Vijayanagara Express

Kannada News Portal

ಲಕ್ಷ್ಮೀ ವೆಂಕಟೇಶ್ವರ ದಾದಪ್ಪನಾಯಕ ರಥೋತ್ಸವದ ಪೂರ್ವಭಾವಿ ಸಭೆ

1 min read

 

ಲಕ್ಷ್ಮೀ ವೆಂಕಟೇಶ್ವರ ದಾದಪ್ಪನಾಯಕ ರಥೋತ್ಸವದ ಪೂರ್ವಭಾವಿ ಸಭೆ

ಹರಪನಹಳ್ಳಿ: ನ-18,ಪಟ್ಟಣದ ಹೊರವಲಯದಲ್ಲಿರುವ ದೇವರ ತಿಮ್ಮಲಾಪುರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ತಹಶೀಲ್ದಾರ್ ಡಾ. ಶಿವಕುಮಾರ್ ಬಿರಾದರ್ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಬಗ್ಗೆ ಚರ್ಚಿಸಲಾಯಿತು.

ತಾಲೂಕಿನ ದೇವರ ತಿಮ್ಮಲಾಪುರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ನಡೆಯುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ( ಮಹಾರಾಜ ದಾದಣ್ಣ ನಾಯಕರ )ರಥೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ನೆರವೇರಿಸಲು ಗ್ರಾಮದ ಮುಖಂಡರು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ರವರು ಕಳೆದ ಎರಡು ವರ್ಷಗಳಿಂದ ಕರೋನದ ಕರಿನೆರಳಿನಲ್ಲಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು ಈ ಬಾರಿ ಕರೋನ ಕೊನೆಗೊಂಡು ಮುಕ್ತವಾದ ಜನರ ಜೀವನ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ವೈಭವದಿಂದ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ ಎಂದರು.

ಡಿಸೆಂಬರ್ 8 ರ ಗುರುವಾರ ಹುಣ್ಣಿಮೆಯ ದಿನದಂದು ರಥೋತ್ಸವವು ಜರುಗಲಿದೆ ಅಂದು ಬೆಳಿಗ್ಗೆ 11 ಗಂಟೆಗೆ ಬ್ರಹ್ಮ ರಥೋತ್ಸವ,ಸಂಜೆ 6 .30ಕ್ಕೆ ಸಾರ್ವಜನಿಕ ರಥೋತ್ಸವವನ್ನು ಆಚರಿಸಲು ಅಲ್ಲದೆ ಸಾಂಪ್ರದಾಯಿಕ ಕಟ್ಟುಪಾಡುಗಳು, ರೂಢಿಗಳು, ಆಚಾರಗಳನ್ನು ಯಥಾವತ್ತಾಗಿ ಆಚರಿಸುವಂತೆ ಹಾಗೂ ಯಾವ ಯಾವ ಕಾರ್ಯಗಳಿಗೆ ಯಾವ ಯಾವ ಬಾಬು ದಾರರು ಹಾಜರಿದ್ದು ದೇವರ ಸೇವೆಯನ್ನು ಪ್ರತಿವರ್ಷದ ಸಾಂಪ್ರಾದಾಯದಂತೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಬಿರಾದರ್ ರವರು ಹೇಳಿದರು.

ಜಾತ್ರೆಯಲ್ಲಿ ಜನರು ಸೇರುವ ಕಾರಣದಿಂದಾಗಿ ಮುಂಜಾಗ್ರತ ಹಾಗೂ ಸುರಕ್ಷಿತ ಕ್ರಮಕ್ಕಾಗಿ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಸೇವಾದಳದ ಕಾರ್ಯಕರ್ತರನ್ನು ರಥೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸೂಚಿಸಿದರು ಜಾತ್ರೆಗೆ ಬರುವ ಸಮಸ್ತ ಭಕ್ತಾದಿಗಳು ದೇಣಿಗೆ ಕೊಡುವವರಿದ್ದರೆ, ಆನ್ಲೈನ್ ಮೂಲಕವೂ ನೀಡಬಹುದು ದೂರವಾಣಿ ಸಂಖ್ಯೆಯ ಸ್ಕ್ಯಾನ್ ಬಳಸಿ ಫೋನ್ ಪೇ ,ಗೂಗಲ್ ಪೇ , ಕೆನರಾ ಬ್ಯಾಂಕ್ ನ ಖಾತಾ ಸಂಖ್ಯೆ 4242101010834 ಮತ್ತು ಆಡಳಿತ ಅಧಿಕಾರಿಯ ಸಿಬ್ಬಂದಿಗಳನ್ನು ಸಂಪರ್ಕಿಸಿ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆಗೂ ಸಹ ಹಣವನ್ನು ನೀಡಬಹುದು ಎಂದು ತಹಸಿಲ್ದಾರ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಪೂಜಾರ್, ಅಡಿವಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಸನ್ನ ಪೂಜಾರ್, ನಾಗರಾಜ್, ರೇಣುಕಾ ಮಂಜುನಾಥ್, ಧರ್ಮ ಕರ್ತರಾದ ಕಟ್ಟಿ ಹರ್ಷ, ದಂಡಿನ ಹರೀಶ್, ಹಿರಿಯ ಮುಖಂಡರಾದ ಬಾದನಹಟ್ಟಿ ಮಾಧವರಾವ್,ಅಧಿಕಾರಿಗಳಾದ ಕಾರ್ಯಪಾಲಕ ಅಭಿಯಂತರ ಸತೀಶ್ ಪಾಟೀಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎನ್ ಶ್ರೀನಿವಾಸ್ ತಾಲೂಕು ಆರೋಗ್ಯ ಅಧಿಕಾರಿ ಹಾಲಸ್ವಾಮಿ, ಮುಜರಾಯಿ ಇಲಾಖೆಯ ಸಿಬ್ಬಂದಿಗಳಾದ ರಮೇಶ್, ಶಿವಕುಮಾರ್, ಗ್ರಾಮದ ಮುಖಂಡರುಗಳಾದ ಸಣ್ಣ ನಿಂಗಪ್ಪ, ಭೀಮಪ್ಪ ,ಮೂಡಲಪ್ಪ,ಆನೆಗುಂದಿ ನಾಗರಾಜ್, ಶ್ರೀಕಾಂತ್ ,ನಾಗರಾಜ್, ಬಣಕಾರ್ ನಾಗರಾಜ್, ತಳವಾರ್ ಸತ್ಯ ,ತಳವಾರ್ ಗೋಣಪ್ಪ, ಪರಶುರಾಮ, ಭರಮಪ್ಪ, ಶಿಲ್ಪಾಚಾರ್, ಚೆನ್ನೇಶ್ ಆಚಾರ್ ಮೌನೇಶ್ ಆಚಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *