October 11, 2024

Vijayanagara Express

Kannada News Portal

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಸೇವಾಕಾಂಕ್ಷಿ ವೈ ಡಿ ಅಣ್ಣಪ್ಪ ಗುಂಡಗತ್ತಿ ಗ್ರಾಮಕ್ಕೆ ಬೇಟಿ

1 min read

 

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಸೇವಾಕಾಂಕ್ಷಿ ವೈ ಡಿ ಅಣ್ಣಪ್ಪ ಗುಂಡಗತ್ತಿ ಗ್ರಾಮಕ್ಕೆ ಬೇಟಿ

 

ಹರಪನಹಳ್ಳಿ : ನ-24, ತಾಲೂಕಿನ ಗುಂಡಗತ್ತಿ ಗ್ರ‍ಾಮಕ್ಕೆಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಸೇವಾಕಾಂಕ್ಷಿ ವೈ ಡಿ ಅಣ್ಣಪ್ಪ ಬೇಟಿ ನೀಡಿ ಶ್ರೀ ಆಂಜನೇಯ ಸ್ವಾಮಿ ಆಶೀರ್ವಾದ ಪಡೆದರು.

ಶ್ರೀ ಆಂಜನೇಯನ ದರ್ಶನ ಪಡೆದು ನಂತರ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬೇಟಿ ಕೊಟ್ಟು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದರು ಈ ವೇಳೆ ಮಾತನಾಡಿದ ವೈ ಡಿ ಅಣ್ಣಪ್ಪ ರವರು ಗುಂಡಗತ್ತಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನವು ಪುರಾತನ ದೇವಸ್ಥಾನವಾಗಿದ್ದು ಈ ದೇವಾಲಯಕ್ಕೆ ನಾವು ಭಕ್ತರಾಗಿದ್ದೇವೆ ಸುಮಾರು ದಿನಗಳ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸ್ವಾಮಿ ಆಶೀರ್ವಾದವನ್ನು ಪಡೆದು ಹರ್ಷಿತರಾಗಿದ್ದೇನೆ.

ನಾನು ಹರಪನಹಳ್ಳಿ ತಾಲೂಕಿನ ಮನೆಮಗನಾಗಿದ್ದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಪ್ರಬಲ ಸೇವಾಕಾಂಕ್ಷಿಯಾಗಿದ್ದೇನೆ ಅಲ್ಲದೆ ಸ್ಥಳೀಯ ಅಭ್ಯರ್ಥಿಯಾಗಿದ್ದು ಜನರು ನನಗೆ ಈ ಬಾರಿ ಆಶೀರ್ವಾದ ಮಾಡಿದರೆ ಈ ಜನರ ಸೇವೆ ಮಾಡುತ್ತೇನೆ ಮತ್ತು ಜನರ ಋಣವನ್ನು ತೀರಿಸುತ್ತೇನೆ.

ನಮ್ಮ ತಂದೆಯವರೂ ಬಳ್ಳಾರಿ ಜಿಲ್ಲೆಯ ಸಂಸದರೂ ಆದ ವೈ ದೆವೇಂದ್ರಪ್ಪ ನವರು ಈಗಾಗಲೇ ಉತ್ತಮವಾದ ಕೆಲಸವನ್ನು ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ಮಾಡಿರುತ್ತಾರೆ ಅಲ್ಲದೆ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದು ಸರಳ ಸಜ್ಜನಿಕೆಯಿಂದ ಎಲ್ಲರೋಡನಾಟದಲ್ಲಿದ್ದುಕೊಂಡು ಸುಲಭವಾಗಿ ಜನಸಾಮಾನ್ಯರಿಗೆ ಸ್ಥಳೀಯ ಮಟ್ಟದಲ್ಲಿ ಕೈಗೆ ಸಿಗುವ ಹಾಗೂ ಜನರಿಗೆ ಸ್ಪಂದಿಸಿ ಜನಮನ್ನಣೆ ಗಳಿಸಿರುತ್ತಾರೆ ಹೀಗಾಗಿ ನಮಗೆ ಈ ಬಾರಿ ಜನರು ಆಶೀರ್ವಾದ ಮಾಡಿದರೆ ತಾಲೂಕಿನ ಜನರಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರಪನಹಳ್ಳಿ ತಾಲ್ಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷರಾದ ಬಂದೋಳ್ ಮಂಜುನಾಥ್ ,ಗ್ರಾಮದ ಹಿರಿಯ ಮುಖಂಡರಾದ ಬಿ ನಾಗಪ್ಪ,ಎಂ ಕೋಟೆಪ್ಪ,ಚನ್ನಬಸಪ್ಪ,ಬಂದೋಳ್ ಸಿದ್ದಪ್ಪ , ಪೂಜಾರ್ ತಿಮ್ಮಣ್ಣ,ಮತ್ತು ಗ್ರಾಮಸ್ಥರು ಇತರರು ಹಾಜರಿದ್ದರು.

 

Leave a Reply

Your email address will not be published. Required fields are marked *