ಬೆಳ್ಳಂಬೆಳಗ್ಗೆ ಪುರಸಭೆ ವತಿಯಿಂದ ತೆರವು ಕಾರ್ಯಾಚರಣೆ
1 min readಬೆಳ್ಳಂಬೆಳಗ್ಗೆ ಪುರಸಭೆ ವತಿಯಿಂದ ತೆರವು ಕಾರ್ಯಾಚರಣೆ
ಹರಪನಹಳ್ಳಿ: ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಜ್ವಾಲಾ ಮಾಲಿನಿ ಪೆಟ್ರೋಲ್ ಬಂಕ್ ಮತ್ತು ಅದರ ಆಸು ಪಾಸಿನ ಅಂಗಡಿ ಮುಂಗಟ್ಟುಗಳೆಲ್ಲವನ್ನು ಬೆಳಿಗ್ಗೆ ತೆರವು ಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.
ಸರ್ಕಾರಿ ಬಸ್ ನಿಲ್ದಾಣಕ್ಕೆ ಬಸ್ ಗಳು ಸರಾಗವಾಗಿ ಒಳಗಡೆ ಹೋಗಿ ಬರಲು ಸಾಕಷ್ಟು ಕಿರಿ ಕಿರಿ ಉಂಟಾಗುತ್ತಿತ್ತು ಆ ಕಾರಣದಿಂದಾಗಿ ಜ್ವಾಲಾ ಮಾಲಿನಿ ಪೆಟ್ರೋಲ್ ಬಂಕ್ ನ ಅವಧಿಯು 2019 ಕ್ಕೆ ಲೀಜ್ ಕರಾರು ಕೊನೆಗೊಂಡಿತ್ತು ಆ ಪ್ರಕಾರ ಬಂಕನ್ನು ಸ್ಥಗಿತಗೊಳಿಸುವಂತೆ ಪುರಸಭೆ ಅಧಿಕಾರಿಗಳು ಮುಂದಾಗಿದ್ದರು ಆಗ ಪುರಸಭೆ ಅಧಿಕಾರಿಗಳ ತೆರವು ಕಾರ್ಯಾಚರಣೆಯನ್ನು ತಡೆಯುವಂತೆ ಕೋರಿ ಜ್ವಾಲಾ ಮಾಲಿನಿ ಪೆಟ್ರೋಲ್ ಬಂಕ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು ತಡೆಯಾಜ್ಞೆ ಯ ಅವಧಿ 2022 ರ ಅಕ್ಟೋಬರ್ ತಿಂಗಳಲ್ಲಿ ಮುಗಿದ ನಂತರ ಅಂತಿಮವಾಗಿ ಪೆಟ್ರೋಲ್ ಬಂಕ್ ಅನ್ನು ತೆರವುಗೊಳಿಸಲು ಪುರಸಭೆ ಮುಂದಾಗಿತ್ತು ಆ ಪ್ರಕಾರ ಪೆಟ್ರೋಲ್ ಬಂಕ್ ಮತ್ತು ಅದರ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತವಾದ ವಾತಾವರಣವನ್ನು ಹರಪನಹಳ್ಳಿ ಪುರಸಭೆ ಅಧಿಕಾರಿಗಳು ಕಲ್ಪಿಸಿದ್ದಾರೆ ಎಂದು ಸಾರ್ವಜನಿಕರು ಪುರಸಭೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳನ್ನು ಶ್ಲಾಗಿಸಿದ್ದಾರೆ .
ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಬಿ, ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್, ಪುರಸಭೆ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.