ಕೆರೆಯಲ್ಲಿ ಮುಳುಗಿ ಬಾಲಕಿ ರಂಜಿತಾ ಸಾವು
1 min read
ಕೆರೆಯಲ್ಲಿ ಮುಳುಗಿ ಬಾಲಕಿ ರಂಜಿತಾ ಸಾವು
ಹರಪನಹಳ್ಳಿ: ಡಿ – 14 ,ತಾಲೂಕಿನ ಕೆರೆಗುಡಿಹಳ್ಳಿ
ಕೆರೆಯಲ್ಲಿ ಮುಳುಗಿ ರಂಜಿತಾ (13) ಎನ್ನುವ ಬಾಲಕಿ ಸಾವನ್ನಪ್ಪಿರುವ ಧಾರುಣ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ .
ಕೆರೆಗುಡಿಹಳ್ಳಿ ಗ್ರಾಮದ ದುರುಗಪ್ಪ, ಕಮಲಮ್ಮ ದಂಪತಿ ಪುತ್ರಿಯಾದ ರಂಜಿತಾ ಮೃತ ದುರ್ದೈವಿಯಾಗಿರುತ್ತಾಳೆ
ಬುಧವಾರ ಮಧ್ಯಾಹ್ನ ಮೃತ ರಂಜಿತಾ ತನ್ನ ತಾಯಿಯಾದ ಕಮಲಮ್ಮಳೊಂದಿಗೆ ಅರಸೀಕೆರೆ ಮತ್ತು ಕೆರೆಗುಡಿಹಳ್ಳಿಯ ನಡುವೆ ಇರುವ ದೊಡ್ಡಕೆರೆಗೆ ಬಟ್ಟೆ ತೊಳೆಯಲು ಹೋಗಿರುತ್ತಾರೆ ಬಟ್ಟೆ ತೊಳೆಯುವ ಕೆಲಸದಲ್ಲಿ ತಾಯಿಯು ತೊಡಗಿದ್ದಾಗ
ರಂಜಿತಾ ತನ್ನ ಇನ್ನಿಬ್ಬರೊಂದಿಗೆ ಹಾಡುತ್ತಾ ಹೋಗಿ ಆಯಾತಪ್ಪಿ ಅಕಸ್ಮಾತ್ತಾಗಿ ನೀರಿನಲ್ಲಿ ಬಿದ್ದಿರುತ್ತಾಳೆ ತಕ್ಷಣವೇ ತಾಯಿಯ ಗಮನಕ್ಕೆ ಬಂದಿದೆ ಆಗ ನೋಡನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿರುತ್ತಾಳೆ ಸುತ್ತಮುತ್ತ ಯಾರೂ ಈಜು ಬರುವವರು ಇದ್ದಿರುವುದಿಲ್ಲ ಸ್ವಲ್ಪ ಸಮಯದ ನಂತರ ಅಷ್ಟರಲ್ಲಿ ಜನರು ಬಂದಿದ್ದಾರೆ ಇಬ್ಬರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ದುರದೃಷ್ಟವಶಾತ್ ರಂಜಿತಾಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ ನಂತರ ರಂಜಿತಾಳ ದೇಹ ಸಿಕ್ಕಿದೆ ಅಷ್ಟೂತ್ತಿಗಾಗಲೇ ರಂಜಿತಾಳ ಪ್ರಾಣಪಕ್ಷಿ ಹಾರಿಹೋಗಿತ್ತು ಮೃತಳ ಪೋಷಕರ,ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ
ನಿನ್ನೆ ಮಂಗಳವಾರವಷ್ಟೆ ಕೆರೆಗುಡಿಹಳ್ಳಿ ಗ್ರಾಮದ ಬಸವೇಶ್ವರ ಕಾರ್ತಿಕವನ್ನು ಮುಗಿಸಿಕೊಂಡು ತನ್ನ ತಾಯಿಯೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಹೋದಾಗ ಈ ಘಟನೆ ನಡೆದಿದೆ.
ಘಟನೆ ಕುರಿತು ಅರಸೀಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಳೆದ ತಿಂಗಳು ತಾಲೂಕಿನ ಚೆನ್ನಹಳ್ಳಿ ತಾಂಡದ ಅಪೂರ್ವ ಅಶ್ವಿನಿ, ಕಾವ್ಯಂಜಲಿ ,ಅಭಿ ಎಂಬ ವಿದ್ಯಾರ್ಥಿಗಳು ಬಟ್ಟೆ ತೊಳೆಯಲು ಹೋಗಿ ನೀರು ಪಾಲಾಗಿದ್ದ ದಾರಣ ಘಟನೆ ಮಾಸುವ ಮುನ್ನವೇ ಇಂತಹ ದುರಂತ ಸಂಭವಿಸಿದೆ ಪೋಷಕರು ಮಕ್ಕಳನ್ನು ನೀರಿನ ಬಳಿ ಕರೆದುಕೊಂಡು ಹೋದಾಗ ಅತೀ ಜಾಗರೂಕತೆಯಿಂದ ಇರುವುದು ಅವಶ್ಯಕವಾಗಿರುತ್ತದೆ ಏಕೆಂದರೆ ಜೀವ ಅಮೂಲ್ಯ ಅದನ್ನು ರಕ್ಷಿಸಿಕೊಳ್ಳುವುದು ನಮ್ಮೇಲ್ಲರ ಕರ್ತವ್ಯವಾಗಿರುತ್ತದೆ.