳಿಗೆ ಶೀಘ್ರದಲ್ಲೇ ತೆರೆಬೀಳಲಿದೆ ಅದೆನೇಂದರೆ 2013 ಮತ್ತು 2018ನೇ ಇಸ್ವಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರಸೀಕೆರಿ ಗ್ರಾಮದ ಎನ್ ಕೊಟ್ರೇಶ್ ರವರು ಹರಪನಹಳ್ಳಿಯ ಸಾಮಾನ್ಯ ಕ್ಷೇತ್ರ ರಾಜಕಾರಣಕ್ಕೆ ಬರಲು ಈಗ ಭರ್ಜರಿ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ ಅದರಂತೆ ಬೆಂಗಳೂರಿನ ಕೆಪಿಸಿಸಿ ಭವನದಲ್ಲಿ ಇದೇ ನವಂಬರ್ 11ರಂದು ಕಾಂಗ್ರೆಸ್ ಗೆ ತಮ್ಮ ಅಸಂಖ್ಯಾತ ಬೆಂಬಲಿಗರೊಂದಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಅದರ ಬೆನ್ನಲ್ಲೇ ಕೊಟ್ರೇಶ್ ರವರು ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರನ್ನು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳನ್ನು, ಟಿಕೆಟ್ ಆಕಾಂಕ್ಷಿಗಳನ್ನು ಭೇಟಿ ಮಾಡಲು ಮನೆ ಮನೆಗೆ ತೆರಳಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿ ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚೆ ಆರಂಭಿಸಿದ್ದಾರೆ ಈಗಾಗಲೇ ಹೆಚ್ ಬಿ ಪರಶುರಾಮಪ್ಪ, ಶಶಿಧರ ಪೂಜಾರ್, ಬೇಲೂರು ಅಂಜಿನಪ್ಪ,ಹೆಚ್ ಕೆ ಹಾಲೇಶ್, ಪ್ರೇಮ್ ಕುಮಾರ್ ಗೌಡ,ಅಜ್ಜಪ್ಪ ವಕೀಲರು, ಚಿದಾನಂದಪ್ಪ ವಕೀಲರು, ಯಶವಂತ ಗೌಡ,ಹಾಲದಹಳ್ಳಿ ಷಣ್ಮುಖಪ್ಪ,ಮುಂತಾದ ಮುಖಂಡರನ್ನು ಜೊತೆಗೆ ಮಾತುಕತೆ ನಡೆಸಿದ್ದಾರೆ.

ಎರಡೂ ಚುನಾವಣೆಗಳಲ್ಲೂ ಮೂರನೇ ಅತಿ ದೊಡ್ಡ ಸಂಖ್ಯೆಯ ಮತಗಳನ್ನು ಗಳಿಸಿದ ಕೀರ್ತಿಗೆ ಪಾತ್ರರಾದ ಎನ್ ಕೊಟ್ರೇಶ್ ರವರು 2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಧಿಕೃತವಾಗಿ ಇದೀಗ ಪಾದಾರ್ಪಣೆ ಮಾಡಲು ವೇದಿಕೆ ಸಿದ್ಧವಾಗಿದೆ. ಕೊಟ್ರೇಶ್ ಅವರು ಕಾಂಗ್ರೆಸ್ ಗೆ ಸೇರ್ಪಡೆ ಕೊಳ್ಳುತ್ತಿದ್ದಾರೆ ಎಂಬ ವಿಷಯ ಹೊರಬಿದ್ದ ಬೆನ್ನಲ್ಲೇ ತಾಲೂಕಿನಾದ್ಯಂತ ಮಿಂಚಿನ ಸಂಚಲನ ಆರಂಭವಾಗಿದೆ ಯುವಕರ ದಂಡಂತೂ ಹುಚ್ಚೆದ್ದು ತುದಿಗಾಲ ಮೇಲೆ ನಿಂತು ಅವರಿಗೆ ಅಭೂತಪೂರ್ವದ ಸ್ವಾಗತವನ್ನು ಕೋರಲು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ .

ಇದಕ್ಕೆ ಕಾರಣ ಈ ಕ್ಷೇತ್ರದಲ್ಲೇ ಎರಡುಬಾರಿ ಪರಾಭವಗೊಂಡಿದ್ದರು ಅಲ್ಲದೇ ಈ ಬಾರಿ ಹರಪನಹಳ್ಳಿ ಕ್ಷೇತ್ರ ಸ್ಥಳೀಯರಿಗೆ ಎಂಬ ಕೂಗು ಎದ್ದಿದೆ ಅಲ್ಲದೆ ಪಂಚಮಸಾಲಿ ಲಿಂಗಾಯತ ಸಮುದಾಯವು ತಾಲೂಕಿನಲ್ಲಿ ಅತಿದೊಡ್ಡ ಸಮುದಾಯವಾಗಿದೆ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಕೊಟ್ರೇಶ್ ರವರಿಗೆ ಈ ಬಾರಿ ವಿಜಯದ ಮಾಲೆ ಒಲಿಯುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸುದ್ದಿಗಾರರು ಕೊಟ್ರೇಶ್ ರವರನ್ನು ಸಂದರ್ಶಿಸಿ ಸರ್ ತಾವು ಎರಡು ಬಾರಿ ಕ್ಷೇತ್ರದಲ್ಲಿ ಬಾರಿ ಆಸೆ ಕನಸುಗಳೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದಿರಿ ಈ ಬಾರಿ ಆತ್ಮವಿಶ್ವಾಸವನ್ನ ಇಟ್ಟುಕೊಂಡು ಗೆಲುವಿನ ದಡ ಸೇರಲು ತಾವು ಬಂದಿದ್ದೀರಿ ಯಾವೆಲ್ಲ ಅಭಿವೃದ್ಧಿ ಯೋಜನೆಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಜನರ ಮುಂದೆ ಹೋಗುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ತಾಲೂಕು ನೀರಾವರಿಯಿಂದ ವಂಚಿತವಾಗಿದೆ ,ಪಕ್ಕದ ಜಗಳೂರು ತಾಲೂಕಿನಲ್ಲಿ ತುಂಗಭದ್ರಾ ನದಿ ನೀರನ್ನು ತಂದು ಸಾಕಷ್ಟು ನೀರಾವರಿ ವ್ಯವಸ್ಥೆಯನ್ನು ಮಾಡಿದ್ದಾರೆ ನಮ್ಮ ತಾಲೂಕಿನಲ್ಲಿ ಅದು ಇದುವರೆಗೂ ಸಾಧ್ಯವಾಗಿಲ್ಲ ನಾನು ಈ ಕ್ಷೇತ್ರದಿಂದ ಗೆದ್ದರೆ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು,
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ನೆನೆಗುದಿಗೆಬಿದ್ದಿದೆ ಆ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತೇನೆ , ತಾಲೂಕಿನಲ್ಲಿ ರಸ್ತೆಗಳಂತೂ ಗುಂಡಿ -ಗುಂಡಿ ಹೊಂಡಗಳಾಗಿ ಮಾರ್ಪಟ್ಟಿವೆ ಅವುಗಳನ್ನು ವ್ಯವಸ್ಥಿತವಾದ ರಸ್ತೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ ರೈತರಿಗೆ ಸಕಾಲದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಸರ್ಕಾರಿ ಅಧಿಕಾರಿಗಳು ಮಾಡಿಕೊಡುವಂತೆ ವ್ಯವಸ್ಥೆಯನ್ನು ಮಾಡುತ್ತೇನೆ ಬಯಲು ಭೂಮಿಯಾದ ಹರಪನಹಳ್ಳಿ ತಾಲೂಕಿನಲ್ಲಿ ನಿರುದ್ಯೋಗವು ಸಾಕಷ್ಟು ಪ್ರಮಾಣದಲ್ಲಿದೆ ಅದಕ್ಕಾಗಿ ಬಹುತೇಕ ತಾಂಡಗಳು ಮತ್ತು ಕೆಲವು ಹಿಂದುಳಿದ ಗ್ರಾಮಗಳ ಬಡ ಕಾರ್ಮಿಕರು ಚಿಕ್ಕಮಂಗಳೂರು ಕೊಡಗು ಮಂಗಳೂರು ಬೆಂಗಳೂರು ಮುಂತಾದ ಕಡೆಗಳಲ್ಲಿ ದುಡಿಮೆಯನ್ನು ಹರಸಿ ಹೊಲಸೆ ಹೋಗುತ್ತಿದ್ದಾರೆ ಇಂತವರಿಗೆ ಸಣ್ಣ ಅತಿ ಸಣ್ಣ ಮತ್ತು ಗುಡಿ ಕೈಗಾರಿಕೆ ಹಾಗೂ ಉದ್ಯೋಗ ಖಾತ್ರಿ ಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಪ್ರಯತ್ನ ಮಾಡುತ್ತೇನೆ. ಒಟ್ಟಾರೆಯಾಗಿ ಸ್ಥಳೀಯ ಮಟ್ಟದಲ್ಲಿ ಇದ್ದುಕೊಂಡು ಜನರ ಕಷ್ಟ ಸುಖಗಳಿಗೆ ಭಾಗಿಯಾಗಿ ತಾಲೂಕಿನನ್ನುಅಭಿವೃದ್ಧಿ ಪಥದತ್ತ ಮುನ್ನಡೆಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು .

ತಾವು ಕಾಂಗ್ರೆಸ್, ಕೆಜೆಪಿ, ಬಿಜೆಪಿ, ಜೆಡಿಎಸ್, ಪಕ್ಷದಿಂದ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಡೆಸಿ ಈಗ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೀರಿ ತಮಗೆ ಪಕ್ಷ ಟಿಕೆಟ್ ನೀಡಿದರೆ ಸರಿ, ಒಂದು ವೇಳೆ ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದೇ ಹೋದರೆ ತಮ್ಮ ಮುಂದಿನ ನಡೆ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಟಿಕೆಟ್ ಸಿಕ್ಕರೆ ಚುನಾವಣೆ ಮಾಡುತ್ತೇನೆ ಒಂದು ವೇಳೆ ಟಿಕೆಟ್ ಸಿಗದೇ ಹೋದರೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಪಕ್ಷಕ್ಕಾಗಿ ದುಡಿಯುತ್ತೇನೆ , ಇದು ನಾನು ಸ್ಪರ್ಧಿಸುವ ಈ ಚುನಾವಣೆಯಲ್ಲಿ ಒಂದು ವೇಳೆ ಸೋತರೆ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಇದೆ ಕೊನೆಯ ಚುನಾವಣೆ ಆಗಿರುತ್ತದೆ ಎಂದು ತಿಳಿಸಿದರು.

 

 

Leave a Reply

Your email address will not be published. Required fields are marked *