Vijayanagara Express

Kannada News Portal

ಅರಸೀಕೆರಿ ಎನ್ ಕೊಟ್ರೇಶ್ ಕಾಂಗ್ರೆಸ್ ಗೆ ಸೇರ್ಪಡೆ ಹರಪನಹಳ್ಳಿಯಲ್ಲಿ ಹೆಚ್ಚಿದ, ರಾಜಕೀಯ ರಂಗು

1 min read

 

ಅರಸೀಕೆರಿ ಎನ್ ಕೊಟ್ರೇಶ್ ಕಾಂಗ್ರೆಸ್ ಗೆ ಸೇರ್ಪಡೆ ಹರಪನಹಳ್ಳಿಯಲ್ಲಿ ಹೆಚ್ಚಿದ, ರಾಜಕೀಯ ರಂಗು

ಹರಪನಹಳ್ಳಿ:ಅರಸೀಕೆರಿ ಎನ್ ಕೊಟ್ರೇಶ್ ಕಾಂಗ್ರೆಸ್ ಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಹರಪನಹಳ್ಳಿಯಲ್ಲಿ ರಾಜಕೀಯ ರಂಗು ಹೆಚ್ಚಾಗಿದೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ನಾಲ್ಕು ವರ್ಷಗಳ ಕಾಲ ತೆರೆಮರೆಗೆ ಸರಿದಿದ್ದ ಎನ್ ಕೊಟ್ರೇಶ್ ರವರು ಇದ್ದಕ್ಕಿದ್ದ ಹಾಗೆ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿ ತಾಲೂಕಿನಲ್ಲಿ ತಲ್ಲಣ ಉಂಟುಮಾಡಿದ್ದಾರೆ .

ಇಂದಿನಿಂದ ತಾಲೂಕಿನ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತವೆ ಇಷ್ಟು ದಿನಗಳ ಕಾಲ ತಾಲೂಕಿನಲ್ಲಿ ಆಡಳಿತ ಪಕ್ಷದ ದೌರ್ಬಲ್ಯವನ್ನು ಮತ್ತು ವೈಫಲ್ಯಗಳನ್ನು ಎತ್ತಿಹಿಡಿಯುವ ವಿರೋಧ ಪಕ್ಷದ ಧ್ವನಿ ಇಲ್ಲದಂತಾಗಿತ್ತು ಆದರೆ ಕೊಟ್ರೇಶ್ ರವರು ಪಕ್ಷಕ್ಕೆ ಪ್ರವೇಶ ಮಾಡಿದ ನಂತರ ಬಿಜೆಪಿ ಯ ವೈಪಲ್ಯಗಳನ್ನು ಪ್ರಬಲವಾಗಿ ಖಡಾ ಖಂಡಿತವಾಗಿ ವಿರೋಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಅದೇನೆಯಿರಲಿ ಕೊಟ್ರೇಶ್ ರವರ ಪ್ರವೇಶದಿಂದಾಗಿ ತಾಲೂಕಿನಲ್ಲಿ ರಾಜಕೀಯ ರಂಗೇರಿರುವುದಂತೂ ಸತ್ಯ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದಂತೂ ಸತ್ಯ.

 

Leave a Reply

Your email address will not be published. Required fields are marked *