Vijayanagara Express

Kannada News Portal

ಹಳ್ಳ ಹಿಡಿದ ಅಂಬಾಡಿ  ನಕಲಿ ಪಾದಯಾತ್ರೆ

1 min read

ಹಳ್ಳ ಹಿಡಿದ ಅಂಬಾಡಿ  ನಕಲಿ ಪಾದಯಾತ್ರೆ

 

ಹರಪನಹಳ್ಳಿ : ಹಳ್ಳ ಹಿಡಿದ ಅಂಬಾಡಿ ನಕಲಿ ಪಾದಯಾತ್ರೆ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು ಚುನಾವಣೆ ಮುಂದೆ ಬರುತ್ತಿರುವಾಗ
ಹರಪನಹಳ್ಳಿ ತಾಲೂಕಿನಾದ್ಯಂತ ಚುನಾವಣಾ ಕಾವು ಈಗಿನಿಂದಲೇ ಏರಿ ಕ್ಷೇತ್ರದ ಕಡೆ ಅನೇಕ ಹೊಸ ಹೊಸ ಅಭ್ಯರ್ಥಿಗಳು ಮುಖ ಮಾಡುತ್ತಿದ್ದಾರೆ ಇಂತಹ ಅಭ್ಯರ್ಥಿಗಳಲ್ಲಿ ನಗೆ ಪಾಟಲಿಗೇಡಾಗಿ  , ಪಾದಯಾತ್ರೆಯೆಂಬ ಸೋಗಲಾಡಿ ತನವನ್ನು ಆರಂಭಿಸಿರುವ ಅಂಬಾಡಿ ನಾಗರಾಜ್ ರವರು ನಿಜಕ್ಕೂ ಕ್ಷೇತ್ರಕ್ಕೆ ಚುನಾವಣೆ ಮಾಡುವ ಉದ್ದೇಶ ಇಟ್ಕೊಂಡು ಬಂದಿರುವರೊ ಅಥವಾ ಬೇರೆ ಏನನ್ನಾದರೂ ಉದ್ದೇಶ ಇಟ್ಕೊಂಡು ಬಂದಿರುವರೊ ಎಂಬುದಾಗಿ ಜನರು ಅಪಹಾಸ್ಯ ಮಾಡುತ್ತಿದ್ದಾರೆ.

ಏಕೆಂದರೆ ಇವರು 115 ದಿನಗಳ ಕಾಲ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದಿದ್ದರೆ ಅದೆನೂ ವಿವಾದದ ವಿಷಯವಾಗುತ್ತಿರಲಿಲ್ಲವೆನೋ ,ಆದರೆ ಪಾದಯಾತ್ರೆ ಉದ್ದೇಶವನ್ನು ಕೇಳಿದರೆ ಜನ ಯಾವ ಕಡೆ ಮುಖ ಮಾಡಿ ನಗಬೇಕೋ ಅಳಬೇಕೋ ಒಂದೂ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಇವರ ಪಾದಯಾತ್ರೆ ಮುಗಿಯುವುದನ್ನು ಜನ ಎದುರು ನೋಡುತ್ತಿದ್ದಾರೆ ಏಕೆಂದರೆ ಇವರು ಹೇಳುವ ಪ್ರಕಾರ ‌ಅಡುಗೆ ಅನಿಲ 450 ರೂಗೆ, ಡೀಸೆಲ್, ಪೆಟ್ರೋಲ್ ಬೆಲೆ 55 ರಿಂದ 60ರೂಗೆ, ಜಿ ಎಸ್ ಟಿ ಯಲ್ಲಿ ಕಡಿತ , ಸೇವಾ ತೆರಿಗೆ ಗಳಲ್ಲಿ ಕಡಿತ ಹೀಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕಾನೂನು ಮಾಡಿ ಆದೇಶವನ್ನು ಹೊರಡಿಸಬೇಕಾದಂತವುಗಳು ದೇಶಕ್ಕೆಲ್ಲ ಅಲ್ಲದಿದ್ದರೂ ಹರಪನಹಳ್ಳಿ ತಾಲೂಕಿನ ಪೂರ್ತಿಗಾದರೂ ಇವುಗಳ ಬೆಲೆಗಳಲ್ಲಿ ಕಡಿತ ಮಾಡಿಸುತ್ತಾರೇನೊ ಎನ್ನುವಷ್ಟರ ಮಟ್ಟಿಗೆ ಭಾಷಣವನ್ನು ರೇಕಾರ್ಡ ಮಾಡಿಸಿ ಅದನ್ನು ಟಾಟಾ ಏಸ್ ನಲ್ಲಿ ಹಾಕಿ ಹಳ್ಳಿ ಹಳ್ಳಿಗಳಲ್ಲಿ ಗಾಡಿಯನ್ನು ತಿರುಗಾಡಿ ಬರಲು ಬಿಟ್ಟಿದ್ದಾರೆ ಇದಕ್ಕೆ ಜನರು ಅಂಬಾಡಿ ನಾಗರಾಜ್ ರವರ ವಿನೂತನ ಶೈಲಿಯ ಪಾದಯಾತ್ರೆಗೆ ಅಪಹಾಸ್ಯ ಮಾಡಿ ನಗಾಡುತ್ತಿದ್ದಾರೆ.

ಅಂಬಾಡಿ ನಾಗರಾಜ್ ರವರ ನಕಲಿ ಪಾದಯಾತ್ರೆ

ಪಾದ ಎಂದರೆ ಕಾಲು ಅಥವಾ ಕಾಲಿನ ತುದಿ, ಯಾತ್ರೆಯೆಂದರೆ ಸಂಚಾರ ಅಂದರೆ ಕಾಲು ನಡಿಗೆಯಿಂದ ಸಂಚರಿಸುವುದು ಎಂದು ಅರ್ಥ ಆದರೆ ಅಂಬಾಡಿ ನಾಗರಾಜ್ ಎಂಬ  ಹಗರಿಬೊಮ್ಮನಹಳ್ಳಿ ಮೂಲದ ಅಸಾಮಿ ಕಾರಿನಲ್ಲಿ ಸಂಚರಿಸುವುದನ್ನು ಪಾದಯಾತ್ರೆ ಅಂದುಕೊಂಡಿದ್ದಾರೊ ಏನೊ ಗೊತ್ತಿಲ್ಲ ನಂದಿಬೇವೂರಿನಲ್ಲಿ ಪಾದ ಯಾತ್ರೆಗೆ ಅಗಷ್ಟ್ 25 ರಂದು ಚಾಲನೆ ನೀಡಿ ಕಾರ್ ಹತ್ತಿ ಮುಂದಿನ ಊರಿಗೆ ಹೋಗಿ ಕಾರ್ ಇಳಿದು ಭಾಷಣ ಹೊಡೆದಿದ್ದಾರೆ ಇದು ಪಾದದಯಾತ್ರೆ ಇವರ ಪ್ರಕಾರ ಇದನ್ನು ನಮ್ಮ ತಾಲೂಕಿನ ಜನರು ಗಂಭೀರವಾಗಿ ಪರಿಗಣಿಸಿ ನಮ್ಮ ದೇಶದ ,ರಾಜ್ಯ ,ತಾಲೂಕಿನ ಜನರ ಪಾಲಿಗೆ ಭೂಮಿಗಿಳಿದು ಬಂದ ಭಗೀರಥ ಅಂದುಕೊಳ್ಳಬೇಕೇನೂ  ಇವರ ಮನಸ್ಥಿತಿ ಇರಬಹುದೆನೊ ಯಾರಿಗೊತ್ತು ,ಪಾಪ ತಮ್ಮದೇ ಆದ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿಯವರು ಹಮ್ಮಿಕೊಳ್ಳಲಾಗಿರುವ ಭಾರತ್ ಜೋಡೋ ಪಾದಯಾತ್ರೆ ಅಂಬಾಡಿಯವರು ಐಡಿಯಾ ಕೊಟ್ಟಿದ್ರೆ ಬಹುಶಃ 3500 ಕಿ.ಮೀ ಸುಲಭವಾಗಿ ಪಾದಯಾತ್ರೆ ಮುಗಿಸಿಕೊಂಡು ಮನೆಯಲ್ಲಿ ಈ ಚಳಿಗಾಲದಲ್ಲಿ ಬೆಚ್ಚಗೆ ಇರುತ್ತಿದ್ರು ಅಲ್ವಾ ?

ಪಾದಯಾತ್ರೆಯನ್ನು  ಈ ರೀತಿ ಹೈಡ್ರಾಮಾ ಮಾಡುವ ಮೂಲಕ ಮಾಡಬಹುದು ಎಂದು ಪಾಪ ಅದನ್ನು ಯಾವ ಪುಣ್ಯಾತ್ಮ ಇವರಿಗೆ ಐಡಿಯಾ ಕೊಟ್ಟಿದಾನೊ ಏನೊ ಅಥವಾ ಯಾವ ಮ‌ಹಾ ಗ್ರಂಥದಲ್ಲಿ ಒದಿದ್ದಾರೊ ಏನೊ ಗೊತ್ತಿಲ್ಲ ಅದಿರಲಿ ಇವರು ಈ ರೀತಿ ಮಾಡ್ತಿರೊ ಪಾದಯಾತ್ರೆಗೆ ಒಂದು ತಿಂಗಳು ಬ್ರೇಕ್ ಹಾಕಿ ದಡಗಾರನಹಳ್ಳಿಯ ಹೊರವಲಯದ ಮನೆಯೊಂದರ ಬಳಿ ಈ ನಕಲಿ ಪಾದಯಾತ್ರೆ ಮಾಡುತ್ತಿರುವ ನಾಗರಾಜ್ ರವರ ಪೋಸ್ಟ್ ಹಾಕಿಕೊಂಡ ವಾಹನ ನಿಂತಿತ್ತು ಇದಕ್ಕೆ ಕಾರಣ ಕೇಳಿದರೆ ಬಾಯಿಅಲ್ಲದಿರೊ ಅಂಗದಲ್ಲೂ ನಗು ಬರುವುದಂತೂ ಸತ್ಯ ಅದೇನೆಂದರೆ ಪಾದಯಾತ್ರೆ ವಾಹನ ಸಂಚರಿಸುವಾಗ ಇವರ ಕಾಲಿನ ಹೆಬ್ಬೆರಳಿನ ಮೇಲೆ ಹತ್ತಿದೆಯಂತೆ, ನೋಡಿ ಡ್ರೈವರ್ ಎಂತ ಚಾಣಕ್ಯ ಬರೀ ಹೆಬ್ಬೆರಳಿನ ಮೇಲೆ ಗಾಡಿ ಹತ್ತಿಸಿ ಇಳಿಸ್ತಾನೆ ಅಂದರೆ ತಮಾಷೆನಾ ? ಆತನಿಗೆ ಎಲ್ಲಿ ತರಬೇತಿ ಕೊಡಿಸಿ ಕರೆತಂದಿರಬಹುದು ಈ ಅಂಬಾಡಿ ನಾಗರಾಜ್ ಎಂಬ ದೊಡ್ಡ ಮನುಷ್ಯ ? ಈ ರೀತಿ ಹಸಿ ಹಸಿ ಸುಳ್ಳುಗಳನ್ನು ಹೇಳಿ ತಾಲೂಕಿನ ಜನರನ್ನು ಮರಳು ಮಾಡಲು ಹೋರಟಿದ್ದಾರಲ್ಲ ಹರಪನಹಳ್ಳಿ ಜನರನ್ನೇನು ಮೂಡರು ಎಂದು ಕೊಂಡಿದ್ದಾರೊ ಏನೊ ಗೊತ್ತಿಲ್ಲ ? ಅಲ್ಲ , ಗಾಡಿ ಕಾಲಮೇಲೆ ಹರಿದರೆ ಮೊದಲು ದೇಹಕ್ಕೆ ತೊಂದರೆ ಆಗುತ್ತದೆ ವಾಹನ ದೇಹಕ್ಕೆ ತಗುಲಿ ದೂರ ಬೀಳುತ್ತಾರೆ ಆಗ ದೇಹಕ್ಕೆ ಗಾಯವಾಗಲಿ,ಹಾನಿಯಾಗಲಿ ಆಗುವುದಿಲ್ಲವೇ ? ಇಂತಹ  ಡೋಂಗಿ ಕಾರಣ ತೋರಿಸಿ ಹೆಬ್ಬೆರಳಿಗೆ ರೊಲೊ ಬ್ಯಾಂಡೇಜ್ ಸುತ್ತಿಕೊಂಡು ಅಲ್ಲಲ್ಲಿ ಬುಡುಬುಡಿಕಿ ಭಾಷಣ ಮಾಡುತ್ತಾ ಬುರುಡೆ ಬಿಡುತ್ತಿದ್ದಾರೆ ನಾನು ಇಂದ್ರ ಚಂದ್ರ ಎಂದೆಲ್ಲ ಬೊಗಳೆ ಬಿಡುತ್ತಿದ್ದಾರೆ ಇದನ್ನು ಯಾವ ರೀತಿ ಪಾದಯಾತ್ರೆ ಎಂದು ಕರೆಯುತ್ತಾರೆ ಎಂಬುದನ್ನು ಅವರ ಪಕ್ಷದ ನೇತಾರರಾದ ರಾಹುಲ್ ಗಾಂಧಿಯವರೇ ಸ್ಪಷ್ಟ ಪಡಿಸಬೇಕೇನೋ ? ರಾಹುಲ್ ಗಾಂಧಿಯವರನ್ನು ನೋಡಿ ಕಲಿಯಬೇಕು ಪಾದಯಾತ್ರೆ ಅಂದರೆ ಏನು ಎಂಬುದನ್ನು ಈ ನಕಲಿ ಪಾದಯಾತ್ರೆ ಅಂಬಾಡಿ ನಾಗರಾಜ್,

ಹರಪನಹಳ್ಳಿ ಜನರನ್ನು ಇವರು ದಡ್ಡರೆಂದುಕೊಂಡಿರುವರೊ ಏನೊ? ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಯಾಗಿದ್ದರೆ ಲಕ್ಷಣವಾಗಿ ಕ್ಷೇತ್ರದಲ್ಲಿ ಬಂದು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರನ್ನು ಭೇಟಿಯಾಗಿ ನಾನು ಚುನಾವಣೆಗೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ನನಗೆ ನೀವು ಸಹಕರಿಸಿ ಎಂದು ಹೇಳಿ , ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸಿದರೆ ಜನರೇ ಅವರನ್ನು ಹೊತ್ತುಮೆರೆಸುತ್ತಾರೆ ಅದನ್ನು ಬಿಟ್ಟು ಮಕ್ಕಳಿಗೆ ಕಿಂದರಿಜೋಗಿ ಕಥೆ,ಇಂದ್ರನ ಅರಮನೆಯ ಕಥೆ, ಚಂದ್ರನ ಸ್ವರ್ಗದ ಕಥೆ, ವಿಕ್ರಮಾದಿತ್ಯ ಕಥೆ ಹೇಳಿದಂತೆ ಕ್ಷೇತ್ರದ ಜನರಿಗೆ ನಕಲಿ ಪಾದಯಾತ್ರೆಯ ಕಥೆ ಹೇಳಿ ಜನರನ್ನು ಮರಳು ಮಾಡಲು ಬಂದಿರುತ್ತಾರೆ ಎಂದು ಜನರು ಕೇಕೆ ಹಾಕಿ ಹಾಡಿಕೊಳ್ಳುತ್ತಿದ್ದಾರೆ .

ಅದೇನೇ ಇರಲಿ ಬಿಡಿ ಅಂಬಾಡಿ ನಾಗರಾಜ್ ರವರ ಹೋರಾಟಕ್ಕೆ ಮಣೆದು ಸರ್ಕಾರ ಬೆಲೆ ಏರಿಕೆ,ಜಿಎಸ್‌ಟಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಿದ್ರೆ ಜನಸಾಮಾನ್ಯರಿಗೆ ತಾನೇ ಒಳ್ಳೆದಾಗೊದು .

Leave a Reply

Your email address will not be published. Required fields are marked *