ಬಿ ಎಸ್ ಎನ್ ಎಲ್ ಕಚೇರಿಯ ಗೇಟು ಬಾಲಕನ ಮೇಲೆ ಬಿದ್ದು ಬಾಲಕ ಗೌತಮ್ ಸಾವು
1 min readಬಿ ಎಸ್ ಎನ್ ಎಲ್ ಕಚೇರಿಯ ಗೇಟು ಬಾಲಕನ ಮೇಲೆ ಬಿದ್ದು ಬಾಲಕ ಗೌತಮ್ ಸಾವು
ಹರಪನಹಳ್ಳಿ: ಪಟ್ಟಣದ ಬಿ ಎಸ್ ಎನ್ ಎಲ್ ಕಚೇರಿಯ ಗೇಟು ಬಾಲಕನ ಮೇಲೆ ಬಿದ್ದು ಗೌತಮ (7) ಎಂಬ ಬಾಲಕ ಸಾವನ್ನಪ್ಪಿರುವ ಘಟನೆ ಪಟ್ಟಣದ ಡಿವೈಎಸ್ಪಿ ಕಚೇರಿ ಹತ್ತಿರ ಇರುವ ಬಿಎಸ್ ಎನ್ ಎಲ್ ಕಚೇರಿಯ ಬಳಿ ನೆಡೆದಿದೆ .
ಬಾಗಳಿ ಗ್ರಾಮದ ಮಲ್ಲೇಶ್ ರವರ ಪತ್ನಿಯಾದ ವೀಣಾ ರವರು
ಮದ್ಯಾಹ್ನ 1.30 ಗಂಟೆ ಸುಮಾರಿಗೆ ಆಧಾರ್ ಕಾರ್ಡ್ ನೋಂದಣಿ ತಿದ್ದುಪಡಿ ಮಾಡಿಸುವ ಸಲುವಾಗಿ ಪಟ್ಟಣದ ಡಿವೈಎಸ್ಪಿ ಕಚೇರಿ ಹತ್ತಿರ ಇರುವ ಬಿಎಸ್ ಎನ್ ಎಲ್ ಕಚೇರಿಗೆ ಬಂದಿದ್ದರು ಆ ವೇಳೆ ತನ್ನ 7 ವರ್ಷದ ಮಗನಾದ ಗೌತಮನು ಕಚೇರಿಯ ಕಾಂಪೌಂಡ್ ಗೋಡೆ ಹತ್ತಿರ ಆಟವಾಡಲು ಹೋಗಿ ಗೇಟ್ ನ್ನು ಮುಟ್ಟಿದ್ದಾನೆ ಆಗ ಗೇಟ್ ಬಾಲಕನ ಮೇಲೆ ಬಿದ್ದು ಗೌತಮ ತಲೆ ಹೊಡೆದು ತೀವ್ರ ರಕ್ತಸ್ರಾವವಾಗಿ ಬಾಲಕ ಸ್ಥಳದಲ್ಲೇ ಅಸ್ವಸ್ಥತನಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು ಆಗ ವೈದ್ಯರು ಮಗುವು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಈ ಕುರಿತು ಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಸಂಬಂಧಿಕರಿಂದ ಬಿ ಎಸ್ ಎನ್ ಎಲ್ ಕಚೇರಿಯ ಸಿಬ್ಬಂದಿ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು
ಈ ಘಟನೆ ನಡೆಯಲು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಗೇಟ್ ಬಹಳ ದಿನಗಳ ಹಿಂದೆಯೆ ಮುರಿದಿದೆ ಅದರ ಬಗ್ಗೆ ಎಚ್ಚರ ವಹಿಸಿ ಕಾಳಜಿ ತೊರಿಸದೆ ಹಮಾಯಕ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಆದುದರಿಂದ ಇವರ ಮೇಲೆ ಸೂಕ್ತವಾದ ತನಿಖೆಯಾಗಲಿ ಮತ್ತು ಕಾನೂನು ಕ್ರಮವನ್ನು ಜರುಗಿಸಲಿ ಮಗುವನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಮಮೂರ್ತಿ ಶಿಕ್ಷಕರು, ನಾಗರಾಜ್, ಯಲ್ಲಾಪುರ ಪುರುಷೋತ್ತಮ, ಹನುಮಂತಪ್ಪ, ಮಂಜುನಾಥ್, ವೆಂಕಟೇಶ್, ರಾಘವೇಂದ್ರ, ಇತರರು ಹಾಜರಿದ್ದರು.