ಪುರಸಭೆ ತುರ್ತು ಸಭೆಯಲ್ಲಿ ಅಧ್ಯಕ್ಷ ಸದಸ್ಯರಗೂ ಮಾತಿನ ಚಕಮಕಿ ನಡುವೆಯೆ ಒಮ್ಮತದ ಸಮ್ಮತಿ
1 min readಪುರಸಭೆ ತುರ್ತು ಸಭೆಯಲ್ಲಿ ಅಧ್ಯಕ್ಷ ಸದಸ್ಯರಗೂ ಮಾತಿನ ಚಕಮಕಿ ನಡುವೆಯೆ ಒಮ್ಮತದ ಸಮ್ಮತಿ
ಹರಪನಹಳ್ಳಿ: ನ -30 , ಇದೆ ನವೆಂಬರ್ 28 ರಂದು ಮುಂದೂಡಿದ್ದ ಪುರಸಭೆ ಸಾಮಾನ್ಯ ಸಭೆಯು ಇಂದು ತುರ್ತು ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ಅಧ್ಯಕ್ಷ ಸದಸ್ಯರಗೂ ಮಾತಿನ ಚಕಮಕಿ ನಡೆಯಿತು ಆ ನಡುವೆಯೆ 2.35 ಕೋಟಿ ರೂಪಾಯಿಗಳ ಕ್ರಿಯಾಯೋಜನೆಗೆ ಒಮ್ಮತದ ಸಮ್ಮತಿಯನ್ನು ಪಡೆಯಲಾಯಿತು .
ಪಟ್ಟಣದ ಪುರಸಭೆ ಕಚೇರಿಯಲ್ಲಿ ತುರ್ತು ಸಭೆಯನ್ನು ಕರೆಯಲಾಗಿತ್ತು ಇದೇ ನವೆಂಬರ್ ತಿಂಗಳ 28 ರಂದು ನಡೆಸಲಾಗಿದ್ದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸದಸ್ಯರ ನಡುವೆ ನಡೆದ ಬಾರಿ ಚಕಮಕಿ ಮತ್ತು ಗೊಂದಲ ಹಾಗೂ ಗಲಾಟೆ ಕಾರಣದಿಂದಾಗಿ ಮುಂದೂಡಲಾಗಿತ್ತು ಆ ಸಭೆಯನ್ನು ಇಂದು ನಡೆಸಲಾಯಿತು.
2.35 ಕೋಟಿ ರೂಪಾಯಿಗಳು 15 ನೇ ಹಣಕಾಸು, ಹಾಗೂ 90 ಲಕ್ಷ ರೂಪಾಯಿಗಳು ಎಸ್ ಎಫ್ ಸಿ ಅನುದಾನದ ಕ್ರಿಯಾಯೋಜನೆಗೆ ಶಾಸಕರ ಸುಮುಖದಲ್ಲಿ ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆಯನ್ನು ಪಡೆದು ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು ಅದನ್ನು ಪ್ರಶ್ನಿಸಿ ಪುರಸಭೆ ಕೆಲವು ಸದಸ್ಯರು ನಮ್ಮ ಒಪ್ಪಿಗೆ ಪಡೆದಿಲ್ಲ ಹಾಗಾಗಿ ಇದನ್ನು ತಡೆಹಿಡಿಯಿರಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದರಲ್ಲದೆ ಇದು ತಾರತಮ್ಯದಿಂದ ಕೂಡಿದ ಕ್ರಿಯಾ ಯೋಜನೆಯಾಗಿದೆ ಎಂದು ದೂರಿದ್ದರು ಅದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಪುನಹ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಚರ್ಚಿಸಿ ಒಪ್ಪಿಗೆಯನ್ನು ಪಡೆದು ಪುನಃ ಕಳಿಸಿಕೊಡುವಂತೆ ಸೂಚಿಸಿದ್ದರು ಆ ಪ್ರಕಾರವಾಗಿ ನವೆಂಬರ್ 28 ರಂದು ನಡೆದ ಸಮಾನ್ಯ ಸಭೆಯಲ್ಲಿ ಚರ್ಚಿಸುತ್ತಿರುವಾಗ ಪುರಸಭೆ ಅಧ್ಯಕ್ಷರಿಗೆ ಏಕವಚನದಿಂದ ಮಾತನಾಡಿದ್ದನ್ನು ಖಂಡಿಸಿದ ಮತ್ತೊಬ್ಬ ಸದಸ್ಯರು ಈ ರೀತಿಯ ವರ್ತನೆಯನ್ನು ಖಂಡಿಸಿದ್ದರು ಪರಸ್ಪರ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು ಇದಾದ ನಂತರ ಸಭೆಯನ್ನು ಮುಂದೂಡಲಾಗಿತ್ತು .
ಬುಧವಾರ ಕರೆದ ತುರ್ತು ಸಭೆಯಲ್ಲಿ ಇದೊಂದೇ ವಿಷಯವನ್ನು ಚರ್ಚೆಗೆ ಇಟ್ಟು ಮಂಡಿಸಲಾಯಿತು ತಕ್ಷಣವೇ ಪುರಸಭೆ ಸದಸ್ಯರು ಅಧ್ಯಕ್ಷರೊಂದಿಗೆ ವಾಗ್ವಾದಕ್ಕೆ ಇಳಿದರು ಆಗ ಪುರಸಭಾಧ್ಯಕ್ಷ ಹೆಚ್ ಎಂ ಅಶೋಕ್ ಮಾತನಾಡಿ ಅಧ್ಯಕ್ಷರಿಗೆ ಗೌರವವಿಲ್ಲದೆ ಮಾತನಾಡುತ್ತೀರಿ ಈ ಕ್ರಿಯಾಯೋಜನೆಯಲ್ಲಿ ತಾರತಮ್ಯದಿಂದ ಕೂಡಿದೆ ಎಂದು ದೂರನ್ನು ನೀಡಿದ್ದೀರಿ ಅನೇಕ ಕಾಮಗಾರಿಗಳನ್ನು ತಾರತಮ್ಯದಿಂದ ಮಾಡಿದ್ದರಲ್ಲ ಈ ಹಿಂದೆ ಆಗ ಏಕೆ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಮಾಡಿದ್ದೀರಿ ಎಂದು ನೀವು ಪ್ರಶ್ನಿಸಲಿಲ್ಲ ಎಂದು ಅಧ್ಯಕ್ಷರು ಏರುದ್ವನಿಯಿಂದ ವಾಗ್ವಾದಕ್ಕಿಳಿದ ಸದಸ್ಯರಿಗೆ ಪ್ರಶ್ನಿಸಿದರು ಅಷ್ಟರಲ್ಲಿ ಕೆಲ ಸದಸ್ಯರು ಈ ವಿಷಯ ಪಾಸ್ ಆಗಲು ನಮ್ಮದು ಸಮ್ಮತಿ ಇದೆ ಚರ್ಚೆ ಹೆಚ್ಚು ಬೇಡ ಎಂದು ಸಭೆಯಿಂದ ಒಬ್ಬೊಬ್ಬರಾಗಿ ಹೊರ ನಡೆದರು .
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್, ಉಪಾಧ್ಯಕ್ಷಿಣಿ ಭೀಮವ್ವ ಸಣ್ಣಹಾಲಪ್ಪ, ಪುರಸಭೆ ಸದಸ್ಯರಾದ ದ್ಯಾಮಜ್ಜಿ ರೊಕ್ಕಪ್ಪ, ಜಾಕೀರ್ ಸರ್ಕವಾಸ್,ಗೊಂಗಾಡಿ ನಾಗರಾಜ್,ಟಿ ವೆಂಕಟೇಶ್, ಎಂ ವಿ ಅಂಜಿನಪ್ಪ, ಎಂ ಕೆ ಜಾವಿದ್, ಗೌಳಿ ವಿನಯ್, ಡಿ ಅಬ್ದುಲ್ ರಹಿಮಾನ್, ಲಾಠಿ ದಾದಾಪೀರ್, ಉದ್ದಾರ ಗಣೇಶ, ಈಜಂತ್ಕರ್ ಮಂಜುನಾಥ್,ಎಲ್ಲಮ್ಮ ಸತ್ತೂರು, ಕಿರಣ್ ಶಾನುಭೋಗ, ಟಿ.ಲಕ್ಕಮ್ಮ , ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ್, ಸಿಬ್ಬಂದಿಗಳಾದ ಮಂಜುನಾಥ್, ಸಿದ್ದೇಶ್ವರ ಸ್ವಾಮಿ, ಸಂತೋಷ್, ಹನುಮೇಶ,ಮಲ್ಲಮ್ಮ, ಜಗದೀಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.